For Quick Alerts
ALLOW NOTIFICATIONS  
For Daily Alerts

ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!

By manu
|

ಇಡಿಯ ವಿಶ್ವದಲ್ಲಿ ಶೇಖಡಾ ಐವತ್ತಕ್ಕಿಂತಲೂ ಹೆಚ್ಚು ಜನರು ಸ್ಥೂಲಕಾಯರಾಗಿದ್ದು ತಮ್ಮ ಹೊಟ್ಟೆಯ ಸುತ್ತಳತೆಯನ್ನು ಕಡಿಮೆಗೊಳಿಸಲು ಇಚ್ಛಿಸುತ್ತಾರೆ. ಹೊಟ್ಟೆಯ ಸುತ್ತಳತೆ ಹೆಚ್ಚಿರುವುದು ಉಳ್ಳವರ ಲಕ್ಷಣ ಎಂದು ಹಿಂದೆ ಭಾವಿಸಲಾಗುತ್ತಿತ್ತು.

ಆದರೆ ಇದು ವಾಸ್ತವವಾಗಿ ಅನಗತ್ಯ ಕೊಬ್ಬಿನ ಸಂಗ್ರಹವಾಗಿದ್ದು ಹಲವು ಕಾಯಿಲೆಗಳಿಗೆ ನೀಡುವ ಆಹ್ವಾನವಾಗಿದೆ. ದೇಹದ ಆಕಾರವನ್ನು ಕೆಡಿಸುವುದು ಮಾತ್ರವಲ್ಲ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು ಮತ್ತು ಮರೆಗುಳಿತನಕ್ಕೂ ಕಾರಣವಾಗಬಹುದು. ನಿಮ್ಮ ಹೊಟ್ಟೆಯ ಕೊಬ್ಬನ್ನು 10 ದಿನಗಳಲ್ಲೇ ಕರಗಿಸಿಕೊಳ್ಳಿ!

ಆದರೆ ಇದನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ನಮ್ಮ ದೇಹದಲ್ಲಿ ಅಡಕವಾಗಿರುವ ಕಾರ್ಯಸೂಚಿ (programme) ಪ್ರಕಾರ ಸೊಂಟದ ಸುತ್ತ ಕೊಬ್ಬು ಪ್ರಥಮವಾಗಿ ಸಂಗ್ರಹವಾಗುತ್ತಾ ಕಟ್ಟ ಕಡೆಯದಾಗಿ ಮುಖದ ಚರ್ಮದಡಿಯಲ್ಲಿ ಸಂಗ್ರಹವಾಗುತ್ತದೆ. ಅದೇ ಕರಗಿಸುವಾಗ ಮುಖದ ಚರ್ಮದಡಿಯ ಕೊಬ್ಬಿನಿಂದ ಪ್ರಾರಂಭವಾಗಿ ಕಟ್ಟಕಡೆಗೆ ಸೊಂಟದ ಕೊಬ್ಬು ಕರಗಲು ಪ್ರಾರಂಭವಾಗುತ್ತದೆ.

ಇದೇ ಕಾರಣಕ್ಕೆ ಹೊಟ್ಟೆಯ ಕೊಬ್ಬು ಕರಗಿಸುವುದು ಅಷ್ಟು ಸುಲಭವಲ್ಲ. ದೇಹದಾಢ್ಯ ಪಟುಗಳ ಮುಖವನ್ನು ಗಮನಿಸಿ, ಅವರ ಮುಖದ ಚರ್ಮ ಬಹುತೇಕ ಬುರುಡೆಗೆ ಅಂಟಿಕೊಂಡಷ್ಟು ಕಡಿಮೆ ಕೊಬ್ಬು ಇರುತ್ತದೆ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಆದರೆ ಸೊಂಟದ ಕೊಬ್ಬನ್ನು ಕರಗಿಸಲು ಕೆಲವು ಆಹಾರಗಳು ನೆರವಾಗುತ್ತವೆ. ಹೇಗೆಂದರೆ ಈ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬಿನ ಅವಶ್ಯಕತೆ ಇರುವುದರಿಂದ ದೇಹ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿ ನಿಧಾನವಾಗಿ ಈ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಸೊಂಟದ ಸುತ್ತಲ ಕೊಬ್ಬು ಸಹಾ ಕಡಿಮೆಯಾಗತೊಡಗುತ್ತದೆ. ಈ ನಿಟ್ಟಿನಲ್ಲಿ ನೆರವಾಗುವ ಆಹಾರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ....

ಲಿಂಬೆ ರಸವನ್ನು ಕುಡಿಯಿರಿ

ಲಿಂಬೆ ರಸವನ್ನು ಕುಡಿಯಿರಿ

ಕೊಬ್ಬು ಸಂಗ್ರಹವಾಗಲು ನಮ್ಮ ಯಕೃತ್ (liver) ಆಯಾಸಗೊಂಡಾಗ ಪೂರ್ಣಪ್ರಮಾಣದಲ್ಲಿ ಕೊಬ್ಬನ್ನು ಜೀರ್ಣಿಸಿಕೊಳ್ಳಲು ಅಸಮರ್ಥವಾಗಿ ಹೆಚ್ಚಿನ ಕೊಬ್ಬು ಸಂಗ್ರಹವಾಗುತ್ತಾ ಹೋಗುತ್ತದೆ. ಲಿಂಬೆರಸದ ಸೇವನೆಯಿಂದ ದೇಹದಲ್ಲಿ ಹಲವು ಎಂಜೈಮ್ ಅಥವಾ ಕಿಣ್ವಗಳ ಪ್ರಮಾಣವನ್ನು ಹೆಚ್ಚಿಸಿ ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೊಬ್ಬು ಜೀರ್ಣಗೊಂಡು ಸಂಗ್ರಹವಾಗಬಹುದಾಗಿದ್ದ ಕೊಬ್ಬನ್ನು ತಡೆದಂತಾಗುತ್ತದೆ. ಅತ್ತ ಇತರ ದೈಹಿಕ ಚಟುವಟಿಕೆಗಳ ಮೂಲಕ ಕೊಬ್ಬು ಕರಗತೊಡಗುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

*ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ.

*ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.

*ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಟ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ.

*ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ಕ್ರಾನ್ಬೆರಿ ಜ್ಯೂಸ್ ಕುಡಿಯಿರಿ

ಕ್ರಾನ್ಬೆರಿ ಜ್ಯೂಸ್ ಕುಡಿಯಿರಿ

ಗಾಢ ಕೆಂಪು ಬಣ್ಣದ ಕ್ರಾನ್ಬೆರಿ ಹಣ್ಣುಗಳಲ್ಲಿ ಮ್ಯಾಲಿಕ್ ಆಮ್ಲ, ಸಿಟ್ರಿಕ್ ಆಮ್ಲ ಮತ್ತು ಕ್ವಿನಿಕ್ ಆಮ್ಲಗಳಿವೆ. ಇವುಗಳು ಜೀರ್ಣಶಕ್ತಿಯನ್ನು ಹೆಚ್ಚಿಸುವ ಕಿಣ್ವಗಳಾಗಿದ್ದು ದೇಹದ ದುಗ್ದರಸದ ಸ್ರವಿಕೆ ಹೆಚ್ಚಿಸಲು ನೆರವಾಗುತ್ತವೆ. ಈ ದುಗ್ದರಸಗಳು ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಲು ಪ್ರೇರೇಪಿಸುತ್ತವೆ. ಒಂದು ವೇಳೆ ಯಕೃತ್ ಬಳಸದೇ ಬಿಟ್ಟ ಕೊಬ್ಬನ್ನು ಕರಗಿಸಿ ವಿಸರ್ಜಿಸುವ ಮೂಲಕ ಕೊಬ್ಬು ಸಂಗ್ರಹವಾಗದಂತೆ ತಡೆಯುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

*ಪ್ರತಿದಿನ ಬೆಳಿಗ್ಗೆ ಸಮಪ್ರಮಾಣದಲ್ಲಿ ಕ್ರಾನ್ಬೆರಿ ಜ್ಯೂಸ್ ಮತ್ತು ತಣ್ಣೀರನ್ನು ಬೆರೆಸಿ ಖಾಲಿಹೊಟ್ಟೆಯಲ್ಲಿ ಕುಡಿಯಿರಿ.

*ಬಳಿಕ ಇಡಿಯ ದಿನ ಮೂರು ಅಥವಾ ನಾಲ್ಕು ಬಾರಿ ಊಟದ ಜೊತೆ ಮತ್ತು ನಡುನಡುವಲ್ಲಿ ನೀರಿನ ಬದಲಿಗೆ ಕುಡಿಯಿರಿ

*ತಾಜಾ ಹಣ್ಣುಗಳನ್ನು ಕಡೆದು ತೆಗೆದ ಜ್ಯೂಸ್ ಅತ್ಯುತ್ತಮವಾಗಿದೆ. ಆದರೆ ಇದು ಸುಲಭವಾಗಿ ಲಭ್ಯವಾಗದುದರಿಂದ ಮಾರುಕಟ್ಟೆಯಲ್ಲಿ ಸಿದ್ಧರೂಪದಲ್ಲಿ ಸಿಗುವ ಸ್ನಿಗ್ಧ ದ್ರಾವಣವನ್ನು ಒಂದು ಕಪ್ ಗೂ ಕೊಂಚ ಕಡಿಮೆ ಇರುವ ನೀರಿಗೆ ಎರಡು ದೊಡ್ಡ ಚಮಚ ಸೇರಿಸಿ ಕೂಡಲೇ ಬಳಸಿ. (ಕದಡಿ ಇಟ್ಟ ಜ್ಯೂಸ್ ಕೊಂಚ ಕಾಲದ ಬಳಿಕ ಹುಳಿಯಾಗುತ್ತದೆ)

ಶುಂಠಿ ಸೇರಿಸಿದ ಟೀ ಕುಡಿಯಿರಿ

ಶುಂಠಿ ಸೇರಿಸಿದ ಟೀ ಕುಡಿಯಿರಿ

ಹಸಿಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಸರಿ, ಆದರೆ ಇದು ದೇಹದ ಬಿಸಿಯನ್ನೂ ಹೆಚ್ಚಿಸುತ್ತದೆಂದು (thermogenic) ನಿಮಗೆ ಗೊತ್ತಿತ್ತೇ ? ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಸೊಂಟದ ಸುತ್ತ ಈಗಾಗಲೇ ಸಂಗ್ರಹವಾಗಿರುವ ಕೊಬ್ಬು ಎಷ್ಟೋ ವರ್ಷಗಳ ಹಿಂದಿನಿಂದ ಸಂಗ್ರಹವಾಗುತ್ತಾ ಬಂದಿರಬಹುದಾಗಿದ್ದು ಶುಂಠಿಯ ನಿಯಮಿತ ಸೇವನೆಯಿಂದ ನಿಧಾನವಾಗಿ ಕರಗತೊಡಗುತ್ತದೆ. ಜೊತೆಗೇ ಶುಂಠಿಯ ಸೇವನೆಯಿಂದ ದೇಹದಲ್ಲಿ ಒತ್ತಡದ ಕಾರಣ ಉತ್ಪತ್ತಿಯಾಗುವ ಕಾರ್ಟಿಸೋಲ್ (cortisol) ಎಂಬ ಹಾರ್ಮೋನು ಉತ್ಪತ್ತಿಯನ್ನು ತಡೆಯಬಹುದು. ಇದರಿಂದ ರಕ್ತದಲ್ಲಿ ಹೆಚ್ಚಬಹುದಾಗಿದ್ದ ಸಕ್ಕರೆಯ ಪ್ರಮಾಣವನ್ನು ಮಿತಿಗೊಳಿಸಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

*ಒಂದು ಲೋಟಕ್ಕಿಂತ ಕೊಂಚ ಹೆಚ್ಚು ನೀರನ್ನು ಕುದಿಸಿ.

*ಈ ನೀರಿನಲ್ಲಿ ಒಂದು ಇಂಚು ಹಸಿಶುಂಠಿಯನ್ನು ಜಜ್ಜಿ ಸುಮಾರು ಹತ್ತು ನಿಮಿಷಗಳವೆರೆಗೆ ಚಿಕ್ಕ ಉರಿಯಲ್ಲಿ ಕುದಿಸಿ.

*ಈಗ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಒಂದು ಚಮಚ ಈಗತಾನೇ ಹಿಂಡಿದ *ಲಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ.

*ಈ ಚಹಾ ಅನ್ನು ಸೋಸಿ ಬಿಸಿಬಿಸಿ ಇರುವಂತೆಯೇ ಸೇವಿಸಿ. ಒಂದು ದಿನಕ್ಕೆ ಕನಿಷ್ಟ ಎರಡು ಕಪ್ ಈ ಟೀ ಸೇವಿಸಿ ಕೊಬ್ಬಿನಿಂದ ಮುಕ್ತಿಪಡೆಯಿರಿ.

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ನಿಮ್ಮ ಆಹಾರದ ಮೂಲಕ ಸೇವಿಸುವುದರಿಂದ ಜೀರ್ಣಾಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ವಿಶೇಷವಾಗಿ ಕರುಳಿನ ಹುಣ್ಣು, ಅಜೀರ್ಣತೆ, ಹೊಟ್ಟೆಯ ಉರಿ ಮೊದಲಾದವುಗಳನ್ನು ತಡೆಯುವ ಬೆಳ್ಳುಳ್ಳಿ ಅಧಿಕ ಮತ್ತು ಕಡಿಮೆ ರಕ್ತದೊತ್ತಡವನ್ನು ತಹಬಂದಿಗೆ ತರುವ ಗುಣವಿದೆ. ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ (HDL-High density Lipoprotein) ಹೆಚ್ಚುತ್ತದೆ ಹಾಗೂ ನರಗಳ ಗೋಡೆಗಳ ದಪ್ಪವನ್ನು ಕಡಿಮೆಗೊಳಿಸುವ atherosclerosis, ಹೃದಯ ಸ್ತಂಭನಕ್ಕೆ ಕಾರಣವಾಗುವ ಟ್ರೈಗ್ಲಿಸರೈಡ್ ಎಂಬ ಕಣಗಳನ್ನು ನಿಯಂತ್ರಿಸಲೂ ನೆರವಾಗುತ್ತದೆ. ಈ ಪುಟ್ಟ ಬೆಳ್ಳುಳ್ಳಿಗೆ ಸ್ಥೂಲಕಾಯವನ್ನು ನಿಯಂತ್ರಿಸುವ ಶಕ್ತಿಯೂ ಇದೆ. ಪಚನಕ್ರಿಯೆಯನ್ನು ಶೀಘ್ರಗೊಳಿಸಲು ಕರಗಿದ್ದ ಕೊಬ್ಬನ್ನು ಬಳಸುವುದರಿಂದ ಸೊಂಟದ ಸುತ್ತಳತೆ ಶೀಘ್ರವೇ ಕಡಿಮೆಯಾಗುತ್ತಾ ಹೋಗುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.

*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಘಂಟೆ ಏನನ್ನೂ ಸೇವಿಸಬೇಡಿ.

*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

ವಿವಿಧ ತರಕಾರಿ ಮತ್ತು ಎಲೆಗಳನ್ನು ಕುದಿಸಿದ ನೀರು ಕುಡಿಯಿರಿ

ವಿವಿಧ ತರಕಾರಿ ಮತ್ತು ಎಲೆಗಳನ್ನು ಕುದಿಸಿದ ನೀರು ಕುಡಿಯಿರಿ

ಸೊಂಟದ ಸುತ್ತಳತೆ ಕಡಿಮೆಗೊಳಿಸಲು ವಿವಿಧ ತರಕಾರಿ ಮತ್ತು ಸೊಪ್ಪುಗಳು ತಮ್ಮದೇ ರೀತಿಯ ನೆರವು ನೀಡುತ್ತವೆ. ಇವೆಲ್ಲವನ್ನೂ ಕ್ರೋಢೀಕರಿಸಿದ ವಿಧಾನ ಶೀಘ್ರವೇ ಪರಿಣಾಮ ಬೀರಲು ತೊಡಗುತ್ತದೆ. ಶುಂಠಿ, ಪುದಿನಾ ಎಲೆಗಳು ಮತ್ತು ಸೌತೆಕಾಯಿಗಳಂತಹ ನಿತ್ಯಬಳಕೆಯ ಸಾಮಾಗ್ರಿಗಳು ಸಹಾ ಕೊಬ್ಬು ಕರಗಿಸಬಲ್ಲವು. ಇವುಗಳ ಜೊತೆಗೆ ಲಿಂಬೆರಸ ಸೇರಿದರೆ ಕೊಬ್ಬು ಕರಗಿಸಲು ಒಂದು ಅದ್ಬುತವಾದ ಮತ್ತು ಸುಲಭವಾದ ವಿಧಾನ ದೊರಕುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

*ಎರಡು ಲೀಟರ್ ನೀರಿಗೆ ಕೆಳಗಿನ ತರಕಾರಿಗಳನ್ನು ಸೇರಿಸಿ, ಒಂದು ಮಧ್ಯಮ ಗಾತ್ರದ ಸೌತೆ ಸಿಪ್ಪೆ ಸಹಿತವಾಗಿ ಚಿಕ್ಕದಾಗಿ ಕತ್ತರಿಸಿದ್ದು

*ಸುಮಾರು ಎರಡು ಇಂಚಿನಷ್ಟು ಗಾತ್ರದ ಹಸಿಶುಂಠಿ, ಜಜ್ಜಿದ್ದು (ತುರಿದದ್ದಾದರೆ ಸುಮಾರು ಒಂದು ಚಿಕ್ಕಚಮಚ)

*ಲಿಂಬೆಹಣ್ಣು- 1 (ಚಿಕ್ಕದಾದರೆ 2) ಹಿಂಡಿ ತೆಗೆದ ರಸ

ಪುದಿನಾ ಎಲೆಗಳು-ಸುಮಾರು ಹನ್ನೆರಡು (ಬೆರಳುಗಳಲ್ಲಿ ಹಿಚುಕಿದ್ದು)

ಎಲ್ಲವನ್ನೂ ನೀರಿನಲ್ಲಿ ಮುಳುಗಿಸಿ ಮುಚ್ಚಳ ಮುಚ್ಚಿ ಇಡಿಯ ರಾತ್ರಿ ನೆನೆಸಿಡಿ.

*ಮರುದಿನ ಈ ತರಕಾರಿಗಳು ಹಾಗೇ ಇರುವಂತೆ ಈ ನೀರನ್ನು ಇಡಿಯ ದಿನ ಸ್ವಲ್ಪ ಸ್ವಲ್ಪವಾಗಿ ಕುಡಿಯುತ್ತಾ ಇರಿ.

*ಕೆಲವೇ ದಿನಗಳಲ್ಲಿ ಪರಿಣಾಮ ಗೋಚರಿಸಲು ತೊಡಗುತ್ತದೆ.

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ಕೊಂಚ ಖಾರವಾಗಿರುವ ದಾಲ್ಚಿನ್ನಿಯ ಚೆಕ್ಕೆ (cinnamon) ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೇ ದೇಹದ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ. ಈ ಕೊಬ್ಬಿನಲ್ಲಿ ಸೊಂಟದ ಕೊಬ್ಬು ಸಹಾ ಒಂದು. ದಾಲ್ಚಿನ್ನಿಯ ಸೇವನೆಯಿಂದ ದೇಹದಲ್ಲಿ ಶಾಖ ಉತ್ಪತ್ತಿಯಾಗುವುದರಿಂದ ಹಲವು ರೀತಿಯಲ್ಲಿ ಇದು ಅರೋಗ್ಯಕ್ಕೆ ಪೂರಕವಾಗಿದೆ. ಹೆಚ್ಚಿದ ತಾಪಮಾನವನ್ನು ಪಡೆಯಲು ಕೊಬ್ಬು ಬಳಕೆಯಾಗುವುದರಿಂದ ಕೊಬ್ಬು ಕರಗಲು ನೆರವಾಗುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

* ನಿಮ್ಮ ನಿತ್ಯದ ಪೇಯಗಳಾದ ಟೀ, ಕಾಫಿ ಅಥವಾ ಹಾಲಿನ ಮೇಲೆ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿ ಕಲಕಿ ಕುಡಿಯಿರಿ.

* ನಿಮ್ಮ ನಿತ್ಯದ ಉಪಾಹಾರಗಳಾದ ಉಪ್ಪಿಟ್ಟು, ಬ್ರೆಡ್ ಟೋಸ್ಟ್ ಮೊದಲಾದವುಗಳ ಮೇಲೆ ಕೊಂಚವಾಗಿ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಿರಿ

* ನಿತ್ಯದ ಸಾಲಾಡ್ (ಅಥವಾ ಪಲ್ಯ)ಗಳ ಮೇಲೆ ಚಿಮುಕಿಸಿ ಸೇವಿಸಿ.

ಕೆಲವೇ ದಿನಗಳಲ್ಲಿ ಕೊಬ್ಬು ಕರಗತೊಡಗಿರುವುದು ಗಮನಕ್ಕೆ ಬರುತ್ತದೆ.

ಹಣ್ಣಿನ ಜ್ಯೂಸ್

ಹಣ್ಣಿನ ಜ್ಯೂಸ್

ಇಷ್ಟೇ ಅಲ್ಲದೆ, ಕೊಬ್ಬನ್ನು ಕರಗಿಸಲು ನಿಮಗೆ ನೆರವಾಗುವ ಸಲುವಾಗಿ ವಿವಿಧ ಹಸಿರು ಹಣ್ಣಿನ ರಸ, ತರಕಾರಿಗಳನ್ನುನಾವು ಪರಿಚಯಿಸುತ್ತಿದ್ದು ಇವುಗಳನ್ನು ಸೇವಿಸುವ ಮೂಲಕ ಕೂಡ ನಿಮಗೆ ಕೊಬ್ಬನ್ನು ಸುಲಭವಾಗಿ ಕರಗಿಸಲು ನೆರವಾಗಲಿದೆ. ಈ ನಿಟ್ಟಿನಲ್ಲಿ ಫಲಕಾರಿಯಾದ ಕೆಲವು ಸಂಯೋಜನೆಗಳನ್ನು ಮುಂದಿನ ಸ್ಲೈಡ್‌ಗಳಲ್ಲಿ ವಿವರಿಸಲಾಗಿದೆ. ಇದರಲ್ಲಿ ನಿಮಗಿಷ್ಟವಾದ ಯಾವುದನ್ನೂ ಬಳಸಿ, ಶೀಘ್ರವಾಗಿ ಹೊಟ್ಟೆಯ ಬೊಜ್ಜು ಕಳೆದುಕೊಳ್ಳಿರಿ.

ಸೇಬು ಮತ್ತು ದೊಡ್ಡಜೀರಿಗೆ ರಸ

ಸೇಬು ಮತ್ತು ದೊಡ್ಡಜೀರಿಗೆ ರಸ

ಒಂದು ಸೇಬಿಗೆ ಒಂದು ಚಮಚದ ಪ್ರಮಾಣದಲ್ಲಿ ದೊಡ್ಡಜೀರಿಗೆಯನ್ನು ಕೊಂಚಕಾಲ ನೆನೆಸಿಟ್ಟು ಅದೇ ನೀರಿಗೆ ಸೇಬುಹಣ್ಣನ್ನು ಕತ್ತರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ. ಇದು ಒಂದು ವಿಶಿಷ್ಟವಾದ ರುಚಿಯ ಜೊತೆ ಆರೋಗ್ಯವನ್ನೂ ನೀಡುವುದು ಮತ್ತು ಕೊಬ್ಬನ್ನೂ ಕರಗಿಸುವುದು.

ಸೌತೆ, ಸೊಪ್ಪು, ಕೇಲ್ ಎಲೆಗಳ ರಸ

ಸೌತೆ, ಸೊಪ್ಪು, ಕೇಲ್ ಎಲೆಗಳ ರಸ

ಒಟ್ಟು ಪ್ರಮಾಣದಲ್ಲಿ ಅರ್ಧಭಾಗದಷ್ಟು ಸೌತೆಕಾಯಿ (ಸಿಪ್ಪೆಸಹಿತ), ಇನ್ನುಳಿದಂತೆ ಹಸಿರು ದ್ರಾಕ್ಷಿ (ಬೀಜ ತೆಗೆದಿರುವುದು), ಗುಡ್ಡದ ಸೊಪ್ಪು (celery leaves), ಕೇಲ್ ಎಲೆಗಳನ್ನು ಸಮಪ್ರಮಾಣದಲ್ಲಿ ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ಪೌಷ್ಟಿಕ ಹಾಗೂ ಹಲವು ಖನಿಜಗಳನ್ನೊಳಗೊಂಡ ಈ ರಸ ನಿಮ್ಮ ಆರೋಗ್ಯವನ್ನು ಕಾಪಾಡುವುದು ಹಾಗೂ ಕೊಬ್ಬನ್ನು ಶೀಘ್ರವಾಗಿ ಕರಗಿಸಲು ನೆರವಾಗುವುದು. ಹುಳಿ ಎನಿಸಿದರೆ ಸೇಬು ಹಣ್ಣಿನ ಅರ್ಧಭಾಗವನ್ನೂ ಸೇರಿಸಬಹುದು. (ಸಕ್ಕರೆ ಸೇರಿಸಬೇಡಿ)

ಚಕ್ಕೋತ, ಅನಾನಾಸ್ ರಸ

ಚಕ್ಕೋತ, ಅನಾನಾಸ್ ರಸ

ಒಂದು ಪ್ರಮಾಣದಲ್ಲಿ ಅರ್ಧದಷ್ಟು ಚಕ್ಕೋತ ಹಣ್ಣಿನ ತಿರುಳು (ಕೆಂಪು ಚಕ್ಕೋತ ಉತ್ತಮ), ಇನ್ನುಳಿದ ಭಾಗದಲ್ಲಿ ಬಹುತೇಕವಾಗಿ ಅನಾನಾಸ್ ಹಣ್ಣಿನ ತಿರುಳು ಮತ್ತು ಉಳಿದ ಒಂದು ಭಾಗ ನಿಮಗಿಷ್ಟವಾದ ಹಸಿರು ತರಕಾರಿಗಳನ್ನು ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ. ಅತೀವ ಹುಳಿ ಇರುವ ಕಾರಣ ಕುಡಿಯಲು ಕೊಂಚ ಇರಿಸುಮುರಿಸಾದರೂ ಆರೋಗ್ಯದ ಮಟ್ಟಿಗೆ ಇದು ಉತ್ತಮವಾಗಿದೆ. ಇದನ್ನು ಪ್ರಾರಂಭಿಕ ಹಂತದಲ್ಲಿ ಬಿಟ್ಟು ಬೇರೆ ಎಲ್ಲರೂ ಸೇವಿಸಬಹುದು. ಆದರೆ ಹೊಟ್ಟೆಯಲ್ಲಿ ಹುಣ್ಣು, ಹುಳಿತೇಗು ಮೊದಲಾದ ತೊಂದರೆ ಇರುವವರು ಸೇವಿಸಬಾರದು.

ಹಚ್ಚ ಹಸಿರು ಜ್ಯೂಸ್!

ಹಚ್ಚ ಹಸಿರು ಜ್ಯೂಸ್!

ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.

English summary

Amazing Home Remedies to Lose Belly Fat

When it comes to lose abdominal fat, the right foods are a necessity. They detox your liver and boost your metabolism so that your body can target belly fat. There are numerous fat burning foods and spices that can help you lose your belly fat. Here are some really effective home remedies to lose belly fat with the help of such foods and spices.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more