Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಮದ್ಯಪಾನ ಸೇವಿಸುವವರ ಅತಿ ವಿಶಿಷ್ಟ ರಹಸ್ಯಗಳು!
ಇತ್ತೀಚೆಗೆ ಮದ್ಯಪಾನ ಮಾಡುವುದು ದೈನಂದಿನ ಫ್ಯಾಶನ್ ಆಗಿ ಪರಿವರ್ತನೆಯಾಗಿಬಿಟ್ಟಿದೆ. ನಾವು ಕುಡಿಯುವುದಿಲ್ಲ ಎಂದು ಹೇಳಿಕೊಳ್ಳುವುದು ಜನರ ಪಾಲಿಗೆ ಸಂಕೋಚವಾಗುವ ಹಂತಕ್ಕೆ ತಲುಪಿದೆ ಎಂದರೆ ತಪ್ಪಾಗಲಾರದು. ಕೆಲವರು ಹವ್ಯಾಸಕ್ಕಾಗಿ ಕುಡಿಯುತ್ತಾರೆ. ಆದರೆ ಕೆಲವರು ಚಟಕ್ಕೆ ಬಿದ್ದು ಅದರ ದಾಸರಾಗಿ ಕುಡಿಯುತ್ತಾರೆ.
ಮದ್ಯಪಾನ ಮಾಡುವುದರಿಂದ ದೇಹದ ಆರೋಗ್ಯವು ಹಾಳಾಗುತ್ತದೆ, ಸಮಾಜದಲ್ಲಿ ಗೌರವ ಕುಂದುತ್ತದೆ ಎಂಬ ಪ್ರಜ್ಞೆ ಇದ್ದರು ಜನ ಕುಡಿಯುತ್ತಾರೆ. ಏನು ಮಾಡುವುದು ಕುಡಿಯಲು ಕಲಿತುಬಿಟ್ಟಿದ್ದೇನೆ? ಎಂಬ ನೆಪವನ್ನು ನಮಗೆ ಹೇಳುತ್ತಾರೆ. ಇವರು ಏಕೆ ಹೀಗೆ ಮದ್ಯಪಾನದ ದಾಸರಾಗಿದ್ದರೆ?

ಈ ಮದ್ಯಪಾನದ ದೆಸೆಯಿಂದ ಎಲ್ಲವನ್ನೂ ಕಳೆದುಕೊಳ್ಳುವವರು ಯಾರು? ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಹು ನೀಚ ಸ್ಥಾನದಲ್ಲಿದ್ದರೆ ಮತ್ತು ಚಂದ್ರ ಹಾಗು ಶನಿ ಉಚ್ಛ ಸ್ಥಾನದಲ್ಲಿದ್ದರೆ, ಅವರು ಮದ್ಯಪಾನವನ್ನು ಮಾಡಲು ಶುರು ಮಾಡಿ ಅದಕ್ಕೆ ದಾಸರಾಗಿಬಿಡುತ್ತಾರಂತೆ. ಆಲ್ಕೋಹಾಲ್ ಮತ್ತು ಆರೋಗ್ಯ ಸಮಸ್ಯೆಗಳು
ಅದೇ ರೀತಿ,ಲಗ್ನ ಭಾವ, ದ್ವಿತೀಯ ಅಥವಾ ದ್ವಾದಶದಲ್ಲಿ ಸೂರ್ಯನು ನೀಚ ಸ್ಥಾನದಲ್ಲಿದ್ದರೆ ಮತ್ತು ಶುಕ್ರ ಅಥವಾ ರಾಹು ವಕ್ರವಾಗಿದ್ದರೆ, ಅಂತಹ ಜನರು ಮದ್ಯಪಾನ ಮಾಡುವ ಚಟಕ್ಕೆ ಅಂಟಿಕೊಳ್ಳುತ್ತಾರೆ. ಇದರಿಂದ ಅವರನ್ನು ವಿಮುಕ್ತ ಮಾಡುವುದು ಸೂರ್ಯ-ಚಂದ್ರನಾಣೆಗೂ ಸಾಧ್ಯವಾಗುವುದಿಲ್ಲ.
ಒಂದು ವೇಳೆ ಯಾರದಾದರು ರಾಶಿಯಲ್ಲಿ ದ್ವಿತೀಯ ಭಾವದ ಲಗ್ನದಲ್ಲಿ ಶನಿ ಅಥವಾ ರಾಹು ಮತ್ತು ಶುಕ್ರನು ಕುಳಿತಿದ್ದರೆ, ಅಂತಹ ವ್ಯಕ್ತಿಯು ಮದ್ಯಪಾನ ಮಾಡಲು ಮನಸ್ಸು ಮಾಡುವುದಿಲ್ಲ. ಆದರೆ ಆತನು ಅದರ ಬದಲಿಗೆ ಇತರ ಪಾನೀಯಗಳನ್ನು ಸೇವಿಸಬಹುದು. ನಾವು ಜೀವನದಲ್ಲಿ ಮಾಡುವ ಅತಿ ದೊಡ್ಡ 10 ತಪ್ಪುಗಳು!
ಯಾರ ರಾಶಿಯಲ್ಲಿ ರಾಹು-ಮಂಗಳ ಮತ್ತು ಶನಿ-ಕೇತು ಉಚ್ಛ ಸ್ಥಾನದಲ್ಲಿರುವರೋ, ಅಂತಹವರು ಸಹ ಮದ್ಯಪಾನಕ್ಕೆ ದಾಸರಾಗುತ್ತಾರೆ. ಒಂದು ವೇಳೆ ರಾಶಿಯಲ್ಲಿನ ನವಮ ಭಾವದಲ್ಲಿ ನೀಚ ಶನಿ ಅಥವಾ ರಾಹುಗಳು ಕುಳಿತಿದ್ದಲ್ಲಿ, ಆತನು ಸಹ ಸಾಮಾನ್ಯಕ್ಕಿಂತ ಹೆಚ್ಚಿನ ಮದ್ಯಪಾನವನ್ನು ಸೇವಿಸುತ್ತಾನೆ.



Click it and Unblock the Notifications