ಪಿಜ್ಜಾ: ನಾಲಗೆಗೆ ರುಚಿ, ಆರೋಗ್ಯಕ್ಕೆ ಮಾತ್ರ ಮಾರಕ!

By: Arshad
Subscribe to Boldsky

ನಾವು ತಿನ್ನುವ ಆಹಾರ ಆರೋಗ್ಯಕರವಾಗದಿದ್ದರೂ ಪರವಾಗಿಲ್ಲ, ನೋಡಲು ಮಾತ್ರ ಚೆನ್ನಾಗಿರಬೇಕು ಎಂಬುದು ಸಿದ್ಧ ಆಹಾರಗಳ ಸಂಸ್ಥೆಗಳು ಕಂಡುಕೊಂಡಿರುವ ಸತ್ಯವಾಗಿದ್ದು ಈ ನಿಟ್ಟಿನಲ್ಲಿ ಆಹಾರವನ್ನು ಸುಂದರವಾಗಿ ಅಲಂಕರಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರ ಪರಿಣಾಮವೇ ಸುಂದರವಾದ ವೃತ್ತಾಕಾರದ ಪಿಜ್ಜಾಗಳು.

ಲಕ್ಷಾಂತರ ಜನರು ಇಷ್ಟಪಟ್ಟು ತಿನ್ನುತ್ತಿರುವಾಗ ನಿಮ್ಮದೇನು ತರಲೆ ಎಂದು ಕೇಳುವವರಿಗೆ ತಜ್ಞರು ನೀಡುವ ಉತ್ತರವೆಂದರೆ ಇದರಲ್ಲಿರುವ ಭಾರೀ ಪ್ರಮಾಣದ ಕ್ಯಾಲೋರಿಗಳು, ಸೋಡಿಯಂ ಮತ್ತು ಸಂತುಲಿತ ಕೊಬ್ಬು ಆರೋಗ್ಯಕ್ಕೆ ಮಾರಕವಾಗಿರುವುದು. ಪಿಜ್ಜಾ ಸೇವನೆಯು ಆರೋಗ್ಯಕ್ಕೆ ಪೂರಕವೇ ಇಲ್ಲಾ ಮಾರಕವೇ?

ಒಂದು ಸಾಮಾನ್ಯ ಗಾತ್ರದ ಪಿಜ್ಜಾದಲ್ಲಿರುವ ಅಂಕಿ ಅಂಶಗಳನ್ನು ಗಮನಿಸಿದರೆ ಇದರಲ್ಲಿ ಸುಮಾರು ಮುನ್ನೂರು ಕ್ಯಾಲೋರಿಗಳೂ, ಹದಿನಾಲ್ಕು ಗ್ರಾಂ ಕೊಬ್ಬು ಮತ್ತು ಸುಮಾರು ಏಳುನೂರು ಮಿಲಿಗ್ರಾಂ ಸೋಡಿಯಂ ಇದೆ. ಈ ಆಗಾಧ ಪ್ರಮಾಣದ ಒಂದು ಇಡೀ ಪಿಜ್ಜಾವನ್ನು ತಿಂದ ಬಳಿಕ ಆರೋಗ್ಯದ ಮೇಲೆ ಯಾವ ಪರಿಣಾಮವಾಗುತ್ತದೆ ಎಂದೇನಾದರೂ ಗೊತ್ತೇ? ಅನಾರೋಗ್ಯದ ಕೂಪಕ್ಕೆ ತಳ್ಳುವ-ರುಚಿ ರುಚಿಯಾದ ಪಿಜ್ಜಾ!  

ಒಂದು ವೇಳೆ ನೀವು ಉತ್ತಮ ಆರೋಗ್ಯವನ್ನು ಹೊಂದಿದ್ದು ಈ ಇಡಿಯ ಪಿಜ್ಜಾದ ಒಂದನೆಯ ಆರು ಭಾಗದ ಒಂದು ತುಂಡನ್ನು ತಿಂದರೆ, ಅದೂ ತಿಂಗಳಿಗೊಂದು ತುಂಡು ತಿಂದರೆ ಮಾತ್ರ ಇದು ಆರೋಗ್ಯವನ್ನು ಕೆಡಿಸಲಾರದು. ಆದರೆ ಇದಕ್ಕೂ ಹೆಚ್ಚಿನ ಪ್ರಮಾಣ ಹೊಟ್ಟೆಯನ್ನು ಸೇರಿದರೆ ಆರೋಗ್ಯಕ್ಕೆ ಅಪಾಯ ಆಹ್ವಾನಿಸುವುದು ಖಂಡಿತ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ವಾಸ್ತವವಾಗಿ ಇದರಲ್ಲಿ ಕೆಲವು ರಾಸಾಯನಿಕಗಳನ್ನು ಸೇರಿಸಿ ರುಚಿಕರವಾಗಿಸಿದ್ದು ಈ ರಾಸಾಯನಿಕಗಳು ಧೂಮಪಾನ ಮದ್ಯಪಾನದಂತೆಯೇ ಅಪ್ಪಟ ವ್ಯಸನಕಾರಿಯಾಗಿವೆ. ಅಂದರೆ ಒಂದು ಬಾರಿ ಪಿಜ್ಜಾ ರುಚಿ ಕಂಡಿರೋ, ಇದು ಮತ್ತೆ ಮತ್ತಿ ತಿನ್ನುವಂತೆ ಮನಸ್ಸನ್ನು ಪ್ರೇರೇಪಿಸುತ್ತದೆ. ಈ ವ್ಯಸನಕ್ಕೆ ತುತ್ತಾದ ಬಳಿಕ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ನೋಡೋಣ... 

ವಾಸ್ತವಾಂಶ #1

ವಾಸ್ತವಾಂಶ #1

ಮೊದಲಾಗಿ ಈ ಪಿಜ್ಜಾ ಯಾವುದರಿಂದ ತಯಾರಿಸಲ್ಪಟ್ಟಿದೆ ಎಂದು ಗೊತ್ತೇ? ಅಪ್ಪಟ ಸಂಸ್ಕರಿತ ಮೈದಾದಿಂದ. ಸಂಸ್ಕರಿತ ಮೈದಾದಲ್ಲಿ ಒಂದಿನಿತೂ ನಾರು ಇಲ್ಲ. ಗೋಧಿಯಲ್ಲಿ ಇರುವ ನಾರನ್ನೆಲ್ಲಾ ಶೋಧಿಸಿ ಪ್ರತ್ಯೇಕಿಸಿದ ಬಳಿಕ ಉಳಿದ ಗ್ಲುಟೆನ್ ಭಾಗವೇ ಮೈದಾ. ನಾರಿನಲ್ಲಿರುವ ವಿಟಮಿನ್ನುಗಳೂ ಕಳೆದುಕೊಳ್ಳುವ ಕಾರಣ ಈ ಹಿಟ್ಟು ಸ್ಥೂಲಕಾಯವನ್ನು ಹೆಚ್ಚಿಸಲು ನೇರವಾಗಿ ಕಾರಣವಾಗುತ್ತದೆ. ಅಲ್ಲದೇ ನಾರು ಇಲ್ಲದೇ ಇರುವ ಕಾರಣ ಮಲಬದ್ದತೆಯೂ ಎದುರಾಗುತ್ತದೆ.

ವಾಸ್ತವಾಂಶ #2

ವಾಸ್ತವಾಂಶ #2

ಪಿಜ್ಜಾದ ರುಚಿ ಹೆಚ್ಚಿಸಲು ಬಳಸಲಾಗುವ ಚೀಸ್ ಅತ್ಯಧಿಕ ಪ್ರಮಾಣದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೊಂದಿದ್ದು ರಕ್ತದಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ಶೀಘ್ರವಾಗಿ ಹೆಚ್ಚಿಸುತ್ತದೆ. ಒಂದು ವೇಳೆ ಮಾಂಸಾಹಾರಿ ಪಿಜ್ಜಾ ನಿಮ್ಮ ಆಯ್ಕೆಯಾದರೆ ಮಾಂಸದಲ್ಲಿರುವ ಕೊಬ್ಬುಗಳು ಸಹಾ ತಮ್ಮ ದೇಣಿಗೆಯನ್ನು ಸೇರಿಸುವ ಮೂಲಕ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಅಂಶಗಳನ್ನು ವಿಪರೀತವಾಗಿ ಏರಿಸುತ್ತವೆ.

ವಾಸ್ತವಾಂಶ #3

ವಾಸ್ತವಾಂಶ #3

ಪಿಜ್ಜಾದ ರುಚಿ ಹೆಚ್ಚಿಸಲು ಉಪ್ಪಿನ ಜೊತೆ ಸೋಡಿಯಂ ಅನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಈ ಲವಣ ಅಧಿಕ ರಕ್ತದೊತ್ತಡಕ್ಕೆ ನೇರವಾಗಿ ಕಾರಣವಾಗಿದೆ. ಒಂದು ಇಡಿಯ ಪಿಜ್ಜಾ ತಿಂದ ಬಳಿಕ ದಿನದ ಅಗತ್ಯದ ಸಂಪೂರ್ಣ ಪ್ರಮಾಣದ ಸೋಡಿಯಂ ಅನ್ನು ಈ ಪಿಜ್ಜಾದಿಂದಲೇ ಪಡೆದುಕೊಂಡಂತಾಗಿದ್ದು ದಿನದ ಇತರ ಆಹಾರಗಳ ಮೂಲಕ ಸೇವಿಸುವ ಉಪ್ಪಿನ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣವಾಗಿ ಈಗಾಗಲೇ ಆವರಿಸಿದ್ದ ಅಧಿಕ ರಕ್ತದೊತ್ತಡವನ್ನು ಇನ್ನಷ್ಟು ಅಧಿಕವಾಗಿಸುತ್ತದೆ.

ವಾಸ್ತವಾಂಶ #4

ವಾಸ್ತವಾಂಶ #4

ಪಿಜ್ಜಾದ ರುಚಿ ಹೆಚ್ಚಿಸಲು ಸೇರಿಸಿರುವ ಕೃತಕ ರಾಸಾಯನಿಕಗಳು ಭಾರೀ ವ್ಯಸನಕಾರಿಯಾಗಿದ್ದು ಇವುಗಳು ಮತ್ತೆ ಮತ್ತೆ ಪಿಜ್ಜಾಗಳನ್ನು ತಿನ್ನುವಂತೆ ಪ್ರೇರೇಪಿಸುತ್ತವೆ. ಪಾಶ್ಚಾತ್ಯ ಸಂಸ್ಥೆಗಳು ಈ ರಾಸಾಯನಿಕಗಳು ಯಾವುವು, ಪ್ರಾಣಿಜನ್ಯವೋ, ಸಸ್ಯಜನ್ಯವೋ ಎಂಬ ಒಂದೂ ಗುಟ್ಟು ಬಿಟ್ಟುಕೊಡದೇ ಇವುಗಳನ್ನು ಈ-ನಂಬರ್ ಗಳೆಂಬ ಸೂತ್ರದ ಅನುಸಾರವಾಗಿ ತಮ್ಮ ಪ್ಯಾಕೆಟ್ಟುಗಳಲ್ಲಿ ಪ್ರಕಟಿಸುತ್ತವೆ. ಉದಾಹರಣೆಗೆ E200 ರಿಂದ E282 ಸಂರಕ್ಷಕಗಳು ಹಾಗೂ ಆಮ್ಲಗಳು. ಇವುಗಳು ಏನು ಎಂಬುದನ್ನು ನೋಡುವಷ್ಟು ತಾಳ್ಮೆ ಪಿಜ್ಜಾ ತಿನ್ನುವವರಿಗೆ ಇಲ್ಲವಾದುದರಿಂದ ಪಿಜ್ಜಾ ತಿನ್ನುವವರು ತಮಗರಿವಿಲ್ಲದಂತೆಯೇ ಇವುಗಳ ದಾಸರಾಗಿ ಬಿಡುತ್ತಾರೆ.

ವಾಸ್ತವಾಂಶ #5

ವಾಸ್ತವಾಂಶ #5

ಪಿಜ್ಜಾ ತಿಂದ ಕೆಲವು ನಿಮಿಷಗಳ ಬಳಿಕ ರಕ್ತ ಪರೀಕ್ಷೆ ಮಾಡಿಸಿಕೊಂಡರೆ ಆಘಾತ ನಿಶ್ಚಿತ. ಏಕೆಂದರೆ ಪಿಜ್ಜಾ ತಿಂದ ತಕ್ಷಣ ರಕ್ತದ ಸಕ್ಕರೆಯ ಪ್ರಮಾಣ ಧಿಡೀರನೇ ಏರಿ ಕೆಲವು ನಿಮಿಷಗಳ ಬಳಿಕ ಅಷ್ಟೇ ಧಿಡೀರನೇ ಕೆಳಕ್ಕೂ ಇಳಿಯುತ್ತದೆ. ಇದಕ್ಕೆ ಮೈದಾ ಹಾಗೂ ಕೆಲವು ಸಂರಕ್ಷಕಗಳು ಕಾರಣವಾಗಿದ್ದು ಈ ಏರುಪೇರು ಹೃದಯದ ಮೇಲೆ ಭಾರೀ ಒತ್ತಡವನ್ನು ಹೇರುತ್ತದೆ.

ವಾಸ್ತವಾಂಶ #6

ವಾಸ್ತವಾಂಶ #6

ಒಮ್ಮೆ ಇದರ ರುಚಿಗೆ ದಾಸರಾಗಿಬಿಟ್ಟಿರೂ, ಬಳಿಕ ಹೆಚ್ಚೂ ಕಡಿಮೆ ಜೀವಮಾನವಿಡೀ ಪಿಜ್ಜಾವನ್ನೇ ಮನಸ್ಸು ಬಯಸುತ್ತದೆ. ಪ್ರಾರಂಭಿಕ ಹಂತದಲ್ಲಿ ಏನೂ ವ್ಯತ್ಯಾಸವಾದಂತೆ ಅನ್ನಿಸದಿದ್ದರೂ ಕಾಲಕ್ರಮೇಣ ಇದರ ದುಷ್ಪರಿಣಾಮಗಳು ಒಂದೊಂದಾಗಿ ಕಾಣತೊಡಗುತ್ತವೆ. ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಟೈಪ್ 2 ಮಧುಮೇಹ, ಹೃದಯಸಂಬಂಧಿ ತೊಂದರೆಗಳು ಮೊದಲಾದವು ನಿಧಾನವಾಗಿ ಆವರಿಸಿಕೊಂಡು ಆರೋಗ್ಯವನ್ನು ಶಿಥಿಲಗೊಳಿಸುತ್ತಾ ಹೋಗುತ್ತವೆ.ಟೈಪ್‌-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ

 
English summary

Reasons To Stop Eating Pizza From Today

Pizza is the best gift to your tongue but a bad substance to your health! The problem with pizza is it contains too many calories, sodium and saturated fat.
Please Wait while comments are loading...
Subscribe Newsletter