For Quick Alerts
ALLOW NOTIFICATIONS  
For Daily Alerts

ಅನಾರೋಗ್ಯದ ಕೂಪಕ್ಕೆ ತಳ್ಳುವ-ರುಚಿ ರುಚಿಯಾದ ಪಿಜ್ಜಾ!

By Manu
|

ಕರೆ ಮಾಡಿದರೆ ಮನೆ ಮುಂದಕ್ಕೆ ಬಿಸಿ ಬಿಸಿ ಆಹಾರವನ್ನು ತಂದು ನೀಡುತ್ತೇವೆ ಎಂದವರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ನಮ್ಮ ಪಿಜ್ಜಾ ಹುಡುಗರು. ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿಯಂತಹ ಟ್ರಾಫಿಕ್ ಕೂಪಗಳಲ್ಲಿ ಸಹ, ಎಂತಹದೇ ಸಂದಿಗೊಂದಿಗಳಲ್ಲಿ ಹೇಳಿದ ಸಮಯಕ್ಕೆ ತಪ್ಪದೆ ತಂದು ನೀಡುವ ಪಿಜ್ಜಾ ರುಚಿ ನಿಮಗೂ ಸಹ ಇಷ್ಟವೇ? ಹೌದು, ಯುವಕರಿಂದ ಹಿಡಿದು ಮುದುಕರವರೆಗೆ ಪಿಜ್ಜಾ ರುಚಿಗೆ ಮಾರು ಹೋದವರು ಹಲವಾರು. ನೀವು ಸಹ ಈ ಪಟ್ಟಿಯಲ್ಲಿದ್ದರೆ ಈ ಪಟ್ಟಿಯಿಂದ ಹೊರಬರುವ ಸಮಯ ಇದಾಗಿದೆ ಎಂಬುದು ನಮ್ಮ ಅಭಿಪ್ರಾಯ ಪಿಜ್ಜಾದಲ್ಲಿ ಹಲವಾರು ಪಟ್ಟು ಕೊಬ್ಬು ಮತ್ತು ಕ್ಯಾಲೋರಿಗಳು ಇರುತ್ತವೆ, ಇದರ ಜೊತೆಗೆ ಈ ಪಿಜ್ಜಾ ಮೇಲೆ ಹಲವಾರು ಟಾಪಿಂಗ್‌ಗಳನ್ನು ಹಾಕಲಾಗಿರುತ್ತದೆ.

ಅವು ಆರೋಗ್ಯಕ್ಕೆ ಒಳ್ಳೆಯದಲ್ಲ. ಪಿಜ್ಜಾದ ಸ್ಲೈಸ್ ಜೊತೆಗೆ ಯಾವಾಗ ನೀವು ಈ ಟಾಪಿಂಗ್‌ಗಳನ್ನು ಸೇವಿಸುತ್ತೀರೋ, ಆಗ ನೀವು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುತ್ತೀರಾ ಎಂದು ಅರ್ಥ ಮಾಡಿಕೊಳ್ಳಿ. ನೀವು ಇದನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಮತ್ತಷ್ಟು ತೂಕವನ್ನು ಸೇರಿಸುತ್ತಿರುವಿರಿ ಎಂಬುದನ್ನು ಮರೆಯಬಾರದು. ಇದೆಲ್ಲಕ್ಕಿಂತ ಮುಖ್ಯವಾಗಿ ಪಿಜ್ಜಾದ ಟಾಪಿಂಗ್‌ಗಳಲ್ಲಿ ಎಲ್ಲಾ ಬಗೆಯ ಕೊಬ್ಬುಗಳು ಮತ್ತು ಅಧಿಕ ಪ್ರಮಾಣದ ಖಾಲಿ ಪೋಷಕಾಂಶಗಳು! ಇರುತ್ತವೆ. ಇವುಗಳಿಂದ ನಿಮಗಾಗಲಿ, ನಿಮ್ಮ ದೇಹಕ್ಕಾಗಲಿ ಒಂದು ನಯಾ ಪೈಸೆ ಪ್ರಯೋಜನವಿರುವುದಿಲ್ಲ. ಪಿಜ್ಜಾ ಸೇವನೆಯು ಆರೋಗ್ಯಕ್ಕೆ ಪೂರಕವೇ ಇಲ್ಲಾ ಮಾರಕವೇ?

ಒಂದು ವೇಳೆ ನೀವು ಆರೋಗ್ಯಕಾರಿಯಾಗಿ ಇರಬೇಕಾದಲ್ಲಿ ಆ ಅಂಟಿಕೊಳ್ಳುವ ಚೀಸ್‌ನಿಂದ ದೂರವಿರಿ ಎಂಬುದು ನಮ್ಮ ಸಲಹೆ. ಆ ಪಾಲಕ್ ಡ್ರೆಸ್ಸಿಂಗ್‌ ಹೊಂದಿರುವ ಸಲಾಡ್ ಮತ್ತು ಮಾಂಸದ ಟಾಪಿಂಗ್‌ಗಳ ಸಹವಾಸಕ್ಕೆ ಹೋಗಬೇಡಿ. ಇವು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಪಿಜ್ಜಾದಲ್ಲಿರುವ ಅನಾರೋಗ್ಯಕಾರಿ ಟಾಪಿಂಗ್‌ಗಳ ಕುರಿತಾಗಿ ತಿಳಿದುಕೊಳ್ಳಲು ಸ್ವಲ್ಪ ಸಮಯವನ್ನು ನೀಡಿ. ಇದನ್ನು ಓದಿದ ನಂಟರ ನೀವು ಅಚ್ಚರಿ, ಶಾಕ್‌ಗೆ ಒಳಗಾಗುವುದು ಖಂಡಿತ...! ಮುಂದೆ ಓದಿ...

ಚೀಸ್

ಚೀಸ್

ಪಿಜ್ಜಾದಲ್ಲಿ ಚೀಸ್‌ನ ಪದರಗಳನ್ನು ಟಾಪಿಂಗ್ ಆಗಿ ಬಳಸಲಾಗುತ್ತದೆ. ಇದು ಸಿಕ್ಕಾಪಟ್ಟೆ ಕ್ಯಾಲೋರಿಯನ್ನು ಒಳಗೊಂಡಿರುತ್ತದೆ. ಚೀಸ್ ಎಂಬುದು ಒಂದು ಹೈನು ಉತ್ಪನ್ನವಾಗಿದ್ದು, ಮೂಳೆ ಮತ್ತು ಹಲ್ಲುಗಳಿಗೆ ಒಳ್ಳೆಯದು. ಆದರೆ ಅಧಿಕವಾಗಿ ಸೇವಿಸಿದರೆ ತೂಕ ಮಾತ್ರ ಹೆಚ್ಚಾಗುತ್ತದೆ!

ಮಾಂಸ

ಮಾಂಸ

ಕೆಂಪು ಮಾಂಸವು ಮಾನವನ ದೇಹಕ್ಕೆ ಒಳ್ಳೆಯದಲ್ಲ. ಒಂದು ವೇಳೆ ನೀವು ನಿಮ್ಮ ದೇಹದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸಿದಲ್ಲಿ, ಕೆಂಪು ಮಾಂಸವನ್ನು ಸೇವಿಸಬೇಡಿ. ನಿಮಗೆ ತಿನ್ನಬೇಕು ಎನಿಸಿದಲ್ಲಿ ಕೋಳಿ ಅಥವಾ ಟರ್ಕಿಯಂತಹ ತೆಳುವಾದ ಮಾಂಸವನ್ನು ಸೇವಿಸಿ. ಇವುಗಳಲ್ಲಿ ಪ್ರೋಟಿನ್ ಅಧಿಕವಾಗಿದ್ದು ಮತ್ತು ಕ್ಯಾಲೋರಿಗಳು ಕಡಿಮೆ ಇರುತ್ತವೆ.

ಅಧಿಕವಾದ ಮೊಟ್ಟೆಗಳು

ಅಧಿಕವಾದ ಮೊಟ್ಟೆಗಳು

ಬಹುಶಃ ನಿಮಗೆ ತಪ್ಪಾದ ಮಾಹಿತಿಯನ್ನು ನೀಡಿರಬಹುದು ಈ ಮೊದಲು, ಮೊಟ್ಟೆಯ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಮುಖ್ಯವಾಗಿ ಆ ಹಳದಿ ಭಾಗವನ್ನಂತು ಸೇವಿಸಲೇಬಾರದು. ಒಂದು ವೇಳೆ ಇದನ್ನು ಹೆಚ್ಚಿಗೆ ಸೇವಿಸಿದಲ್ಲಿ ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ.

ಸಾಸ್‌ಗಳು

ಸಾಸ್‌ಗಳು

ಪಿಜ್ಜಾದಲ್ಲಿ ಬಳಸಲಾಗುವ ಸಾಸ್‌ಗಳು ಸಹ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಲ್ಲಿ ಹಲವಾರು ಪದಾರ್ಥಗಳನ್ನು ಬಳಸಲಾಗಿರುತ್ತದೆ, ಇವುಗಳು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಮಾರಕವಾಗಿರುತ್ತವೆ. ಇದಕ್ಕೂ ಮೇಲಾಗಿ, ಈ ಸಾಸ್‌ಗಳು ಹಲವಾರು ಕೃತಕ ಪ್ರಿಸರ್ವೇಟಿವ್‌ಗಳನ್ನು ಒಳಗೊಂಡಿರುತ್ತವೆ. ಇವು ಕಾಲಾನುಕ್ರಮದಲ್ಲಿ ನಿಮ್ಮ ದೇಹಕ್ಕೆ ಹಾನಿಯುಂಟು ಮಾಡುತ್ತವೆ.

ಪಾಲಕ್

ಪಾಲಕ್

ಪಾಲಕ್ ಅನ್ನು ಅಧಿಕ ಉಷ್ಣಾಂಶದಲ್ಲಿ ಬೇಯಿಸಿದಾಗ, ಅದು ದೇಹಕ್ಕೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಇದು ತುಂಬಾ ದಿನಗಳ ನಂತರ ತನ್ನ ಪರಿಣಾಮವನ್ನು ತೋರಿಸುತ್ತದೆ. ಹಸಿರು ಸೊಪ್ಪುಗಳಲ್ಲಿ ಅಧಿಕ ಪ್ರಮಾಣದ ವಿಟಮಿನ್‌ಗಳು ಮತ್ತು ಪೋಷಕಾಂಶಗಳು ಇರುತ್ತವೆಯಾದರು, ಈ ಮಾದರಿಯಲ್ಲಿ ಸೇವಿಸುವಾಗ ಅವು ಸಹ ನಿರುಪಯುಕ್ತವಾಗಿ ಬಿಡುತ್ತವೆ.

English summary

5 Unhealthy Toppings Found On A Pizza

Pizza.... isn't it one of your favourite meals? Well, if you are in love with this junk food, it is time you get rid of it. Pizza's not only have a ton of fat and calories, they also contain a whole lot of toppings which is not good for health. When you consume these toppings on that slice of pizza, you are only adding more fuel to the fire. So, take a moment and get to know these unhealthy toppings found on a pizza. It will simply amaze and shock you, take a look:
X
Desktop Bottom Promotion