ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳನ್ನು ಸೇವಿಸಿ, ಕೂಡಲೇ ಕಡಿಮೆಯಾಗುತ್ತೆ...

Posted By: Arshad
Subscribe to Boldsky

ಒಂದು ವೇಳೆ ನಿಮಗೆ ತಲೆಯ ಒಂದು ಕಡೆಯಲ್ಲಿ ಅಸಾಧ್ಯವಾದ ತಲೆನೋವಾಗುತ್ತಿದ್ದು ಇದರೊಂದಿಗೆ ವಾಕರಿಕೆ ಅಥವಾ ವಾಂತಿ, ಪ್ರಖರ ಬೆಳಕಿಗೆ ಅತೀವ ಸಂವೇದನೆ ಮೊದಲಾದವು ಅನುಭವವಾಗುತ್ತಿದ್ದರೆ ಇದು ಮೈಗ್ರೇನ್ ತಲೆನೋವಿನ ಸ್ಪಷ್ಟ ಸಂಕೇತವಾಗಿದೆ. ಮೈಗ್ರೇನ್ ತಲೆನೋವಿನ ಪ್ರಾಕಾರಗಳಲ್ಲಿಯೇ ಅತ್ಯುಗ್ರ ರೂಪವಾಗಿದ್ದು ಇದರ ಪ್ರಕೋಪ ಹೆರಿಗೆ ನೋವಿನಷ್ಟೇ ಇರುತ್ತದೆ ಎಂದು ಭಾವಿಸಲಾಗಿದೆ.

ಇದಕ್ಕೆ ರಸದೂತಗಳ ಪ್ರಭಾವ, ಕೆಲವು ಆಹಾರಗಳು ಹಾಗೂ ಮಾನಸಿಕ ಒತ್ತಡ ಪ್ರಮುಖ ಕಾರಣವಾಗಿವೆ. ಕೆಲವು ಸಂದರ್ಭಗಳಲ್ಲಿ ಮೈಗ್ರೇನ್ ಅನುವಂಶಿಕವಾಗಿಯೂ ಬರಬಹುದು. ಕಾರಣವೇನೇ ಇರಲಿ, ತಲೆನೋವು ಬಂದ ವ್ಯಕ್ತಿಗೆ ಮಾತ್ರ ಆಸಮಯದಲ್ಲಿ ಜೀವನವೇ ನರಕ ಎಂದೆನ್ನಿಸುವುದು ಮಾತ್ರ ಸುಳ್ಳಲ್ಲ. ಈ ತಲೆನೋವು ಎದುರಾದಾಗ ಯೋಚಿಸುವ ಶಕ್ತಿ ಹಾಗೂ ಬೇರೆಲ್ಲಾಚಟುವಟಿಕೆಗಳ ಮೇಲೆ ಪ್ರಭಾವ ಬೀರುವ ಕಾರಣ ದಿನ ನಿತ್ಯದ ಕೆಲಸಗಳ ಮೇಲೂ ಅಪಾರವಾದ ಪ್ರಭಾವ ಬೀರುತ್ತದೆ. ಉತ್ತುಂಗದಲ್ಲಿದ್ದಾಗ ಕಣ್ಣಿನ ದೃಷ್ಟಿಯ ಕೇಂದ್ರವೇ ಮಾಯವಾಗಿ ತಾತ್ಕಾಲಿಕ ಕುರುಡು ಸಹಾ ಅವರಿಸಬಹುದು!

ಮಾತ್ರೆಯ ಹಂಗಿಲ್ಲದೆ ಮೈಗ್ರೇನ್ ತಲೆನೋವು ನಿಯಂತ್ರಣಕ್ಕೆ!

ಮೈಗ್ರೇನ್ ತಲೆನೋವಿಗೆ ಕೆಲವಾರು ಔಷಧಿಗಳಿವೆಯಾದರೂ ಇದು ಅಡ್ಡಪರಿಣಾಮಗಳಿಂದ ಹೊರತಾಗಿಲ್ಲ. ಆದ್ದರಿಂದ ನೈಸರ್ಗಿಕ ವಿಧಾನಗಳನ್ನು ಬಳಸುವುದೇ ಸೂಕ್ತ. ಮೈಗ್ರೇನ್ ರೋಗಿಗಳಿಗೆ ಕೇವಲ ಔಷಧಿಯನ್ನು ಸೇವಿಸಿದರೆ ಮಾತ್ರ ಸಾಕಾಗುವುದಿಲ್ಲ, ಬದಲಿಗೆ ಇದಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳನ್ನು ಅಧ್ಯಯನ ಮಾಡಿ ಇದಕ್ಕೆ ವ್ಯತಿರಿಕ್ತವಾದ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಜೀವನಕ್ರಮವನ್ನೂ ಕೊಂಚ ಬದಲಿಸಬೇಕಾಗಿ ಬರಬಹುದು. ಸೂಕ್ತ ಆಹಾರ ಸೇವನೆ, ಸಾಕಷ್ಟು ವ್ಯಾಯಾಮ, ನಿದ್ದೆ, ಒತ್ತಡ ರಹಿತವಾಗಿರುವುದು, ಪ್ರಖರ ಬೆಳಕು, ದೊಡ್ಡ ದನಿ ಮೊದಲಾದವುಗಳಿಂದ ದೂರವಿರುವುದು ಮೊದಲಾದ ಕ್ರಮಗಳಿಂದ ಮೈಗ್ರೇನ್ಎ ದುರಾಗದಂತೆ ನೋಡಿಕೊಳ್ಳುವುದು ಜಾಣತನದ ಕ್ರಮ. ಇಂದಿನ ಲೇಖನದಲ್ಲಿ ತಲೆನೋವನ್ನು ಕಡಿಮೆಗೊಳಿಸುವ ಹಾಗೂ ತಲೆನೋವು ಆವರಿಸದಂತೆ ತಡೆಯುವ ಕೆಲವು ಸಮರ್ಥ ಆಹಾರಗಳ ಬಗ್ಗೆ ವಿವರಿಸಲಾಗಿದೆ..... 

ಬಾದಾಮಿ

ಬಾದಾಮಿ

ಒಣಫಲಗಳಲ್ಲಿಯೇ ಅತ್ಯುತ್ತಮ ಎಂದು ಹೆಸರಾಗಿರುವ ಬಾದಾಮಿಯಲ್ಲಿ ಅರೋಗ್ಯಕರ ಕೊಬ್ಬು, ಮೆಗ್ನೇಶಿಯಂ ಉತ್ತಮ ಪ್ರಮಾಣದಲ್ಲಿವೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದಲಿರುವ ಟ್ರಿಫ್ಟೋಫ್ಯಾನ್ ಎಂಬ ಅಮೈನೋ ಆಮ್ಲ ಹೆಚ್ಚಿನ ಪ್ರಮಾಣದ ಸೆರೋಟೋನಿನ್ ಎಂಬ ಮೆದುಳಿಗೆ ಮುದ ನೀಡುವ ರಸದೂತವನ್ನು ಉತ್ಪಾದಿಸಲು ನೆರವಾಗುತ್ತದೆ. ತಲೆನೋವಿದ್ದಾಗ ಒಂದು ಹಿಡಿಯಷ್ಟು ಬಾದಾಮಿಗಳನ್ನು ಸೇವಿಸುವ ಮೂಲಕ ಸ್ನಾಯು ಹಾಗೂ ರಕ್ತನಾಳಗಳು ಸಡಿಲಗೊಂಡು ಹೆಚ್ಚಿನ ರಕ್ತಸಂಚಾರ ಮೆದುಳಿಗೆ ಲಭ್ಯವಾಗುತ್ತದೆ. ತನ್ಮೂಲಕ ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ಇವೆ. ಇವೆರಡೂ ಖನಿಜಗಳು ಮೈಗ್ರೇನ್ ತಲೆನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಅಲ್ಲದೇ ಬಾಳೆಹಣ್ಣಿನ ಸೇವನೆಯಿಂದ ರಕ್ತನಾಳಗಳು ಸಡಿಲಗೊಂಡು ಹೆಚ್ಚಿನ ರಕ್ತಸಂಚಾರ ಪಡೆಯಲು ನೆರವಾಗುತ್ತದೆ. ಮೈಗ್ರೇನ್ ತಲೆನೋವಿನಿಂದ ಬಳಲುವವರು ನಿತ್ಯವೂ ಕನಿಷ್ಟ ಒಂದಾದರೂ ಬಾಳೆಹಣ್ಣನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು.

ಮೊಸರು

ಮೊಸರು

ಕೆಲವೊಮ್ಮೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಇದು ಸಹಾ ಮೈಗ್ರೇನ್ ತಲೆನೋವನ್ನು ಪ್ರಾರಂಭಿಸಬಹುದು. ನಿಮ್ಮ ನಿತ್ಯದ ಆಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳುವ ಮೂಲಕ ಈ ಕೊರತೆಯನ್ನು ಸುಲಭವಾಗಿ ನಿವಾರಿಸಬಹುದು. ಇದರಿಂದ ದೇಹಕ್ಕೆ ಅಗತ್ಯ ಪ್ರಮಾಣದ ಕ್ಯಾಲ್ಸಿಯಂ ದೊರಕುತ್ತದೆ ಹಾಗೂ ಈ ಮೂಲಕ ಎದುರಾಗಬಹುದಾಗಿದ್ದ ಮೈಗ್ರೇನ್ ತಲೆನೋವೂ ಇಲ್ಲವಾಗುತ್ತದೆ. ಸಾಧ್ಯವಾದರೆ ಒಂದು ಚಿಕ್ಕ ಬೋಗುಣಿಯಷ್ಟು ಗ್ರೀಕ್ ಯೋಗರ್ಟ್ ಎಂಬ ಸಿದ್ಧರೂಪದ ಮೊಸರನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಸಾಕಷ್ಟು ನೀರು ಕುಡಿಯುವುದು

ಸಾಕಷ್ಟು ನೀರು ಕುಡಿಯುವುದು

ಒಂದು ವೇಳೆ ಅಗತ್ಯ ಪ್ರಮಾಣದ ನೀರನ್ನು ಸೇವಿಸದೇ ದೇಹ ನಿರ್ಜಲೀಕರಣಕ್ಕೆ ಒಳಗಾದರೆ ಇದು ಸಹಾ ಮೈಗ್ರೇನ್ ತಲೆನೋವಿನ ಪ್ರಮುಖ ಕಾರಣವಾಗಬಲ್ಲುದು. ದೇಹದಲ್ಲಿ ನೀರು ಕಡಿಮೆಯಾದರೆ ಇದು ಹಲವಾರು ಬಗೆಯಲ್ಲಿ ಆರೋಗ್ಯವನ್ನು ಬಾಧಿಸುತ್ತದೆ. ನೀರಿಲ್ಲದೇ ಹೋದಾಗ ದೇಹದ ಹಲವು ಪ್ರಮುಖ ದ್ರವಗಳು ಗಾಢವಾಗತೊಡಗುತ್ತವೆ ಹಾಗೂ ಇವುಗಳನ್ನು ನಿರ್ವಹಿಸಲು ದೇಹ ಮಾಡಿಕೊಳ್ಳುವ ಬದಲಾವಣೆಯೂ ಮೈಗ್ರೇನ್ ತಲೆನೋವನ್ನು ತರಬಲ್ಲುದು. ಆದ್ದರಿಂದ ದೇಹದಲ್ಲಿ ಎಂದಿಗೂ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಅಗತ್ಯ.

ಕ್ವಿನೋವಾ

ಕ್ವಿನೋವಾ

ನೋಡಲಿಕ್ಕೆ ಪುಟ್ಟ ಜೋಳದ ಕಾಳಿನಂತೆ ಕಾಣುವ ಕ್ವಿನೋವಾದಲ್ಲಿ ಅತಿ ಕಡಿಮೆ ಕಾರ್ಬೋಹೈಡ್ರೇಟುಗಳಿದ್ದು ಪ್ರೋಟೀನ್ ಮತ್ತು ಮೆಗ್ನೀಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ತಲೆನೋವನ್ನು ಕಡಿಮೆ ಮಾಡಲು ಕ್ವಿನೋವಾ ಅತ್ಯುತ್ತಮವಾದ ಆಹಾರವಾಗಿದೆ. ನಿಯಮಿತವಾಗಿ ಕ್ವಿನೋವಾದಿಂದ ತಯಾರಿಸಿದ ಆಹಾರವನ್ನು ಸೇವಿಸುವ ಮೂಲಕ ಉರಿಯೂತ ಕಡಿಮೆಯಾಗುತ್ತದೆ ಹಾಗೂ ಮೈಗ್ರೇನ್ ತಲೆನೋವನ್ನು ಎದುರಿಸಲು ಸಾಧ್ಯವಾಗುತ್ತದೆ.

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ರಾಗಿ, ನವಣೆ, ಸಾವೆ, ಸಜ್ಜೆ, ಜೋಳ ಮೊದಲಾದ ಏಕದಳ ಧಾನ್ಯಗಳಲ್ಲಿ ಅವಶ್ಯಕ ಪೋಷಕಾಂಶಗಳಿದ್ದು ಆಂಟಿ ಆಕ್ಸಿಡೆಂಟುಗಳೊಂದಿಗೆ ಸಮೃದ್ದವಾಗಿದೆ. ಇದರೊಂದಿಗೆ ಉತ್ತಮ ಪ್ರಮಾಣದ ಮೆಗ್ನೀಶಿಯಂ ಸಹಾ ಇದೆ. ಏಕದಳ ಧಾನ್ಯಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಮೈಗ್ರೇನ್ ತಲೆನೋವನ್ನು ಕಡಿಮೆಆಡಲು ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸಲೂ ನೆರವಾಗುತ್ತದೆ.

ಕೆಫೀನ್

ಕೆಫೀನ್

ತಲೆನೋವು ಪ್ರಾರಂಭವಾಗುತ್ತಿದೆ ಎಂದಾಕ್ಷಣ ಒಂದು ಕಪ್ ಬಿಸಿ ಬಿಸಿ ಕಾಫಿ ಕುಡಿದರೆ ತಲೆನೋವು ಉಲ್ಬಣಗೊಳ್ಳದಂತೆ ನೋಡಿಕೊಳ್ಳಬಹುದು. ರಕ್ತಕ್ಕೆ ಸೇರುವ ಕೆಫೇನ್ ರಕ್ತನಾಳಗಳನ್ನು ಸಂಕುಚಿಸುತ್ತದೆ ಹಾಗೂ ತಲೆನೋವಿಗೆ ಕಾರಣವಾಗುವ ಹಿಸ್ಟಮೈನ್ ಎಂಬ ರಾಸಾಯನಿಕ ಉತ್ಪನ್ನಗೊಳ್ಳುವ ಪ್ರಮಾಣವನ್ನು ಕಡಿಮೆಗೊಳಿಸಿ ಈ ಮೂಲಕ ಎದುರಾಗುವ ತಲೆನೋವನ್ನು ಇಲ್ಲವಾಗಿಸುತ್ತದೆ. ಅಲ್ಲದೇ ಮೈಗ್ರೇನ್ ಮೂಲಕ ಎದುರಾಗುವ ಉರಿಯೂತವನ್ನೂ ಇಲ್ಲವಾಗಿಸಬಹುದು.

ಪಾಲಕ್

ಪಾಲಕ್

ಪಾಲಕ್ ಹಾಗೂ ಬಸಲೆ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೀಶಿಯಂ, ವಿಟಮಿನ್ ಬಿ೨ ಇದ್ದು ಮೈಗ್ರೇನ್ ತಲೆನೋವು ಇರುವ ವ್ಯಕ್ತಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಈ ಎಲೆಗಳನ್ನು ಹಸಿಯಾಗಿ ಅಥವಾ ಬೇಯಿಸಿ ನಿಯಮಿತವಾಗಿ ಸೇವಿಸಬಹುದು. ಸಾಧ್ಯವಾದಷ್ಟೂ ಸಾಲಾಡ್ ನೊಂದಿಗೆ ಹಸಿಯಾಗಿಯೇ ಸೇವಿಸುವ ಮೂಲಕ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವ ಕಾರಣ ಮೈಗ್ರೇನ್ ಪ್ರಭಾವ ಹೆಚ್ಚಿದ್ದರೆ ಹೆಚ್ಚು ಹೆಚ್ಚಾಗಿ ಹಸಿಯಾಗಿಯೇ ತಿನ್ನಬೇಕು.

ಅಗಸೆ ಬೀಜಗಳು: (Flax Seeds)

ಅಗಸೆ ಬೀಜಗಳು: (Flax Seeds)

ಮೈಗ್ರೇನ್ ರೋಗಿಗಳಿಗೆ ನಿತ್ಯವೂ ಸೇವಿಸಲು ಅಗತ್ಯವಿರುವ ಇನ್ನೊಂದು ಆಹಾರವೆಂದರೆ ಅಗಸೆ ಬೀಜಗಳು. ಇದು ಮೈಗ್ರೇನ್ ನಿಂದ ಎದುರಾಗಿದ್ದ ಉರಿಯೂತವನ್ನು ನಿವಾರಿಸಲು ನೆರವಾಗುತ್ತದೆ. ಇದರಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು ಉರಿಯೂತ ಕಡಿಮೆ ಮಾಡಲು ಹಾಗೂ ಮೈಗ್ರೇನ್ ತಲೆನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ.

ಎಣ್ಣೆಯುಕ್ತ ಮೀನುಗಳು

ಎಣ್ಣೆಯುಕ್ತ ಮೀನುಗಳು

ಸಾಲ್ಮನ್, ಟ್ಯೂನಾ ಮೊದಲಾದ ಮೀನುಗಳಲ್ಲಿ ಎಣ್ಣೆಯ ಅಂಶ ಹೆಚ್ಚಾಗಿರಲು ಇದರಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲಗಳೇ ಕಾರಣ. ಈ ಅಹಾರಗಳು ಉರಿಯೂತವನ್ನು ಕಡಿಮೆಗೊಳಿಸಲು ಹಾಗೂ ಮೈಗ್ರೇನ್ ತಲೆನೋವನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ. ನಿಮ್ಮ ಆಹಾರಗಳಲ್ಲಿ ಈ ಮೀನುಗಳನ್ನು ನಿಯಮಿತವಾಗಿ ಅಳವಡಿಸಿಕೊಳ್ಳುವ ಮೂಲಕ ಉರಿಯೂತ ಹಾಗೂ ತಲೆನೋವನ್ನು ಕಡಿಮೆ ಮಾಡಬಹುದು.

ಹಸಿಶುಂಠಿ

ಹಸಿಶುಂಠಿ

ಶುಂಠಿಯಲ್ಲಿರುವ ಉರಿಯುತ ನಿವಾರಕ ಗುಣ ವಾಕರಿಕೆ ಹಾಗೂ ತಲೆನೋವನ್ನು ಕಡಿಮೆ ಮಾಡಲೂ ನೆರವಾಗುತ್ತದೆ. ತಲೆನೋವು ಪ್ರಾರಂಭವಾಗಿ ವಾಕರಿಕೆಯ ಅನುಭವವಾಗುತ್ತಿದ್ದರೆ ತಕ್ಷಣ ಹಸಿಶುಂಠಿ ಕುದಿಸಿ ತಯಾರಿಸಿದ ಟೀ ಯನ್ನು ಬಿಸಿಬಿಸಿಯಾಗಿ ಕುಡಿಯುವ ಮೂಲಕ ತಲೆನೋವನ್ನು ಶಮನಗೊಳಿಸಬಹುದು.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ಟುಗಳಲ್ಲಿ ಮೆಗ್ನೀಶಿಯಂ ಹಾಗೂ ಬೀಟಾ ಕ್ಯಾರೋಟೀನ್ ಎರಡೂ ಉತ್ತಮ ಪ್ರಮಾಣದಲ್ಲಿವೆ. ಇವೆರಡೂ ಅವಶ್ಯಕ ಪೋಷಕಾಂಶಗಳು ಮೈಗ್ರೇನ್ ತಲೆನೋವನ್ನು ಕಡಿಮೆಗೊಳಿಸಲು ಅತ್ಯುತ್ತಮವಾಗಿರುವ ಕಾರಣ ಮೈಗ್ರೇನ್ ಶಮನಕ್ಕೆ ಕ್ಯಾರೆಟ್ ಸೂಕ್ತ ಆಹಾರವಾಗಿದೆ. ನಿತ್ಯವೂ ಒಂದು ಚಿಕ್ಕ ಬಟ್ಟಲಿನಷ್ಟು ಕ್ಯಾರೆಟ್ ಗಳನ್ನು ಹಸಿಯಾಗಿ ಅಥವಾ ಒಂದು ಲೋಟ ತಾಜಾ ಕ್ಯಾರೆಟ್ಟುಗಳ ರಸವನ್ನು ಕುಡಿಯುವ ಮೂಲಕ ಮೈಗ್ರೇನ್ ಹಾಗೂ ಇದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಸಮರ್ಥವಾಗಿ ಇಲ್ಲವಾಗಿಸಬಹುದು.

English summary

Incredible Foods That Help Fight Migraine

Migraines can be treated using certain medications. But popping in a painkiller every time you have a migraine attack can cause several side effects. So, it is always better to go for natural methods to get rid of the condition. Bringing about a change in the lifestyle, food habits and taking up exercises regularly are a few of the bestways to prevent migraine. Meanwhile, there are a few foods that help to fight and prevent migraine effectively. We have listed a few of these foods here, take a look.