ಮೊಳಕೆಯೊಡೆದ ಬೆಳ್ಳುಳ್ಳಿ ಸೇವನೆ-ಆರೋಗ್ಯಕ್ಕೆ ಬಹಳ ಒಳ್ಳೆಯದು....

Posted By: manu
Subscribe to Boldsky

ಸಾಮಾನ್ಯವಾಗಿ ಮನೆಗೆ ತಂದ ಬೆಳ್ಳುಳ್ಳಿ ಕೆಲವೇ ದಿನಗಳಲ್ಲಿ ಮೊಳಕೆಯೊಡೆಯತೊಡಗುತ್ತದೆ. ಈ ಮೊಳಕೆಯನ್ನು ಕಂಡಾಗ ಈ ಬೆಳ್ಳುಳ್ಳಿಯನ್ನು ಸೇವಿಸಬಹುದೋ ಇಲ್ಲವೇ ಎಂಬ ದ್ವಂದ್ವ ಎದುರಾಗುತ್ತದೆ. ಹೆಚ್ಚಿನವರು ಇದು ಸುರಕ್ಷಿತವಲ್ಲ ಎಂಬ ಭಾವನೆಯಿಂದ ಅಥವಾ ಇದರಲ್ಲಿ ಮಾಡಿದ ಅಡುಗೆ ರುಚಿ ಕೆಡಬಹುದು ಅಥವಾ ಹೊಟ್ಟೆ ಕೆಡಿಸಬಹುದು ಎಂಬ ಅನುಮಾನದಿಂದ ಬಳಸದೇ ಎಸೆದು ಬಿಡುತ್ತಾರೆ.

ಆದರೆ ಆರೋಗ್ಯ ತಜ್ಞರ ಪ್ರಕಾರ ಇದು ತಪ್ಪು ತಿಳಿವಳಿಕೆಯಾಗಿದ್ದು ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿಯೂ ಹಲವಾರು ಆರೋಗ್ಯಕರ ಗುಣಗಳಿವೆ. ಅಷ್ಟೇ ಅಲ್ಲ, ಬೆಳ್ಳುಳ್ಳಿಯಲ್ಲಿರುವ ಗುಣಗಳು ಮೊಳಕೆಯೊಡೆದ ಬಳಿಕ ಇನ್ನಷ್ಟು ಹೆಚ್ಚುತ್ತವೆ. 

ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

ವಿಶೇಷವಾಗಿ ಬಾಯಿಯಲ್ಲಿ ದುರ್ವಾಸನೆ ಇದ್ದರೆ ಮೊಳಕೆಯೊಡೆದ ಬೆಳ್ಳುಳ್ಳಿಯೊಂದಿಗೆ ಪುದೀನಾ, ಪಾಲಕ್ ಅಥವಾ ಕೊಂಚ ಹಾಲನ್ನು ಬೆರೆಸಿ ಮುಕ್ಕಳಿಸಿಕೊಂಡರೆ ತಕ್ಷಣ ಈ ವಾಸನೆ ಇಲ್ಲವಾಗುತ್ತದೆ. ಬನ್ನಿ, ಇಂತಹ ಇನ್ನೂ ಹಲವಾರು ಪ್ರಯೋಜನಗಳ ಬಗ್ಗೆ ಅರಿಯೋಣ....  

ವಾಸ್ತವಾಂಶ #1

ವಾಸ್ತವಾಂಶ #1

ಮೊಳಕೆಯೊಡೆದ ಬೆಳ್ಳುಳ್ಳಿ ಅಂದರೆ ಈಗ ಇದು ಚೆನ್ನಾಗಿ ಬಲಿತಿದೆ ಎಂದರ್ಥ. ಮೊಳಕೆಯೊಡೆದರೆ ಹಾಳಾಗಿದೆ ಎಂದು ಸರ್ವಥಾ ಅರ್ಥವಲ್ಲ. ಬದಲಿಗೆ ಇದು ಗಿಡವಾಗಲು ತನ್ನಲ್ಲಿ ಕೇಂದ್ರೀಕರಿಸಿದ್ದ ಶಕ್ತಿಯನ್ನೆಲ್ಲಾ ಹೊರಬಿಟ್ಟಿದೆ ಎಂದು ತಿಳಿದುಕೊಳ್ಳಬಹುದು. ಈ ಬೆಳ್ಳುಳ್ಳಿಯನ್ನೂ ಅಡುಗೆಗೆ ಸಾಮಾನ್ಯ ಬೆಳ್ಳುಳ್ಳಿಯಂತೆಯೇ ಬಳಸಬಹುದು. ಆದರೆ ಇದು ಮೊಳಕೆ ಚಿಕ್ಕದಿದ್ದಾಗ ಮಾತ್ರ. ಮೊಳಕೆ ಉದ್ದವಾದರೆ ಬೆಳ್ಳುಳ್ಳಿಯ ಎಸಳಿನ ಮೇಲೆ ಕಪ್ಪು ಕಲೆಗಳು ಮೂಡುತ್ತವೆ. ಇದು ಆರೋಗ್ಯಕರವಲ್ಲ. ಇದು ಬೆಳ್ಳುಳ್ಳಿ ಗಾಳಿಯಲ್ಲಿದ್ದ ಕಾರಣ ಕೊಳೆತ ಸಂಕೇತವಾಗಿದ್ದು ಇವನ್ನು ವರ್ಜಿಸಬೇಕು.

ವಾಸ್ತವಾಂಶ #2

ವಾಸ್ತವಾಂಶ #2

ಮೊಳಕೆಯೊಡೆದ ಬೆಳ್ಳುಳ್ಳಿಯ ಮೊಳಕೆ ಕೊಂಚವೇ ಕಹಿಯಾಗಿರುವ ಕಾರಣ ಅಡುಗೆಗೆ ಬಳಸುವುದಾದರೆ ಮೊಳಕೆಯೊಡೆದ ಹಸಿರು ಭಾಗವನ್ನು ನಿವಾರಿಸಿ ಉಳಿದ ಭಾಗವನ್ನು ಬಳಸಿದರೆ ರುಚಿಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

ಜ್ವರ ಶೀತಕ್ಕೆ ಸಿದ್ಧೌಷಧ-ಬೆಳ್ಳುಳ್ಳಿ ಕರಿಮೆಣಸು ರಸಂ

ವಾಸ್ತವಾಂಶ #3

ವಾಸ್ತವಾಂಶ #3

ಆರೋಗ್ಯತಜ್ಞರ ಪ್ರಕಾರ ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿ ಹೃದಯಕ್ಕೆ ಉತ್ತಮವಾಗಿರುವ ಅಂಶಗಳು ಮೊಳಕೆಯೊಡೆಯದ ಬೆಳ್ಳುಳ್ಳಿಗಿಂತಲೂ ಹೆಚ್ಚಿರುತ್ತವೆ. ಅಕ್ಕಿ, ಧಾನ್ಯ ಮತ್ತು ಕಾಳುಗಳಂತೆಯೇ ಸಮಯ ಹೆಚ್ಚಾದಷ್ಟೂ ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿಯೂ ಪೋಷಕಾಂಶಗಳು ಹೆಚ್ಚುತ್ತವೆ.

 ವಾಸ್ತವಾಂಶ #4

ವಾಸ್ತವಾಂಶ #4

ಮೊಳಕೆಯೊಡೆದಯುತ್ತಿರುವಾಗ ಬೆಳ್ಳುಳ್ಳಿಯಲ್ಲಿ ಕೆಲವು ಫೈಟೋ ಕೆಮಿಕಲ್ಸ್ ಎಂಬ ಪೋಷಕಾಂಶಗಳು ಉತ್ಪತ್ತಿಯಾಗುತ್ತವೆ. ಈ ಕಣಗಳಿಗೆ ಕೆಲವಾರು ಬಗೆಯ ಕ್ಯಾನ್ಸರ್ ರೋಗಗಳನ್ನು ತಡೆಗಟ್ಟುವ ಮತ್ತು ಹರಡುವುದನ್ನು ನಿಲ್ಲಿಸುವ ಗುಣವಿದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಕ್ಯಾನ್ಸರ್ ಗೆ ಕಾರಣವಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ.

ವಾಸ್ತವಾಂಶ #5

ವಾಸ್ತವಾಂಶ #5

ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿ ಕ್ಯಾನ್ಸರ್ ಕಣಗಳಿಗೆ ಬೆಂಬಲ ನೀಡುವ ಕಣಗಳ (carcinogen) ಚಟುವಟಿಕೆಗಳನ್ನು ನಿಯಂತ್ರಿಸುವ ಗುಣವಿದೆ. ಅಲ್ಲದೇ ಹೃದಯಸ್ತಂಭನಕ್ಕೆ ಕಾರಣವಾಗುವ ರಕ್ತನಾಳಗಳ ಒಳಗೆ ಕಟ್ಟಿಕೊಳ್ಳುವ ಜಿಡ್ಡನ್ನು ನಿವಾರಿಸುವ ಶಕ್ತಿಯನ್ನೂ ಹೊಂದಿದೆ.

ವಾಸ್ತವಾಂಶ #6

ವಾಸ್ತವಾಂಶ #6

ಒಂದು ವೇಳೆ ನಿಮ್ಮ ರೋಗ ನಿರೋಧಕ ಶಕ್ತಿ ಕುಂದಿದ್ದರೆ ಅಥವಾ ಪದೇ ಪದೇ ಶೀತ ಆವರಿಸುತ್ತಾ ಇದ್ದರೆ ನಿಮ್ಮ ನಿತ್ಯದ ಆಹಾರದಲ್ಲಿ ಕೆಲವು ಮೊಳಕೆಯೊಡೆದ ಬೆಳ್ಳುಳ್ಳಿಯ ಎಸಳುಗಳನ್ನು ಸೇರಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಕೇವಲ ಐದು ದಿನದ ಸತತ ಸೇವನೆಯಿಂದ ಈ ಗುಣ ಹೆಚ್ಚಿರುವುದನ್ನು ಗಮನಿಸಬಹುದು

ವಾಸ್ತವಾಂಶ #7

ವಾಸ್ತವಾಂಶ #7

ಮೊಳಕೆಯೊಡೆದ ಬೆಳ್ಳುಳ್ಳಿ ವೃದ್ದಾಪ್ಯ ಆವರಿಸುವ ಗತಿಯನ್ನು ನಿಧಾನಗೊಳಿಸುವ ಗುಣವನ್ನೂ ಹೊಂದಿದೆ. ಚರ್ಮ ಹಾಗೂ ದೇಹದ ಇತರ ಅಂಗಗಳು ವೃದ್ಧಾಪ್ಯದ ಕಾರಣ ತಮ್ಮ ಗುಣಗಳನ್ನು ಕುಂಠಿತಗೊಳಿಸುವುದನ್ನು ತಡೆಯುವ ಗುಣವನ್ನು ಇವು ಹೊಂದಿವೆ.

ದಿಂಬಿನಡಿ ಬೆಳ್ಳುಳ್ಳಿ ಇಟ್ಟು ಮಲಗಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ!

 ವಾಸ್ತವಾಂಶ #8

ವಾಸ್ತವಾಂಶ #8

ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಪೋಷಕಾಂಶವಿದ್ದು ಇದು ಮೆದುಳಿನ ಜೇವಕೋಶಗಳಿಗೆ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ. ಇದರಿಂದ ಮೆದುಳಿನ ಜೀವಕೋಶಗಳು ಸಾಯುವ ಸಂಖ್ಯೆ ಕಡಿಮೆಯಾಗಿ ಸ್ಮರಣಶಕ್ತಿ ಕುಂದುವ (dimentia) ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ತಾರ್ಕಿಕ ಶಕ್ತಿ ಕುಂದುವ ಆಲ್ಜೀಮರ್ಸ್ ಕಾಯಿಲೆ ಬರುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Is Sprouted Garlic Safe To Eat?

    When the garlic in your kitchen shelf starts sprouting, you might feel like throwing it out as most of us generally perceive sprouted garlic as spoiled food. But today, health experts say that its a myth. This means even sprouted garlic offers health benefits. Firstly, garlic has medicinal properties which can prevent many health issues.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more