ಮೂತ್ರದ ಬಣ್ಣ ಬದಲಾಗಿದೆಯೇ? ಹಾಗಿದ್ದರೆ ವೈದ್ಯರ ಸಲಹೆ ಪಡೆಯಿರಿ

By: Divya
Subscribe to Boldsky

ನಮ್ಮ ದೇಹದಲ್ಲಾಗುವ ಅನಾರೋಗ್ಯದ ಗುಣಲಕ್ಷಣಗಳನ್ನು ಮೂತ್ರ ಪರೀಕ್ಷೆಯಿಂದ ತಿಳಿದುಕೊಳ್ಳಬಹುದು. ಮೂತ್ರದ ಬಣ್ಣಗಳ ಆಧಾರದ ಮೇಲೂ ನಮ್ಮ ಆರೋಗ್ಯ ಸ್ಥಿತಿ ವ್ಯಕ್ತವಾಗುತ್ತದೆ. ನೀವು ನಿಮ್ಮ ಮೂತ್ರವನ್ನು ಗಮನಿಸುತ್ತಿದ್ದರೆ, ನಿಮ್ಮ ಮೂತ್ರದ ಬಣ್ಣ ಪ್ರತಿದಿನ ಒಂದೇ ರೀತಿಯಲ್ಲಿ ಇರುವುದಿಲ್ಲ ಎನ್ನುವುದು ತಿಳಿಯುತ್ತದೆ. ಉಷ್ಣಕ್ಕೆ ಕಾಡುವ 'ಮೂತ್ರಕೋಶದ ಸೋಂಕು'! ಇಲ್ಲಿದೆ ನೋಡಿ ಪರಿಹಾರ  

ದೇಹದ ಆರೋಗ್ಯ ಹಾಗೂ ಕೆಲವು ಅಂಶಗಳ ಕಾರಣದಿಂದ ಬದಲಾವಣೆಯನ್ನು ಹೊಂದುತ್ತಿರುತ್ತದೆ. ಕಡಿಮೆ ನೀರಿನ ಸೇವನೆ ಹಾಗೂ ದೇಹದಲ್ಲಿ ನಿರ್ಜಲೀಕರಣದ ಕಾರಣದಿಂದ ಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಹೊಂದುವುದು ಸಹಜ. ಎಚ್ಚರ: ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!  

ಕೆಲವೊಮ್ಮೆ ಯುಟಿಐ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲುಗಳು, ಗಾಲ್ ಕಲ್ಲುಗಳು ಮತ್ತು ಪಿತ್ತಕೋಶದ ವೈಫಲ್ಯ ಸೇರಿದಂತೆ ಇನ್ನಿತರ ತೊಂದರೆಯಿಂದ ಮೂತ್ರದ ಬಣ್ಣ ಬದಲಾಗುತ್ತದೆ. ಅದಕ್ಕಾಗಿಯೇ ಸೂಕ್ತ ಅರಿವು ಹಾಗೂ ತಪಾಸಣೆಗೆ ಮೊರೆಹೋಗಬೇಕು. ಇಲ್ಲವಾದರೆ ಗಂಭೀರ ಸಮಸ್ಯೆಗಳು ನಮ್ಮನ್ನು ಕಾಡುವುದು. ಸಾಮಾನ್ಯವಾಗಿ ಮೂತ್ರದಲ್ಲಿ ಬಣ್ಣದ ಬದಲಾವಣೆಗೆ ಕಾರಣ ಹೀಗೂ ಇರಬಹುದು...  

ಕಾರಣ-1

ಕಾರಣ-1

ದೇಹದಲ್ಲಿ ನಿರ್ಜಲೀಕರಣದಿಂದ ಮೂತ್ರದ ಬಣ್ಣ ಹೆಚ್ಚು ಗಾಢ ಬಣ್ಣವನ್ನು ಹೊಂದಿರುತ್ತದೆ. ಹೀಗಾಗುವುದರಿಂದ ಬಾಯಾರಿಕೆ, ಆಯಾಸ ಉಂಟಾಗುವುದು. ಇಂತಹ ಸಮಯದಲ್ಲಿ ಹಣ್ಣಿನ ರಸ, ಜ್ಯೂಸ್, ನೀರನ್ನು ಹೆಚ್ಚು ಹೆಚ್ಚು ಸೇವಿಸಬೇಕು.

ಕಾರಣ -2

ಕಾರಣ -2

ಕೆಲವೊಮ್ಮೆ ನಾವು ಸೇವಿಸುವ ತರಕಾರಿಗಳ (ಬೀಟ್ರೂಟ್, ಫೇವ ಬೀನ್ಸ್, ಕ್ಯಾರೆಟ್) ಪದಾರ್ಥ ಸೇವಿಸುವುದರಿಂದಲೂ ಮೂತ್ರದ ಬಣ್ಣ ಬದಲಾಗುತ್ತದೆ. ಆಹಾರದ ಸೇವನೆಯಿಂದ ಬಣ್ಣ ಬದಲಾಗಿದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಆ ಆಹಾರ ಪದಾರ್ಥವನ್ನು ತಿನ್ನುವುದು ನಿಲ್ಲಿಸಿದ ಮೇಲೆ ಮೂತ್ರ ಸಹಜ ಬಣ್ಣಕ್ಕೆ ಹಿಂದಿರುಗುತ್ತದೆ.

ಕಾರಣ -3

ಕಾರಣ -3

ನಾವು ಸೇವಿಸುವ ಮಾತ್ರೆಗಳಿಂದಲೂ ಮೂತ್ರದ ಬಣ್ಣ ಬದಲಾವಣೆ ಹೊಂದುತ್ತದೆ. ವಿಟಮಿನ್ ಬಿ ಮಾತ್ರೆಯು ಮೂತ್ರದ ಬಣ್ಣ ಹೆಚ್ಚು ತಿಳಿಹಳದಿ ಬಣ್ಣಕ್ಕೆ ತಿರುಗಿಸುತ್ತದೆ.

ಕಾರಣ-4

ಕಾರಣ-4

ಯಕೃತ್ತಿನ ಸಮಸ್ಯೆಯಿದ್ದರೂ ಮೂತ್ರದ ಬಣ್ಣ ಹೆಚ್ಚು ಗಾಢವಾಗಿರುತ್ತದೆ. ಕೆಲವೊಮ್ಮೆ ಲಿವರ್ ಸಮಸ್ಯೆಇದ್ದರೂ ಹೀಗಾಗುವ ಸಂಭವ ಇರುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

ಕಾರಣ-5

ಕಾರಣ-5

ಪಿತ್ತಕೋಶದ ಸಮಸ್ಯೆ ಅಥವಾ ಪಿತ್ತಕೋಶದಲ್ಲಿ ಕಲ್ಲುಗಳಿದ್ದರೂ ಬಣ್ಣ ಬದಲಾಗುವುದು. ಈ ಸಮಸ್ಯೆ ಇದ್ದವರು ವೈದ್ಯರಿಗೆ ತೋರಿಸಬೇಕು.

ಕಾರಣ-6

ಕಾರಣ-6

ಮೆದೋಜ್ಜೀರಕಾಂಗದ ಗೃಂಥಿಯಲ್ಲಿ ಕ್ಯಾನ್ಸರ್ ಉಂಟಾದರೆ ಅಥವಾ ಗುಳ್ಳೆಗಳಾದರೆ ಮೂತ್ರದ ಬಣ್ಣ ಗಾಢ ಬಣ್ಣಕ್ಕೆ ತಿರುಗುತ್ತದೆ. ವೈದ್ಯರ ಸೂಕ್ತ ಕ್ರಮದಿಂದ ಪರಿಹಾರ ಕಂಡುಕೊಳ್ಳಬಹುದು.

ಕಾರಣ-7

ಕಾರಣ-7

ಕೆಲವೊಮ್ಮೆ ರಕ್ತದಲ್ಲಿ ಉಂಟಾದ ಸಮಸ್ಯೆಯಿಂದ, ಸೋಂಕಿನಿಂದ, ಪ್ರಾಸ್ಟೇಟ್ ಸೋಂಕಿನಿಂದ ಮತ್ತು ಮೂತ್ರಪಿಂಡದಲ್ಲಿ ಕಲ್ಲುಗಳಿರುವುದಿಂದಲೂ ಮೂತ್ರದ ಬಣ್ಣ ಬದಲಾಗುತ್ತದೆ. ಮೂತ್ರದಲ್ಲಿ ಉಂಟಾಗುವ ಬಣ್ಣದ ಬದಲಾವಣೆಯನ್ನು ಗಮನಿಸುತ್ತಿದ್ದರೆ ವೈದ್ಯರ ಸಲಹೆ ಪಡೆಯಬಹುದು. ಇಲ್ಲವಾದರೆ ಮೂರು ತಿಂಗಳಿಗೊಮ್ಮೆ ಮೂತ್ರ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.

 

English summary

Is Your Urine Dark? Read This!

Dark urine could happen due to very simple reasons like dehydration too. But even major health issues like UTI, cancer, kidney stones, and liver failure could also be the reason behind dark urine.
Subscribe Newsletter