ಸಿಗರೇಟ್ ಸೇದುವುದನ್ನು ನಿಲ್ಲಿಸಬೇಕೇ? ಈ ಮನೆಮದ್ದುಗಳನ್ನು ಸೇವಿಸಿ ನೋಡಿ...

Posted By: Arshad
Subscribe to Boldsky

ಧೂಮಪಾನದ ವ್ಯಸನ ಹತ್ತಿಕೊಂಡರೆ ಇದರಿಂದ ಬಿಡುಗಡೆ ಪಡೆಯುವುದು ಕಷ್ಟ. ಏಕೆಂದರೆ ದೇಹಕ್ಕೆ ನಿಯಮಿತವಾಗಿ ಲಭಿಸುತ್ತಿರುವ ನಿಕೋಟಿನ್ ಅಭ್ಯಾಸವಾಗಿ ಹೋಗಿದ್ದು ಸಿಗದೇ ಹೋದಾಗ ಚಡಪಡಿಯನ್ನುಂಟು ಮಾಡುವ ಮೂಲಕ ಇನ್ನಷ್ಟು ವ್ಯಸನಕ್ಕೆ ಬೀಳುವಂತೆ ಮಾಡುತ್ತದೆ.

ಬಲವಂತವಾಗಿ ಒಮ್ಮೆಲೇ ಬಿಟ್ಟರೆ ಮೆದುಳಿಗೆ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ ಹಾಗೂ ಮಾನಸಿಕ ತೊಂದರೆಗಳು ಎದುರಾಗ ಬಹುದು. ಧೂಮಪಾನದಿಂದ ಹೊರಬರಲು ನಿಧಾನವಾಗಿ ಕಡಿಮೆಗೊಳಿಸುತ್ತಾ ದೇಹ ನಿಕೋಟಿನ್ ಇಲ್ಲದೇ ಹೊಂದಿಕೊಳ್ಳುವಂತೆ ಮಾಡುವುದು ಸುರಕ್ಷಿತ ವಿಧಾನವಾಗಿದೆ. ಇದಕ್ಕೆ ಕೆಲವು ನೈಸರ್ಗಿಕ ಸಾಮಾಗ್ರಿಗಳೂ ನೆರವಾಗುತ್ತವೆ. ನಿಕೋಟಿನ್ ಕೊರತೆಯನ್ನು ಈ ಸಾಮಾಗ್ರಿಗಳು ಪೂರ್ಣಗೊಳಿಸುವ ಮೂಲಕ ಧೂಮಪಾನದಿಂದ ಹೊರಬರಲು ನೆರವಾಗುತ್ತವೆ. ಬನ್ನಿ, ಈ ಕೆಲಸಕ್ಕೆ ನೆರವಾಗುವ ಕೆಲವು ಸಮರ್ಥ ಸಾಮಾಗ್ರಿಗಳನ್ನು ನೋಡೋಣ...  

ಪುದೀನಾ

ಪುದೀನಾ

ಪುದೀನಾ ಎಲೆಗಳಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇದರ ಸೇವನೆಯಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ನರಗಳನ್ನು ಸಡಿಲಿಸಿ ನಿರಾಳಗೊಳ್ಳಲು ನೆರವಾಗುತ್ತದೆ. ಬಹಳ ಹಿಂದಿನಿಂದಲೂ ಪುದಿನಾದ ಪರಿಮಳವನ್ನು ಔಷಧಿಯ ರೂಪದಲ್ಲಿ ಬಳಸಲಾಗುತ್ತಾ ಬರಲಾಗಿದೆ. ಇದರ ಪ್ರಬಲ ಪರಿಮಳ ಮನಸ್ಸು ಮತ್ತು ದೇಹ ಪ್ರಫುಲ್ಲಗೊಳ್ಳಲು ನೆರವಾಗುತ್ತದೆ.

ಪುದೀನಾ

ಪುದೀನಾ

ಟೀ ಕುದಿಸುವಾಗ ಕೆಲವು ಪುದೀನಾ ಎಲೆಗಳನ್ನು ಟೀ ಜೊತೆಗೆ ಸೇರಿಸಿ ಕುದಿಸಿ ಕುಡಿದರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ ಹಾಗೂ ಧೂಮಪಾನದ ಬಯಕೆ ಮೂಡದಂತೆ ತಡೆಯುವ ಮೂಲಕ ವ್ಯಸನದಿಂದ ಹೊರಬರಲು ನೆರವಾಗುತ್ತದೆ. ಇದರ ಪರಿಮಳವನ್ನು ಮೂಗಿನಿಂದ ಹೀರಿಕೊಳ್ಳುವ ಮೂಲಕ ಶ್ವಾಸನಾಳದಲ್ಲಿ ಇದ್ದ ತಡೆಗಳನ್ನು ನಿವಾರಿಸಿ ಉಸಿರಾಟ ಸುಗಮಗೊಳ್ಳಲು ನೆರವಾಗುತ್ತದೆ.

ಹಸಿಶುಂಠಿ

ಹಸಿಶುಂಠಿ

ಸಾವಿರಾರು ವರ್ಷಗಳಿಂದ ಶುಂಠಿಯನ್ನು ಆಯುರ್ವೇದದಲ್ಲಿ ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ. ಒತ್ತಡ ನಿವಾರಣೆ, ಅಜೀರ್ಣ, ಕೆಮ್ಮು, ಶೀತ ಮೊದಲಾದವುಗಳಿಗೆ ಔಷಧಿಯ ರೂಪದ ಸಹಿತ ಇದು ಧೂಮಪಾನದ ಬಯಕೆಯನ್ನು ನಿಯಂತ್ರಿಸಲೂ ನೆರವಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಮೊದಲಾದವು ನರಗಳನ್ನು ಸಡಿಲಿಸಿ ರಕ್ತಪರಿಚಲನೆ ಸುಗಮಗೊಳಿಸುತ್ತದೆ ಹಾಗೂ ನಿಕೋಟಿನ್ ಕೊರತೆಯನ್ನು ದೇಹ ಅನುಭವಿಸದಂತೆ ತಡೆಯುತ್ತದೆ. ಶುಂಠಿಯನ್ನು ಕುದಿಸಿ ತಯಾರಿಸಿದ ಟೀ ಅಥವಾ ಪೇಯವನ್ನು ಕುಡಿಯುವ ಮೂಲಕ ಸಿಗರೇಟ್ ಸೇದುವ ಬಯಕೆ ಇಲ್ಲವಾಗುತ್ತದೆ ಹಾಗೂ ಧೂಮಪಾನದ ವ್ಯಸನದಿಂದ ಹೊರಬರಲು ನೆರವಾಗುತ್ತದೆ.

ಲವಂಗ

ಲವಂಗ

ಧೂಮಪಾನದಿಂದ ಹೊರಬರಲು ಲವಂಬ ಜಾದೂವಿನಂತೆ ಕೆಲಸ ಮಾಡುತ್ತದೆ. ಇದರ ಎಣ್ಣೆ ಧೂಮಪಾನದ ಬಯಕೆಯನ್ನು ಬಹಳ ಹೊತ್ತಿನವರೆಗೆ ಹತ್ತಿಕ್ಕುತ್ತದೆ. ಯಾವಾಗ ಸಿಗರೇಟು ಸೇದುವ ಬಯಕೆಯಾಯಿತೋ ಆಗೆಲ್ಲಾ ಒಂದು ಲವಂಗವನ್ನು ಜಗಿಯುವುದರಿಂದ ಅಥವಾ ಲವಂಗವನ್ನು ಕುದಿಸಿದ ಟೀ ಅಥವಾ ಬೇರಾವುದೋ ಪೇಯವನ್ನು ಕುಡಿಯುವ ಮೂಲಕ ಧೂಮಪಾನದ ಬಯಕೆಯಿಂದ ತುಂಬಾ ಹೊತ್ತಿನವರೆಗೆ ದೂರವಿರಬಹುದು.

 ಒಂದೆಲಗ (Centella asiatica) ದಿಂದ ಪ್ರತ್ಯೇಕಿಸಲ್ಪಟ್ಟ ದ್ರವ

ಒಂದೆಲಗ (Centella asiatica) ದಿಂದ ಪ್ರತ್ಯೇಕಿಸಲ್ಪಟ್ಟ ದ್ರವ

ಗೋಟು ಕೋಲಾ ಎಂಬ ಹೆಸರಿನ ಈ ಭಾರತೀಯ ಮೂಲಿಕೆ ಸ್ಮರಣಶಕ್ತಿಯನ್ನು ಹೆಚ್ಚಿಸಲು, ಒತ್ತಡವನ್ನು ಕಡಿಮೆ ಮಾಡಲು ಹಾಗೂ ಬೇಗುದಿಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಯಕೃತ್ ನ ಉರಿಯೂತ ಕಡಿಮೆಗೊಳಿಸಿ ಕ್ಷಮತೆ ಹೆಚ್ಚಿಸಲೂ ಬಳಕೆಯಾಗುತ್ತದೆ. ಒಂದೆಲಗದ ಸೇವನೆಯಿಂದ ಮೆದುಳಿಗೆ ಆರಾಮ ದೊರಕುತ್ತದೆ ಹಾಗೂ ಪುನಃಶ್ಚೇತನ ಲಭಿಸುತ್ತದೆ. ಧೂಮಪಾನದ ಬಯಕೆಯಿಂದ ಹೊರಬರಲು ಈ ಎಲೆ ಉತ್ತಮ ಆಯ್ಕೆಯಾಗಿದೆ. ಇದನ್ನು ಹಸಿಯಾಗಿ ಅಥವಾ ಒಣಗಿಸಿದ ಪುಡಿಯನ್ನು ಟೀ ಜೊತೆಗೆ ಕುದಿಸಿ ಕುಡಿಯುವ ಮೂಲಕ ಧೂಮಪಾನದ ಬಯಕೆಯಿಂದ ಹೊರಬರಬಹುದು.

ನ್ಯಾಡಲೆ ಹೂವು (Primrose)

ನ್ಯಾಡಲೆ ಹೂವು (Primrose)

Oenothera ಎಂಬ ವೈಜ್ಞಾನಿಕ ಹೆಸರಿನ ಈ ಹೂವಿನಿಂದ ಪ್ರತ್ಯೇಕಿಸಿದ ಎಣ್ಣೆ ಭಾರೀ ಧೂಮಪಾನಿಗಳಿಗೂ ವ್ಯಸನದಿಂದ ಹೊರಬರಲು ನೆರವಾಗುತ್ತದೆ. ಬಹಳ ವರ್ಷಗಳಿಂದ ಧೂಮಪಾನದ ವ್ಯಸನಕ್ಕೆ ಒಳಗಾಗಿದ್ದ ವ್ಯಕ್ತಿಗಳ ಶ್ವಾಸಕೋಶದಲ್ಲಿ ಸಂಗ್ರಹಗೊಂಡಿದ್ದ ಕಲ್ಮಶಗಳನ್ನು ಹೊರಹಾಕಲು ಈ ಎಣ್ಣೆ ನೆರವಾಗುತ್ತದೆ. ಈ ವಿಧಾನವನ್ನು ಬಹಳ ವರ್ಷಗಳಿಂದ ನೂರಾರು ಭಾರೀ ಧೂಮಪಾನಿಗಳು ತಮ್ಮ ವ್ಯಸನವನ್ನು ಬಿಟ್ಟುಬಿಟ್ಟಿದ್ದಾರೆ. ಅಲ್ಲದೇ ಧೂಮಪಾನಿಗಳು ನಿಕೋಟಿನ್‌ನ ವ್ಯಸನದಿಂದ ಹೊರಬರಲೂ ನೆರವಾಗುತ್ತದೆ.

ಕ್ಯಾಮೋಮೈಲ್ ಟೀ

ಕ್ಯಾಮೋಮೈಲ್ ಟೀ

ನಿಕೋಟಿನ್ ಅಗತ್ಯತೆಯ ಬೇಡಿಕೆಯನ್ನು ಕಡಿಮೆಗೊಳಿಸುವ ಮತ್ತು ನರಗಳಿಗೆ ಪ್ರಶಾಂತತೆ ನೀಡುವ ಏಕಮಾತ್ರ ಪದಾರ್ಥವೆಂದರೆ ಕ್ಯಾಮೋಮೈಲ್ ಟೀ, ಹೀಗೆಂದು Molecular Medicine Reports ಎಂದ ವೈದ್ಯಕೀಯ ಪತ್ರಿಕೆ ತಿಳಿಸಿದೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಧೂಮಪಾನದ ಮೂಲಕ ದೇಹದಲ್ಲಿ ಉತ್ಪತ್ತಿಯಾಗಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ಪ್ರಭಾವದಿಂದ ದೇಹಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಪರಿಣಾಮವಾಗಿ ಹೆಚ್ಚುತ್ತಿರುವ ನಿಕೋಟಿನ್ ಬಯಕೆಯನ್ನು ಕಡಿಮೆಗೊಳಿಸುತ್ತದೆ.

ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳು

ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳು

ಸಿಗರೇಟಿನ ಹೊಗೆಯ ಮೂಲಕ ರಕ್ತಕ್ಕೆ ಧಾವಿಸಿದ ನಿಕೋಟಿನ್ ಅನ್ನು ನಿಭಾಯಿಸಲು ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಗತ್ಯವಿದೆ. ಇದು ಲಭ್ಯವಿರುವ ವಿಟಮಿನ್ ಸಿ ಪ್ರಮಾಣವನ್ನೆಲ್ಲಾ ಕಬಳಿಸಿ ಬಿಡುತ್ತದೆ. ಇದೇ ಕಾರಣದ ವ್ಯತಿರಿಕ್ತ ಪರಿಣಾಮವಾಗಿ ದೇಹದಲ್ಲಿ ವಿಟಮಿನ್ ಸಿ ಕೊರತೆಯಾದಾಗಲೆಲ್ಲಾ ಸಿಗರೇಟು ಸೇದುವಂತೆ ಮೆದುಳಿಗೆ ಸೂಚನೆ ಹೋಗುತ್ತದೆ ಎಂಬ ವಿಷಯವನ್ನು American Journal of Public Health ಎಂಬ ಪತ್ರಿಕೆಯಲ್ಲಿ ವರದಿ ಮಾಡಲಾಗಿದೆ. ಆದ್ದರಿಂದ ನಿತ್ಯವೂ ಸಾಕಷ್ಟು ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ತಿನ್ನುವ ಮೂಲಕ ನಿಕೋಟಿನ್ ಮೇಲಿನ ನಿರ್ಭರತೆಯನ್ನು ಮೆದುಳು ಕಳೆದುಕೊಳ್ಳುವಂತೆ ಮಾಡಬಹುದು. ಕಿತ್ತಳೆ, ಪೇರಳೆಹಣ್ಣು, ವಿವಿಧ ಬೆರ್ರಿ ಹಣ್ಣುಗಳನ್ನು ಸೇವಿಸಿ.

English summary

Natural herbs that can help you quit smoking

Even trying to quit smoking is very hard and it would be absolutely wrong to blame the nicotine addicts as they are highly vulnerable and prone to mental health issues. Among many ways to quit smoking herbs have shown a great results, according to many studies. These natural herbs could help people who desperately want to quit smoking or reduce the cravings to smoke. Here are a few natural herbs that can be smoked by people who want to quit smoking.