For Quick Alerts
ALLOW NOTIFICATIONS  
For Daily Alerts

ಹೊಟ್ಟೆ ಉಬ್ಬರಕ್ಕೆ ತಕ್ಷಣದ ಪರಿಹಾರ

By Hemanth Amin
|

ಹೊಟ್ಟೆ ಉಬ್ಬರವು ಭಾರವಾದ ಹೊಟ್ಟೆಯ ಭಾವನೆ ಮೂಡಿಸುವುದಲ್ಲದೆ ಕೆಲವೊಂದು ಸಲ ಹೊಟ್ಟೆ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಹೊಟ್ಟೆ ಉಬ್ಬರಿಸುವಿಕೆ ಕರುಳಿನ ಅನಾರೋಗ್ಯದ ಪರಿಣಾಮ ಉಂಟಾಗುತ್ತದೆ. ಕರುಳು ಎಲ್ಲಾ ಆಹಾರಗಳನ್ನು ಸ್ವೀಕರಿಸದೆ ಇದ್ದಾಗ ಜೀರ್ಣಕ್ರಿಯೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಹೊಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದರಿಂದಲೂ ಉಬ್ಬರವಾಗಬಹುದು.

ಕೆಲವೊಮ್ಮೆ ಹೊಟ್ಟೆ ಉಬ್ಬರಿಸುವಾಗ ನೋವು ಕೂಡ ಆರಂಭವಾಗುತ್ತದೆ. ಈ ನೋವು ತುಂಬಾ ಕಿರಿಕಿಯನ್ನುಂಟು ಮಾಡುತ್ತದೆ ಮತ್ತು ಹೊಟ್ಟೆ ಉಬ್ಬರದೊಂದಿಗೆ ಆಗಾಗ ನೋವು ಕಾಣಿಸಿಕೊಳ್ಳುತ್ತಿದ್ದರೆ ಅಂಡಾಶಯದ ಕ್ಯಾನ್ಸರ್ ಇರುವ ಸಾಧ್ಯತೆಯೂ ಇದೆ. ಹೊಟ್ಟೆ ಉಬ್ಬರದ ನೋವನ್ನು ತಡೆಯಲು ಔಷಧಿ ಮತ್ತು ಮುನ್ನೆಚ್ಚರಿಕೆ ಕ್ರಮಗಳಿವೆ. ನೀವು ಹೊಟ್ಟೆ ಉಬ್ಬರದ ನೋವಿನಿಂದ ಬಳಲುತ್ತಿದ್ದರೆ ಇದರಿಂದ ಪರಿಹಾರ ಪಡೆಯಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.

1. ನೀರು ಕುಡಿಯಿರಿ

1. ನೀರು ಕುಡಿಯಿರಿ

ಹೊಟ್ಟೆಯೊಳಗಿನ ಕೆಲಸಕಾರ್ಯಗಳು ಸರಿಯಾದ ರೀತಿಯಲ್ಲಿ ಆಗದೇ ಇದ್ದಾಗ ಹೊಟ್ಟೆ ಉಬ್ಬರದ ನೋವು ಕಾಣಿಸಿಕೊಳ್ಳುತ್ತದೆ. ಅನಿಯಮಿತ ಮಲ, ಮಲಬದ್ಧತೆ ಮತ್ತು ಗ್ಯಾಸ್ ನಿಂದಾಗಿ ನೋವು ಬರಬಹುದು. ಹೊಟ್ಟೆ ಉಬ್ಬರಿಸಿದೆ ಎಂಬ ಭಾವನೆಯಾದಾಗ ಸಾಕಷ್ಟು ನೀರು ಕುಡಿಯಿರಿ. ಇದು ನೋವು ಕಡಿಮೆ ಮಾಡಿ ಮಲಬದ್ಧತೆ ನಿವಾರಿಸುತ್ತದೆ.

2. ನಡೆದಾಡಿ

2. ನಡೆದಾಡಿ

ಹೊಟ್ಟೆ ಉಬ್ಬರಿಸಿ ನಿಮಗೆ ಭಾರವಾದ ಭಾವನೆಯಾಗುತ್ತಿದ್ದರೆ ಆಗ ಮನೆಯಿಂದ ಹೊರಗೆ ಹೋಗಿ ಸ್ವಲ್ಪ ನಡೆದಾಡಿ. ದೈಹಿಕ ಚಟುವಟಿಕೆಯಿಂದ ಹೊಟ್ಟೆಯಲ್ಲಿ ತುಂಬಿರುವ ಗ್ಯಾಸ್ ಹೊರಹೋಗುತ್ತದೆ. ಇದು ಹೊಟ್ಟೆ ಉಬ್ಬರ ನಿವಾರಿಸಲು ನೈಸರ್ಗಿಕ ವಿಧಾನ ಮತ್ತು ನೋವನ್ನು ಉಪಶಮನ ಮಾಡುತ್ತದೆ. ನಿಧಾನವಾಗಿ ನಡೆದರೆ ಯಾವುದೇ ಪ್ರಯೋಜನವಾಗಲ್ಲ. ಮುಂದೆ ಉಬ್ಬರದ ನೋವು ಬರದಂತೆ ಮಾಡಲು ಪ್ರತೀ ಸಲ ಊಟ ಮಾಡಿದ ಬಳಿಕ ನಡೆದಾಡಿ.

3. ಸೋಡಾ ಕುಡಿಯಿರಿ

3. ಸೋಡಾ ಕುಡಿಯಿರಿ

ಸೋಡಾ ಅಥವಾ ರಾಸಾಯನಿಕವಾಗಿ ಕಾರ್ಬೊನ್ ಡೈಯಾಕ್ಸೈಡ್ ಎಂದು ಕರೆಯಲ್ಪಡುವ ಪಾನೀಯ ಹೊಟ್ಟೆ ಉಬ್ಬರ ಕಡಿಮೆ ಮಾಡಲು ಉಪಯುಕ್ತ. ಹೊಟ್ಟೆ ಭಾರವಾಗಿದೆ ಎಂದನಿಸಿದಾಗ ಸೋಡಾ ಕುಡಿಯಿರಿ. ಹೊಟ್ಟೆಯಲ್ಲಿರುವ ಕಾರ್ಬನ್ ಡೈಯಾಕ್ಸೈಡ್ ಗ್ಯಾಸ್ ನ್ನು ಹೊರಹೋಗುವಂತೆ ಮಾಡುತ್ತದೆ. ಇದರಿಂದ ಹೊಟ್ಟೆ ಹಿಂದಿನಂತಾಗಿ ನೋವು ಶಮನವಾಗುತ್ತದೆ.

4. ಪುದೀನಾ ತಿನ್ನಿ

4. ಪುದೀನಾ ತಿನ್ನಿ

ಪುದೀನಾ ತಿನ್ನುವುದರಿಂದ ಉಬ್ಬರ ಕಡಿಮೆಯಾಗುತ್ತದೆ ಮತ್ತು ಹೊಟ್ಟೆಯ ನೋವು ನಿವಾರಣೆಯಾಗುತ್ತದೆ. ಹೊಟ್ಟೆ ಉಬ್ಬರಕ್ಕೆ ಕಾರಣವೇನೆಂದು ತಿಳಿದು ಚಿಕಿತ್ಸೆ ಮಾಡಿದರೆ ನೋವು ತನ್ನಷ್ಟಕ್ಕೆ ಮಾಯವಾಗುತ್ತದೆ. ಪುದೀನಾವನ್ನು ಚಹಾ ಅಥವಾ ಇತರ ಪಾನೀಯ ಮೂಲಕ ಸೇವಿಸಬಹುದು. ಸೋಡಾದೊಂದಿಗೆ ಪುದೀನಾ ಹಾಕಿ ಕುಡಿದರೆ ಅದು ಒಳ್ಳೆಯ ಮದ್ದು. ಹೊಟ್ಟೆ ಉಬ್ಬರದ ನೋವಿನಿಂದ ಪರಿಹಾರ ನೀಡುವ ಇತರ ವಸ್ತುಗಳೆಂದರೆ ಶುಂಠಿ, ಬ್ಲ್ಯಾಕ್ ಸಾಲ್ಟ್, ನಿಂಬೆ ಜ್ಯೂಸ್ ಇತ್ಯಾದಿ. ಇದರಲ್ಲಿ ಯಾವುದೇ ಆಹಾರ ಸೇವಿಸಿ ಹೊಟ್ಟೆ ಉಬ್ಬರದ ನೋವು ನಿವಾರಿಸಬಹುದು ಮತ್ತು ಹೊಟ್ಟೆಯನ್ನು ಮೊದಲಿನಂತೆ ಮಾಡಬಹುದು.

5. ಔಷಧಗಳು

5. ಔಷಧಗಳು

ನೈಸರ್ಗಿಕ ಮದ್ದುಗಳನ್ನು ಉಪಯೋಗಿಸಿದ ಬಳಿಕವೂ ನೋವು ಹಾಗೆ ಉಳಿದುಕೊಂಡಿದೆ ಎಂದಾದರೆ ಹೊಟ್ಟೆ ಉಬ್ಬರಕ್ಕೆ ಸಿಗುವ ಔಷಧಗಳನ್ನು ಪ್ರಯತ್ನಿಸಿ. ಹೊಟ್ಟೆ ಉಬ್ಬರಕ್ಕೆ ಸಿಗುವ ಜೀರ್ಣದ ಔಷಧಗಳು ತಕ್ಷಣ ಪರಿಹಾರ ನೀಡುತ್ತದೆ. Enoದಂತಹ ಕೆಲವೊಂದು ಪೌಡರ್ ಗಳು ಗ್ಯಾಸ್ ನಿಂದ ತಕ್ಷಣ ಪರಿಹಾರ ಒದಗಿಸುತ್ತದೆ.

6. ಹೊಟ್ಟೆ ಉಬ್ಬರಕ್ಕೆ ಕೆಲವು ಸಾಮಾನ್ಯ ಪರಿಹಾರಗಳು

6. ಹೊಟ್ಟೆ ಉಬ್ಬರಕ್ಕೆ ಕೆಲವು ಸಾಮಾನ್ಯ ಪರಿಹಾರಗಳು

ಹೊಟ್ಟೆ ಉಬ್ಬರದ ನೋವು ತಡೆಯಲು ಕೆಲವೊಂದು ಸಾಮಾನ್ಯ ವಿಧಾನಗಳೆಂದರೆ ನಿಧಾನವಾಗಿ ತಿನ್ನಿ ಮತ್ತು ಸರಿಯಾಗಿ ಜಗಿಯಿರಿ. ಇದರಿಂದ ಹೊಟ್ಟೆಯಲ್ಲಿ ಆಹಾರ ಸರಿಯಾಗಿ ಜೀರ್ಣವಾಗಿ ಗ್ಯಾಸ್ ತುಂಬಿಕೊಳ್ಳುವುದು ತಪ್ಪುತ್ತದೆ. ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಾಮದಿಂದ ಅಜೀರ್ಣ ಸಮಸ್ಯೆ ನಿವಾರಿಸಬಹುದು. ಅನಾರೋಗ್ಯವಾಗಿ ತಿನ್ನಬೇಡಿ ಮತ್ತು ಆರೋಗ್ಯಕರ ಮತ್ತು ಒಳ್ಳೆಯ ಜೀವನಶೈಲಿ ಪಾಲಿಸಿಕೊಂಡು ಹೋಗಿ.

ಇದರಲ್ಲಿ ಯಾವುದೇ ವಿಧಾನಗಳು ನಿಮ್ಮ ಹೊಟ್ಟೆ ಉಬ್ಬರಕ್ಕೆ ಕೆಲಸ ಮಾಡದಿದ್ದರೆ ಆಗ ವೈದ್ಯರನ್ನು ಭೇಟಿಯಾಗಿ. ಕೆಲವೊಂದು ಸಲ ಹೊಟ್ಟೆ ಉಬ್ಬರವು ಅಂಡಾಶಯದ ಗರ್ಭಕೋಶದಿಂದ ಬರಬಹುದು. ಇದನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ತುಂಬಾ ಕಷ್ಟ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯವನ್ನು ಲಘುವಾಗಿ ಪರಿಗಣಿಸಬೇಡಿ.

English summary

Instant Relief From Bloating Pain

Bloating stomach is nothing but a feeling of heavy stomach which is generally accompanied with abdominal pain. Bloating stomach is mainly caused due to irritable bowel syndrome - where the guts do not accept all the food and there is a malfunction in the working of the digestive system.
Story first published: Friday, November 29, 2013, 16:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X