ಕಿಡ್ನಿ ಕಲ್ಲುಗಳನ್ನು ಕರಗಿಸುವ ಪವರ್ ಫುಲ್ ಮನೆಮದ್ದುಗಳು

By Hemanth
Subscribe to Boldsky

ಕಿಡ್ನಿಯಲ್ಲಿ ಕಲ್ಲಾಗಿದೆ ಅದನ್ನು ಆಪರೇಷನ್ ಮೂಲಕ ತೆಗೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ ಎಂದು ಹೇಳುವವರನ್ನು ನೋಡಿದ್ದೀರಿ. ಏನಿದು ಕಿಡ್ನಿ ಕಲ್ಲು ಎನ್ನುವ ಬಗ್ಗೆ ನಿಮಗೆ ಕೂಡ ಗೊಂದಲವಾಗಿರಬಹುದು. ಆದರೆ ಕಿಡ್ನಿ ಕಲ್ಲು ಎಂದರೆ ಉಪ್ಪು ಮತ್ತು ಖನಿಜಾಂಶಗಳಿಂದ ಉತ್ಪತ್ತಿಯಾಗುವಂತಹ ಸಣ್ಣ ಉಂಡೆಗಳು ಮತ್ತು ಇವುಗಳು ಮೂತ್ರನಾಳದೊಳಗೆ ಪ್ರವೇಶ ಮಾಡಿ ತೊಂದರೆ ನೀಡುವುದು. ಇದು ಹಲವಾರು ಗಾತ್ರದಲ್ಲಿ ಇರಬಹುದು.

ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

ಕೆಲವು ಸಲ ನೀವು ಮೂತ್ರ ಮಾಡುತ್ತಿರುವಾಗಲೇ ನಿಮಗೆ ತಿಳಿಯದಿರುವಂತೆ ಅದು ಹೊರಬೀಳಬಹುದು. ಕಿಡ್ನಿಯಲ್ಲಿ ಕಲ್ಲುಗಳಾಗುವುದು ದೇಹವು ನಿರ್ಜಲೀಕರಣದಿಂದ ಬಳಲುತ್ತಿದೆ ಎನ್ನುವುದರ ಸೂಚನೆಯಾಗಿದೆ. ಈ ಕಲ್ಲುಗಳ ಬಗ್ಗೆ ನಿಗಾ ಇರಿಸಿಕೊಂಡು ಅವುಗಳ ಗಾತ್ರವನ್ನು ಕಿರಿದು ಮಾಡಿ ಅಂತಿಮವಾಗಿ ಅವುಗಳನ್ನು ದೇಹದಿಂದ ಹೊರಹಾಕಬೇಕು. ನೈಸರ್ಗಿವಾಗಿಯೇ ಕಿಡ್ನಿ ಕಲ್ಲುಗಳನ್ನು ಹೊರತೆಗೆಯಲು ಇರುವಂತಹ ಕೆಲವು ಮನೆಮದ್ದುಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ....

ನೀರು

ನೀರು

ದೇಹವನ್ನು ಎಲ್ಲಾ ಸಮಯದಲ್ಲೂ ತೇವಾಂಶದಿಂದ ಇಡಲು ನೀರು ಅತೀ ಅಗತ್ಯವಾಗಿ ಬೇಕೇಬೇಕು. ಒಂದು ಲೋಟ ನೀರು ನಿಮ್ಮ ದೇಹಕ್ಕೆ ಅದ್ಭುತವನ್ನು ಉಂಟು ಮಾಡುವುದು. ಕಿಡ್ನಿಯಲ್ಲಿ ಕಲ್ಲುಗಳು ಇರುವಾಗ ಸಾಮಾನ್ಯವಾಗಿ ಕುಡಿಯುವ ಎಂಟು ಲೋಟ ಬದಲಿಗೆ 12 ಲೋಟ ನೀರು ಕುಡಿಯಬೇಕು. ಮೂತ್ರದ ಬಣ್ಣದ ಕಡೆ ಗಮನಹರಿಸಿದರೆ ನಿಮ್ಮ ದೇಹವು ನಿರ್ಜಲೀಕರಣದಿಂದ ಬಳಲಿರುವುದು ತಿಳಿದುಬರುವುದು.

ನಿಂಬೆಜ್ಯೂಸ್

ನಿಂಬೆಜ್ಯೂಸ್

ಎಷ್ಟು ಸಾಧ್ಯವೋ ಅಷ್ಟು ಮಟ್ಟದಲ್ಲಿ ಲಿಂಬೆ ರಸವನ್ನು ನೀರಿಗೆ ಹಾಕಿ ಕುಡಿದರೆ ಅದರಲ್ಲಿ ಇರುವಂತಹ ಸಿಟ್ರಿಕ್ ಆಮ್ಲವು ಕಿಡ್ನಿಯಲ್ಲಿ ಕಲ್ಲು ಆಗದಂತೆ ತಡೆಯುವುದು. ಇರುವ ಕಲ್ಲನ್ನು ಇದು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡುವುದು. ಇದು ಮೂತ್ರದೊಂದಿಗೆ ಸರಾಗವಾಗಿ ಹೊರಹೋಗುವುದು. ಲಿಂಬೆಯಿಂದ ಸಿಗುವಂತಹ ಇತರ ಲಾಭಗಳೆಂದರೆ ಬ್ಯಾಕ್ಟೀರಿಯಾ ಅಭಿವೃದ್ಧಿಯಾಗದಂತೆ ತಡೆಯುವುದು ಮತ್ತು ತೂಕ ಕಳೆದುಕೊಳ್ಳಲು ನೆರವಾಗುವುದು.

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ನ ಪ್ರಮುಖ ಅಂಶವೆಂದರೆ ಸಿಟ್ರಿಕ್ ಆಮ್ಲ. ಇದು ಕ್ಯಾಲ್ಸಿಯಂ ಜಮೆಗೊಳ್ಳುವುದನ್ನು ತಡೆಯುವುದು. ಇದು ಇತರ ಮೂಲಗಳಿಂದಲೂ ಆರೋಗ್ಯಕ್ಕೆ ಒಳ್ಳೆಯದು. ಎರಡು ಚಮಚ ಆ್ಯಪಲ್ ಸೀಡರ್ ವಿನೇಗರ್ ಗೆ ಎಂಟು ಔನ್ಸ್ ನೀರು ಬೆರೆಸಿ ಕುಡಿಯಬೇಕು. ಇದು ಇರುವಂತಹ ಕಲ್ಲನ್ನು ಹೊರಹಾಕುವುದು ಮತ್ತು ಬೇರೆ ಕಲ್ಲು ನಿರ್ಮಾಣವಾಗದಂತೆ ನೋಡಿಕೊಳ್ಳುವುದು. ಇದನ್ನು ನೀವು ದಿನವಿಡಿ ಸೇವಿಸಬಹುದು. ಆಹಾರ ಸೇವನೆಗೆ ಮೊದಲು ಸೇವಿಸಿದರೆ ತುಂಬಾ ಪರಿಣಾಮಕಾರಿ.

ತುಳಸಿ

ತುಳಸಿ

ತುಳಸಿಯಲ್ಲಿ ಇರುವಂತಹ ಕೆಲವೊಂದು ಅಂಶಗಳು ಯೂರಿಕ್ ಆಮ್ಲದ ಮಟ್ಟವನ್ನು ತಟಸ್ಥಗೊಳಿಸುವುದು. ಇದರಿಂದ ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುವುದಿಲ್ಲ. ಇದರಲ್ಲಿ ಇರುವಂತಹ ಎಸಿಟಿಕ್ ಆಮ್ಲವು ಕಿಡ್ನಿಯ ಕಲ್ಲುಗಳನ್ನು ತೆಗೆದುಹಾಕುವುದು.

ಎಕ್ಸ್ ಟ್ರಾ ವರ್ಜಿನ್ ಆಲಿವ್ ತೈಲ

ಎಕ್ಸ್ ಟ್ರಾ ವರ್ಜಿನ್ ಆಲಿವ್ ತೈಲ

ಎಕ್ಸ್ ಟ್ರಾ ವರ್ಜಿನ್ ಆಲಿವ್ ತೈಲವು ಕಿಡ್ನಿ ಕಲ್ಲುಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಕಲ್ಲುಗಳು ತುಂಬಾ ಸರಾಗವಾಗಿ ಹಾಗೂ ಹೆಚ್ಚು ನೋವಿಲ್ಲದಂತೆ ಸಾಗುವಂತೆ ಇದು ಮಾಡುವುದು. ಇದು ಮೂತ್ರನಾಳಕ್ಕೆ ಎಣ್ಣೆಯಂಶವನ್ನು ನೀಡುವುದು. ಬೆಳಗ್ಗೆ ಮತ್ತು ಸಂಜೆ ವೇಳೆ 5 ಔನ್ಸ್ ಸೇವಿಸಿದರೆ ಇದು ನೋವು ಮತ್ತು ತೊಂದರೆ ತಪ್ಪಿಸುವುದು.

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್ ನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚು ಮಾಡುವುದು. ಇದನ್ನು ಹೊರತುಪಡಿಸಿ ಇದು ಕಿಡ್ನಿ ಕಲ್ಲುಗಳ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಯಾಕೆಂದರೆ ಇದರಲ್ಲಿ ಹುಳಿ ಸ್ವಭಾವ ಮತ್ತು ಸಂಕೋಚನ ಗುಣವಿದೆ. ಸಂಸ್ಕರಿತ ಜ್ಯೂಸ್ ಗಿಂತ ತಾಜಾ ಜ್ಯೂಸ್ ಕುಡಿದರೆ ತುಂಬಾ ಒಳ್ಳೆಯದು.

ತೂಕ ಕಳೆದುಕೊಳ್ಳುವುದು

ತೂಕ ಕಳೆದುಕೊಳ್ಳುವುದು

ಆರೋಗ್ಯಕಾರಿ ಆಹಾರಗಳೊಂದಿಗೆ ತೂಕವನ್ನು ಕಳೆದುಕೊಂಡರೆ ಆಗ ಕಿಡ್ನಿಯ ಕಲ್ಲನ್ನು ಹೊರಹಾಕಬಹುದು ಮತ್ತು ಅದು ಬರದಂತೆ ತಡೆಯಬಹುದು. ಸಾಮಾನ್ಯ ದೇಹ ತೂಕವನ್ನು ಹೊಂದಿದ್ದರೆ ಆಗ ಆರೋಗ್ಯಕರ ಮತ್ತು ಸಮಸ್ಯೆರಹಿತ ಜೀವನ ನಿಮ್ಮದಾಗಬಹುದು.

ಕಿಡ್ನಿ ಕಾಳು ಸಾರು

ಕಿಡ್ನಿ ಕಾಳು ಸಾರು

ಕಿಡ್ನಿ ಕಾಳುಗಳನ್ನು ಬೇಯಿಸಿ ಮಾಡಿರುವಂತಹ ಸಾರನ್ನು ಸೇವಿಸಿದರೆ ಇದು ಮೂತ್ರಕೋಶ ಮತ್ತು ಕಿಡ್ನಿಯ ವ್ಯವಸ್ಥೆಯನ್ನು ಸರಿಪಡಿಸುವುದು. ಇದು ಈಗಾಗಲೇ ಕಿಡ್ನಿಯಲ್ಲಿ ಇರುವಂತಹ ಕಲ್ಲನ್ನು ನಿವಾರಣೆ ಮಾಡುವುದು. ಕಿಡ್ನಿ ಕಾಳುಗಳನ್ನು ಸರಿಯಾಗಿ ಬೇಯಿಸಿಕೊಂಡು ಅದರ ಸಾರನ್ನು ದಿನವಿಡಿ ಸೇವಿಸುತ್ತಾ ಇರಬೇಕು.

ಉವಾ ಉರ್ಶಿ

ಉವಾ ಉರ್ಶಿ

ಇದು ಸೋಂಕು ನಿವಾರಕ ಹಾಗೂ ದ್ರಾವಕ ಲಕ್ಷಣಗಳನ್ನು ಒಳಗೊಂಡಿರುವಂತಹ ಗಿಡಮೂಲಿಕೆಯಾಗಿದೆ. ಇದು ಮೂತ್ರಕೋಶವನ್ನು ಸ್ವಚ್ಛಮಾಡಿ ಕಲ್ಲುಗಳು ಸರಾಗವಾಗಿ ಹೊರಗೆ ಹೋಗಲು ನೆರವಾಗುವುದು. ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇರುವಂತಹವರು ದಿನದಲ್ಲಿ 500 ಮಿ.ಗ್ರಾಂನಷ್ಟು ಒಣ ಉವಾ ಉರ್ಶಿ ಹುಡಿಯನ್ನು ಹಗಲಿನಲ್ಲಿ ಸೇವಿಸಿದರೆ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು.

ಸಾವಯವ ಸೆಲರಿ

ಸಾವಯವ ಸೆಲರಿ

ಸೆಲರಿಯು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ದೇಹದಲ್ಲಿ ಮೂತ್ರದ ಉತ್ಪಾದನೆಯನ್ನು ಹೆಚ್ಚು ಮಾಡುವುದು. ದಿನನಿತ್ಯ ಸೆಲರಿ ಸೇವನೆ ಮಾಡಿದರೆ ಅದರಿಂದ ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುವುದನ್ನು ತಡೆಯಬಹುದು. ಎರಡು ಅಥವಾ ಮೂರು ಸೆಲರಿ ದಂಡುಗಳನ್ನು ನೀರಿಗೆ ಹಾಕಿಕೊಂಡು ಜ್ಯೂಸ್ ಮಾಡಿ ದಿನನಿತ್ಯ ಕುಡಿಯಬೇಕು.

ಆಹಾರ ಕ್ರಮ ಬದಲಾವಣೆ

ಆಹಾರ ಕ್ರಮ ಬದಲಾವಣೆ

ಅನಾರೋಗ್ಯಕರ ಆಹಾರ ಕ್ರಮವೇ ನಮ್ಮ ದೇಹದಲ್ಲಿ ಕಿಡ್ನಿ ಕಲ್ಲು ಮತ್ತು ಅನಾರೋಗ್ಯ ಉಂಟಾಗಲು ಪ್ರಮುಖ ಕಾರಣವಾಗಿದೆ. ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗದಂತೆ ತಡೆಯಲು ಸೋಡಾ ಮತ್ತು ಇತರ ಶಕ್ತಿಪೇಯವನ್ನು ಕಡಿಮೆ ಮಾಡಬೇಕು. ಕಿಡ್ನಿ ಕಲ್ಲು ನಿವಾರಣೆ ಮಾಡಲು ನಿಮ್ಮ ಆಹಾರ ಕ್ರಮದಲ್ಲಿ ಹೆಚ್ಚು ನಾರಿನಾಂಶ ಇರುವ ಆಹಾರಗಳನ್ನು ಸೇರಿಸಿ.

ಬೆಂಡೆಕಾಯಿ

ಬೆಂಡೆಕಾಯಿ

ನಮ್ಮ ದೇಹದಲ್ಲಿರುವಂತಹ ಅಂಗಾಂಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಮೆಗ್ನಿಶಿಯಂ ಅತೀ ಅಗತ್ಯವಾಗಿ ಬೇಕೇಬೇಕು. ಬೆಂಡೆಕಾಯಿಯಲ್ಲಿ ಒಳ್ಳೆಯ ಮಟ್ಟದ ಮೆಗ್ನಿಶಿಯಂ, ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಕಿಡ್ನಿಯಲ್ಲಿ ಕಲ್ಲುಗಳು ನಿರ್ಮಾಣವಾಗುವುದನ್ನು ತಡೆಯುವುದು. 3-4 ಬೆಂಡೆಕಾಯಿಯಲ್ಲಿ ತುಂಡು ಮಾಡಿಕೊಂಡು ಅದನ್ನು ರಾತ್ರಿ ನೀರಿಗೆ ಹಾಕಿಡಿ. ಬೆಳಗ್ಗೆ ಎದ್ದು ಆ ನೀರನ್ನು ಕುಡಿದರೆ ನಿಮ್ಮ ಕಿಡ್ನಿಯು ಆರೋಗ್ಯವಾಗಿರುವುದು.

ಈರುಳ್ಳಿ ಕಷಾಯ

ಈರುಳ್ಳಿ ಕಷಾಯ

ಈರುಳ್ಳಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದು ಕಿಡ್ನಿಯಲ್ಲಿ ಕಲ್ಲುಗಳು ಗಟ್ಟಿಯಾಗದಂತೆ ಮಾಡುವುದು. ಎರಡರಿಂದ ಮೂರು ಈರುಳ್ಳಿಯನ್ನು ಸುಮಾರು 15 ನಿಮಿಷ ಕಾಲ ನೀರಿನಲ್ಲಿ ಕುದಿಸಬೇಕು ಮತ್ತು ಈ ನೀರಿಗೆ ಸಕ್ಕರೆ ಹಾಕಿ ಸೇವಿಸಿದರೆ ಒಳ್ಳೆಯ ಫಲಿತಾಂಶ ಖಚಿತ.

ಎಳೆನೀರು

ಎಳೆನೀರು

ಎಳೆನೀರಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಇದು ತಂಪುಪಾನೀಯಗಳಿಗೆ ಒಳ್ಳೆಯ ಪರ್ಯಾಯವಾಗಿದೆ. ಎಳೆನೀರಿನಲ್ಲಿ ಕಲ್ಲುಗಳನ್ನು ತುಂಡು ಮಾಡಿ ಅದನ್ನು ಮೂತ್ರದ ಮೂಲಕ ಹೊರಹಾಕುವಂತೆ ಮಾಡುವುದು. ಮೂತ್ರ ವಿಸರ್ಜನೆ ವೇಳೆ ಆಗುವಂತಹ ಉರಿಯನ್ನು ಇದು ಕಡಿಮೆ ಮಾಡುವುದು

ಸಿಟ್ರಿಕ್ ಹಣ್ಣುಗಳ ಜ್ಯೂಸ್

ಸಿಟ್ರಿಕ್ ಹಣ್ಣುಗಳ ಜ್ಯೂಸ್

ಕಿಡ್ನಿ ಕಲ್ಲುಗಳನ್ನು ಹೊರಹಾಕುವಲ್ಲಿ ಸಿಟ್ರಿಕ್ ಇರುವ ಹಣ್ಣುಗಳ ಜ್ಯೂಸ್ ತುಂಬಾ ಪರಿಣಾಮಕಾರಿಯಾಗಿದೆ ಎಂದು ಈಗಾಗಲೇ ಕಂಡುಕೊಳ್ಳಲಾಗಿದೆ. ಕಿತ್ತಳೆ, ಲಿಂಬೆ, ಕ್ರಾನ್ ಬೆರ್ರಿ ಇತ್ಯಾದಿ ಸಿಟ್ರಿಕ್ ಇರುವಂತಹ ಹಣ್ಣುಗಳ ಜ್ಯೂಸ್ ನ್ನು ದಿನದಲ್ಲಿ ಹಲವಾರು ಗ್ಲಾಸ್ ಕುಡಿಯಬೇಕು. ಇದು ಕಿಡ್ನಿಯಲ್ಲಿ ಕಲ್ಲುಗಳು ಆಗದಂತೆ ತಡೆಯುವುದು. ಈ ಮನೆಮದ್ದಿನೊಂದಿಗೆ ನೀವು ನಿಯಮಿತವಾಗಿ ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆಗಳನ್ನು ಪಡೆಯಬೇಕು. ಇದರಿಂದ ಭವಿಷ್ಯದಲ್ಲಿ ಕಿಡ್ನಿಯಲ್ಲಿ ಕಲ್ಲುಗಳು ಆಗದಂತೆ ತಡೆಯಬಹುದು.

For Quick Alerts
ALLOW NOTIFICATIONS
For Daily Alerts

    English summary

    home-remedies-to-melt-kidney-stones

    Kidney stones are small chunks of salt and minerals that form inside the kidney and travel to the urinary bladder. They can form in various sizes and it is often a sign of dehydrated body. It is very important to keep a track of these stones in order to minimize it before finally eliminating it from the body. Here are 15 home remedies to melt kidney stones naturally at home!
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more