Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒಂದೆರಡು ದಿನಗಳಲ್ಲಿಯೇ ಕೆಮ್ಮು, ಕಫ ಹೋಗಲಾಡಿಸುವ ಮನೆಮದ್ದುಗಳು
ಕೆಮ್ಮು ಒಂದು ವ್ಯಾಧಿಯಲ್ಲ, ಬದಲಿಗೆ ನಮ್ಮ ರೋಗ ನಿರೋಧಕ ವ್ಯವಸ್ಥೆಯ ಒಂದು ಅಂಗವಾಗಿದೆ. ನಮ್ಮ ಶ್ವಾಸನಾಳಗಳ ಒಳಗೆ ಅಂಟಿಕೊಳ್ಳುವ ದ್ರವ ಜಿನುಗುತ್ತದೆ. ಇದು ಗಾಳಿಯಲ್ಲಿ ತೇಲಿ ಬರುವ ರೋಗಾಣುಗಳು ಹಾಗೂ ಧೂಳನ್ನು ಅಂಟಿಸಿಕೊಳ್ಳುವ ಮೂಲಕ ಶ್ವಾಸಕೋಶಗಳ ಒಳಗೆ ಇವುಗಳ ಪ್ರವೇಶವನ್ನು ಪ್ರತಿಬಂಧಿಸುತ್ತದೆ. ಹೀಗೆ ವೈರಾಣುಗಳನ್ನು ಅಂಟಿಸಿಕೊಂಡ ದ್ರವ ಗಟ್ಟಿಯಾಗಿ ಕಫದ ರೂಪ ಪಡೆಯುತ್ತದೆ. ಇದನ್ನು ಕೆರೆದು ನಿವಾರಿಸುವ ಕ್ರಿಯೆಯೇ ಕೆಮ್ಮು.
ಕೆಮ್ಮನ್ನು ನಿವಾರಿಸಬೇಕೆಂದರೆ ಅಂಟಿಕೊಂಡಿರುವ ಈ ಕಫವನ್ನು ನಿವಾರಿಸಬೇಕು. ಕಫ ಗಟ್ಟಿಯಾಗಿದ್ದಷ್ಟೂ ಇದನ್ನು ನಿವಾರಿಸಲು ಕಷ್ಟವಾಗುತ್ತಾ ಕೆಮ್ಮು ಅನವರತವಾಗುತ್ತದೆ. ಕೆಲವು ಸಾಮಾಗ್ರಿಗಳು ಈ ಕಫವನ್ನು ಸಡಿಲಿಸಲು ಸಮರ್ಥವಾಗಿವೆ. ಮಾರುಕಟ್ಟೆಯಲ್ಲಿ ಕೆಮ್ಮಿನ ಸಿರಪ್‌ಗಳು ಸಿಗುತ್ತವೆ.

ಬಾದಾಮಿ
ಕೆಮ್ಮು ನಿವಾರಿಸಲು ಬಲು ಪ್ರಾಚೀನವಾದ ವಿಧಾನವೆಂದರೆ ಬಾದಾಮಿ ಅರೆದು ಸೇವಿಸುವುದು. ಸುಮಾರು ಏಳೆಂಟು ಬಾದಾಮಿಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಡಿ. ಮರುದಿನ ಸಿಪ್ಪೆ ಸುಲಿದು ನುಣ್ಣಗೆ ಅರೆಯಿರಿ. ಇದಕ್ಕೆ ಕೊಂಚ ಬೆಣ್ಣೆ ಮತ್ತು ಸಕ್ಕರೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ.

ಈರುಳ್ಳಿ
ಈರುಳ್ಳಿಯನ್ನು ಹೆಚ್ಚಿ ಜಜ್ಜಿ ಹಿಂಡಿ ರಸವನ್ನು ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುವುದು ಮಾತ್ರವಲ್ಲ ಕಟ್ಟಿಕೊಂಡಿರುವ ಎದೆಯೂ ಸಡಿಲಗೊಳ್ಳುತ್ತದೆ. ಪ್ರತಿ ಆರು ಗಂಟೆಗಳಿಗೊಮ್ಮೆ ಒಂದರಿಂದ ಎರಡು ಚಿಕ್ಕ ಚಮಚ ಈರುಳ್ಳಿ ರಸವನ್ನು ಸಮಪ್ರಮಾಣದ ಜೇನಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ.

ಲಿಂಬೆ
ಲಿಂಬೆರಸ ಅತ್ಯುತ್ತಮವಾ ಕಫಹಾರಿಯಾಗಿದ್ದು ವಿಶೇಷವಾಗಿ ಕೆಮ್ಮಿನ ಮೂಲಕ ಎದುರಾಗಿದ್ದ ಗಂಟಲಿನ ಕಿರಿಕಿರಿ ಹಾಗೂ ತುರಿಕೆಯನ್ನು ನಿವಾರಿಸುತ್ತವೆ.

ವೀಳ್ಯದೆಲೆ
ಕೆಲವು ವೀಳ್ಯದೆಲೆಗಳನ್ನು ನುಣ್ಣಗೆ ಅರೆದು ಎದೆಯ ಮೇಲೆ ಹಚ್ಚಿ. ಇದರಿಂದ ನಿಧಾನವಾಗಿ ಕೆಮ್ಮು ಕಡಿಮೆಯಾಗುತ್ತದೆ. ಕೆಮ್ಮು ಎದುರಾದರೆ ರೋಗಿ ಧೂಮಪಾನ, ಮಾಂಸಾಹಾರ, ಸಕ್ಕರೆ, ಟೀ, ಕಾಫಿ ಸಂಸ್ಕರಿತ ಆಹಾರಗಳಿಂದ ದೂರವಿದ್ದಷ್ಟೂ ಒಳ್ಳೆಯದು.



Click it and Unblock the Notifications
