ಮಾಂಸದ ಕೋಳಿಗಳನ್ನು ಚಪ್ಪರಿಸುವ ಮುನ್ನ, ಇರಲಿ ಎಚ್ಚರ!

By: Deepu
Subscribe to Boldsky

ಮಾಂಸಹಾರಿಗಳಿಗೆ ಕೋಳಿಯ ಪದಾರ್ಥಗಳನ್ನು ತಿನ್ನುವುದು ಎಂದರೆ ಪಂಚಪ್ರಾಣ. ಕೋಳಿಯಿಂದ ತಯಾರಿಸಿದ ಯಾವುದೇ ಪದಾರ್ಥಗಳನ್ನು ಇಷ್ಟಪಡದವರು ಇಲ್ಲವೆನ್ನಬಹುದು. ಅದರಲ್ಲೂ ಈಗೀಗ ತಂದೂರಿ ಚಿಕನ್, ತಿಕ್ಕಾದಂತಹ ವಿವಿಧ ರೀತಿಯ ರುಚಿಕರ ಕೋಳಿ ಖಾದ್ಯಗಳು ಸಿಗುತ್ತದೆ. ಇದನ್ನು ಯಾವುದೇ ಚಿಂತೆಯಿಲ್ಲದೆ ನಾವು ತಿನ್ನುತ್ತೇವೆ.  ತಿನ್ನುವಾಗ ಚಿಂತೆ ಮಾಡುವುದು ಕೂಡ ಸರಿಯಲ್ಲ. ಫಾರಂ ಕೋಳಿಗಳ ಮಾಂಸ ವಿಷದಷ್ಟೇ ಅಪಾಯಕಾರಿ...!

ಆದರೆ ಬೋಲ್ಡ್ ಸ್ಕೈ ನಿಮಗೆ ಈ ಲೇಖನದಲ್ಲಿ ತಿಳಿಸಲಿರುವ ವಿಷಯ ನಿಮ್ಮನ್ನು ಬೆಚ್ಚಿ ಬೀಳಿಸಬಹುದು. ಇದನ್ನು ಓದುತ್ತಾ ಕೋಳಿ ತುಂಡು ಬಾಯಿಯಲ್ಲಿ ಇದ್ದರೆ ಅದು ಉದುರಿ ಬೀಳುವುದು ಖಚಿತ. ಯಾಕೆಂದರೆ ಮಾಂಸದ ಕೋಳಿಗಳು ಆರೋಗ್ಯಕ್ಕೆ ಹಾನಿಕರ ಎಂದು ಹೇಳಲಾಗುತ್ತಿದೆ. ಊರಿನ ಕೋಳಿಗಳು ಮಾಂಸದ ಕೋಳಿಗಳಿಗಿಂತ ಆರೋಗ್ಯಕಾರಿ.

ಮಾಂಸದ ಕೋಳಿಗಳನ್ನು ಬೆಳೆಸುವ ಮತ್ತು ಅವುಗಳಿಗೆ ಹಾಕುವ ಆಹಾರವೇ ದೊಡ್ಡ ಸಮಸ್ಯೆಯಾಗಿದೆ. ಹೆಚ್ಚಿನ ಹಣಕ್ಕಾಗಿ ಮಾಂಸದ ಕೋಳಿಗಳು ಬೇಗನೆ ಬೆಳೆಯುವಂತೆ ಹಾಗೂ ಮಾಂಸ ಹೆಚ್ಚಾಗಿರುವಂತೆ ಬೆಳೆಸಲಾಗುತ್ತದೆ. ವೇಗವಾಗಿ ಬೆಳೆಯುವಂತೆ ಮಾಡುವ ವಿಧಾನವು ಅನಾರೋಗ್ಯಕಾರಿ. ಇದರಿಂದ ಅದನ್ನು ತಿನ್ನುವವರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಮಾಂಸದ ಕೋಳಿಯ ಸತ್ಯವನ್ನು ಅರಿಯಲು ಮುಂದಕ್ಕೆ ಓದುತ್ತಾ ಸಾಗಿ... 

ಬ್ಯಾಕ್ಟೀರಿಯಾದ ಸಾಧ್ಯತೆ ಹೆಚ್ಚು....

ಬ್ಯಾಕ್ಟೀರಿಯಾದ ಸಾಧ್ಯತೆ ಹೆಚ್ಚು....

ಹಸಿ ಮಾಂಸದಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾ ಮತ್ತು ರೋಗಾಣುಗಳು ಇರಬಹುದು. ಕೋಳಿ ಗೂಡಿನಲ್ಲಿ ನೂರಾರು ಬಾಯ್ಲರ್ ಕೋಳಿಗಳು ಇರುವುದರಿಂದ ಅಲ್ಲಿರುವ ಯಾವುದಾದರೂ ಒಂದು ಕೋಳಿಗೆ ಸೋಂಕು ಇರಬಹುದು. ಇದನ್ನು ಕೊಂದಾಗ ಇದು ಬೇರೆ ಕೋಳಿಗಳಿಗೆ ಹರಡಬಹುದು. ಎಲ್ಲಾ ಕೋಳಿಗಳನ್ನು ಒಮ್ಮೆಲೇ ಕೊಂದು ಅದನ್ನು ಮಾಂಸ ಮಾಡುವ ಕಾರಣದಿಂದಾಗಿ ಬ್ಯಾಕ್ಟೀರಿಯಾ ಮಾಂಸದಲ್ಲಿರುವ ಸಾಧ್ಯತೆ ಹೆಚ್ಚಿದೆ.

ಆ್ಯಂಟಿಬಯೋಟಿಕ್....

ಆ್ಯಂಟಿಬಯೋಟಿಕ್....

ಸಾಕುವ ಕೋಳಿ ಗೂಡಿನಲ್ಲಿರುವ ಹೆಚ್ಚಿನ ಮಾಂಸದ ಕೋಳಿಗಳಿಗೆ ಆ್ಯಂಟಿಬಯೋಟಿಕ್ ನೀಡಲಾಗುತ್ತದೆ. ಇದು ಪ್ರತಿಜೀವಕ ನಿರೋಧಕವನ್ನು ಉಂಟು ಮಾಡುತ್ತದೆ. ಈ ವೇಳೆ ನೀವು ಮಾಂಸ ತಿಂದು ಯಾವುದಾದರೂ ಸೋಂಕಿಗೆ ಒಳಗಾದರೆ ಆಗ ಚಿಕಿತ್ಸೆ ನೀಡುವುದು ತುಂಬಾ ಕಷ್ಟ. ಕೋಳಿಯ ಒಳಗಿರುವಂತಹ ಆ್ಯಂಟಿಬಯೋಟಿಕ್ ನಿಮ್ಮ ದೇಹದೊಳಗೆ ಪ್ರವೇಶಿಸುತ್ತದೆ.

ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ಹೆಚ್ಚುವ ಸಾಧ್ಯತೆಗಳು

ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ಹೆಚ್ಚುವ ಸಾಧ್ಯತೆಗಳು

ಮಾಂಸದ ಕೋಳಿಗಳಿಂದಾಗಿಯೇ ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ಹೆಚ್ಚುವ ಸಾಧ್ಯತೆಗಳು ಅಧಿಕವಾಗಿದೆ ಎನ್ನುವ ವಾದವಿದೆ. ಮಾಂಸದ ಕೋಳಿ ತಿಂದರೆ ಈ ಅಪಾಯ ಬರುವ ಸಾಧ್ಯತೆ ಇಲ್ಲ ಎನ್ನುವುದನ್ನು ಪುಷ್ಠೀಕರಿಸುವ ಯಾವುದೇ ಸಾಕ್ಷ್ಯಗಳು ಇಲ್ಲ.

ದಷ್ಟಪುಷ್ಟವಾಗಲು ಬಳಸುವ ರಾಸಾಯನಿಕ...

ದಷ್ಟಪುಷ್ಟವಾಗಲು ಬಳಸುವ ರಾಸಾಯನಿಕ...

ಪ್ರತಿಯೊಂದು ಕಡೆಯೂ ಮಾಂಸದ ಕೋಳಿಗಳನ್ನು ಬೆಳೆಸುವ ವಿಧಾನ ಒಂದೇ ರೀತಿಯಾಗಿಲ್ಲ. ಕೆಲವೊಂದು ಕಡೆಗಳಲ್ಲಿ ಕೋಳಿಯು ದಷ್ಟಪುಷ್ಟವಾಗಲು ಮತ್ತು ಮಾಂಸ ಹೆಚ್ಚಲು ಕೆಲವೊಂದು ರಾಸಾಯನಿಕ ಮತ್ತು ಔಷಧಿಯನ್ನು ನೀಡಲಾಗುತ್ತದೆ. ಇವುಗಳು ಮಾನವ ದೇಹಕ್ಕೆ ಅಪಾಯಕಾರಿ.

ವಿಷವಾಗುವ ಸಮಸ್ಯೆ ಹೆಚ್ಚು...

ವಿಷವಾಗುವ ಸಮಸ್ಯೆ ಹೆಚ್ಚು...

ಮಾಂಸದ ಕೋಳಿಯನ್ನು ತಿಂದಾಗ ಆಹಾರ ವಿಷವಾಗುವ ಸಮಸ್ಯೆ ಹೆಚ್ಚಾಗಿರುತ್ತದೆ. ಅಧ್ಯಯನಗಳ ಪ್ರಕಾರ ಶೇ. 67ರಷ್ಟು ಮಾಂಸದ ಕೋಳಿಗಳಲ್ಲಿ ಇ. ಕೊಲಿ ಬ್ಯಾಕ್ಟೀರಿಯಾ ಇದ್ದೇ ಇರುತ್ತದೆ.

ಮನೆಯಲ್ಲಿ ಸಾಕಿದ ಕೋಳಿಗಳು ಸುರಕ್ಷಿತವೇ?

ಮನೆಯಲ್ಲಿ ಸಾಕಿದ ಕೋಳಿಗಳು ಸುರಕ್ಷಿತವೇ?

ಮನೆಯಲ್ಲಿ ಸಾಕಿದ ಕೋಳಿಗಳು ಸುರಕ್ಷಿತವೇ? ಹೌದು. ಮಾಂಸದ ಕೋಳಿಗಳಿಗಿಂತ ಇದು ಒಳ್ಳೆಯದು. ಇದನ್ನು ಸಾಮಾನ್ಯ ವಾತಾವರಣದಲ್ಲಿ ನೈಸರ್ಗಿಕವಾಗಿ ಬೆಳೆಸಲಾಗುತ್ತದೆ. ಇದಕ್ಕೆ ಯಾವುದೇ ಸೋಂಕು ತಗಲಿರುವುದಿಲ್ಲ ಮತ್ತು ಕೋಳಿ ಕೊಬ್ಬುವಂತೆ ಮಾಡಲು ಯಾವುದೇ ರಾಸಾಯನಿಕ ಬಳಸಲಾಗುವುದಿಲ್ಲ.

ಹಸಿ ಮಾಂಸವನ್ನು ತರಕಾರಿ ಮತ್ತು ಹಣ್ಣುಗಳ ಜತೆ ಇಡಬೇಡಿ

ಹಸಿ ಮಾಂಸವನ್ನು ತರಕಾರಿ ಮತ್ತು ಹಣ್ಣುಗಳ ಜತೆ ಇಡಬೇಡಿ

ಮಾರುಕಟ್ಟೆಯಿಂದ ತಂದಂತಹ ಹಸಿ ಮಾಂಸವನ್ನು ತರಕಾರಿ ಮತ್ತು ಹಣ್ಣುಗಳ ಜತೆ ಇಡಬೇಡಿ. ಮಾಂಸ ಕತ್ತರಿಸಲು ಬಳಸುವಂತಹ ಚಾಕುವನ್ನು ತರಕಾರಿ ಕತ್ತರಿಸಲು ಬಳಸಬೇಡಿ. ಹಸಿ ಮಾಂಸವನ್ನು ಹಾಕಿದ ಪಾತ್ರೆ, ಪ್ಲೇಟ್ ಮತ್ತು ಚಾಕುವನ್ನು ತೊಳೆಯಲು ಮರೆಯಬೇಡಿ.

 
English summary

Is Broiler Chicken Unhealthy?

The meat seller is more concerned about growing the hen fatter so that more meat could be sold. So, the methods used to grow the hen faster may sometimes be unhealthy practices which could affect the quality of the meat. Here are some more facts...
Please Wait while comments are loading...
Subscribe Newsletter