ಸೈಲೆಂಟಾಗಿ ಕಾಡುವ ಭಯಾನಕ ಚರ್ಮದ ಕ್ಯಾನ್ಸರ್‌ನ ಲಕ್ಷಣಗಳು

By: Hemanth
Subscribe to Boldsky

ಕ್ಯಾನ್ಸರ್ ಎನ್ನುವುದು ವ್ಯಕ್ತಿಯ ಜೀವನವನ್ನೇ ಸರ್ವನಾಶ ಮಾಡಬಲ್ಲ ಕಾಯಿಲೆ. ಆರಂಭದಲ್ಲೇ ಇದನ್ನು ಪತ್ತೆ ಹಚ್ಚದೆ ಹೋದರೆ ಅದರಿಂದ ಭಾರೀ ಅಪಾಯ ಎದುರಾಗುವ ಸಾಧ್ಯತೆಯಿದೆ. ಕ್ಯಾನ್ಸರ್ ನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಸಾಮಾನ್ಯ ಜೀವನ ಸಾಗಿಸಬಹುದು. ಇಲ್ಲವಾದಲ್ಲಿ ಇದು ಪ್ರಾಣಾಂತಿಕವಾಗಬಹುದು. ಆರ್ಥಿಕ ಸಮಸ್ಯೆ ಇರುವವರು ಇಂತಹ ರೋಗಗಳಿಂದ ಪ್ರಾಣ ಕಳೆದುಕೊಳ್ಳುವುದೇ ಹೆಚ್ಚು. ಕ್ಯಾನ್ಸರ್ ದೇಹದ ಹಲವಾರು ಅಂಗಗಳಿಗೆ ಭಾದಿಸುತ್ತದೆ.

ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಅದರಲ್ಲೂ ಚರ್ಮದ ಕ್ಯಾನ್ಸರ್ ನ್ನು ಪತ್ತೆ ಹಚ್ಚುವುದು ಸ್ವಲ್ಪ ಕಷ್ಟವಾದರೂ ಚರ್ಮದಲ್ಲಿ ಕಾಣಿಸಿಕೊಳ್ಳುವ ಕೆಲವೊಂದು ಬದಲಾವಣೆಗಳನ್ನು ಗಮನಿಸಿ ವೈದ್ಯರ ಬಳಿ ಹೋದರೆ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ಸಮಯದಲ್ಲಿ ಚರ್ಮದ ಕ್ಯಾನ್ಸರ್ ನ ಲಕ್ಷಣಗಳು ಹೊರಗಡೆ ಕಾಣಿಸಿಕೊಳ್ಳುತ್ತದೆ. ಗುಳ್ಳೆ, ಕಲೆ ಅಥವಾ ಗಾಯವನ್ನು ಸುಲಭವಾಗಿ ಕಂಡು ಹಿಡಿಯಬಹುದು.

ಕೆಲವೊಂದು ಸಲ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುವುದು ಇಲ್ಲ. ನೋವು, ತಲೆನೋವು ಮತ್ತು ಇತರ ಕೆಲವೊಂದು ಲಕ್ಷಣಗಳು ಕೂಡ ಇರುವುದಿಲ್ಲ. ಆದರೆ ಚರ್ಮದ ಕ್ಯಾನ್ಸರ್ ಹೆಚ್ಚಾದಾಗ ಚರ್ಮದ ಮೇಲೆ ಗಡ್ಡೆಗಳು ಅಥವಾ ಗಾಯಗಳು ಮೂಡುವುದು. ಚರ್ಮದ ಮೇಲೆ ಮೂಡದೇ ಇರುವ ಕ್ಯಾನ್ಸರ್ ನ ಕೆಲವೊಂದು ಲಕ್ಷಣಗಳ ಬಗ್ಗೆ ಈ ಲೇಖನದಲ್ಲಿ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....

ಚರ್ಮದ ಒಳಗಡೆ ಉಂಡೆಗಳು

ಚರ್ಮದ ಒಳಗಡೆ ಉಂಡೆಗಳು

ಈ ಉಂಡೆಗಳನ್ನು ಕಾಣಲು ನಿಮಗೆ ಸಾಧ್ಯವಿಲ್ಲ. ಆದರೆ ಅದರ ಅನುಭವ ನಿಮಗೆ ಆಗುತ್ತದೆ. ತೊಡೆಸಂಧು ಮತ್ತು ಕುತ್ತಿಗೆ ಭಾಗದಲ್ಲಿ ಇದು ಕಂಡುಬರುವುದು. ದುಗ್ಧರಸ ಗ್ರಂಥಿಗಳಿಗೆ ಚರ್ಮದ ಕ್ಯಾನ್ಸರ್ ಹಬ್ಬಿದೆ ಎನ್ನುವುದಕ್ಕೆ ಇದು ಸೂಚನೆಯಾಗಿದೆ.

 ಹೊಟ್ಟೆಯ ನೋವು

ಹೊಟ್ಟೆಯ ನೋವು

ದುಗ್ಧಗ್ರಂಥಿಗಳನ್ನು ಹೊರತುಪಡಿಸಿ ಕ್ಯಾನ್ಸರ್ ಯಕೃತ್ ಗೆ ಹರಡಬಹುದು. ಇದರಿಂದಾಗಿ ಹೊಟ್ಟೆಯ ಬಲಭಾಗದ ಮೇಲಿನ ಭಾಗದಲ್ಲಿ ತುಂಬಾ ನೋವು ಕಾಣಿಸಿಕೊಳ್ಳಬಹುದು.

ಉಸಿರಾಟದ ಸಮಸ್ಯೆ

ಉಸಿರಾಟದ ಸಮಸ್ಯೆ

ಮೆಲನೊಮಾವು ಶ್ವಾಸಕೋಶಕ್ಕೆ ಕೂಡ ಹರಡಬಹುದು. ಇದು ಶ್ವಾಸಕೋಶಕ್ಕೆ ಹರಡಿದರೆ ಅದರಿಂದ ಉಸಿರಾಟದಲ್ಲಿ ತೊಂದರೆ ಮತ್ತು ಪದೇ ಪದೇ ಕೆಮ್ಮು ಕಾಣಿಸಬಹುದು. ಚರ್ಮದ ಕ್ಯಾನ್ಸರ್ ನ ಲಕ್ಷಣಗಳಲ್ಲಿ ಇದು ಒಂದಾಗಿದೆ.

ಕೀಲುಗಳು

ಕೀಲುಗಳು

ದುಗ್ಧಗ್ರಂಥಿಗಳು, ಶ್ವಾಸಕೋಶ ಮತ್ತು ಯಕೃತ್ ನ ಬಳಿಕ ಮೂಳೆಗಳಿಗೂ ಮೆಲನೊಮಾ ಹರಡಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಅರ್ಥಟೀಸ್ ನಂತಹ ಲಕ್ಷಣಗಳು ಕಾಣಿಸಬಹುದು.

ಸೆಳೆತ

ಸೆಳೆತ

ಮೆಲನೊಮಾವು ಹೊಟ್ಟೆಗೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳನ್ನು ಉಂಟು ಮಾಡಬಹುದು. ಹೊಟ್ಟೆಯಲ್ಲಿ ಮೆಲನೋಸೈಟ್ ಇರುವುದರಿಂದ ಇದು ಮೆಲನೊಮಾವನ್ನು ಅಡಗಿಸಬಹುದು. ಇದರಿಂದ ಅತಿಸಾರ, ಮಲಬದ್ಧತೆ, ಸೆಳೆತೆ ಮತ್ತು ಹೊಟ್ಟೆಯ ಭಾಗದಲ್ಲಿ ನೋವು ಕಾಣಿಸಬಹುದು. ಚರ್ಮ ಕ್ಯಾನ್ಸರ್ ನ ಈ ಲಕ್ಷಣದ ಬಗ್ಗೆ ನೀವು ಗಮನಹರಿಸಬೇಕು.

English summary

Skin Cancer Symptoms That You Can't See

Did you know that most of the symptoms unobserved on the skin are the very first clues that you might have skin cancer? But in most of the cases, skin cancer is clearly visible outside the body. It is easy to spot a mole, a rash, a blemish or a lesion. But sometime exceptions can arise. This occurs when the symptoms are not seen on the skin. In the case of advanced melanoma, the symptoms include pain, headache and other symptoms not observed on the skin.
Subscribe Newsletter