ಪುರುಷರ ಆ ಸಮಸ್ಯೆಯನ್ನು ನಿವಾರಿಸುವ ಸೂಪರ್ ಆಹಾರಗಳು

Posted By: Deepu
Subscribe to Boldsky

ಹೆಚ್ಚಿನ ಪುರುಷರಲ್ಲಿ ಶೀಘ್ರ ಸ್ಖಲನ ಹೆಚ್ಚಾಗಿ ಕಂಡುಬರುವ ಒಂದು ಸಾಮಾನ್ಯ ಪ್ರಕ್ರಿಯೆ. ಅದಾಗ್ಯೂ ಇದು ಹೆಚ್ಚಾಗಿ ಕಾಣಿಸಿಕೊಂಡು ನಿಮ್ಮ ಲೈಂಗಿಕ ಜೀವನವನ್ನು ಕೊನೆಗೊಳಿಸುವ ಘಟ್ಟಕ್ಕೆ ಕೂಡ ಇದು ತಲುಪಬಹುದು. ಆಗ ಮಾತ್ರ ಇದನ್ನು ನಿರ್ಲಕ್ಷಿಸದೇ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ಅಧ್ಯಯನಗಳು ಹೇಳುವಂತೆ ಶೀಘ್ರ ಸ್ಖಲನವು ವಯಸ್ಸಿನೊಂದಿಗೆ ನೇರವಾದ ಸಂಬಂಧವನ್ನು ಹೊಂದಿದೆ. ಪುರುಷರಿಗೆ ವಯಸ್ಸಾದಂತೆ ಮತ್ತು ಟೆಸ್ಟೋಸ್ಟಿರಾನ್ ಮಟ್ಟಗಳು ವಯಸ್ಸಿನೊಂದಿಗೆ ಕುಂದಿ, ಶೀಘ್ರ ಸ್ಖಲನವು ಇದಕ್ಕೆ ಹೊಂದಿಕೊಳ್ಳುತ್ತದೆ.

ಈ ಲೇಖನದಲ್ಲಿ, ನಿಮ್ಮ ಶೀಘ್ರ ಸ್ಖಲನ ಸಮಸ್ಯೆಯನ್ನು ದೂರಮಾಡುವಂತಹ ಆಹಾರಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಇವುಗಳು ನಿಮ್ಮ ಶೀಘ್ರ ಸ್ಖಲನ ಸಮಸ್ಯೆಯನ್ನು ದೂರಮಾಡಿ ಪುರುಷರಲ್ಲಿನ ಟೆಸ್ಟೋಸ್ಟಿರಾನ್ ಮಟ್ಟಗಳನ್ನು ವರ್ಧಿಸುತ್ತದೆ. ಇದು ನಿಮ್ಮ ದೇಹದಲ್ಲಿ ಪೋಷಕಾಂಶಗಳ ಅತ್ಯವಶ್ಯಕ ಪೂರೈಕೆಯನ್ನು ಮಾಡಿ ನಿಮ್ಮಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಯಸ್ಸಿಗೆ ನೇರವಾಗಿ ಸಂಬಂಧ ಇರುವುದನ್ನು ಹೊರತುಪಡಿಸಿ ಅಂದರೆ ಪೆನಾಲ್ ನರದ ಹೆಚ್ಚುವರಿ ಉದ್ದೀಪನೆಯು ಪುರುಷರಲ್ಲಿ ಶೀಘ್ರ ಸ್ಖಲನದ ಸಮಸ್ಯೆಯನ್ನು ತಂದೊಡ್ಡುತ್ತದೆ. ಆದ್ದರಿಂದ ಇಂದಿನ ಲೇಖನದಲ್ಲಿ ಈ ಸಮಸ್ಯೆಯನ್ನು ನಿವಾರಿಸುವ ಕೆಲವೊಂದು ಆಹಾರ ಪದಾರ್ಥಗಳತ್ತ ನೋಟ ಹರಿಸೋಣ....   

ಶುಂಠಿ ಮತ್ತು ಜೇನು

ಶುಂಠಿ ಮತ್ತು ಜೇನು

ತುಪ್ಪ ಶುಂಠಿಯು ದೇಹವನ್ನು ಬೆಚ್ಚಗಿಡಲು ಸಹಕರಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಶುಂಠಿಯನ್ನು ಸೇವಿಸುವುದರಿಂದ ಶಿಶ್ನಕ್ಕೆ ರಕ್ತ ಪರಿಚಲನೆಯು ಸರಾಗವಾಗುತ್ತದೆ ಮತ್ತು ಶಿಶ್ನದ ನಿಮಿರುವಿಕೆ ಹಾಗು ಶೀಘ್ರ ವೀರ್ಯ ಸ್ಖಲನ ಸಮಸ್ಯೆಯು ದೂರವಾಗುತ್ತದೆ.ಅರ್ಧ ಚಮಚದಷ್ಟು ಶುಂಠಿ ಮತ್ತು ಅಷ್ಟೇ ಪ್ರಮಾಣದ ಜೇನು ತುಪ್ಪವನ್ನು ತೆಗೆದುಕೊಳ್ಳಿ. ಇವೆರಡನ್ನು ಒಂದು ಲೋಟ ಬೆಚ್ಚನೆಯ ಹಾಲಿನಲ್ಲಿ ಬೆರೆಸಿ. ಮಲಗುವ ಮೊದಲು ಈ ಹಾಲನ್ನು ಸೇವಿಸಿ, ಮುಂದೆ ಇದರಿಂದ ದೊರೆಯುವ ಬದಲಾವಣೆಯ ಸುಖವನ್ನು ನೀವೇ ಅನುಭವಿಸುವಿರಿ.

ಹಸಿ ಬೆಳ್ಳುಳ್ಳಿ

ಹಸಿ ಬೆಳ್ಳುಳ್ಳಿ

ಹಸಿ ಬೆಳ್ಳುಳ್ಳಿಯು ಗಂಡಸರಲ್ಲಿ ಶೀಘ್ರ ವೀರ್ಯ ಸ್ಖಲನ ಹಾಗು ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತದೆ. 3-4 ಬೆಳ್ಳುಳ್ಳಿಯ ತುಣುಕುಗಳನ್ನು ಜಗಿಯುವುದರಿಂದ ಶೀಘ್ರ ವೀರ್ಯ ಸ್ಖಲನದ ಸಮಸ್ಯೆಯಲ್ಲಿ ಗಣನೀಯವಾದ ಪರಿಹಾರವನ್ನು ನೀವು ಕಾಣಬಹುದಾಗಿದೆ. ಇದರ ಜೊತೆಗೆ ನಿಮ್ಮ ಆರೋಗ್ಯವು ಸಹ ಸುಧಾರಿಸುತ್ತದೆ. ಬೆಳ್ಳುಳ್ಳಿಯನ್ನು ಶುದ್ಧವಾದ ಹಸುವಿನ ತುಪ್ಪದಲ್ಲಿ ಕರಿದು ಸಹ ಬಳಸಬಹುದು. ಏಕೆಂದರೆ ತುಪ್ಪದಲ್ಲಿ ಕರಿದ ನಂತರವು ಬೆಳ್ಳುಳ್ಳಿಯಲ್ಲಿರುವ ಕಾಮೋತ್ತೇಜಕ ಗುಣಗಳು ಅದರಿಂದ ಹೋಗಲಾರವು. ಬೆಳ್ಳುಳ್ಳಿಯು ಜನನಾಂಗದ ನಿಮಿರುವುಕೆಯಲ್ಲಿರುವ ಲೋಪ ದೋಷಗಳನ್ನು ಸರಿಪಡಿಸುತ್ತದೆ ಮತ್ತು ಶೀಘ್ರ ವೀರ್ಯಸ್ಖಲನದ ಸಮಸ್ಯೆಯನ್ನು ದೂರಮಾಡುತ್ತದೆ.

ಹರಳೆಣ್ಣೆ

ಹರಳೆಣ್ಣೆ

ಮುದುಕರಲ್ಲಿ ಅಥವಾ ವಯಸ್ಸಾದ ಗಂಡಸರಲ್ಲಿ ಶೀಘ್ರ ವೀರ್ಯಸ್ಖಲನವು ಪ್ರೊಸ್ಟೇಟ್ ಅಥವಾ ಜನನಾಂಗದ ಗ್ರಂಥಿಗೆ ಸಂಬಂಧಿಸಿದ ಲೋಪ ದೋಷಗಳಿಂದ ಕಾಣಿಸಿಕೊಳ್ಳುತ್ತದೆ. ಈ ಪ್ರೊಸ್ಟೇಟ್ ಸಮಸ್ಯೆಯನ್ನು ನಿವಾರಿಸಲು ಮತ್ತು ಇದನ್ನು ತಡೆಗಟ್ಟಲು ಹರಳೆಣ್ಣೆಯು ಪರಿಣಾಮಕಾರಿಯಾಗಿ ನೆರವಾಗುತ್ತದೆ. ಹರಳೆಣ್ಣೆಯಿಂದ ಜನನಾಂಗದ ಸುತ್ತ ಮೆದುವಾಗಿ ಮಸಾಜ್ ಮಾಡುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಹರಳೆಣ್ಣೆಯನ್ನು ನಿಮ್ಮ ಜನನಾಂಗದ ತುದಿಯಿಂದ ಹಿಡಿದು ವೃಷಣಗಳವರೆಗು ಲೇಪಿಸಿ. ಆನಂತರ ಶಿಶ್ನದ ತುದಿಯಿಂದ ಆರಂಭಿಸಿ ಬುಡದವರೆಗೆ ವೃತ್ತಾಕಾರವಾಗಿ, ಉದ್ದವಾಗಿ ಮತ್ತು ಮೆದುವಾಗಿ ಮಸಾಜ್ ಮಾಡಿ. ಈ ಎಲ್ಲಾ ಪರಿಹಾರಗಳನ್ನು ಪ್ರಯತ್ನಿಸಿ ಮತ್ತು ಶೀಘ್ರ ವೀರ್ಯ ಸ್ಖಲನದ ಸಮಸ್ಯೆಯಿಂದ ಮುಕ್ತಿ ಹೊಂದಿ.

ಅಶ್ವಗಂಧ

ಅಶ್ವಗಂಧ

ಭಾರತದ ಪಶ್ಚಿಮ ಭಾಗದ ಈ ಗಿಡಮೂಲಿಕೆಯು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಬಲಪಡಿಸುವಲ್ಲಿ ಬಳಸುವಂಥದ್ದಾಗಿದೆ. ಇದು ಪುರುಷರಲ್ಲಿ ಕಂಡುಬರುವ ಶೀಘ್ರ ಸ್ಖಲನ ಸಮಸ್ಯೆಯನ್ನು ನಿವಾರಿಸಿ ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ವೀರ್ಯಸ್ಖಲನದಂತಹ ಸಮಸ್ಯೆಯನ್ನು ದೂರಮಾಡುವಲ್ಲಿ ಕೂಡ ಅಶ್ವಗಂಧ ಪಾತ್ರ ಹಿರಿದಾದುದು.

ಈರುಳ್ಳಿ

ಈರುಳ್ಳಿ

ಹಸಿರು ಈರುಳ್ಳಿಯ ಬೀಜಗಳು ಅತ್ಯುತ್ತಮವಾದ ಕಾಮೋತ್ತೇಜಕ ಗುಣಗಳನ್ನು ಹೊಂದಿದ್ದಾವೆ. ಇದರಿಂದಾಗಿ ಇವು ಶೀಘ್ರ ವೀರ್ಯ ಸ್ಖಲನವನ್ನು ತಡೆಗಟ್ಟಿ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅದಕ್ಕಾಗಿ ಒಂದು ಚಮಚದಷ್ಟು ಹಸಿರು ಈರುಳ್ಳಿಯ ಬೀಜಗಳನ್ನು ತೆಗೆದುಕೊಂಡು, ಅದನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ. ಇವುಗಳನ್ನು ಚೆನ್ನಾಗಿ ಕಲೆಸಿ ಪ್ರತಿ ಬಾರಿ ಊಟ ಮಾಡುವ ಮುನ್ನ ಇದನ್ನು ಸೇವಿಸಿ. ಇದರಿಂದ ನಿಮ್ಮ ದೇಹದ ಶಕ್ತಿ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ನೀವು ನಿಮ್ಮ ವೀರ್ಯ ಸ್ಖಲನವನ್ನು ಹತೋಟಿಯಲ್ಲಿಡಬಹುದು. ಬಿಳಿ ಈರುಳ್ಳಿಗಳು ಸಹ ಅತ್ಯುತ್ತಮವಾದ ಕಾಮೋತ್ತೇಜಕ ಗುಣಗಳನ್ನು ತಮ್ಮಲ್ಲಿ ಹೊಂದಿವೆ. ಇವು ನಿಮ್ಮ ಜನನಾಂಗಗಳನ್ನು ಸದೃಢಗೊಳಿಸಿ ಶೀಘ್ರ ವೀರ್ಯ ಸ್ಖಲನವನ್ನು ತಡೆಯುತ್ತವೆ. ಇದರಲ್ಲಿರುವ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಲು ಈರುಳ್ಳಿಗಳನ್ನು ಹಸಿಯಾಗಿ ಸೇವಿಸಿ ಸಾಕು.

ಬೆಂಡೆಕಾಯಿ

ಬೆಂಡೆಕಾಯಿ

ಬೆಂಡೆಕಾಯಿಯನ್ನು ಪುಡಿ ಮಾಡಿ ಸೇವಿಸುವುದರಿಂದ ಶೀಘ್ರ ವೀರ್ಯ ಸ್ಖಲನವನ್ನು ಪರಿಹರಿಸಿಕೊಳ್ಳಬಹುದು. ಒಂದು ಲೋಟ ಬೆಚ್ಚನೆಯ ಹಾಲನ್ನು ತೆಗೆದುಕೊಳ್ಳಿ. ಅದಕ್ಕೆ 10ಗ್ರಾಂ ಬೆಂಡೆಕಾಯಿಯ ಪುಡಿಯನ್ನು ಬೆರೆಸಿ. ಇದಕ್ಕೆ ಎರಡು ಚಮಚದಷ್ಟು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ, ನಂತರ ಸೇವಿಸಿ. ಪ್ರತಿ ರಾತ್ರಿ ಇದನ್ನು ಪುನರಾವರ್ತಿಸಿ. ಹೀಗೆ ಒಂದು ತಿಂಗಳು ಮಾಡುವುದರಿಂದ ಶೀಘ್ರ ವೀರ್ಯಸ್ಖಲನ ಸಮಸ್ಯೆಯಿಂದ ಮುಕ್ತಿ ಹೊಂದುವಲ್ಲಿ ಗಮನಾರ್ಹವಾದ ಬೆಳವಣಿಗೆಯು ನಿಮ್ಮಲ್ಲಿ ಕಂಡು ಬರುತ್ತದೆ.

ಕ್ಯಾರೆಟ್ ಮತ್ತು ಮೊಟ್ಟೆಗಳು

ಕ್ಯಾರೆಟ್ ಮತ್ತು ಮೊಟ್ಟೆಗಳು

ಎರಡು ಕ್ಯಾರೆಟ್‍ಗಳನ್ನು ಕತ್ತರಿಸಿ ಮತ್ತು ಅದನ್ನು ಅರೆ ಬೆಂದ ಮೊಟ್ಟೆಯ ಜೊತೆಗೆ ಬೆರೆಸಿ. ಇದಕ್ಕೆ ಒಂದು ಟೇಬಲ್ ಸ್ಪೂನ್‍ನಷ್ಟು ಜೇನು ತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ದಿನವೂ ಮಾಡಿ ಮೂರು ತಿಂಗಳುಗಳ ಕಾಲ ಸೇವಿಸುತ್ತಿರಬೇಕು. ಇದರಿಂದಾಗಿ ಮೂರು ತಿಂಗಳ ನಂತರ ನೀವು ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವತ್ತ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಒಮ್ಮೆ ನಿಮ್ಮ ಶೀಘ್ರ ವೀರ್ಯ ಸ್ಖಲನ ಸಮಸ್ಯೆಯು ಪರಿಹಾರವಾದಾಗ, ಈ ಮಿಶ್ರಣವನ್ನು ಸೇವಿಸುವುದನ್ನು ನೀವು ನಿಧಾನವಾಗಿ ಕಡಿಮೆ ಮಾಡಬಹುದು.

ಅಸ್ಪರಾಗಸ್ ಬೇರು

ಅಸ್ಪರಾಗಸ್ ಬೇರು

ಶೀಘ್ರ ವೀರ್ಯ ಸ್ಖಲನದ ಸಮಸ್ಯೆಯನ್ನು ನೀವು ಅಸ್ಪರಾಗಸ್ ಬೇರನ್ನು ಸೇವಿಸುವುದರಿಂದ ಪರಿಹರಿಸಿಕೊಳ್ಳಬಹುದು. ಒಂದು ಲೋಟ ಹಾಲಿನ ಜೊತೆಗೆ 20 ಗ್ರಾಂ ಅಸ್ಪರಾಗಸ್ ಬೇರನ್ನು ಬೆರೆಸಿ ಸೇವಿಸಲು ಆರಂಭಿಸಿ. ಈ ಶಕ್ತಿವರ್ಧಕ ಹಾಲನ್ನು ಅಸ್ಪರಾಗಸ್ ಬೇರನ್ನು ಒಣಗಿಸಿ ಪುಡಿ ಮಾಡಿ ತಯಾರಿಸಿಕೊಳ್ಳಬಹುದು. ಶೀಘ್ರ ವೀರ್ಯಸ್ಖಲನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಈ ಹಾಲನ್ನು ಪ್ರತಿದಿನ ತಯಾರಿಸಿಕೊಂಡು ದಿನಕ್ಕೆ ಎರಡು ಬಾರಿ ಸೇವಿಸಿ. ಈ ಸಮಸ್ಯೆಯಿಂದ ಮುಕ್ತಿ ಹೊಂದಿ.

English summary

Natural Foods To Cure Premature Ejaculation You Should Try

In most men, premature ejaculation occurs infrequently and isn't usually a cause for worry. However, if it occurs too often and ends up plaguing your sex life, Let us now look at these natural remedies for premature ejaculation. Here are 15 foods to cure premature ejaculation in men. Read on...