ಹೊಟ್ಟೆಯ ಕೊಬ್ಬನ್ನು ಕರಗಿಸಲು ಸರಳ ರೆಸಿಪಿ-ಶೀಘ್ರ ಪರಿಹಾರ...

By: Arshad
Subscribe to Boldsky

ಉತ್ತಮ ಮೈಕಟ್ಟು ಬೇಕು ಎಂಬುದು ಎಲ್ಲರ ಬಯಕೆ. ಆದರೆ ಈ ಸೊಂಟದ ಸುತ್ತಳತೆ ಮಾತ್ರ ಸತತವಾಗಿ ಹೆಚ್ಚುತ್ತಾ ಉತ್ತಮ ಮೈಕಟ್ಟಿನ ಕನಸನ್ನು ದೂರವಾಗಿಸುತ್ತಾ ಹೋಗುತ್ತದೆ. ಇದನ್ನು ಕರಗಿಸುವ ಮಾಡುವ ಪ್ರಯತ್ನಗಳಿಗೆ ಕರಗುವುದಿರಲಿ ಇನ್ನೂ ಕೊಂಚ ಹೆಚ್ಚೇ ವಿಸ್ತಾರವಾಗುವ ಕಾರಣ ಆತ್ಮವಿಶ್ವಾಸವನ್ನೂ ಕುಂದಿಸುತ್ತದೆ. ವಾಸ್ತವವಾಗಿ ಸಪಾಟಾದ ಹೊಟ್ಟೆ ಪಡೆಯುವುದು ಅಸಾಧ್ಯವಾದ ಕೆಲಸವೇನಲ್ಲ.

ಒಂದು ವೇಳೆ ವ್ಯಾಯಮ ನಿಮಗೆ ಒಗ್ಗದೇ ಇದ್ದರೆ ನೀವು ಆಹಾರವನ್ನು ನಿಯಂತ್ರಿಸುವ ಮೂಲಕ ಸಂಗ್ರಹವಾಗಿದ್ದ ಕೊಬ್ಬನ್ನು ಬಲವಂತವಾಗಿ ಬಳಸುವಂತೆ ಮಾಡುವ ಮೂಲಕ ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಬಹುದು. ಆದರೆ ಇದಕ್ಕೆ ಭಾರೀ ಮನೋಸ್ಥೈರ್ಯ ಅಗತ್ಯ. ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!

ಏನೆಂದರೆ ಕೊಬ್ಬು ಹೆಚ್ಚಿಸುವ ಆಹಾರ ಕಂಡಾಗಲೆಲ್ಲಾ ನಮ್ಮ ನಾಲಿಗೆ ಇದು ಬೇಕು ಎಂದು ಜೊಲ್ಲು ಸುರಿಸುವ ಮೂಲಕ ಕೊಬ್ಬು ಹೆಚ್ಚಾಗಿರುತ್ತದೆ. ಈ ಬಯಕೆಗೆ ಕಡಿವಾಣ ಹಾಕಲು ಸಾಧ್ಯವಾದರೆ ನಿಮ್ಮ ಸೊಂಟ ಮತ್ತೊಮ್ಮೆ ಸಿಂಹಕಟಿಯಾಗಲು ಸಾಧ್ಯ. ಈ ನಿರ್ಧಾರವನ್ನು ಗಟ್ಟಿಗೊಳಿಸಲು ಒಂದು ಸುಲಭ ವಿಧಾನಗಳನ್ನು ಇಲ್ಲಿ ನೀಡಲಾಗಿದೆ: ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಈ ವಿಧಾನದಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಮರ್ಥವಾದ ನೈಸರ್ಗಿಕ ಸಾಮಾಗ್ರಿಗಳಿದ್ದು ಇವು ನಿಮ್ಮ ಮನೆಯಲ್ಲಿ ಸದಾ ಲಭ್ಯವಿರುವ ಸಾಮಾಗ್ರಿಗಳೇ ಆಗಿವೆ. ಈ ವಿಧಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಏಳೇ ದಿನದಲ್ಲಿ ಕೊಬ್ಬು ಕಡಿಮೆಯಾಗುವುದನ್ನು ಗಮನಿಸಬಹುದು....  

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ನೀರು : ಒಂದೂವರೆ ಲೋಟ

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಒಂದು ಚಿಕ್ಕಚಮಚ ಜೇನು

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಒಂದು ಚಿಕ್ಕಚಮಚ ಲಿಂಬೆರಸ

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಒಂದು ಚಿಕ್ಕಚಮಚ ಚಿಯಾ ಬೀಜಗಳು.

ಈ ಪೇಯದ ಪ್ರಯೋಜನಗಳು

ಈ ಪೇಯದ ಪ್ರಯೋಜನಗಳು

ಲಿಂಬೆಯಲ್ಲಿರುವ ಆಮ್ಲಗಳನ್ನು ಅರಗಿಸಿಕೊಳ್ಳಲು ಗರಿಷ್ಠ ಪ್ರಮಾಣದ ಕೊಬ್ಬು ಬಳಕೆಯಾಗುತ್ತದೆ ಹಾಗೂ ಇದರಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿವೆ. ಅಲ್ಲದೇ ಲಿಂಬೆ ವೈರಸ್ ನಿರೋಧಕ ಹಾಗೂ ಯಾವುದೇ ಬಗೆಯ ಶೀತವಾದರೂ ಉಪಶಮನಗೊಳಿಸುವ ಗುಣವನ್ನು ಹೊಂದಿದೆ.

ಈ ಪೇಯದ ಪ್ರಯೋಜನಗಳು

ಈ ಪೇಯದ ಪ್ರಯೋಜನಗಳು

ಚಿಯಾ ಬೀಜಗಳಲ್ಲಿಯೂ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮತ್ತು ಕರಗದ ನಾರು ಇದೆ. ಇವೂ ಕೊಬ್ಬನ್ನು ಕರಗಿಸಲು ಸಮರ್ಥವಾಗಿದೆ.

ತಯಾರಿಸುವುದು ಹೇಗೆ?

ತಯಾರಿಸುವುದು ಹೇಗೆ?

#1 ಮೊದಲಿಗೆ ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಇದರಲ್ಲಿರುವ ನಾರಿನಂಶ ಹೊರಬೀಳುವಂತೆ ಮಾಡಿ.

ತಯಾರಿಸುವುದು ಹೇಗೆ?

ತಯಾರಿಸುವುದು ಹೇಗೆ?

#2 ಸುಮಾರು ಒಂದು ಗಂಟೆಯ ಬಳಿಕ ನೀರಿಗೆ ಲಿಂಬೆರಸ ಮತ್ತು ನೆನೆಸಿಟ್ಟ ಚಿಯಾ ಬೀಜಗಳನ್ನು ಬೆರೆಸಿ. ಬಳಿಕ ಒಂದು ಚಿಕ್ಕಚಮಚ ಜೇನನ್ನೂ ಸೇರಿಸಿ.

ತಯಾರಿಸುವುದು ಹೇಗೆ?

ತಯಾರಿಸುವುದು ಹೇಗೆ?

#3 ಮಿಕ್ಸಿಯ ಬ್ಲೆಂಡರ್‍ನಲ್ಲಿ ಇದನ್ನು ಚೆನ್ನಾಗಿ ಕಡೆಯಿರಿ, ಅಥವಾ ಚಮಚದಿಂದ ಕಲಕಿದರೂ ಸರಿ.

ತಯಾರಿಸುವುದು ಹೇಗೆ?

ತಯಾರಿಸುವುದು ಹೇಗೆ?

#4 ಈಗ ಪಾನೀಯ ಕುಡಿಯಲು ಸಿದ್ಧವಾಗಿದೆ. ಈ ಪಾನೀಯವನ್ನು ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕೂ ಮುನ್ನ ಕುಡಿಯಿರಿ ಹಾಗೂ ಒಂದೇ ವಾರದಲ್ಲಿ ಇದರ ಪರಿಣಾಮವನ್ನು ಗಮನಿಸಿ. ಬರೀ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಿ!

 
English summary

Quick Natural Tips To Lose Belly Fat

This recipe is one of the best natural home remedies to reduce abdominal fat. The best part is, you don't have to spend a penny for this and can use your own kitchen ingredients. So Continue reading this article to know how to reduce belly fat at home in 7 days.
Please Wait while comments are loading...
Subscribe Newsletter