ಫುಡ್ ಪಾಯಿಸನ್‌ ಆದರೆ, ಇಂತಹ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ...

By Jaya Subramanya
Subscribe to Boldsky

ಮಳೆಗಾಲದಲ್ಲಿ ತಂಪಾದ ಹವಾಮಾನ ಮತ್ತು ಮನಸ್ಸಿಗೆ ಮುದ ನೀಡುವ ವಾತಾವರಣವಿರುವಾಗ ಮನ ಹಾಯ್ ಎಂದು ಕುಣಿದಾಡುತ್ತಿರುತ್ತದೆ. ಭೂಮಿ ತಾಯಿ ಕೂಡ ತಂಪನ್ನು ತನ್ನಲ್ಲಿ ಅನುಭೂತಿಗೊಳಿಸುವಂತೆ ನಾವು ಕೂಡ ಮಳೆಯ ಕಾರಂಜಿಯನ್ನುನಮ್ಮ ಮೈಮನದೊಳಗೆ ಪ್ರವೇಶಿಸಿಕೊಳ್ಳುತ್ತೇವೆ. ಬಿಸಿಬಿಸಿಯಾಗಿ ದೊರೆಯುವ ಪಾನೀಯ, ತಿಂಡಿಗಳು ಈ ಸಮಯದಲ್ಲಿ ಬಾಯಿ ರುಚಿಯನ್ನು ಹೆಚ್ಚಿಸುತ್ತವೆ.

ತಂಪಾದ ವಾತಾವರಣದಲ್ಲಿ ಮನಸ್ಸಿಗೆ ಆಹ್ಲಾದವನ್ನು ನೀಡುವ ಬಿಸಿ ಬಿಸಿ ವಡೆ, ಪಾನೀಪುರಿ, ಮಸಾಲ್ ಪುರಿ, ಸಮೋಸ ಹೀಗೆ ಬಗೆ ಬಗೆಯ ಖಾದ್ಯಗಳು ಎಷ್ಟೇ ಭರ್ಜರಿ ಮಳೆ ಇದ್ದರೂ ಹೊಟ್ಟೆಯ ತಾಳವನ್ನು ತಣ್ಣಗಾಗಿಸುತ್ತವೆ. ಆದರೆ ಈ ಬಗೆಯ ಖಾದ್ಯಗಳನ್ನು ನೀವು ಸೇವಿಸುವಾಗ ಅದರ ದುಷ್ಪರಿಣಾಮಗಳ ಬಗ್ಗೆ ಅರಿತಿರುವುದು ಒಳಿತು. ಮಳೆಗಾಲದಲ್ಲಿ ಸೊಳ್ಳೆ, ನೊಣಗಳ ಹಾವಳಿ ಭರ್ಜರಿಯಾಗಿರುವುದರಿಂದ ಇವುಗಳು ನೀವು ಸೇವಿಸುವ ಬಿಸಿ ಖಾದ್ಯಗಳ ಮೇಲೆ ಕುಳಿತುಕೊಳ್ಳುತ್ತವೆ ಮತ್ತು ನಿಮಗೆ ನಾನಾ ಬಗೆಯ ರೋಗಗಳನ್ನು ಹರಡುತ್ತವೆ.

ಫುಡ್ ಪಾಯಿಸನ್‌ ಆಗಿ ಹೊಟ್ಟೆ ಕೆಟ್ಟಿದೆಯೇ? ಇನ್ನು ಚಿಂತೆ ಬಿಡಿ

ವಾಂತಿ, ತಲೆನೋವು, ಜ್ವರ, ಶೀತ, ಕೆಮ್ಮು ಮೊದಲಾದ ರೋಗಗಳು ಈ ಕಾಲದಲ್ಲಿ ನಿಮ್ಮನ್ನು ಕಾಡುವುದು ಖಂಡಿತ. ಹೀಗಾದಾಗ ಆಗಾಗ್ಗೆ ವೈದ್ಯರನ್ನು ಕಾಣುವುದರ ಬದಲಿಗೆ ನೀವು ಮನೆ ಮದ್ದುಗಳನ್ನು ಪ್ರಯತ್ನಿಸಬಹುದು. ನಿಮ್ಮ ಅಡುಗೆ ಮನೆಯಲ್ಲೇ ದೊರೆಯುವ ಈ ಔಷಧೀಯ ಸಸ್ಯಗಳನ್ನು ಬಳಸಿಕೊಂಡು ಫುಡ್ ಪಾಯಿಸನ್ ಆಹಾರ ವಿಷವಾಗುವಂತಹ ರೋಗಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ರೋಗನಿರೋಧಕ ಶಕ್ತಿಯನ್ನು ಕಡಿಮೆ ಹೊಂದಿರುವವರು ಈ ರೋಗಗಳಿಗೆ ಬೇಗನೇ ಬಲಿಯಾಗಿಬಿಡುತ್ತಾರೆ. ಹಾಗಿದ್ದರೆ ಈ ಸಮಸ್ಯೆಯನ್ನು ಹದ್ದುಬಸ್ತಿನಲ್ಲಿಡುವ ಮನೆಮದ್ದುಗಳು ಯಾವುವು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.... 

ಶುಂಠಿ

ಶುಂಠಿ

ಹಲವಾರು ಬಗೆಯ ರೋಗಗಳನ್ನು ಶುಂಠಿಯು ನಿವಾರಿಸುತ್ತದೆ. ಫುಡ್ ಪಾಯಿಸನಿಂಗ್ ಅನ್ನು ತಡೆಗಟ್ಟಲು ಇದು ಪರಿಣಾಮಕಾರಿಯಾಗಿದೆ. ನಿಮ್ಮ ಜೀರ್ಣಕ್ರಿಯೆಯನ್ನು ಇದು ಸುಧಾರಿಸುತ್ತದೆ. ನಿಮ್ಮ ಹೊಟ್ಟೆಯನ್ನು ಹಗುರವಾಗಿಸುತ್ತದೆ. ವಾಕರಿಕೆ, ವಾಂತಿ ಮೊದಲಾದ ಕಾಯಿಲೆಗಳನ್ನು ಇದು ಗುಣಪಡಿಸುತ್ತದೆ. ನಿಮ್ಮ ಚಹಾ ಅಥವಾ ಜ್ಯೂಸ್‌ನಲ್ಲಿ ಶುಂಠಿಯನ್ನು ಬಳಸಿಕೊಳ್ಳಿ. ಶುಂಠಿಯನ್ನು ಜಗಿದು ಅದರ ರಸವನ್ನು ಕುಡಿಯಿರಿ.

ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ತುಳಸಿ

ತುಳಸಿ

ಇದು ಹೊಟ್ಟೆಯಲ್ಲಿರುವ ಕಲ್ಮಶವನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಉತ್ಪಕರ್ಷಣ ನಿರೋಧಿಯಾಗಿ ಕೂಡ ಕಾರ್ಯನಿರ್ವಹಿಸುತ್ತದೆ. ಯಾವುದೇ ರೀತಿಯ ಬ್ಯಾಕ್ಟೀರಿಯಾಗಳು ಹೊಟ್ಟೆಯಲ್ಲಿ ಬೆಳೆಯುವುದನ್ನು ಇದು ತಡೆಯುತ್ತದೆ. ಇದನ್ನು ಜ್ಯೂಸ್ ರೂಪದಲ್ಲಿ ನಿಮಗೆ ಸೇವಿಸಬಹುದಾಗಿದೆ. ಅಂತೆಯೇ ಎಣ್ಣೆ ಮಾಡಿಕೊಂಡು ದಿನಪೂರ್ತಿ ಸೇವಿಸಬಹುದಾಗಿದೆ.

ತುಳಸಿ ಚಹಾ: ಸ್ವಾದದ ಜೊತೆ ಆರೋಗ್ಯದ ಭಾಗ್ಯ

ಏಲಕ್ಕಿ

ಏಲಕ್ಕಿ

ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವ ಏಲಕ್ಕಿಯು ವಾಕರಿಕೆ, ವಾಂತಿ ಮೊದಲಾದ ಫುಡ್ ಪಾಯಿಸಿನ್ ರೋಗ ಲಕ್ಷಣಗಳನ್ನು ಹೋಗಲಾಡಿಸುತ್ತದೆ. ಈ ಪಟ್ಟಿಯಲ್ಲಿರುವ ಇತರ ಮನೆಮದ್ದುಗಳಂತೆಯೇ ಏಲಕ್ಕಿ ಕೂಡ ರೋಗನಿರೋಧಕ ಸಾಮರ್ಥ್ಯವನ್ನು ಪಡೆದುಕೊಂಡಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಏಲಕ್ಕಿಯನ್ನು ಬಳಸಬಹುದಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದು ರೋಗನಿರೋಧಕ, ಆಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಒಳಗೊಂಡಿದ್ದು, ಇದು ಫುಡ್ ಪಾಯಿಸನ್ ಉಂಟುಮಾಡುವ ಯಾವುದೇ ಲಕ್ಷಣಗಳನ್ನು ಹೊಗಲಾಡಿಸುತ್ತದೆ. ಡಯೇರಿಯಾ ಮತ್ತು ಹೊಟ್ಟೆಯ ನೋವಿಗೆ ಇದು ರಾಮಬಾಣವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿ ಸೇವನೆಯನ್ನು ನಿತ್ಯವೂ ಮಾಡಿ.

ಲಿಂಬೆ

ಲಿಂಬೆ

ಫುಡ್ ಪಾಯಿಸನ್‌ನಿಂದ ಉಂಟಾಗುವ ಯಾವುದೇ ಅಪಾಯಗಳನ್ನು ಲಿಂಬೆಯು ನಿವಾರಿಸುತ್ತದೆ. ಇದು ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಪರಿಣಾಮಗಳನ್ನು ಒಳಗೊಂಡಿದೆ. ಇದು ವೈರಸ್‌ಗಳನ್ನು ಕೊಲ್ಲುತ್ತದೆ.ಇದನ್ನು ನಿತ್ಯವೂ ಜ್ಯೂಸ್ ರೂಪದಲ್ಲಿ ಸೇವಿಸಿ.

ಜೀರಿಗೆ

ಜೀರಿಗೆ

ಜೀರಾ ಎಂದು ಕೂಡ ಇದು ಪ್ರಸಿದ್ಧಿಯನ್ನು ಹೊಂದಿದೆ. ಹೊಟ್ಟೆಯ ಯಾವುದೇ ನೋವನ್ನು ಇದು ಉಪಚರಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಹಾಗೂ ಬರಿದೇ ನೀವು ಇದನ್ನು ಸೇವಿಸಬಹುದು. ಒಂದು ಕಪ್ ನೀರಿನಲ್ಲಿ ಇದನ್ನು ಕುದಿಸಿಕೊಂಡು ಕೂಡ ಸೇವಿಸಬಹುದಾಗಿದೆ.

ಕೊತ್ತಂಬರಿ

ಕೊತ್ತಂಬರಿ

ಬ್ಯಾಕ್ಟೀರಿಯಾವನ್ನು ಕೊಲ್ಲುವಲ್ಲಿ ಕೊತ್ತಂಬರಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ. ಫುಡ್ ಪಾಯಿಸಿನ್ ಉಂಟುಮಾಡುವ ಯಾವುದೇ ತೊಂದರೆಗಳನ್ನು ಇದು ಹೋಗಲಾಡಿಸುತ್ತದೆ. ಕೊತ್ತಂಬರಿ ಎಲೆಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಬಳಸುವುದು ಉತ್ತಮ ಉಪಾಯವಾಗಿದೆ. ಇದನ್ನು ಎಣ್ಣೆಯ ರೂಪದಲ್ಲಿ ಕೂಡ ನಿಮ್ಮ ಖಾದ್ಯ ತಯಾರಿಯಲ್ಲಿ ಬಳಸಬಹುದಾಗಿದೆ.

ಮೆಂತ್ಯ ಮತ್ತು ಮೊಸರು

ಮೆಂತ್ಯ ಮತ್ತು ಮೊಸರು

ಮೊಸರು ಆಂಟಿಬ್ಯಾಕ್ಟೀರಿಯಲ್ ಎಂದೆನಿಸಿದ್ದು ಇದು ಫುಡ್ ಪಾಯಿಸನ್ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೊಡೆದು ಹಾಕಲಿದೆ. ಹೊಟ್ಟೆಯ ತಳಮಳಕ್ಕೆ ಇದು ಉತ್ತಮ ಔಷಧಿಯಾಗಿದೆ. ಇವೆರಡನ್ನೂ ನಿಮ್ಮ ಆಹಾರದಲ್ಲಿ ಬಳಸುವುದು ಫುಡ್ ಪಾಯಿಸನ್‌ನ ದುಷ್ಪರಿಣಾಮಗಳನ್ನು ತೊಡೆದುಹಾಕಲಿದೆ. ಒಂದು ಚಮಚ ಮೆಂತ್ಯವನ್ನು ಮೊಸರಿನೊಂದಿಗೆ ಬೆರೆಸಿಕೊಂಡು ಸೇವಿಸಿ. ಇದು ಹೊಟ್ಟೆ ನೋವಿನಿಂದ ಶೀಘ್ರ ಪರಿಹಾರವನ್ನು ನೀಡುತ್ತದೆ.

ಜೇನು

ಜೇನು

ನಿಮಗೆ ಸಿಹಿ ಇಷ್ಟ ಎಂದಾದಲ್ಲಿ ಜೇನು ನಿಮ್ಮ ಹೊಟ್ಟೆನೋವಿಗೆ ಉತ್ತಮ ಪರಿಹಾರವಾಗಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಫುಡ್ ಪಾಯಿಸನ್ ಉಂಟುಮಾಡುವ ಬ್ಯಾಕ್ಟೀರಿಯಾ ಉತ್ಪಾದನೆಯನ್ನು ತಡೆಯುತ್ತದೆ. ಜೇನನ್ನು ಹಾಗೆಯೇ ಸೇವಿಸಬಹುದು ಇಲ್ಲವೇ ಟಿ ರೂಪದಲ್ಲಿ ಕೂಡ ಸೇವಿಸಬಹುದಾಗಿದೆ. ದಿನದಲ್ಲಿ ಆಗಾಗ್ಗೆ ಇದನ್ನು ಸೇವಿಸಿ.

ಸೌಂಫ್ ಅಥವಾ ಫೆನ್ನೆಲ್

ಸೌಂಫ್ ಅಥವಾ ಫೆನ್ನೆಲ್

ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಅಂಶವನ್ನು ಫೆನ್ನೆಲ್ ಪಡೆದುಕೊಂಡಿದೆ. ದಿನದಲ್ಲಿ ಎಷ್ಟು ಬಾರಿ ಕೂಡ ಇದನ್ನು ಸೇವಿಸಬಹುದು. ಹೊಟ್ಟೆಯಲ್ಲಿರುವ ಯಾವುದೇ ನೋವನ್ನು ಇದು ಉಪಶಮನ ಮಾಡುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Home Remedies To Treat Food Poisoning This Monsoon

    Typically, people who have weak immune systems tend to catch the infection. Usually lasting for a week or two, ensuring that one is adequately hydrated is significantly important in combating the infection. Apart from hydrating one's self adequately, below mentioned are best home remedies to treat food poisoning this monsoon.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more