For Quick Alerts
ALLOW NOTIFICATIONS  
For Daily Alerts

  ಹೊಟ್ಟೆಯ ಮೇಲೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ, ಬೊಜ್ಜು ಕರಗುವುದು...

  By Arshad
  |

  ನಮಗೆಲ್ಲಾ ಆಕರ್ಷಕ ಶರೀರ ಹೊಂದಬೇಕೆಂಬ ಆಸೆ ಇದ್ದೆ ಇರುತ್ತದೆ. ಇದಕ್ಕಾಗಿ ನಾವು ಸರಿಯಾದ ರೀತಿಯಲ್ಲಿ ಪ್ರಯತ್ನ ಪಡುತ್ತೇವೋ ಇಲ್ಲವೋ ಅದು ಬೇರೆ ಪ್ರಶ್ನೆ, ಆದರೆ ಕೊಬ್ಬಿನ ಸಂಗ್ರಹದ ಮುಖ್ಯ ಆಗರವಾದ ಹೊಟ್ಟೆ ಕರಗಬೇಕು, ಇದರಿಂದ ಸೌಂದರ್ಯ ಹೆಚ್ಚುವುವು ಮಾತ್ರವಲ್ಲ, ನಮಗೆ ಇಷ್ಟವಾಗುವ ಯಾವುದೇ ಉಡುಗೆ ತೊಡಬಹುದು ಎಂಬುವುದು ಇನ್ನೊಂದು ಕಾರಣವಾಗಿದೆ.

  ಇಂದು ಜಾಹೀರಾತುಗಳಲ್ಲಿ ಕಾಣಬರುವ ಯಾವುದೇ ರೂಪದರ್ಶಿಯನ್ನು ನೋಡಿದಾಗ ಇವರ ಸಪಾಟು ಹೊಟ್ಟೆ, ಸಿಕ್ಸ್ ಪ್ಯಾಕ್ ಮೊದಲಾದವುಗಳನ್ನು ಕಂಡಾಗ ಅಸೂಯೆಯೂ ಮೂಡುತ್ತದೆ ಹಾಗೂ ನಮ್ಮ ಡೊಳ್ಳು ಹೊಟ್ಟೆಯ ಮೇಲೆ ಕೊಂಚ ಕೋಪವೂ ಬರುತ್ತದೆ.

  ಬರೀ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಿ!

  ಇಂದಿನ ದಿನಗಳಲ್ಲಿ ಹೊಟ್ಟೆ ಇದ್ದರೆ ಸ್ಥೂಲಕಾಯ, ಅಥವಾ ಹೊಟ್ಟೆಯ ಬೊಜ್ಜು, ಎಲ್ಲರಿಗೂ ಸಾಮಾನ್ಯವಾಗಿ ಬಿಟ್ಟಿದೆ. ಈ ಸ್ಥೂಲಕಾಯ    ಸುಂದರವಲ್ಲ ಎಂದೇ ಯುವಜನತೆ ಬಲವಾಗಿ ನಂಬಿದ್ದಾರೆ ಹಾಗೂ ಎಲ್ಲೆಡೆ ಇದೇ ಮಾತು ಪ್ರಚಲಿತವಿರುವ ಕಾರಣ ಸ್ಥೂಲದೇಹಿಗಳಿಗೆ ಯಾವುದೇ ಮೆಚ್ಚುಗೆಯ ಮಾತುಗಳು ದೊರಕುವುದೇ ಇಲ್ಲ. ಪರಿಣಾಮವಾಗಿ ಸ್ಥೂಲಕಾಯ ಹೊಂದಿರುವವರೆಲ್ಲಾ ಈ ಬಗ್ಗೆ ಪ್ರಯತ್ನಿಸುತ್ತಾರೋ ಇಲ್ಲವೋ, ಆದರೆ ಈ ಬಗ್ಗೆ ಯೋಚನೆಯಂತೂ ಖಂಡಿತಾ ಮಾಡುತ್ತಾರೆ....

  ಹೊಟ್ಟೆಯ ಮೇಲೆ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳುವುದರಿಂದಲೂ ಕೊಬ್ಬು ಕರಗಿಸಬಹುದು

  ಹೊಟ್ಟೆಯ ಮೇಲೆ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳುವುದರಿಂದಲೂ ಕೊಬ್ಬು ಕರಗಿಸಬಹುದು

  ವಾಸ್ತವದಲ್ಲಿ ನಮ್ಮ ಶರೀರದ ತೂಕ, ಸ್ಥೂಲಕಾಯ ಎಲ್ಲವೂ ನಮ್ಮ ಅನುವಂಶಿಕ ಸೂಚನೆಗಳನ್ನು ಆಧರಿಸಿದ್ದು ಇದನ್ನು ತೀವ್ರಗೊಳಿಸಲು ನಮ್ಮ ಅನಾರೋಗ್ಯಕರ ಜೀವನ ಹಾಗೂ ಆಹಾರಕ್ರಮಗಳು ನೆರವಾಗಿವೆ ಅಷ್ಟೇ. ಅಂದರೆ ನಿಮ್ಮ ದೇಹದಲ್ಲಿ ಸ್ಥೂಲಕಾಯವಿರುವ ಅನುವಂಶಿಕ ಸೂಚನೆ ಇದ್ದರೆ ನೀವು ದಿನಕ್ಕೆ ಒಂದೇ ಹೊತ್ತು ಊಟ ಮಾಡಿ ದಿನಕ್ಕೆ ಹತ್ತು ಕಿ.ಮೀ ಓಡಿದರೂ ಸ್ಥೂಲಕಾಯ ಇದ್ದೇ ಇರುತ್ತದೆ. ಆದ ಕಾರಣ ಸ್ಥೂಲದೇಹಕ್ಕೆ ನಿಮ್ಮ ಸೋಮಾರಿತನ, ಅನಾರೋಗ್ಯಕರ ಆಹಾರಕ್ರಮ, ವ್ಯಾಯಾಮಕ್ಕೆ ತೋರುವ ನಿರ್ಲಕ್ಷ್ಯಗಳೇ ಪ್ರಮುಖ ಪಾತ್ರ ವಹಿಸುತ್ತವೆ. ತನ್ಮೂಲಕ ನಿಮ್ಮ ದೇಹ ನೈಸರ್ಗಿಕವಾಗಿ ಇರಬೇಕಾದುದಕ್ಕಿಂತಲೂ ಹೆಚ್ಚು ಊದಿಕೊಂಡಿದ್ದರೆ ಮಾತ್ರ ಅನಾರೋಗ್ಯಕರವಾಗಿದೆ. ಎಷ್ಟೋ ಸಲ ಹೆಚ್ಚಿನ ತೂಕ ವ್ಯಕ್ತಿಯ ಆತ್ಮವಿಶ್ವಾಸವನ್ನೇ ಕಸಿದು ಬಿಡುತ್ತದೆ. ವಿಶೇಷವಾಗಿ ಉಬ್ಬಿದ ಹೊಟ್ಟೆ ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆತು ಈ ಋಣಾತ್ಮಕ ಭಾವನೆಯನ್ನು ಹೆಚ್ಚಿಸುವಂತೆ ಮಾಡುತ್ತದೆ.

  ಹೊಟ್ಟೆಯ ಮೇಲೆ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳುವುದರಿಂದಲೂ ಕೊಬ್ಬು ಕರಗಿಸಬಹುದು

  ಹೊಟ್ಟೆಯ ಮೇಲೆ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳುವುದರಿಂದಲೂ ಕೊಬ್ಬು ಕರಗಿಸಬಹುದು

  ನಮ್ಮ ದೇಹದ ಕೊಬ್ಬಿನ ಸಂಗ್ರಹ ಸೊಂಟದಿಂದ ಪ್ರಾರಂಭಗೊಂಡು ಬಳಕೆಯ ಸಮಯದಲ್ಲಿ ಅತಿ ಕಡೆಯದಾಗಿ ಬಳಸಿಕೊಳ್ಳುವ ಕಾರಣದಿಂದಲೇ ಇದನ್ನು ಕರಗಿಸುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಏಕೆಂದರೆ ನೀವು ಕೊಬ್ಬು ಕರಗಿಸಲು ಮಾಡುವ ಯಾವುದೇ ಪ್ರಯತ್ನ ದೇಹದ ಇತರ ಭಾಗದಲ್ಲಿರುವ ಕೊಬ್ಬನ್ನೆಲ್ಲಾ ಕರಗಿಸಿ ಅಲ್ಲೇನೂ ಉಳಿದಿಲ್ಲ ಎಂದಾಗ ಮಾತ್ರವೇ ಸೊಂಟದ ಕೊಬ್ಬು ಕರಗುತ್ತದೆ. ಹೊಟ್ಟೆಯನ್ನು ಕರಗಿಸಲು ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಶ್ರಮ ಬೇಕಾಗಿರುವುದು ಇದೇ ಕಾರಣಕ್ಕೆ! ಖ್ಯಾತ ತಾರೆಯರೂ ಈ ವಾಸ್ತವವನ್ನು ಮನಗಂಡು ತಮ್ಮ ದಿನಚರಿಯಲ್ಲಿ ಕಠಿಣ ವ್ಯಾಯಾಮವನ್ನು ನಿಯಮಿತವಾಗಿ ಅಳವಡಿಸಿಕೊಳ್ಳುವ ಕಾರಣದಿಂದಾಗಿಯೇ ಇವರ ದೇಹಸೌಂದರ್ಯ ಪಡೆಯಲು ಸಾಧ್ಯವಾಗಿದೆ.

  ಹೊಟ್ಟೆಯ ಮೇಲೆ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳುವುದರಿಂದಲೂ ಕೊಬ್ಬು ಕರಗಿಸಬಹುದು

  ಹೊಟ್ಟೆಯ ಮೇಲೆ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳುವುದರಿಂದಲೂ ಕೊಬ್ಬು ಕರಗಿಸಬಹುದು

  ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಸೊಂಟದ ಕೊಬ್ಬು ಪುರುಷರಿಗಿಂತಲೂ ಮಹಿಳೆಯರಲ್ಲಿಯೇ ಹೆಚ್ಚು ಕಾಣಬರುತ್ತಿದೆ. ಇದಕ್ಕೆ ಮಹಿಳೆಯರ ದೇಹರಚನೆ ಹಾಗೂ ರಸದೂತಗಳ ಪ್ರಭಾವವೇ ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಹೆರಿಗೆಯ ಬಳಿಕ ದೇಹದಲ್ಲಿ ಆಗುವ ಬದಲಾವಣೆಗಳು ಸೊಂಟದ ಕೊಬ್ಬನ್ನು ಇನ್ನಿಲ್ಲದಷ್ಟು ಹೆಚ್ಚಿಸುತ್ತವೆ. ಪುರುಷರಲ್ಲಿಯೂ ಅಷ್ಟೇ, ನಲವತ್ತೈದು ದಾಟಿದ ಬಳಿಕ ಡೊಳ್ಳು ಹೊಟ್ಟೆ ಅನಿವಾರ್ಯವೆಂಬಂತೆ ಇಂದು ಹೆಚ್ಚಿನವರಲ್ಲಿ ಕಾಣಬರುತ್ತಿದೆ. ಅದರಲ್ಲೂ ಮದ್ಯಪಾನ, ಧೂಮಪಾನದ ದುರಭ್ಯಾಸಗಳಿರುವವರಿಗೆ ಕೊಂಚ ಹೆಚ್ಚೇ ಇರಬಹುದು. ಯಾವುದೇ ಕಾರಣಕ್ಕೂ ನಿಸರ್ಗ ನಿಯಮಿಸಿದ ದೇಹರಚನೆಗೂ ಹೆಚ್ಚಿನ ಸ್ಥೂಲಕಾಯ ಹೊಂದಿರುವುದು ಅನಾರೋಗ್ಯಕರ. ಸೊಂಟದ ಕೊಬ್ಬು ಹೆಚ್ಚಾಗಿರುವುದು ಸೌಂದರ್ಯ ಕುಂದಿಸುವ ಜೊತೆಗೆ ಅನಾರೋಗ್ಯದ ಲಕ್ಷಣವೂ ಆಗಿದೆ.

  ಹೊಟ್ಟೆಯ ಮೇಲೆ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳುವುದರಿಂದಲೂ ಕೊಬ್ಬು ಕರಗಿಸಬಹುದು

  ಹೊಟ್ಟೆಯ ಮೇಲೆ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳುವುದರಿಂದಲೂ ಕೊಬ್ಬು ಕರಗಿಸಬಹುದು

  ಸೊಂಟದ ಕೊಬ್ಬು ಹೆಚ್ಚುವ ಮೂಲಕ ಕೆಲವು ಆರೋಗ್ಯ ಸಂಬಂಧಿತ ತೊಂದರೆಗಳಿಗೆ ಸುಲಭವಾದ ಆಹ್ವಾನ ದೊರಕುತ್ತದೆ. ಸ್ಥೂಲಕಾಯ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಬೆನ್ನು ನೋವು, ಮಂಡಿನೋವು, ಹೃದಯ ಸಂಬಂಧಿ ರೋಗಗಳಿ ಇತ್ಯಾದಿಗಳು. ಇತ್ತೀಚಿನ ಸಂಶೋಧನೆಯೊಂದರಲ್ಲಿ ಕಂಡುಕೊಂಡಂತೆ ಸೊಂಟದ ಕೊಬ್ಬಿನ ಮೇಲೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ನಿಯಮಿತವಾಗಿ ಮಸಾಜ್ ಮಾಡುತ್ತಾ ಬರುವ ಮೂಲಕ ಸೊಂಟದ ಕೊಬ್ಬು ಕರಗಲು ನೆರವಾಗುತ್ತದೆ. ಇದು ಹೇಗೆ ಸಾಧ್ಯವಾಗಿಸಬಹುದು ಎಂಬುದನ್ನು ನೋಡೋಣ:

  ಸೊಂಟದ ಕೊಬ್ಬಿಗೂ ಕೊಬ್ಬರಿ ಎಣ್ಣೆಗೂ ಎತ್ತಣ ಸಂಬಂಧ?

  ಸೊಂಟದ ಕೊಬ್ಬಿಗೂ ಕೊಬ್ಬರಿ ಎಣ್ಣೆಗೂ ಎತ್ತಣ ಸಂಬಂಧ?

  ದಕ್ಷಿಣ ಭಾರತದಲ್ಲಿ ತೆಂಗಿನ ಕಾಯಿ ಮತ್ತು ಕೊಬ್ಬರಿ ಎಣ್ಣೆ ಅಡುಗೆಯಲ್ಲಿ ಉಪಯೋಗಿಸುವ ಪ್ರಮುಖ ಪರಿಕರವಾಗಿರುವ ಕಾರಣ ಕೊಬ್ಬರಿ ಎಣ್ಣೆ ಇಲ್ಲದ ಮನೆಯೇ ಇಲ್ಲವೆನ್ನಬಹುದು. ಅಡುಗೆಯ ಹೊರತಾಗಿ ಕೊಬ್ಬರಿ ಎಣ್ಣೆಯನ್ನು ಕೇಶವರ್ಧಕ ಹಾಗೂ ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತಿದೆ. ಭಾರತೀಯ ಪುರಾತನ ವೈದ್ಯಪದ್ಧತಿಯಾದ ಆಯುರ್ವೇದದಲ್ಲಿಯೂ ಕೊಬ್ಬರಿ ಎಣ್ಣೆಗೆ ಪ್ರಮುಖ ಸ್ಥಾನವಿದ್ದು ಹಲವಾರು ಕಾಯಿಲೆಗಳಿಗೆ ನೀಡುವ ಚಿಕಿತ್ಸೆಯಲ್ಲಿ ಕೊಬ್ಬರಿಎಣ್ಣೆಯನ್ನು ಬಳಸಲಾಗುತ್ತಿದೆ.

  ಸೊಂಟದ ಕೊಬ್ಬಿಗೂ ಕೊಬ್ಬರಿ ಎಣ್ಣೆಗೂ ಎತ್ತಣ ಸಂಬಂಧ?

  ಸೊಂಟದ ಕೊಬ್ಬಿಗೂ ಕೊಬ್ಬರಿ ಎಣ್ಣೆಗೂ ಎತ್ತಣ ಸಂಬಂಧ?

  ಅಷ್ಟೇ ಅಲ್ಲ, ಇದರ ಗುಣಗಳು ಕೆಲವಾರು ಮಾರಣಾಂತಿಕ ಕಾಯಿಲೆಗಳಾದ ಸೋರಿಯಾಸಿಸ್, ಅಧಿಕ ಕೊಲೆಸ್ಟ್ರಾಲ್, ಮಂಡಿ ನೋವು, ಹೃದಯದ ತೊಂದರೆಗಳು ಮೊದಲಾದವುಗಳನ್ನು ತಡೆಗಟ್ಟಲು ನೆರವಾಗುತ್ತದೆ. ಈ ಮೂಲಕ ಕೊಬ್ಬರಿ ಎಣ್ಣೆ ಒಂದು ಅತ್ಯುತ್ತಮವಾದ ಆರೋಗ್ಯಕರವಾದ ಎಣ್ಣೆಯಾಗಿದೆ.

  ಸೊಂಟದ ಕೊಬ್ಬಿಗೂ ಕೊಬ್ಬರಿ ಎಣ್ಣೆಗೂ ಎತ್ತಣ ಸಂಬಂಧ?

  ಸೊಂಟದ ಕೊಬ್ಬಿಗೂ ಕೊಬ್ಬರಿ ಎಣ್ಣೆಗೂ ಎತ್ತಣ ಸಂಬಂಧ?

  ಇತ್ತೀಚಿನ ಸಂಶೋಧನೆಯೊಂದರಲ್ಲಿ ಕಂಡುಕೊಂಡ ಪ್ರಕಾರ ಕೊಬ್ಬರಿ ಎಣ್ಣೆಯಿಂದ ಸೊಂಟ, ಹೊಟ್ಟೆಯನ್ನು ನಿತ್ಯವೂ ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿಕೊಳ್ಳುತ್ತಾ ಹಚ್ಚಿಕೊಳ್ಳುತ್ತಿದ್ದರೆ ಇದು ಕೊಬ್ಬು ಕರಗಲು ನೆರವಾಗುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದೆ ಹಾಗೂ ಒಮೆಗಾ-3-ಕೊಬ್ಬಿನ ಆಮ್ಲಗಳೂ ಉತ್ತಮ ಪ್ರಮಾಣದಲ್ಲಿವೆ. ಈ ಎಣ್ಣೆಯನ್ನು ಸೊಂಟದ ಹಾಗೂ ಹೊಟ್ಟೆಯ ಕೊಬ್ಬಿನ ಮೇಲೆ ಹಚ್ಚಿಕೊಂಡು ನೀವಿಕೊಳ್ಳುವುದರಿಂದ ಎಣ್ಣೆಯ ಪೋಷಕಾಂಶಗಳು ಚರ್ಮದ ಸೂಕ್ಷ್ಮರಂಧ್ರಗಳಿಂದ ಒಳಕ್ಕಿಳಿದು ನೇರವಾಗಿ ಕೊಬ್ಬಿನ ಸಂಗ್ರಹದ ಆಗರಕ್ಕೆ ತಲುಪುತ್ತವೆ. ಇವು ಕೊಬ್ಬಿನ ಕಣಗಳನ್ನು ಇನ್ನೂ ವೇಗವಾಗಿ ದಹಿಸಲು ನೆರವಾಗುವ ಮೂಲಕ ಕೊಬ್ಬು ಶೀಘ್ರವಾಗಿ ಕರಗಲು ಸಾಧ್ಯವಾಗುತ್ತದೆ.

  ಸೊಂಟದ ಕೊಬ್ಬಿಗೂ ಕೊಬ್ಬರಿ ಎಣ್ಣೆಗೂ ಎತ್ತಣ ಸಂಬಂಧ?

  ಸೊಂಟದ ಕೊಬ್ಬಿಗೂ ಕೊಬ್ಬರಿ ಎಣ್ಣೆಗೂ ಎತ್ತಣ ಸಂಬಂಧ?

  ಆದರೆ ಈ ವಿಧಾನದಿಂದ ನಿಮ್ಮ ಕೊಬ್ಬು ಕರಗಿಸುವ ಪ್ರಯತ್ನಗಳಿಗೆ ನೆರವು ದೊರಕಬಹುದೇ ಹೊರತು ಕೇವಲ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಅನಾರೋಗ್ಯಕರ ಅಭ್ಯಾಸಗಳನ್ನು ಮುಂದುವರೆಸಿದರೆ ಪ್ರಯೋಜನವಿಲ್ಲ. ಕೊಬ್ಬು ಕಳೆದುಕೊಳ್ಳುವ ನಿಮ್ಮ ಇತರ ಪ್ರಯತ್ನಗಳು ಎಡೆಬಿಡದೇ ಮುಂದುವರೆಯುತ್ತಿರಬೇಕು. ಆಗ ಸೊಂಟದ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬಂದಾಗ ಈ ಕೊಬ್ಬು ಹೆಚ್ಚು ಹೆಚ್ಚಾಗಿ ಖರ್ಚಾಗಲು ಕೊಬ್ಬರಿ ಎಣ್ಣೆ ನೆರವಾಗುತ್ತದೆ ಅಷ್ಟೇ. ಇದಕ್ಕಾಗಿ ಕನಿಷ್ಟ ದಿನದ ಒಂದು ಹೊತ್ತಿನ ಪರಿಶ್ರಮದ ವ್ಯಾಯಾಮ, ಅನಾರೋಗ್ಯಕರ ಆಹಾರಗಳಿಗೆ ಇಲ್ಲವೆನ್ನುವುದು, ನಿಮಗೆ ಇಷ್ಟವಾಗದೇ ಇದ್ದರೂ ಸರಿ, ಆರೋಗ್ಯಕರವಾದ ಪ್ರೋಟೀನ್ ಹಾಗೂ ನಾರುಯುಕ್ತ ಆಹಾರಗಳಿಗೆ ಒಲವು ತೋರುವುದು ಮೊದಲಾದವುಗಳ ಮೂಲಕ ಮನಸ್ಸನ್ನು ತೂಕ ಕಳೆದುಕೊಳ್ಳುವತ್ತ ಕೇಂದ್ರೀಕರಿಸುವುದು ಮುಖ್ಯವಾದ ಆಗತ್ಯತೆಯಾಗಿದೆ.

  ವಿಧಾನ

  ವಿಧಾನ

  *ಸುಮಾರು ಮೂರರಿಂದ ನಾಲ್ಕು ದೊಡ್ಡ ಚಮಚದಷ್ಟು ಅಪ್ಪಟ ಕೊಬ್ಬರಿ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಕೊಂಚವೇ ಬಿಸಿಮಾಡಿ. ಅಂದರೆ ಕೈಗಳಿಗೆ ಹಚ್ಚಿಕೊಳ್ಳುವಾಗ ಬಿಸಿ ಹೆಚ್ಚಿರಬಾರದು ಅಷ್ಟು ಬಿಸಿ ಮಾಡಿದರೆ ಸಾಕು.

  *ಈ ಎಣ್ಣೆಯನ್ನು ಹೊಟ್ಟೆ ಹಾಗೂ ಸೊಂಟಕ್ಕೆ ಹೆಚ್ಚಿ ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷಗಳವರೆಗೆ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿ. ದೇಹದ ಕೆಳಗಿನಿಂದ ಮೇಲೆ ಬರುವಂತೆ ನೀವಿಕೊಂಡರೆ ಉತ್ತಮ.

  ವಿಧಾನ

  ವಿಧಾನ

  *ಈ ಮಸಾಜ್ ಅನ್ನು ಪ್ರತಿದಿನವೂ ಒಂದೇ ನಿಗದಿತ ಸಮಯದಲ್ಲಿ ನಡೆಸಬೇಕು. ಪ್ರತಿದಿನ ಸಾಧ್ಯವಾಗದೇ ಹೋದರೆ ವಾರಕ್ಕೆ ಮೂರು ಬಾರಿಯಾದರೂ ಮಾಡಲೇ ಬೇಕು.

  *ಕನಿಷ್ಠ ಮೂರು ವಾರ ಈ ವಿಧಾನವನ್ನು ಅನುಸರಿಸುತ್ತಾ ಬಂದರೆ ಸೊಂಟದ ಕೊಬ್ಬು ಕರಗಲು ಪ್ರಾರಂಭಿಸಿರುವುದನ್ನು ಗಮನಿಸಬಹುದು. ಸೊಂಟದ ಕೊಬ್ಬು ಪೂರ್ಣವಾಗಿ ಕರಗಲು ಆಯಾ ವ್ಯಕ್ತಿಯ ಒಟ್ಟು ತೂಕ, ಅನುವಂಶಿಕ ಸೂಚನೆ, ಆಹಾರಾಭ್ಯಾಸ, ಮಾನಸಿಕ ಸ್ಥೈರ್ಯ ಮೊದಲಾದವುಗಳನ್ನು ಆಧರಿಸಿರುತ್ತದೆ.

  English summary

  rubbing-coconut-oil-on-tummy-helps-reduce-stomach-fat

  According to recent statistics, it is said that belly fat is more common in women, compared to men, due to hormonal issues; however, men can also develop belly fat quickly, especially after the age of 45 and if they have habits such as drinking and smoking. We are aware of the fact that excess body fat can make a person unhealthy, however; excess fat just in the belly area is not better either!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more