For Quick Alerts
ALLOW NOTIFICATIONS  
For Daily Alerts

ಮೈ ಒರೆಸೋ ಸ್ನಾನದ ಟವೆಲ್ ಖತರ್ನಾಕ್ ಸೈಲೆಂಟ್ ಕಿಲ್ಲರ್!

By Manu
|

ದೇಹಕ್ಕೆ ಸ್ನಾನ ಮಾಡುವಾಗ ನಾವು ಅತಿಯಾದ ಕಾಳಜಿ ವಹಿಸುತ್ತೇವೆ. ಸ್ನಾನ ಮಾಡುವುದರಿಂದ ದೇಹವು ಸ್ವಚ್ಛವಾಗುವುದು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಅದೇ ಸ್ನಾನಕ್ಕಾಗಿ ಬಳಸುವ ಟವೆಲ್‌ನ್ನು ನೀವು ಮರುಬಳಕೆ ಮಾಡಿಕೊಳ್ಳುವುದು ಎಷ್ಟು ಸರಿ ಎಂದು ತಿಳಿದುಕೊಳ್ಳಬೇಕು.

ಯಾಕೆಂದರೆ ಟವೆಲ್‌ನಲ್ಲಿ ಹೆಚ್ಚಾಗಿ ಬ್ಯಾಕ್ಟೀರಿಯಾಗಳು ಅಂಟಿಕೊಂಡಿರುವುದು. ಟವೆಲ್ ಯಾವಾಗಲೂ ಒದ್ದೆಯಾಗಿರುವುದರಿಂದ ಬ್ಯಾಕ್ಟೀರಿಯಾಗಳು ಇಲ್ಲಿ ಸುಲಭವಾಗಿ ಬೆಳೆಯುತ್ತದೆ. ಬ್ಯಾಕ್ಟೀರಿಯಾ ಮನೆಯಲ್ಲಿರುವ ಯಾರಿಗಾದರೂ ಸೋಂಕು ಹರಡಿದರೆ ಅದು ಉಳಿದವರಿಗೂ ಹಬ್ಬಬಹುದು. ಇದರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಿ....

ಅಧ್ಯಯನಗಳು ಏನು ಹೇಳುತ್ತವೆ?

ಅಧ್ಯಯನಗಳು ಏನು ಹೇಳುತ್ತವೆ?

ಸ್ನಾನಗೃಹದಲ್ಲಿ ಬಳಸುವಂತಹ ಶೇ.90ರಷ್ಟು ಟವೆಲ್‌ಗಳಲ್ಲಿ ತುಂಬಾ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆಯಂತೆ. ಕೋಲಿಫಾರ್ಮ್ ಸಾಮಾನ್ಯವಾಗಿ ಅಮೇಧ್ಯವು ಕಂಡುಬರುವ ಬ್ಯಾಕ್ಟೀರಿಯಾ ಆಗಿದೆ. ಈ ಬ್ಯಾಕ್ಟೀರಿಯಾವು ಮನೆಯ ಸ್ನಾನಗೃಹದ ಟವೆಲ್‌ಗಳಲ್ಲಿ ಕಂಡುಬರುವುದು.

ಪ್ರಯೋಗಾಲಯದ ಪರೀಕ್ಷೆಗಳು ಏನು ಹೇಳಿವೆ?

ಪ್ರಯೋಗಾಲಯದ ಪರೀಕ್ಷೆಗಳು ಏನು ಹೇಳಿವೆ?

ಸ್ನಾನಗೃಹದ ಕೆಲವು ಟವೆಲ್ ಗಳನ್ನು ಹೆಚ್ಚಾಗಿ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಇದರಲ್ಲಿ ಶೇ.14ರಷ್ಟು ಇಕೋಲಿ ಬ್ಯಾಕ್ಟೀರಿಯಾ ಕಂಡುಬಂದಿದೆ. ಇಕೋಲಿ ಬ್ಯಾಕ್ಟೀರಿಯಾವು ಸೋಂಕು ಉಂಟು ಮಾಡುವುದು.

ಇದರಿಂದ ಹಾನಿಯಿದೆಯಾ?

ಇದರಿಂದ ಹಾನಿಯಿದೆಯಾ?

ಸ್ನಾನಗೃಹದಲ್ಲಿರುವ ಟವೆಲ್ ಗಳಲ್ಲಿ ಅಡಗಿರುವಂತಹ ಬ್ಯಾಕ್ಟೀರಿಯಾದಿಂದ ಹೆಚ್ಚಿನ ಸಮಯ ನಾವು ಪಾರಾಗಬಹುದು. ಆದರೆ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ ಇಂತಹ ಬ್ಯಾಕ್ಟೀರಿಯಾಗಳು ಕೂಡ ಸೋಂಕು ಉಂಟು ಮಾಡಬಹುದು.

ಟವೆಲ್ ಹಂಚಿಕೊಳ್ಳಬಹುದೇ?

ಟವೆಲ್ ಹಂಚಿಕೊಳ್ಳಬಹುದೇ?

ಖಂಡಿತವಾಗಿಯೂ ಇಲ್ಲ, ಮೊದಲು ಟವೆಲ್ ಉಪಯೋಗಿಸಿದವರ ದೇಹದಲ್ಲಿ ಗಾಯವಿದ್ದರೆ ಅದರಲ್ಲಿನ ಬ್ಯಾಕ್ಟೀರಿಯಾ ನಿಮ್ಮ ದೇಹ ಪ್ರವೇಶಿಸಬಹುದು.

ಸುರಕ್ಷಿತವಾಗಿರುವುದು ಹೇಗೆ?

ಸುರಕ್ಷಿತವಾಗಿರುವುದು ಹೇಗೆ?

ನಿಯಮಿತವಾಗಿ ಟವೆಲ್ ತೊಳೆಯಿರಿ. ಟವೆಲ್‌ನಲ್ಲಿ ಬ್ಯಾಕ್ಟೀರಿಯಾ ಕಡಿಮೆ ಮಾಡಲು ಇದು ಮಾತ್ರ ಸರಿಯಾದ ವಿಧಾನ. ಟವೆಲ್ ಒದ್ದೆಯಾಗಿದ್ದರೆ ಅದನ್ನು ಬಿಸಿಲಿನಲ್ಲಿ ಒಣಗಲು ಹಾಕಿ.

ಎಷ್ಟು ಸಲ ಒಗೆಯಬೇಕು?

ಎಷ್ಟು ಸಲ ಒಗೆಯಬೇಕು?

ಎರಡು ದಿನಕ್ಕೊಮ್ಮೆ ಸ್ನಾನದ ಟವೆಲ್ ಅನ್ನು ತೊಳೆಯಿರಿ. ಪ್ರತೀ ಸಲ ಬಳಸಿದ ಬಳಿಕ ತೊಳೆದರೆ ತುಂಬಾ ಒಳ್ಳೆಯದು. ನೀವು ಬಳಸುವಾಗ ಟವೆಲ್ ಸಂಪೂರ್ಣವಾಗಿ ಒಣಗಿದ್ದರೆ ಆಗ ಬ್ಯಾಕ್ಟೀರಿಯಾ ಸೋಂಕು ಉಂಟು ಮಾಡುವ ಸಾಧ್ಯತೆ ತುಂಬಾ ಕಡಿಮೆಯಿರುತ್ತದೆ.

ಟವೆಲ್ ಯಾವಾಗ ಬಳಸಬಾರದು?

ಟವೆಲ್ ಯಾವಾಗ ಬಳಸಬಾರದು?

ಟವೆಲ್ ತುಂಬಾ ವಾಸನೆ ಉಂಟು ಮಾಡುತ್ತಾ ಇದ್ದರೆ ಅದನ್ನು ಬಳಸಬೇಡಿ. ವಾಸನೆಯು ಬ್ಯಾಕ್ಟೀರಿಯಾ ಬೆಳವಣಿಗೆಯ ಸುಳಿವು. ಸಾರ್ವಜನಿಕ ಸ್ನಾನಗೃಹ ಅಥವಾ ಹೋಟೆಲ್ ಗಳಲ್ಲಿ ಇಟ್ಟಿರುವಂತಹ ಟವೆಲ್ ಬಳಸದೇ ಇದ್ದರೆ ತುಂಬಾ ಒಳ್ಳೆಯದು.

English summary

Is It Safe To Reuse Bath Towels? No!

Is it safe to reuse bath towels? How often should you wash your bath towels? Well, most of us seldom have the time to think of this matter. But it is important. What's the problem with towels? Firstly, the texture of the towels tend to trap bacteria. Secondly, most of the towels are generally damp most of the time. This makes it a favourable environment for the bacteria to grow. And if the bacteria spreads an infection to one member in the family, the rest of them may also fall ill. Here are some more facts.
X
Desktop Bottom Promotion