ಅಜ್ಜ–ಅಜ್ಜಿಯ ಕಾಲದ ಮನೆಮದ್ದು-ರೋಗರುಜಿನಗಳಿಗೆ ರಾಮಬಾಣ

Posted By:
Subscribe to Boldsky

ನಾವೆಲ್ಲಾ ಮಾತ್ರೆಗಳಿಗೆ ಇಷ್ಟೊಂದು ಒಗ್ಗಿ ಹೋಗಿದ್ದೇವೆಂದರೆ ಚಿಕ್ಕಪುಟ್ಟ ಕಾಯಿಲೆಗಳಿಗೂ ವೈದ್ಯರನ್ನು ಕೇಳದೆಯೇ ಈ ಕಾಯಿಲೆಗೆ ಈ ಗುಳಿಗೆ ಎಂಬ ಒಂದು ಸಿದ್ಧಪಟ್ಟಿಯ ಪ್ರಕಾರ ಗುಳಿಗೆಯೊಂದನ್ನು ನುಂಗಿಬಿಡುತ್ತೇವೆ. ಇದರ ಪರಿಣಾಮವಾಗಿ ಆ ತೊಂದರೆ ತಕ್ಷಣ ಕಡಿಮೆಯಾದರೂ ಇದರ ಅಡ್ಡಪರಿಣಾಮಗಳು ಮುಂದಿನ ದಿನಗಳಲ್ಲಿ ಭಾರಿಯಾಗಿ ಪರಿಣಮಿಸಬಹುದು. ಸಣ್ಣ ಪುಟ್ಟ ಕಾಯಿಲೆಗಳಿಗೆ ಮನೆಮದ್ದೇ ಸಾಕು

ಬದಲಿಗೆ ಕೆಲವು ಮನೆಮದ್ದುಗಳನ್ನು ಬಳಸಿ ಈ ತೊಂದರೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲದೇ ಪರಿಹಾರ ಪಡೆಯುವುದೇ ಜಾಣತನದ ಕ್ರಮವಾಗಿದೆ. ಈ ಮದ್ದುಗಳಲ್ಲಿ ಸುಲಭವಾಗಿ ದೊರಕುವ ಅಡುಗೆ ಸಾಮಾಗ್ರಿಗಳನ್ನೇ ಬಳಸಲಾಗಿದ್ದು ಇವು ಸುರಕ್ಷಿತವಾಗಿವೆ. ಸಿಂಪಲ್ ಮನೆಮದ್ದು- ಇದು ಹತ್ತಾರು ಸಮಸ್ಯೆಗಳಿಗೆ ರಾಮಬಾಣ

ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚುವ ಮೂಲಕ ಚಿಕ್ಕಪುಟ್ಟ ತೊಂದರೆಗಳನ್ನು ದೇಹವೇ ನಿಭಾಯಿಸಲು ಶಕ್ತವಾಗುತ್ತದೆ. ಬನ್ನಿ, ದಶಕಗಳಿಂದ ಬಳಕೆಯಲ್ಲಿರುವ ಕೆಲವು ಜನಪ್ರಿಯ ಹಾಗೂ ಸಮರ್ಥವಾದ ಮನೆಮದ್ದುಗಳನ್ನು ಈಗ ನೋಡೋಣ:

ಉಸಿರಿನ ದುರ್ವಾಸನೆಗೆ

ಉಸಿರಿನ ದುರ್ವಾಸನೆಗೆ

ಒಂದು ವೇಳೆ ನಿಮ್ಮ ಉಸಿರಿನಲ್ಲಿ ದುರ್ವಾಸನೆ ಸೂಸುತ್ತಿದ್ದರೆ ಒಂದು ಚಿಟಿಕೆ ಚೆಕ್ಕೆಪುಡಿ ಮತ್ತು ಕೆಲವು ಹನಿ ಜೇನು ಬೆರೆಸಿ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಈ ನೀರನ್ನು ಬಾಯಿಯಲ್ಲಿ ಸುಮಾರು ಮೂರು ನಿಮಿಷಗಳವೆರೆಗೆ ಗಳಗಳಿಸಿ ಉಗಿಯಿರಿ. ಉಸಿರಿನ ದುರ್ವಾಸನೆಗೆ ಇನ್ನೂ ಗುಡ್ ಬೈ ಹೇಳಿ!

ರೋಗ ನಿರೋಧಕ ಶಕ್ತಿ ಹೆಚ್ಚಿಸಲು

ರೋಗ ನಿರೋಧಕ ಶಕ್ತಿ ಹೆಚ್ಚಿಸಲು

ದಿನದ ಪ್ರಾರಂಭವನ್ನು ಹಸಿರು ಟೀ ಸೇವಿಸುವ ಮೂಲಕ ಪ್ರಾರಂಭಿಸಿ.ಈ ಟೀಯಲ್ಲಿ ಒಂದು ಚಿಟಿಕೆ ಚೆಕ್ಕೆಪುಡಿ ಮತ್ತು ಎರಡು ಹನಿ ಜೇನು ಬೆರೆಸಿ. ಈ ಪೇಯದ ಸೇವನೆಯಿಂದ ದೇಹ ಹಲವಾರು ರೋಗ ಮತ್ತು ಬ್ಯಾಕ್ಟೀರಿಯಾಗಳ ಸೋಂಕಿನಿಂದ ರಕ್ಷಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗಾಭ್ಯಾಸ

ಕೊಲೆಸ್ಟ್ರಾಲ್ ನಿವಾರಿಸಲು

ಕೊಲೆಸ್ಟ್ರಾಲ್ ನಿವಾರಿಸಲು

ಒಂದು ಕಪ್ ಹಸಿರು ಟೀ ಯಲ್ಲಿ ಒಂದು ಚಿಕ್ಕಚಮಚ ಜೇನು ಹಾಗೂ ಒಂದು ಚಿಕ್ಕ ಚಮಚ ಚೆಕ್ಕೆಪುಡಿ ಬೆರೆಸಿ ಸೇವಿಸುವ ಮೂಲಕ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು

ಕಡಿಮೆ ರಕ್ತದೊತ್ತಡ ಸರಿಪಡಿಸಲು

ಕಡಿಮೆ ರಕ್ತದೊತ್ತಡ ಸರಿಪಡಿಸಲು

ಒಂದು ಮುಷ್ಠಿಯಷ್ಟು ಬಾದಾಮಿಗಳನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ಇವುಗಳ ಸಿಪ್ಪೆ ಸುಲಿದು ಮಿಕ್ಸಿಯ ಚಿಕ್ಕ ಜಾರ್‌ನಲ್ಲಿ ನುಣ್ಣಗೆ ಕಡೆಯಿರಿ. ಬಳಿಕ ಇದನ್ನು ಒಂದು ಕಪ್ ಹಾಲಿನಲ್ಲಿ ಕುದಿಸಿ ಬಿಸಿಬಿಸಿಯಾಗಿ ಕುಡಿಯಿರಿ. ಶೀಘ್ರವೇ ರಕ್ತದೊತ್ತಡ ಸಾಮಾನ್ಯಮಟ್ಟಕ್ಕೆ ಬರುತ್ತದೆ. ಕಡಿಮೆ ರಕ್ತದೊತ್ತಡ ಸಮಸ್ಯೆಯ ಲಕ್ಷಣ ಮತ್ತು ಕಾರಣ

ಹುಳಕಡ್ಡಿಯ ತೊಂದರೆಗೆ

ಹುಳಕಡ್ಡಿಯ ತೊಂದರೆಗೆ

ಒಂದು ಚಿಕ್ಕಚಮಚ ಚೆಕ್ಕೆಪುಡಿ ಹಾಗೂ ಒಂದು ಚಿಕ್ಕಚಮಚ ಜೇನು ಬೆರೆಸಿ ಲೇಪಯ ತಯಾರಿಸಿ. ಈ ಲೇಪನವನ್ನು ಹುಳಕಡ್ಡಿ ಬಾಧಿಸಿರುವ ಭಾಗಕ್ಕೆ ಹಚ್ಚಿ ಒಣಗಲು ಬಿಡಿ. ಈ ಭಾಗವನ್ನು ಸಾಧ್ಯವಾದಷ್ಟು ಒಣಗಿಯೇ ಇರುವಂತೆ ನೋಡಿಕೊಳ್ಳಿ, ಸ್ನಾನದ ಸಮಯದಲ್ಲಿ ಸಹಾ!

ಗಂಟಲ ಬೇನೆಗೆ

ಗಂಟಲ ಬೇನೆಗೆ

ಅರ್ಧ ಚಿಕ್ಕಚಮಚ ಕಾಳುಮೆಣಸಿನ ಪುಡಿ, ಒಂದು ಚಿಕ್ಕಚಮಚ ಜೇನು, ಚಿಟಿಕೆಯಷ್ಟು ಚೆಕ್ಕೆಪುಡಿ ಮತ್ತು ಒಂದು ಚಿಕ್ಕಚಮಚ ಒಣಶುಂಠಿಯ ಪುಡಿ ಇಷ್ಟನ್ನೂ ಮೂನ್ನೂರೈವತ್ತು ಮಿಲಿಲೀ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ದಿನದಲ್ಲಿ ಎರಡು ಬಾರಿ ಕುಡಿದರೆ ಗಂಟಲ ಬೇನೆ ಗುಣವಾಗುತ್ತದೆ. ಗಂಟಲು ನೋವಿನ ಕಿರಿಕಿರಿಗೆ, ಇಲ್ಲಿದೆ ಗಿಡಮೂಲಿಕೆ ಚಹಾ

ಮಧುಮೇಹದ ನಿಯಂತ್ರಣಕ್ಕೆ

ಮಧುಮೇಹದ ನಿಯಂತ್ರಣಕ್ಕೆ

ರಾತ್ರಿ ಮಲಗುವ ಮುನ್ನ ಒಂದು ದೊಡ್ಡ ಚಮಚದಷ್ಟು ಮೆಂತೆಕಾಳುಗಳನ್ನು ನೆನೆಸಿಡಿ. ಮರುದಿನ ಬೆಳಿಗ್ಗೆ ಈ ನೀರನ್ನು ಬೆಳಿಗ್ಗೆ ಕುಡಿಯುವ ಮೂಲಕ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!

English summary

Old Folk Remedies That Work

ParaNatural ingredients are safe on the body. Also, home remedies are a way to train your body to heal itself. That is why there are no side effects when you try home remedies. Here are a few old remedies which have been used since many decades.
Story first published: Saturday, January 28, 2017, 15:14 [IST]
Please Wait while comments are loading...
Subscribe Newsletter