Just In
Don't Miss
- News
ಬಿಹಾರಕ್ಕೆ ಶಹನವಾಜ್ ಹುಸೇನ್: ಬಿಜೆಪಿಯ ಹೊಸ ತಂತ್ರ?
- Movies
ಶಿವಲಿಂಗಕ್ಕೆ ತೀವ್ರ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Sports
'ಭಾರತದೆದುರು ಸರಣಿ ಡ್ರಾಗೊಂಡರೆ ಅದು ಸೋಲಿಗಿಂತಲೂ ಕೆಟ್ಟದ್ದು!'
- Automobiles
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಸಿರು ತರಕಾರಿ ಸೇವಿಸಿ-ಕಾಯಿಲೆಗಳನ್ನು ದೂರ ಓಡಿಸಿ
ಸಾತ್ವಿಕ ಆಹಾರವೆಂದು ಕರೆಯಲಾಗುವ ತರಕಾರಿಗಳು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾಂಸಹಾರಿಗಳಿಗಿಂತ ಸಸ್ಯಾಹಾರಿಗಳು ಹೆಚ್ಚು ಆರೋಗ್ಯವಾಗಿದ್ದಾರೆ ಎಂದರೆ ತಪ್ಪಾಗಲಾರದು. ತರಕಾರಿ ಹಾಗೂ ಹಸಿರೆಲೆ ತರಕಾರಿಗಳಲ್ಲಿ ಇರುವಂತಹ ಹಲವಾರು ರೀತಿಯ ವಿಟಮಿನ್ ಹಾಗೂ ಪೋಷಕಾಂಶಗಳು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕೆಲವೊಂದು ಸಲಹೆಗಳು
ಮಾಂಸಾಹಾರದಲ್ಲಿ ಹೆಚ್ಚಿನ ಕೊಬ್ಬು ಇರುವ ಕಾರಣದಿಂದಾಗಿ ದೇಹದಲ್ಲಿ ಹಲವಾರು ರೀತಿಯ ಕಾಯಿಲೆಗಳು ಬರುತ್ತದೆ. ಕೆಲವೊಂದು ತರಕಾರಿಗಳನ್ನು ಬೇಯಿಸಿ ತಿಂದರೆ ಇನ್ನು ಕೆಲವು ತರಕಾರಿಗಳನ್ನು ಸಲಾಡ್ ರೂಪದಲ್ಲಿಯೂ ಸೇವನೆ ಮಾಡಲಾಗುತ್ತದೆ. ಆದರೆ ಬೇಯಿಸಿ ತಿನ್ನುವಾಗ ತರಕಾರಿಗಳಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ನಷ್ಟವಾಗುವುದು. ಕ್ಯಾನ್ಸರ್‌ಗೆ ತಡೆಗೋಡೆಯೊಡ್ಡುವ ಹಸಿರು ತರಕಾರಿ
ಇದರಿಂದ ಅರೆಬೇಯಿಸಿದ ತರಕಾರಿಗಳು ತುಂಬಾ ಒಳ್ಳೆಯದು. ಇದರಲ್ಲಿ ಹೆಚ್ಚಿನ ಪೋಷಕಾಂಶಗಳು ಹಾಗೆ ಉಳಿದುಕೊಳ್ಳುತ್ತದೆ. ಹಸಿರು ತರಕಾರಿಗಳಿಂದ ದೇಹಕ್ಕೆ ಯಾವೆಲ್ಲಾ ಲಾಭಗಳು ಆಗಲಿದೆ ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.

ಕ್ಯಾನ್ಸರ್ ವಿರುದ್ಧ ಹೋರಾಡುವುದು
ನೈಸರ್ಗಿಕದತ್ತವಾಗಿ ಸಿಗುವಂತಹ ತರಕಾರಿಗಳಲ್ಲಿ ಕ್ಯಾನ್ಸರ್ ನ್ನು ತಡೆಯುವಂತಹ ಶಕ್ತಿಯಿದೆ. ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಕೆಲವೊಂದು ತರಕಾರಿಗಳು ದೇಹದಲ್ಲಿರುವ ಫ್ರಿ ರ್ಯಾಡಿಕಲ್ ವಿರುದ್ಧ ಹೋರಾಡುವುದು.

ಆರೋಗ್ಯಕರ ಹೃದಯಕ್ಕೆ
ಹೃದಯದ ಆರೋಗ್ಯಕ್ಕೆ ಹೆಚ್ಚೆಚ್ಚು ತರಕಾರಿ ತಿನ್ನಬೇಕು ಎಂದು ವೈದ್ಯರು ಸಲಹೆ ನೀಡಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಹೃದಯದ ಆರೋಗ್ಯಕ್ಕೆ ಬೇಕಾಗುವಂತಹ ಹೆಚ್ಚಿನ ಪೋಷಕಾಂಶಗಳು ತರಕಾರಿಗಳಲ್ಲಿ ಇವೆ. ಬ್ರೆಡ್‌ಗಳಲ್ಲಿ ಯಾವ ಬ್ರೆಡ್ ಹೃದಯಕ್ಕೆ ಒಳ್ಳೆಯದು?

ತೂಕ ಕಡಿಮೆ ಮಾಡಲು
ದೇಹವು ಅತಿಯಾದ ತೂಕವನ್ನು ಹೊಂದಿದಾಗ ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ತರಕಾರಿಗಳಲ್ಲಿ ಇರುವಂತಹ ಹೆಚ್ಚಿನ ನಾರಿನಾಂಶವು ಹೊಟ್ಟೆ ತುಂಬಿದಂತೆ ಮಾಡಿ ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುವುದು.

ರಕ್ತದೊತ್ತಡ ಕಡಿಮೆ ಮಾಡಿ ನಿಯಂತ್ರಣದಲ್ಲಿಡುವುದು
ಹೆಚ್ಚಿನ ತರಕಾರಿಗಳಲ್ಲಿ ಸೋಡಿಯಂ ಅಂಶವು ತುಂಬಾ ಕಡಿಮೆಯಿರುತ್ತದೆ. ಇದರಿಂದ ತರಕಾರಿಗಳು ಹೃದಯಕ್ಕೆ ತುಂಬಾ ಒಳ್ಳೆಯದು. ತರಕಾರಿ ಸೇವನೆ ಮಾಡಿದರೆ ರಕ್ತದೊತ್ತಡವು ಪರಿಣಾಮಕಾರಿಯಾಗಿ ಕಡಿಮೆಯಾಗುವುದು. ಪ್ರತಿದಿನ ತರಕಾರಿ ಸೇವಿಸುವ ಪ್ರಮುಖ ಲಾಭಗಳಲ್ಲಿ ಇದು ಒಂದಾಗಿದೆ.

ಮಲಬದ್ಧತೆ ಸಮಸ್ಯೆ ಕಾಡದು
ನೀವು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಾ ಇದ್ದರೆ ತರಕಾರಿ ಸೇವನೆ ಮಾಡಿ. ಇದರಿಂದ ಮಲಬದ್ಧತೆ ಸಮಸ್ಯೆಯು ಕಡಿಮೆಯಾಗುವುದು. ತರಕಾರಿಗಳಲ್ಲಿ ಇರುವಂತಹ ಉನ್ನತ ಮಟ್ಟದ ನಾರಿನಾಂಶವು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವುದು. ಮಲಬದ್ಧತೆ ನಿವಾರಣೆಗೆ ಇಲ್ಲಿದೆ ನೋಡಿ ನೈಸರ್ಗಿಕ ಜ್ಯೂಸ್

ಆರೋಗ್ಯಕರ ಕಿಡ್ನಿಗಳಿಗಾಗಿ
ತರಕಾರಿಗಳಲ್ಲಿ ಯಾವುದೇ ರೀತಿಯ ಅಪಾಯಕಾರಿ ರಾಸಾಯನಿಕಗಳು ಇಲ್ಲದೆ ಇರುವ ಕಾರಣದಿಂದ ಕಿಡ್ನಿಯ ಮೇಲೆ ಹೆಚ್ಚಿನ ಒತ್ತಡ ಬೀಳದೆ ಕಿಡ್ನಿಯು ಆರೋಗ್ಯವಾಗಿರುವುದು. ಸಾವಯವ ತರಕಾರಿಗಳನ್ನು ಬಳಸುವುದು ಹೆಚ್ಚು ಸೂಕ್ತ. ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು

ಕೂದಲು ಉದುರುವ ಸಮಸ್ಯೆಗೆ
ವಿಟಮಿನ್ ಹಾಗೂ ಪ್ರೋಟೀನ್ ಕೊರತೆಯಿಂದಾಗಿ ಕೂದಲು ಉದುರುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಕೂದಲು ಉದುರುವ ಸಮಸ್ಯೆ ಇರುವವರು ಆದಷ್ಟು ತರಕಾರಿ ಸೇವನೆ ಮಾಡಿದರೆ ಸಮಸ್ಯೆ ಗಣನೀಯವಾಗಿ ನಿಯಂತ್ರಣಕ್ಕೆ ಬರುವುದು. ಕೂದಲು ಉದುರುವ ಸಮಸ್ಯೆಗೆ ತ್ವರಿತ ಪರಿಹಾರ-ಪ್ರಯತ್ನಿಸಿ ನೋಡಿ