ಹೊಟ್ಟೆಯಲ್ಲಿ ಕಾಡುವ ಗ್ಯಾಸ್ ಅಬ್ಬರ-ಇಲ್ಲಿದೆ ನೋಡಿ ಪರಿಹಾರ

By Arshad
Subscribe to Boldsky

ಇತ್ತೀಚೆಗೆ ಏನು ತಿಂದರೂ ಹೊಟ್ಟೆಯುಬ್ಬರಿಕೆ, ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದು ಅಥವಾ ವಾಯುಪ್ರಕೋಪದ ತೊಂದರೆಯನ್ನು ಅನುಭವಿಸುತ್ತಿದ್ದೀರಾ? ಇದನ್ನು ಅನುಭವಿಸುವುದಕ್ಕಿಂತಲೂ ನಾಲ್ಕು ಜನರ ನಡುವೆ ತಡೆದುಕೊಳ್ಳುವುದೇ ಹೆಚ್ಚಿನ ಮುಜುಗರದ ಸಂಗತಿಯಾಗಿದೆ. ಆದರೆ ಈ ತೊಂದರೆಗೆ ನಿಸರ್ಗ ಕೆಲವು ಪರಿಹಾರವನ್ನು ನೀಡಿದ್ದು ವಾಯುವಿನ ತೊಂದರೆಯಿಂದ ಶೀಘ್ರ ಉಪಶಮನ ನೀಡುತ್ತವೆ. ಹೊಟ್ಟೆಯ ಗ್ಯಾಸ್ ಕಡಿಮೆ ಮಾಡಲು 7 ಉಪಾಯ

ಹೊಟ್ಟೆಯ ಭಾಗ ಸದಾ ತುಂಬಿಕೊಂಡಂತಿರುವುದು, ಹೊಟ್ಟೆಯಲ್ಲಿ ನೋವು, ಅಜೀರ್ಣತೆ, ಮಲಬದ್ಧತೆ, ವಾಯುಪ್ರಕೋಪ ಮತ್ತು ಅತಿಸಾರ ಇವೆಲ್ಲವೂ ಗ್ಯಾಸ್ಟ್ರೈಟಿಸ್ ಎಂಬ ತೊಂದರೆಯ ಲಕ್ಷಣಗಳಾಗಿವೆ. ಇದಕ್ಕೆ ನೇರವಾಗಿ ನಮ್ಮ ಕೆಲವು ಅಭ್ಯಾಸಗಳೇ ಕಾರಣವಾಗಿವೆ. ಬೇಗಬೇಗನೇ ತಿನ್ನುವುದು, ಸರಿಯಾಗಿ ಅಗಿಯದೇ ನುಂಗುವುದು, ಸ್ಥೂಲಕಾಯ, ಹೊಟ್ಟೆಯಲ್ಲಿ ಉರಿ, ದೇಹ ಲ್ಯಾಕ್ಟೋಸ್ ಎಂಬ ಸಕ್ಕರೆಯನ್ನು ಸ್ವೀಕರಿಸದ ಸ್ಥಿತಿ ಮೊದಲಾದವು ಗ್ಯಾಸ್ಟ್ರೈಟಿಸ್ ತೊಂದರೆಗೆ ಕಾರಣಗಳಾಗಿವೆ. ಹೊಟ್ಟೆ ಉಬ್ಬರಕ್ಕೆ ತಕ್ಷಣದ ಪರಿಹಾರ

ವಾಯುಪ್ರಕೋಪ ಯಾವುದೇ ವಯಸ್ಸಿನಲ್ಲಿ, ಲಿಂಗಬೇಧವಿಲ್ಲದೇ ಎಲ್ಲರಿಗೂ ಕಾಡಬಹುದು. ಆದರೆ ಇದನ್ನು ತಡೆದುಕೊಳ್ಳುವುದು ಮಾತ್ರ ಯಾರಿಗೂ ಸುಲಭವಾದ ಕಾರ್ಯವಲ್ಲ ಅಲ್ಲದೇ ಇದರ ತೊಂದರೆಗಳು ದೇಹವನ್ನು ಸುಸ್ತಾಗಿಸಲೂಬಹುದು.

ಒಂದು ವೇಳೆ ವಾಯುಪ್ರಕೋಪವನ್ನು ಸರಿಯಾದ ಸಮಯದಲ್ಲಿ ಉಪಶಮನಗೊಳಿಸದೇ ಇದ್ದರೆ ಇದು ಗಂಭೀರ ಆರೋಗ್ಯ ಸಮಸ್ಯಗಳಿಗೆ ಮೂಲವಾಗಬಹುದು. ಇವುಗಳಲ್ಲಿ ಪ್ರಮುಖವಾದವು ಎಂದರೆ ಕರುಳಿನಲ್ಲಿ ಸೋಂಕು ಹಾಗೂ ಹುಣ್ಣುಗಳಾಗುವುದು (ಅಲ್ಸರ್), ಗುದನಾಳದಲ್ಲಿ ಗಂಟುಗಳಾಗುವುದು (haemorrhoids), ಮೂಲವ್ಯಾಧಿ ಇತ್ಯಾದಿ. ಗ್ಯಾಸ್ಟ್ರೈಟಿಸ್ ನಿಂದ ತಪ್ಪಿಸಿಕೊಳ್ಳಲು ನಮ್ಮ ಆಹಾರಕ್ರಮವನ್ನು ಸರಿಪಡಿಸಿಕೊಳ್ಳುವುದು ಅತ್ಯುತ್ತಮವಾದ ಕ್ರಮವಾಗಿದೆ.

ಗ್ಯಾಸ್ಟ್ರೈಟಿಸ್ ನ ಇನ್ನೊಂದು ಗಂಭೀರ ಪರಿಣಾಮವೆಂದರೆ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ. ಆದ್ದರಿಂದ ಈ ತೊಂದರೆ ಎದುರಾದರೆ ತಡಮಾಡದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಬನ್ನಿ, ಈ ತೊಂದರೆಯನ್ನು ಮೂಲದಲ್ಲಿಯೇ ಸಮರ್ಥವಾಗಿ ಕಡಿಮೆಗೊಳಿಸುವ ಕೆಲವು ನೈಸರ್ಗಿಕ ವಿಧಾನಗಳನ್ನು ಈಗ ನೋಡೋಣ.... 

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಸಿಹಿಗುಂಬಳದ ಜ್ಯೂಸ್ : ಅರ್ಧ ಕಪ್

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಶುಂಠಿಯ ರಸ: ಎರಡು ದೊಡ್ಡಚಮಚ

ವಾಯುಪ್ರಕೋಪ, ಹೊಟ್ಟೆಯಲ್ಲಿ ಉರಿ ಕೂಡಲೇ ಕಡಿಮೆಯಾಗುತ್ತದೆ

ವಾಯುಪ್ರಕೋಪ, ಹೊಟ್ಟೆಯಲ್ಲಿ ಉರಿ ಕೂಡಲೇ ಕಡಿಮೆಯಾಗುತ್ತದೆ

ಈ ನೈಸರ್ಗಿಕ ವಿಧಾನದಿಂದ ಗ್ಯಾಸ್ಟ್ರೈಟಿಸ್ ತೊಂದರೆ, ವಾಯುಪ್ರಕೋಪ, ಹೊಟ್ಟೆಯಲ್ಲಿ ಉರಿ ಮೊದಲಾದ ತೊಂದರೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಆದರೆ ಇದಕ್ಕಾಗಿ ಸೂಕ್ತ ಪ್ರಮಾಣದ ಔಷಧಿಯನ್ನು ಸೂಕ್ತ ಸಮಯದಲ್ಲಿ ಮತ್ತು ನಿಯಮಿತವಾಗಿ ಸೇವಿಸುವುದು ಅತ್ಯಗತ್ಯವಾಗಿದೆ.

ಆಹಾರಗಲ ಸೇವನೆ....

ಆಹಾರಗಲ ಸೇವನೆ....

ಬರೆಯ ಔಷಧಿ ಸೇವಿಸಿದ ಮಾತ್ರಕ್ಕೇ ಗ್ಯಾಸ್ಟ್ರೈಟಿಸ್ ತೊಂದರೆ ಇಲ್ಲವಾಗುವುದಿಲ್ಲ, ಬದಲಿಗೆ ಆರೋಗ್ಯಕರ ಆಹಾರವನ್ನು ಸೇವಿಸುವುದು, ಪಿಷ್ಟ ಮತ್ತು ಎಣ್ಣೆ ಹೆಚ್ಚಿರುವ ಆಹಾರಗಳನ್ನು ಸೇವಿಸದಿರುವುದು, ಆಹಾರವನ್ನು ಕ್ಲುಪ್ತ ಕಾಲಕ್ಕೆ ಹಾಗೂ ಅಗತ್ಯ ಪ್ರಮಾಣದಲ್ಲಿ ಮಾತ್ರವೇ ಸೇವಿಸುವುದು ಸಹಾ ಅಗತ್ಯವಾಗಿದೆ.

ಸಿಹಿಗುಂಬಳದ ಜ್ಯೂಸ್ ನ ಪವರ್

ಸಿಹಿಗುಂಬಳದ ಜ್ಯೂಸ್ ನ ಪವರ್

ಸಿಹಿಗುಂಬಳದ ಜ್ಯೂಸ್ ನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಬಿ ಹಾಗೂ ಗಂಧಕ ಹೆಚ್ಚಿನ ಪ್ರಮಾಣದಲ್ಲಿದೆ. ಅಲ್ಲದೇ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಬೀಟಾ ಕ್ಯಾರೋಟಿನ್ ಮೊದಲಾದ ಪೋಷಕಾಂಶಗಳೂ ಇವೆ. ವಿಟಮಿನ್ ಬಿ ಹಾಗೂ ಗಂಧಕ ಹೊಟ್ಟೆಯಲ್ಲಿ ಅಗತ್ಯಕ್ಕೂ ಹೆಚ್ಚಿರುವ ಆಮ್ಲದ ಪರಿಣಾಮವನ್ನು ತಟಸ್ಥಗೊಳಿಸುವ ಮೂಲಕ ಗ್ಯಾಸ್ಟ್ರೈಟಿಸ್ ತೊಂದರೆಯನ್ನು ಮತ್ತು ಆಮ್ಲೀಯತೆಯನ್ನು ಮೂಲದಲ್ಲಿಯೇ ಚಿವುಟುತ್ತದೆ.ರಕ್ತದ ಶುದ್ಧತೆಗೆ ಸೇವಿಸಿ, ಒಂದು ಗ್ಲಾಸ್ ಸಿಹಿಗುಂಬಳ ಜ್ಯೂಸ್

ಶುಂಠಿಯ ಪವರ್

ಶುಂಠಿಯ ಪವರ್

ಇದರೊಂದಿಗೆ ಬೆರೆಸಿರುವ ಶುಂಠಿಯೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಟ್ಯಾನಿನ್ ಎಂಬ ಪೋಷಕಾಂಶವು ಹೊಟ್ಟೆಯ ಉರಿಯನ್ನು ಶಮನಗೊಳಿಸುವ ಗುಣ ಹೊಂದಿದ್ದು ಜೀರ್ಣಗೊಂಡ ಆಹಾರದಿಂದ ಅನಿಲಗಳು ಬಿಡುಗಡೆಯಾಗುವುದನ್ನು ತಡೆಯುತ್ತದೆ. ತನ್ಮೂಲಕ ಹೊಟ್ಟೆಯುಬ್ಬರಿಕೆಯಾಗದಂತೆ ಹಾಗೂ ವಾಯುಪ್ರಕೋಪದಿಂದ ರಕ್ಷಿಸುತ್ತದೆ.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಮೇಲೆ ತಿಳಿಸಿದ ಎರಡೂ ಸಾಮಾಗ್ರಿಗಳನ್ನು ಒಂದು ಲೋಟದಲ್ಲಿ ಬೆರೆಸಿ.

*ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಪ್ರತಿದಿನ ಮಧ್ಯಾಹ್ನದ ಮತ್ತು ರಾತ್ರಿಯೂಟದ ಬಳಿಕ *ದಿನಕ್ಕೆರಡು ಬಾರಿಯಂತೆ ಸತತವಾಗಿ ಎರಡು ತಿಂಗಳುಗಳ ಕಾಲ ಸೇವಿಸಿ.

 
For Quick Alerts
ALLOW NOTIFICATIONS
For Daily Alerts

    English summary

    Natural Home Remedies For Stomach Gas & Bloating

    Do you feel gassy and bloated quite often these days? It can be rather uncomfortable, right? Well, there is an excellent home remedy that can provide quick relief from stomach gas.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more