ಧೂಮಪಾನದಿಂದ ದೂರವಾಗದಿದ್ದರೆ ಆರೋಗ್ಯಕ್ಕೆ ಚಿಕಿತ್ಸೆಯೂ ಫಲಿಸದು!

By: Divya
Subscribe to Boldsky

ಧೂಮಪಾನವು ಆರೋಗ್ಯವನ್ನು ಹಾಳುಮಾಡುತ್ತದೆ ಎನ್ನುವುದು ಎಲ್ಲರೂ ತಿಳಿದಿರುವ ವಿಚಾರವೇ. ಆದರೂ ವ್ಯಸನಿಗಳು ಇದರಿಂದ ದೂರ ಸರಿಯುವುದಿಲ್ಲ. ಇದರಲ್ಲಿರುವ ರಾಸಾಯನಿಕ ಉತ್ಪನ್ನಗಳು ಆರೋಗ್ಯದ ಮೇಲೆ ಪರಿಣಾಮಕಾರಿ ಅಪಾಯವನ್ನುಂಟು ಮಾಡುತ್ತವೆ. 

ಅತಿಯಾಗಿ ಧೂಮಪಾನ ಮಾಡುವುದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚು ಪ್ರಭಾವಬೀರುತ್ತದೆ ಎನ್ನುವುನ್ನು ಅನೇಕರು ತಿಳಿದಿಲ್ಲ. ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಮೊದಲ ಹಂತದಲ್ಲಿಯೇ ಜೀರ್ಣಗೊಳಿಸಿ ಸಹಾಯ ಮಾಡುತ್ತದೆ. 

ಧೂಮಪಾನ ಬಿಟ್ಟರೆ-ಶ್ವಾಸಕೋಶದ ಕ್ಯಾನ್ಸರ್ ಬಲು ದೂರ!

ಅನಾರೋಗ್ಯಕ್ಕೆ ಕಾರಣವಾಗುವ ಈ ಧೂಮಪಾನವು ಜೀರ್ಣಾಂಗ ವ್ಯವಸ್ಥೆಯನ್ನು ಹಂತ ಹಂತವಾಗಿಯೇ ಹಾಳುಮಾಡುತ್ತಾ ಬರುತ್ತದೆ. ತನ್ನ ಹಾಗೂ ಕುಟುಂಬದವರನ್ನೂ ಸುಡುವ ಈ ಧೂಮಪಾನದಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎನ್ನುವುದನ್ನು ತಿಳಿಯೋಣ... 

ವಾಸ್ತವ #1

ವಾಸ್ತವ #1

ಧೂಮಪಾನವು ಕೇವಲ ಶ್ವಾಸಕೋಶದ ಕ್ಯಾನ್ಸರ್‌ಗಳಿಗೆ ಮಾತ್ರ ಮಣೆ ಹಾಕುವುದಿಲ್ಲ. ಬದಲಿಗೆ ಲಿವರ್, ಕರುಳು, ಗುದನಾಳ ಮತ್ತು ಹೊಟ್ಟೆಯ ಕ್ಯಾನ್ಸರ್‌ಗಳನ್ನು ಸಹ ಆಹ್ವಾನಿಸುತ್ತದೆ

ವಾಸ್ತವ #2

ವಾಸ್ತವ #2

ಧೂಮಪಾನದಿಂದ ಉಂಟಾಗುವ ಎಚ್.ಪಿಲೋರಿ ಬ್ಯಾಕ್ಟೀರಿಯ ಸೋಂಕಿನಿಂದ ಜಠರದ ಹುಣ್ಣು ಕಾಣಿಸಿಕೊಳ್ಳುವುದು.

ಧೂಮಪಾನ ತ್ಯಜಿಸುವಂತೆ ಮಾಡುವ ಗಿಡಮೂಲಿಕೆಗಳು

ವಾಸ್ತವ #3

ವಾಸ್ತವ #3

ಧೂಮಪಾನದ ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಸಣ್ಣಕರುಳಿನಲ್ಲಿ ಆಸಿಡ್ ರಿಫ್ಲೆಕ್ಸ್ ಆಗುವುದು.

ವಾಸ್ತವ #4

ವಾಸ್ತವ #4

ಧೂಮಪಾನದ ಅತಿಯಾದ ಸೇವನೆಯಿಂದ ಅಸಿಡಿಟಿ ಉಂಟಾಗುವುದಲ್ಲದೆ ಸಣ್ಣಕರುಳಿನಲ್ಲಿ ಎಚ್.ಪಿಲೋರಿ ಸೊಂಕು ತಾಗುವ ಸಾಧ್ಯತೆಗಳಿರುತ್ತದೆ.

ವಾಸ್ತವ #5

ವಾಸ್ತವ #5

ಧೂಮಪಾನವು ರಕ್ತನಾಳಗಳನ್ನು ನಿರ್ಬಂಧಿಸಿ, ಹೊಟ್ಟೆಗೆ ರಕ್ತದ ಹರಿವನ್ನು ಕಡಿಮೆಮಾಡುತ್ತದೆ. ಈ ಪ್ರಕ್ರಿಯೆಯಿಂದ ಅನಾರೋಗ್ಯ ಉಂಟಾಗುವುದು.

ವಾಸ್ತವ #5

ವಾಸ್ತವ #5

ಧೂಮಪಾನಿಗಳನ್ನು ಹೆಚ್ಚಾಗಿ ಕಾಡುವುದು ಸಣ್ಣಕರುಳು ಮತ್ತು ಹೊಟ್ಟೆ ಹುಣ್ಣು. ಈ ಚಟವನ್ನು ಬಿಡದೆ ಮುಂದುವರಿಸುತ್ತಿದ್ದರೆ ಅನಾರೋಗ್ಯಕ್ಕೆ ನೀಡುವ ಚಿಕಿತ್ಸೆಯೂ ಫಲಕೊಡದು.

ವಾಸ್ತವ #7

ವಾಸ್ತವ #7

ಪ್ರತಿದಿನ ಅತಿಯಾಗಿ ಧೂಮಪಾನ ಮಾಡುತ್ತಿದ್ದರೆ ಕ್ರೋನ್ಸ್ ಎನ್ನುವ ಕಾಯಿಲೆಗೆ ತುತ್ತಾಗಬೇಕಾಗುವುದು. ಅಲ್ಲದೆ ಕರುಳಿನಲ್ಲಿ ಉರಿಊತ, ರಕ್ತಸ್ರಾವ, ನೋವು ಮತ್ತು ಅತಿಸಾರ ಉಂಟಾಗಬಹುದು.

ನಿಮ್ಮಿಂದ ಧೂಮಪಾನ ಬಿಡಿಸುವ ಪವರ್ ಈ ಆಹಾರಗಳಲ್ಲಿದೆ!

ವಾಸ್ತವ #8

ವಾಸ್ತವ #8

ಧೂಮಪಾನ ವ್ಯಸನದಿಂದ ದೂರ ಉಳಿದರೆ ಮಾತ್ರ ಆರೋಗ್ಯದಮೇಲೆ ಉಂಟಾಗುವ ತೊಂದರೆಗಳನ್ನು ತಡೆಯಬಹುದು.

English summary

How Smoking Affects Digestive System?

We all know that smoking is one of the most dangerous habits that can wreck health in many ways. Thousands of chemicals present in it are capable of damaging your health on many levels. But do you know that smoking also affects the digestive system? We all know that the digestive system works hard in breaking down the foods into useful products to provide the body with energy and nutrients.
Story first published: Tuesday, May 30, 2017, 23:50 [IST]
Subscribe Newsletter