For Quick Alerts
ALLOW NOTIFICATIONS  
For Daily Alerts

ಮಸಾಲಾ ಚಹಾ-ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಸಾಮಾನ್ಯ ಚಹಾದ ಬದಲಿಗೆ ಇದಕ್ಕೆ ಕೊಂಚ ಅಡುಗೆಮನೆಯ ಮಸಾಲೆವಸ್ತುಗಳನ್ನು ಬೆರೆಸಿ ’ಮಸಾಲಾ ಚಹಾ’ವನ್ನಾಗಿಸಿ ಕುಡಿಯುವುದರಿಂದ ಸ್ವಾದ ನೂರು ಪಟ್ಟು ಹೆಚ್ಚುವುದರ ಜೊತೆಗೇ ಇದರ ಆರೋಗ್ಯಕರ ಗುಣಗಳನ್ನೂ ಪಡೆಯಬಹುದು.

By Arshad
|

ಚಹಾ ಇಲ್ಲದ ಭಾರತೀಯರ ಪರಿವಾರವನ್ನು ಊಹಿಸಿಕೊಳ್ಳುವುದೇ ಕಷ್ಟ. ಭಾರತ ಮೂಲದ್ದಲ್ಲದಿದ್ದರೂ ಈ ಚಹಾ ನಮ್ಮ ಸಂಸ್ಕೃತಿಯ ಒಂದು ಭಾಗವೇ ಆಗಿ ಹೋಗಿದೆ. ಚಹಾ ಕೂಡಾ ವ್ಯಸನಕಾರಿ ಪೇಯವಾದರೂ ಇದೇನೂ ಅಪಾಯಕಾರಿ ವ್ಯಸನವಲ್ಲ. ದಿನಕ್ಕೆ ನಿಯಮಿತವಾಗಿ ಮೂರು ನಾಲ್ಕು ಕಪ್ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ. ಚಹಾ ಅಥವಾ ಚಾಯ್ ಪರಿವಾರ, ಸ್ನೇಹಿತರ ನಡುವಣ ಬಂಧವನ್ನು ಹೆಚ್ಚಿಸುವ ಮಾಧ್ಯಮವಾಗಿಯೇ ಹೆಚ್ಚು ಆಪ್ತವಾಗಿದೆ. ಯಾರು ಏನೇ ಹೇಳಿ, ನಮ್ಮವರಿಗೆ ಚಹಾ ಎಂದರೆ ಪಂಚ ಪ್ರಾಣ!

ಸಾಮಾನ್ಯ ಜನರಿಂದ ಹಿಡಿದು ನಮ್ಮ ಪ್ರಧಾನಮಂತ್ರಿಗಳ 'ಚಾಯ್ ಪೇ ಚರ್ಚಾ' ಕಾರ್ಯಕ್ರಮದವರೆಗೂ ಈ ಚಹಾಕೂಟವನ್ನು ಏರ್ಪಡಿಸುತ್ತಾರೆ. ಆದರೆ ಸಾಮಾನ್ಯ ಚಹಾದ ಬದಲಿಗೆ ಇದಕ್ಕೆ ಕೊಂಚ ಅಡುಗೆಮನೆಯ ಮಸಾಲೆವಸ್ತುಗಳನ್ನು ಬೆರೆಸಿ 'ಮಸಾಲಾ ಚಹಾ'ವನ್ನಾಗಿಸಿ ಕುಡಿಯುವುದರಿಂದ ಸ್ವಾದ ನೂರು ಪಟ್ಟು ಹೆಚ್ಚುವುದರ ಜೊತೆಗೇ ಇದರ ಆರೋಗ್ಯಕರ ಗುಣಗಳನ್ನೂ ಪಡೆಯಬಹುದು. ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ-ಅಪಾಯ ಬೆನ್ನೇರಿ ಕಾಡಲಿದೆ!

ಕೆಲವು ತರಕಾರಿಗಳನ್ನು ನೀರಿನಲ್ಲಿ ಚಿಕ್ಕ ಉರಿಯಲ್ಲಿ ಸುಮಾರು ಹದಿನೈದರಿಮ್ದ ಇಪ್ಪತ್ತು ನಿಮಿಷ ಕುದಿಸಿ ನೀರೆಲ್ಲಾ ಇಂಗಿದ ಬಳಿಕ ಸೇವಿಸಿದರೆ ಈ ತರಕಾರಿಗಳ ಆರೋಗ್ಯಕರ ಗುಣಗಳು ನೂರಾರು ಪಟ್ಟು ಹೆಚ್ಚುತ್ತವೆ. ಕೊರೆಯುವ ಚಳಿಗಾಗಿ ಬಿಸಿ ಬಿಸಿ ಮಸಾಲಾ ಚಹಾ!

ಇದೇ ರೀತಿಯಾಗಿ ಚಹಾದಲ್ಲಿ ಬೆರೆಸುವ ಮಸಾಲೆ ವಸ್ತುಗಳನ್ನು ಸುಮಾರು ಹದಿನೈದು ಇಪ್ಪತ್ತು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿ ಬಳಿಕ ಟೀ ಪುಡಿ ಸೇರಿಸಿ ಸುಮಾರು ಎರಡರಿಂದ ಮೂರು ನಿಮಿಷ ಕುದಿಸಿ ಟೀ ತಯಾರಿಸುವ ಮೂಲಕ ಮಸಾಲಾ ಚಾಯ್ ತಯಾರಿಸಬಹುದು. ಇದಕ್ಕಾಗಿ ಬಳಸಲಾಗುವ ಮಸಾಲೆ ವಸ್ತುಗಳೆಂದರೆ ಹಸಿಶುಂಠಿ, ಚೆಕ್ಕೆಪುಡಿ ಮತ್ತು ಏಲಕ್ಕಿ. ನಿಮ್ಮ ರುಚಿಗನುಸಾರವಾಗಿ ಇದರ ಪ್ರಮಾಣವನ್ನು ಹೆಚ್ಚು ಕಡಿಮೆಯಾಗಿಸಬಹುದು....


ಮಸಾಲಾ ಚಹಾ ಮಾಡುವ ವಿಧಾನ

ಮಸಾಲಾ ಚಹಾ ಮಾಡುವ ವಿಧಾನ

ಸಾಮಾನ್ಯವಾಗಿ ಒಂದು ಕಪ್ ಚಹಾಕ್ಕೆ ಕಾಲಿಂಚಿನಷ್ಟು ಗಾತ್ರದ ಹಸಿಶುಂಠಿ, ಕಾಲು ಚಿಕ್ಕ ಚಮಚದ ಅರ್ಧದಷ್ಟು ಚೆಕ್ಕೆ ಪುಡಿ (ಇದು ಕೊಂಚ ಖಾರವಾದ ಕಾರಣ ಖಾರ ಹೆಚ್ಚು ಬೇಕಿದ್ದರೆ ಹೆಚ್ಚಿಸಬಹುದು) ಹಾಗೂ ಒಂದು ಏಲಕ್ಕಿ ಸಾಕು. ಇವನ್ನು ಕುಟ್ಟಿ ಪುಡಿಮಾಡಿ ನೀರು ಕುದಿ ಬಂದ ಬಳಿಕ ಚಿಕ್ಕ ಉರಿಯಲ್ಲಿ ಸುಮಾರು ಹದಿನೈದು ಇಪ್ಪತ್ತು ನಿಮಿಷ ಕುದಿಸಬೇಕು. ಬಳಿಕ ಟೀ ಪುಡಿ ಸೇರಿಸಿ ಒಂದೆರಡು ನಿಮಿಷ ಕುದಿಸಿ (ಇನ್ನೂ ಸ್ಟ್ರಾಂ ಬೇಕು ಎಂದಿದ್ದರೆ ನಾಲ್ಕು ನಿಮಿಷ ಕುದಿಸಬಹುದು) ಹಾಲು ಸಕ್ಕರೆ ಸೇರಿಸಿ ಸೋಸಿದರೆ ಮಸಾಲಾ ಚಾಯ್ ಸಿದ್ಧ. ಬನ್ನಿ, ಇದರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ಮುಂದೆ ಓದಿ....

ಪ್ರಯೋಜನ #1

ಪ್ರಯೋಜನ #1

ನಮ್ಮ ಶರೀರದಲ್ಲಿ ಕೆಲವು ಕ್ಯಾನ್ಸರ್ ಪೀಡಿತ ಜೀವಕೋಶಗಳೇನಾದರೂ ಇದ್ದರೆ ಇವು ತಾವೂ ಬೆಳೆಯುತ್ತಾ ಅಕ್ಕಪಕ್ಕದ ಜೀವಕೋಶಗಳನ್ನೂ ನಾಶಪಡಿಸುತ್ತಾ ಜೀವಕೋಶಗಳ ಡಿಎನ್ಎ ಗಳ ಮೇಲೂ ಪ್ರಭಾವ ಬೀರುತ್ತಾ ಆರೋಗ್ಯಕ್ಕೆ ಮಾರಕವಾಗುತ್ತವೆ. ಆದ್ದರಿಂದ ಈ ಜೀವಕೋಶಗಳನ್ನು ಚಿಗುರಿನಲ್ಲಿಯೇ ಚಿವುಟುವುದು ಅಗತ್ಯ. ಶುಂಠಿ, ಏಲಕ್ಕಿ, ಚೆಕ್ಕೆ ಈ ಮೂರರಲ್ಲಿಯೂ ಉತ್ತಮ ಆಂಟಿ ಆಕ್ಸಿಡೆಂಟುಗಳು ಹಾಗೂ ಕೆಲವಾರು ಬಗೆಯ ಕ್ಯಾನ್ಸರುಗಳನ್ನು ತಡೆಯುವ ಪೋಷಕಾಂಶಗಳಿದ್ದು ಈ ಚಹಾದ ಸೇವನೆಯಿಂದ ರಕ್ಷಣೆ ಪಡೆಯಬಹುದು.

ಪ್ರಯೋಜನ #2

ಪ್ರಯೋಜನ #2

ಈ ಮಸಾಲೆಗಳಲ್ಲಿ ಕರುಳು ಮತ್ತು ಜಠರವನ್ನು ಪ್ರಚೋದಿಸಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಪೋಷಕಾಂಶಗಳಿವೆ, ವಿಶೇಷವಾಗಿ ಮೇದೋಜೀರಕ ಗ್ರಂಥಿ ಹೆಚ್ಚಿನ ಪ್ರಚೋದನೆ ಪಡೆದು ಸ್ರವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಅಲ್ಲದೇ ಜೀವರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳುತ್ತದೆ.

ಪ್ರಯೋಜನ #3

ಪ್ರಯೋಜನ #3

ಒಂದು ವೇಳೆ ನಿಮಗೆ ಶೀತ, ನೆಗಡಿ, ಕೆಮ್ಮು ಮೊದಲಾದ ತೊಂದರೆಗಳು ಬಾಧಿಸಿದರೆ ಮಸಾಲೆ ಟೀ ಕುಡಿಯುವುದು ಮೇಲು. ಏಕೆಂದರೆ ಇದು ಮೊದಲನೆಯದಾಗಿ ದೇಹವನ್ನು ಬೆಚ್ಚಗಾಗಿಸಿ ಶೀತದಿಂದ ಬಳಲಿದ ದೇಹಕ್ಕೆ ಮುದ ನೀಡುತ್ತದೆ ಹಾಗೂ ಎರಡನೆಯದಾಗಿ ರೋಗ ನಿರೋಧಕ ಶಕ್ತಿಯನ್ನು

ಹೆಚ್ಚಿಸುವ ಮೂಲಕ ಶೀತಕ್ಕೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಎದುರಿಸಲು ಬೆಂಬಲ ನೀಡುತ್ತದೆ.

ಪ್ರಯೋಜನ #4

ಪ್ರಯೋಜನ #4

ಒಂದು ವೇಳೆ ನಿಮಗೆ ಹೊಟ್ಟೆ ಉಬ್ಬರಿಕೆಯ ತೊಂದರೆ ಎದುರಾದರೆ ತಕ್ಷಣ ಒಂದು ಲೋಟ ಮಸಾಲೆ ಚಹಾ ಕುಡಿದರೆ ಉತ್ತಮ. ಇದರಿಂದ ಜೀರ್ಣಾಂಗಗಳಲ್ಲಿ ಪ್ರಚೋದನೆಯುಂಟಾಗಿ ಜೀರ್ಣಕ್ರಿಯೆ ಉತ್ತಮಗೊಂಡು ಹೊಟ್ಟೆಯುಬ್ಬರಿಕೆ ಕಡಿಮೆಯಾಗುತ್ತದೆ.

ಪ್ರಯೋಜನ #5

ಪ್ರಯೋಜನ #5

ಈ ಮಸಾಲೆಯಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುವ ಗುಣ ಹೊಂದಿವೆ. ನಿಯಮಿತವಾಗಿ ಮಸಾಲಾ ಟೀ ಕುಡಿಯುತ್ತಾ ಬರುವ ಮೂಲಕ ಇದರಿಂದ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಅಲ್ಲದೇ ಈ ಚಹಾವನ್ನು ನಿಯಮಿತವಾಗಿ ಕುಡಿಯುತ್ತಾ ಬಂದವರು ಸಾಮಾನ್ಯವಾಗಿ ಸಕ್ಕರೆ ಇರುವ ಆಹಾರಗಳತ್ತ ಒಲವು

ತೋರದೇ ಇರುವುದು ಕಂಡುಬಂದಿದ್ದು ಈ ಮೂಲಕ ಸಕ್ಕರೆಯ ಗುಲಾಮರನಾಗಿಸುವುದನ್ನು ತಡೆಯುತ್ತದೆ.

ಪ್ರಯೋಜನ #6

ಪ್ರಯೋಜನ #6

ಮಹಿಳೆಯರಿಗೆ ಕಾಡುವ ಮಾಸಿಕ ದಿನಗಳ ಕೆಳಹೊಟ್ಟೆಯ ನೋವನ್ನು ನಿವಾರಿಸಲು

ಈ ಚಹಾ ಉತ್ತಮವಾಗಿದೆ. ಅಲ್ಲದೇ ದೇಹದಲ್ಲಿ ಹಾರ್ಮೋನುಗಳ ಮಟ್ಟ ಸಮತೋಲನದಲ್ಲಿರಲು ನೆರವಾಗಿ ಆರೋಗ್ಯವನ್ನು ಕಾಪಾಡುತ್ತದೆ.

ಪ್ರಯೋಜನ #7

ಪ್ರಯೋಜನ #7

ಈ ಚಹಾದ ಸೇವನೆಯಿಂದ ತಕ್ಷಣವೇ ದೇಹದಲ್ಲಿ ಚೈತನ್ಯ ತುಂಬಿಕೊಳ್ಳುತ್ತದೆ. ಚಹಾ

ಒಂದು ಪ್ರಚೋದಕ ಪೇಯವಾಗಿದ್ದು ಇದು ನಮ್ಮ ದೇಹದಲ್ಲಿ ಹೆಚ್ಚಿನ ಶಕ್ತಿಯ ಬಿಡುಗಡೆಗೆ ನೆರವಾಗುತ್ತದೆ. ಆದ್ದರಿಂದ ನಿತ್ಯದ ದಿನವನ್ನು ಮಸಾಲಾ ಟೀ ಕುಡಿದು ಪ್ರಾರಂಭಿಸುವ ಮೂಲಕ ದಿನದ ಕೆಲಸಗಳನ್ನು ಹೆಚ್ಚಿನ ಉತ್ಸುಕತೆಯಿಂದ ನಡೆಸಲು ಸಾಧ್ಯ. ಮಗುವಿಗೂ ಟೀ ಕುಡಿಸುತ್ತಿದ್ದಿರಾ? ಹಾಗಾದರೆ ಇಂದೇ ನಿಲ್ಲಿಸಿ!

English summary

Reasons Why You Should be Drink Masala Chai

Indians can't imagine life without 'chai'. In fact, chai has become a part of our culture. And it isn't bad. Yes, it has some health benefits too. Of course, most of us believe that only green tea has health benefits. In fact, if you can prepare your own 'masala chai' at home with spices and herbs, you can enjoy the healing benefits.
X
Desktop Bottom Promotion