ಜೀವಂತ ಮೀನು ನುಂಗಿಸಿ-'ಅಸ್ತಮಾ' ರೋಗ ನಿವಾರಿಸುವ ಚಿಕಿತ್ಸೆ!

By: manu
Subscribe to Boldsky

ಶ್ವಾಸಕೋಶದ ವಾಯುನಾಳವನ್ನು ಕಾಡುವ ದೀರ್ಘ ಕಾಯಿಲೆ ಅಸ್ತಮಾ. ಇದು ಉಸಿರಾಟ ಕ್ರಿಯೆಯಲ್ಲಿ ಅಡೆತಡೆಯನ್ನುಂಟು ಮಾಡುವ ರೋಗವಾದ್ದರಿಂದ ಜನರನ್ನು ಹೆಚ್ಚು ಆಯಾಸಗೊಳಿಸುತ್ತದೆ. ಶ್ವಾಸನಾಳಗಳು ಸದಾ ಊತದಿಂದ ಕೂಡಿರುತ್ತದೆ. ಶ್ವಾಸನಾಳದ ಮೂಲಕ ಉಸಿರಾಟ ಕ್ರಿಯೆ ನಡೆಯುವಾಗ ತೊಂದರೆಗಳುಂಟಾಗಿ ಕೆಮ್ಮು, ಉಬ್ಬಸ, ಎದೆಬಿಗಿತ ಉಂಟಾಗುವುದು.

ಇದಕ್ಕೆ ಇಂಗ್ಲಿಷ್ ಔಷಧಿ ಇದೆಯಾದರೂ, ಸಂಪೂರ್ಣವಾಗಿ ಗುಣಹೊಂದಲು ಸಾಧ್ಯವಿಲ್ಲ. ಆಗಾಗ ತೊಂದರೆ ಮರುಕಳಿಸುತ್ತಲೇ ಇರುತ್ತದೆ. ಈ ಕಾರಣಕ್ಕೆ ಜನರು ಆಯುರ್ವೇದ, ಹೋಮಿಯೋಪತಿ, ಮನೆ ಮದ್ದು, ಅಲೋಪತಿ, ಯೋಗ, ನಾಟಿ ಔಷಧಿ ಎನ್ನುತ್ತಾ ವಿವಿಧ ಬಗೆಯ ಪರ್ಯಾಯೋಪಾಯಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಇತ್ತೀಚೆಗೆ ಆಶ್ಚರ್ಯ ಮೂಡಿಸುವಂತಹ ಚಿಕಿತ್ಸೆಯೊಂದನ್ನು ಜನರು ಕಂಡುಕೊಂಡಿದ್ದಾರೆ.

ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ

ಈ ಚಿಕಿತ್ಸೆಯನ್ನು ಪಡೆದುಕೊಂಡರೆ ಇನ್‍ಹೇಲರ್‌ನಂತಹ ಸಾಧನಗಳನ್ನು ಬಳಸುವ ಅಗತ್ಯವಿಲ್ಲ ಎಂದು ನಿಟ್ಟುಸಿರು ಬಿಡುತ್ತಾರೆ. ಅರೇ! ಹೌದಾ? ನಮಗೆ ತಿಳಿದಿದ್ದರೆ ನಾವೂ ಹೋಗುತ್ತಿದ್ದೆವು ಎನ್ನುವ ಬಯಕೆ ಉಂಟಾಗುತ್ತಿದೆಯಾ? ಹಾಗಾದರೆ ಮುಂದೆ ಓದಿ ಉಪಯುಕ್ತ ಮಾಹಿತಿ ನಿಮಗೆ ಸಿಗುವುದು...

ಪುರಾತನ ಕಾಲದ ಚಿಕಿತ್ಸೆ

ಪುರಾತನ ಕಾಲದ ಚಿಕಿತ್ಸೆ

ಅಸ್ತಮಾ ಕಾಯಿಲೆಗೆ ನೀಡುವ ಈ ಚಿಕಿತ್ಸೆ 156 ವರ್ಷಗಳಷ್ಟು ಪುರಾತನದ್ದು. 1845ರಲ್ಲಿ ಸಂತರೊಬ್ಬರು ಆವಿಷ್ಕರಿಸಿದ ಔಷಧವಿದು. ಗಿಡಮೂಲಿಕೆಗಳ ರಹಸ್ಯ ಸೂತ್ರಗಳನ್ನು ಇದು ಒಳಗೊಂಡಿದೆ. ಇದನ್ನು ಒಮ್ಮೆ ಪಡೆದರೆ ವರ್ಷಗಳ ಕಾಲ ಉಸಿರಾಟದ ತೊಂದರೆಯಾಗದು ಎಂದು ಹೇಳಲಾಗುತ್ತದೆ.

ಔಷಧ ನೀಡುವ ಸ್ಥಳ

ಔಷಧ ನೀಡುವ ಸ್ಥಳ

ಹೈದರಾಬಾದ್‍ನ ದಕ್ಷಿಣ ನಗರದಲ್ಲಿ ಬಥಿನಿ ಗೌಡ ಎಂಬ ಕುಟುಂಬವು ಈ ಚಿಕಿತ್ಸೆಯನ್ನು ನೀಡುತ್ತಿದ್ದು, ಕಳೆದ ಮೂರು ವರ್ಷಗಳಿಂದ ಹೆಚ್ಚು ಜನ ಮನ್ನಣೆ ಪಡೆಯುತ್ತಾ ಬಂದಿದೆ. ಈ ಚಿಕಿತ್ಸೆಯ ಮಾಹಿತಿಗಳು ಕೇವಲ ಈ ಕುಟುಂಬದವರಿಗೆ ಮಾತ್ರ ತಿಳಿದಿದೆ, ಅಷ್ಟೇ ಅಲ್ಲದೆ ಅವರ ಒಂದು ತಲೆ ಮಾರಿನಿಂದ ಇನ್ನೊಂದು ತಲೆ ಮಾರಿಗೆ ಮಾತ್ರ ಸಿಗುವುದು ಎಂದು ಹೇಳುತ್ತಾರೆ. ಇದರ ತಯಾರಿ ಹೇಗೆ ಎನ್ನುವ ವಿಧಾನವನ್ನು ಈ ಕುಟುಂಬ ಯಾರಿಗೂ ತಿಳಿಸುವುದಿಲ್ಲ.

ಔಷಧಿ ಏನು?

ಔಷಧಿ ಏನು?

ವಿಶೇಷ ಜಾತಿಯ ಗಿಡಮೂಲಿಕೆಗಳಿಂದ ಒಂದು ಹಳದಿ ಬಣ್ಣದ ಪೇಸ್ಟ್ ಅನ್ನು ತಯಾರಿಸಿಕೊಳ್ಳುತ್ತಾರೆ. ನಂತರ ಅದೊಂದು ಜಾತಿಯ ಮೀನಿಗೆ ಆ ಪೇಸ್ಟ್ ಅನ್ನು ಬಳಿದು, ರೋಗಿಯ ಬಾಯಿಗೆ ಹಾಕಿ, ನುಂಗಲು ಹೇಳುತ್ತಾರೆ. ಇಷ್ಟು ಮಾಡಿದರೆ ಆಯಿತು. ರೋಗ ವರ್ಷಗಳ ಕಾಲ ಮರುಕಳಿಸದು ಎನ್ನುತ್ತಾರೆ.

ಔಷಧೋಪಚಾರದ ಬಗೆ

ಔಷಧೋಪಚಾರದ ಬಗೆ

ಈ ಔಷಧಿಯನ್ನು ಪಡೆದ ನಂತರ ರೋಗಿ 45 ದಿನಗಳ ಕಾಲ ಪಥ್ಯದಲ್ಲಿ ಇರಬೇಕಾಗುವುದು. ಔಷಧಿ ನೀಡಿದವರೇ ಯಾವ ರೀತಿಯ ಊಟ-ತಿಂಡಿ ಮಾಡಬೇಕು ಎನ್ನುವ ಮಾಹಿತಿಯನ್ನು ನೀಡಿ, ಕಳುಹಿಸಿಕೊಡುತ್ತಾರೆ.

ಭಾರತದ ಮೂಲೆ ಮೂಲೆಗಳಿಂದಲೂ ಜನರು ಬರುತ್ತಾರೆ

ಭಾರತದ ಮೂಲೆ ಮೂಲೆಗಳಿಂದಲೂ ಜನರು ಬರುತ್ತಾರೆ

ಈ ಚಿಕಿತ್ಸೆಯನ್ನು ಪಡೆದುಕೊಳ್ಳಲು ಭಾರತದ ಮೂಲೆ ಮೂಲೆಗಳಿಂದಲೂ ಜನರು ಬರುತ್ತಾರೆ. ಔಷಧ ಪಡೆಯಲು ನಿತ್ಯವೂ ಸಾಲುಗಟ್ಟಲೆ ಜನರು ನಿಂತಿರುತ್ತಾರೆ. ಇದರಿಂದ ಗುಣವಾಗುವ ನಂಬಿಕೆ ಜನರಿಗಿರುವುದಷ್ಟೇ ಅಲ್ಲ. ಹೆಚ್ಚು ಪರಿಣಾಮಕಾರಿ ಔಷಧಿಯೂ ಹೌದು ಎನ್ನಲಾಗುವುದು.

Image Courtesy

ಔಷಧಿ ನೀಡುವ ಸಮಯ

ಔಷಧಿ ನೀಡುವ ಸಮಯ

ಇದನ್ನು ಎಲ್ಲಾ ಸಮಯದಲ್ಲೂ ನೀಡಲಾಗುವುದಿಲ್ಲ. ಜೂನ್ ತಿಂಗಳಲ್ಲಿ ಮಳೆ ಆರಂಭವಾದ ನಂತರ, ಸೂಕ್ತ ದಿನಾಂಕವನ್ನು ನಿಗದಿ ಪಡಿಸಿರುತ್ತಾರೆ. ಆ ಎರಡು ದಿನಗಳು ಮಾತ್ರ ಔಷಧಿ ನೀಡಲಾಗುವುದು. ಆ ಎರಡು ದಿನದಲ್ಲಿ ನೀಡುವ ಔಷಧವನ್ನು ಪಡೆಯಲು ಭಾರತದಾದ್ಯಂತ ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ.

ಚಿಕಿತ್ಸೆಗೆ ವಿರೋಧವಿದೆ!

ಚಿಕಿತ್ಸೆಗೆ ವಿರೋಧವಿದೆ!

ಔಷಧವನ್ನು ನೀಡುವ ರೀತಿ ಹಾಗೂ ಔಷಧದ ಗುಣಮಟ್ಟದ ಬಗ್ಗೆ ಮಾನವ ಹಕ್ಕು ಮತ್ತು ವೈದ್ಯರು ಇದೊಂದು ಅವೈಜ್ಞಾನಿಕ ಪದ್ಧತಿ, ಇದರಿಂದ ವ್ಯಕ್ತಿ ಇನ್ನಷ್ಟು ತೊಂದರೆಗೆ ಒಳಗಾಗುತ್ತಾನೆ ಎಂದು ವಿರೋಧಿಸಿದ್ದಾರೆ.

ಸರ್ಕಾರದ ಪ್ರೋತ್ಸಾಹ

ಸರ್ಕಾರದ ಪ್ರೋತ್ಸಾಹ

ಇದಕ್ಕೆ ಎಷ್ಟೇ ವಿರೋಧವಿದ್ದರೂ ಸರ್ಕಾರ ಮಾತ್ರ ಪ್ರೋತ್ಸಾಹ ನೀಡುತ್ತಿದೆ. ಔಷಧಿಗೆ ಬೇಕಾದ ಮೀನುಗಳ ಪೂರೈಕೆ ಹಾಗೂ ಔಷಧ ನೀಡುವ ಸಮಯದಲ್ಲಿ ಉಂಟಾಗುವ ಜನ ಸಂದಣಿಯನ್ನು ನಿಯಂತ್ರಿಸಲು ಪೋಲೀಸರ ಕಾವಲು ನೀಡುವುದು.

English summary

Hyderabads fish prasadam the miracle cure for Asthma

The Bathini Goud family makes the 'fish prasadam' by stuffing the fish with a yellow herbal paste, the secret recipe of which was passed down the family through a Hindu saint.
Subscribe Newsletter