ಮನೆಯಲ್ಲಿದ್ದರೆ ಕೇಸರಿ... ಹೆಚ್ಚುವುದು ಕಣ್ಣಿನ ಆರೋಗ್ಯ ಸಿರಿ...

By: Divya
Subscribe to Boldsky

ಕೇಸರಿ ಎಂದರೆ ಅದೊಂದು ದುಬಾರಿ ಬೆಲೆಯ ಆಹಾರ ಉತ್ಪನ್ನ. ಆಹಾರ ಪದಾರ್ಥಗಳ ಬಣ್ಣ ನೀಡಲು ಹಾಗೂ ಪರಿಮಳ ಹೆಚ್ಚಿಸುವ ಉದ್ದೇಶಕ್ಕೆ ಬಳಸಲಾಗುತ್ತದೆ ಎನ್ನುವ ವಿಚಾರ ಸಾಮಾನ್ಯವಾದದ್ದು. ಇದರ ಬಳಕೆ ಹಾಗೂ ಇದರಲ್ಲಿರುವ ಆರೋಗ್ಯಕರ ಗುಣಗಳು ಹೆಚ್ಚಿನವರಿಗೆ ತಿಳಿದಿಲ್ಲ. ಕೇಸರಿ/ಕೇಸರ್‍ದಲ್ಲಿ ಆಂಟಿ-ಆಕ್ಸಿಡೆಂಟ್ಸ್ ಮತ್ತು ಕ್ಯಾರೊಟಿನಾಯ್ಡ್ಸ್ ಸಮೃದ್ಧವಾಗಿವೆ.

ಆರೋಗ್ಯಕರ ಅಂಶಗಳನ್ನು ಒಳಗೊಂಡಿರುವ ಕೇಸರಿಯಲ್ಲಿ ಕ್ರೋಸೆಟಿನ್, ಪಿಕ್ರೊಕ್ರೋಸಿನ್, ಕ್ಯಾರೊಟಿನೈಡ್ ಮತ್ತು ಪ್ಲೇವೊನೈಡ್‍ಗಳಿರುವುದನ್ನು ಕಾಣಬಹುದು. ಇವು ಕಣ್ಣಿನ ರೆಟಿನಗಳನ್ನು ರಕ್ಷಿಸುವಲ್ಲಿ ಅಥವಾ ಆರೋಗ್ಯವಾಗಿರುವಂತೆ ಮಾಡುತ್ತದೆ. ಸಂವೇದನಾ ಕೋಶವನ್ನು ಸಮೃದ್ಧಗೊಳಿಸಿ ರೆಟಿನಾದ ಆರೋಗ್ಯವನ್ನು ಹೆಚ್ಚಿಸುತ್ತದೆ. ಕುರುಡತ್ವವನ್ನು ನಿವಾರಿಸಬಲ್ಲ ಶಕ್ತಿ ಕೇಸರಿಗೆ ಇದೆ.  ಬಹುಪಯೋಗಿ ಕೇಸರಿ, ಗರ್ಭಿಣಿಯರ ಪಾಲಿನ ಸಂಜೀವಿನಿ

ನಿತ್ಯದ ಆಹಾರದಲ್ಲಿ ಇದನ್ನು ಒಂದು ಭಾಗವಾಗಿ ಸೇವಿಸುತ್ತಾ ಬಂದರೆ ದೃಷ್ಟಿ ಸಮಸ್ಯೆಗಳು ನಿವಾರಣೆಯಾಗುವವು. ಕೇಸರಿಯನ್ನು ಯಾವೆಲ್ಲಾ ವಿಧಾನದಲ್ಲಿ ಸೇವಿಸಬಹುದು? ಇದರಿಂದ ಉಂಟಾಗುವ ಲಾಭಗಳು ಯಾವವು ಎಂಬುದರ ವಿವರ ಇಲ್ಲಿದೆ.... 

ಕೇಸರಿ ಮಾತ್ರೆ

ಕೇಸರಿ ಮಾತ್ರೆ

ಅನೇಕ ದೃಷ್ಟಿ ಸಮಸ್ಯೆಗಳ ನಿವಾರಣೆಗೆ ನಿತ್ಯವೂ 20 ಮಿ.ಗ್ರಾಂ. ಕೇಸರಿ ಮಾತ್ರೆಯನ್ನು ಸೇವಿಸಬೇಕು. ಇದು ದೃಷ್ಟಿಗೆ ಪೂರಕವಾದ ರೆಟಿನಲ್ ಕೋಶಗಳನ್ನು ರಕ್ಷಿಸುತ್ತದೆ.

ಕೇಸರಿ ನೀರು

ಕೇಸರಿ ನೀರು

ಒಂದು ಕಪ್ ಕುದಿಯುವ ನೀರಿಗೆ 8-9 ತಾಜಾ ಕೇಸರಿ ಎಳೆಯನ್ನು ಹಾಕಬೇಕು. ನಂತರ 10 ನಿಮಿಷ ಮುಚ್ಚಿಡಬೇಕು. ಹೀಗೆ ತಯಾರಾದ ಕೇಸರಿ ನೀರನ್ನು ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ನಿತ್ಯವೂ ಸೇವಿಸಬೇಕು. ಇದರಿಂದ ದೃಷ್ಟಿ ದೋಷಗಳು ನಿವಾರಣೆಯಾಗುವವು.

ಕೇಸರಿಯ ರಹಸ್ಯ: ಕಣ ಕಣದಲ್ಲೂ ಸೌಂದರ್ಯದ ಶಕ್ತಿ!

ಕೇಸರಿ ಚಹಾ

ಕೇಸರಿ ಚಹಾ

ಕುದಿಸಿದ ಒಂದು ಕಪ್ ಹಾಲಿಗೆ ಸ್ವಲ್ಪ ಸಕ್ಕರೆ ಮತ್ತು ಕೇಸರಿ ಎಳೆಯನ್ನು ಸೇರಿಸಿ ಕಡಿಮೆ ಉರಿಯಲ್ಲಿ ಕುದಿಸಬೇಕು. 5 ನಿಮಿಷದ ಬಳಿಕ ಕೆಳಗಿಳಿಸಿ. ಈ ಕೇಸರಿ ಚಹಾವನ್ನು ನಿತ್ಯವೂ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಹೊಂದಿ, ಸ್ಪಷ್ಟ ದೃಷ್ಟಿಯನ್ನು ಪಡೆಯಬಹುದು.

ಸಲಾಡ್ ಜೊತೆಗೆ ಕೇಸರಿ

ಸಲಾಡ್ ಜೊತೆಗೆ ಕೇಸರಿ

ನೀವು ಸೇವಿಸುವ ಎಲ್ಲಾ ಬಗೆಯ ಸಲಾಡ್‍ಗಳಿಗೆ 10 ಎಳೆ ಅಥವಾ 20 ಮಿ.ಗ್ರಾಂ. ಕೇಸರಿಯನ್ನು ಸೇರಿಸಿ ಸೇವಿಸಿ. ಇದರಿಂದ ಮ್ಯಾಕ್ಯುಲರ್ ಡಿಜೆನೇಷನ್ ತಡೆಗಟ್ಟಬಹುದು.

ಕೇಸರಿ ಅನ್ನ

ಕೇಸರಿ ಅನ್ನ

ಸಾವಯವ ಕೇಸರಿ ಪುಡಿಯನ್ನು ಅನ್ನಮಾಡುವ ನೀರಿಗೆ ಸೇರಿಸಬೇಕು. ಇದರಿಂದ ಕೇಸರಿ ಸಂಪೂರ್ಣ ಅನ್ನಕ್ಕೂ ಸೇರಿಕೊಳ್ಳುವುದು. ಈ ಅನ್ನವನ್ನು ನಿತ್ಯ ಎರಡುಬಾರಿ ಸೇವಿಸಿದರೆ ರೆಟಿನಾ ಸಮಸ್ಯೆ ದೂರವಾಗುವುದು.

ಕೇಸರಿ ಮತ್ತು ಜೇನುತುಪ್ಪ

ಕೇಸರಿ ಮತ್ತು ಜೇನುತುಪ್ಪ

20 ಮಿ.ಗ್ರಾಂ. ಜೈವಿಕ ಕೇಸರಿ ಅಥವಾ ಕೇಸರಿ ಪುಡಿಯನ್ನು 2 ಚಮಚ ಜೇನುತುಪ್ಪಕ್ಕೆ ಸೇರಿಸಬೇಕು. ಈ ಮಿಶ್ರಣವನ್ನು ಪ್ರತಿದಿನ ಒಮ್ಮೆ ಸೇವಿಸಿದರೆ ರೆಟಿನಾದ ಪ್ರಕ್ರಿಯೆ ಮತ್ತು ದೃಷ್ಟಿ ಬೆಳಕನ್ನು ಹೆಚ್ಚಿಸಬಹುದು.

ಕೇಸರಿ ಪಿಸ್ತಾ ಮಿಲ್ಕ್ ಶೇಕ್- ಸೂಪರ್ ಕಾಂಬಿನೇಷನ್!

ಆಹಾರ ಪದಾರ್ಥಗಳಲ್ಲಿ ಬಳಕೆ

ಆಹಾರ ಪದಾರ್ಥಗಳಲ್ಲಿ ಬಳಕೆ

ನಾವು ತಯಾರಿಸುವ ಕೆಲವು ಆಹಾರ ಪದಾರ್ಥಗಳಲ್ಲಿ ಕೇಸರಿಯನ್ನು ಬಳಸಬಹುದು. ಇದರಿಂದ ಪದಾರ್ಥಗಳ ರಂಗು ಹೆಚ್ಚುವುದರೊಂದಿಗೆ ಆರೋಗ್ಯವೂ ಸುಧಾರಣೆಯಾಗುವುದು. ಕಣ್ಣಿನ ದೋಷಗಳ ನಿವಾರಣೆಯೊಂದಿಗೆ ಅನೇಕ ಆರೋಗ್ಯಕರ ಅಂಶವು ನಿಮ್ಮದಾಗುವುದು.

English summary

How To Use Saffron To Improve Your Eyesight

Saffron can restore the function and structure of retinal cells that are damaged by age-related macular degeneration and oxidative stress. There are many ways to include saffron in your diet. We will explain some simple methods to make saffron a part of your daily diet.
Subscribe Newsletter