ಶ್ವಾಸಕೋಶದ ರೋಗ ಗುಣಪಡಿಸುವ ಪವರ್ ಫುಲ್ ಮನೆ ಔಷಧಿಗಳು

By: Divya
Subscribe to Boldsky

ಯುವ ಜನರು ಮತ್ತು ವಯಸ್ಕರು ಎನ್ನುವ ತಾರತಮ್ಯವಿಲ್ಲದೆ ಶ್ವಾಸಕೋಶದಲ್ಲಿ ರಕ್ತ ನಿಬಿಡತೆ ಉಂಟಾಗುತ್ತದೆ. ಇದು ಕೆಲವರಿಗೆ ಸಾಮಾನ್ಯ ಲಕ್ಷಣವಾದರೆ ಇನ್ನೂ ಕೆಲವರಿಗೆ ಅಪಾಯಕಾರಿ ಆರೋಗ್ಯ ಸಮಸ್ಯೆಯಾಗಬಹುದು. ಇದರ ನಿಯಂತ್ರಣಕ್ಕೆ ನೈಸರ್ಗಿಕ ಉತ್ಪನ್ನಗಳ ಬಳಕೆಯಿಂದಲೇ ಸುಧಾರಿಸಬಹುದು. ಇದರ ಕುರಿತು ಅನೇಕರಿಗೆ ಮಾಹಿತಿಗಳಿಲ್ಲ. ಹಾಗಾಗಿ ಮನೆ ಔಷಧಿಯಿಂದ ದೂರ ಉಳಿದುಬಿಡುತ್ತಾರೆ.

ಶ್ವಾಸಕೋಶದ ಕ್ಯಾನ್ಸರ್-ನೀವು ತಿಳಿಯಲೇ ಬೇಕಾದ ಸತ್ಯಾಸತ್ಯತೆ

ಶ್ವಾಸಕೋಶದ ದಟ್ಟಣೆ(ಲಂಗ್ಸ್ ಕಂಜೆಕ್ಷನ್)ಯಿಂದ ಉಸಿರಾಟದ ವ್ಯವಸ್ಥೆಯಲ್ಲಿ ಉರಿಯೂತ, ಅತಿಯಾದ ಲೋಳೆ ಸಂಗ್ರಹ, ಶ್ವಾಸಕೋಶದಲ್ಲಿ ದ್ರವದ ಸಂಗ್ರಹಣೆಯಾಗುತ್ತವೆ. ಉಸಿರಾಡುವಾಗ ಧೂಳು, ವೈರಸ್‍ಗಳು, ಅಲರ್ಜಿಗಳು, ಬ್ಯಾಕ್ಟೀರಿಯಾಗಳು ಸೇರಿದಂತೆ ಅನೇಕ ಕಣಗಳು ಲೋಳೆಯ ಪ್ರದೇಶದಲ್ಲಿ ಸಿಲುಕಿಕೊಳ್ಳುತ್ತವೆ. ಇವುಗಳ ಕಾರಣದಿಂದಲೇ ನಿಧಾನವಾಗಿ ಶ್ವಾಸಕೋಶದ ದಟ್ಟಣೆ ಉಂಟಾಗುತ್ತದೆ. ಈ ತೊಂದರೆಯ ಪರಿಹಾರಕ್ಕೆ ಸೂಕ್ತ ಮನೆ ಔಷಧವನ್ನು ಈ ಲೇಖನದಲ್ಲಿ ಪರಿಚಯಿಸಲಾಗಿದೆ....

ಉಪ್ಪಿನ ನೀರಿನಲ್ಲಿ ಬಾಯಿ ಮುಕ್ಕಳಿಸುವುದು

ಉಪ್ಪಿನ ನೀರಿನಲ್ಲಿ ಬಾಯಿ ಮುಕ್ಕಳಿಸುವುದು

ಒಂದು ಗ್ಲಾಸ್ ನೀರಿಗೆ 1 ರಿಂದ 2 ಚಮಚ ಉಪ್ಪು, ಚಿಟಿಕೆ ಅರಿಶಿನ ಸೇರಿಸಿ ಮಿಶ್ರಣ ತಯಾರಿಸಿ. ಈ ಮಿಶ್ರಣದಲ್ಲಿ ಬಾಯನ್ನು ಮುಕ್ಕಳಿಸಿದರೆ ಶ್ವಾಸಕೋಶದಡಿಯಲ್ಲಿ ಸಂಗ್ರಹವಾದ ಲೋಳೆ ಅಂಶವು ಕರಗುತ್ತದೆ. ಶ್ವಾಸಕೋಶದ ದಟ್ಟಣೆ ಸಂಪೂರ್ಣವಾಗಿ ತೆರವುಗೊಳ್ಳುತ್ತದೆ.

ಸ್ಟೀಮ್

ಸ್ಟೀಮ್

ಬಿಸಿ ನೀರಿನ ಸ್ಟೀಮ್ ತೆಗೆದುಕೊಳ್ಳುವುದರಿಂದ ಶ್ವಾಸಕೋಶದ ದಟ್ಟಣೆಯು ಸಡಿಲ ಗೊಳ್ಳುತ್ತದೆ. ಶ್ವಾಸಕೋಶದಲ್ಲಿ ಇರುವ ಲೋಳೆಯಂಶವು ಕರಗುತ್ತದೆ. ಈ ಆರೈಕೆಯಿಂದ ತ್ವರಿತ ಆರಾಮ ದೊರೆಯುವುದು.

ವಾರಾಂತ್ಯದ ಸಲಹೆ- ಶ್ವಾಸಕೋಶದ ಆರೋಗ್ಯಕ್ಕೆ ಸರಳ ಟಿಪ್ಸ್

ನೀರು ಕುಡಿಯಬೇಕು

ನೀರು ಕುಡಿಯಬೇಕು

ಹೆಚ್ಚು ನೀರು ಸೇವಿಸುವುದರಿಂದ ಶ್ವಾಸಕೋಶದಲ್ಲಿ ಉಂಟಾದ ದಟ್ಟಣೆಯು ಸಡಿಲಗೊಳ್ಳುತ್ತದೆ. ಬೆಚ್ಚಗಿನ ನೀರನ್ನೇ ಸೇವಿಸಿದರೆ ಇನ್ನಷ್ಟು ಆರಾಮದಾಯಕವಾಗಿರುತ್ತದೆ.

ಆರೋಗ್ಯಕರ ಆಹಾರ

ಆರೋಗ್ಯಕರ ಆಹಾರ

ಮಸಾಲೆ ಭರಿತ ಆಹಾರ, ಬೆಳ್ಳುಳ್ಳಿ, ಶುಂಠಿ, ವಿಟಮಿನ್ ಭರಿತ ಹಣ್ಣು, ತರಕಾರಿಗಳನ್ನು ತಿನ್ನಬೇಕು. ಡೈರಿ ಉತ್ಪನ್ನಗಳು, ಸಕ್ಕರೆ, ಉಪ್ಪು, ಹುರಿದ ಆಹಾರಗಳನ್ನು ಸೇವಿಸಬಾರದು.

ಅರಿಶಿನ ಬಳಸಿ

ಅರಿಶಿನ ಬಳಸಿ

ಅರಿಶಿನವು ಕಫದಂತಹ ಲೋಳೆಯನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಇದು ನೋವು, ಕೆಮ್ಮು, ಮತ್ತು ಶ್ವಾಸಕೋಶದ ದಟ್ಟಣೆಯನ್ನು ತಡೆಯುತ್ತದೆ.

ಈರುಳ್ಳಿ ಬಳಸಿ

ಈರುಳ್ಳಿ ಬಳಸಿ

ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಅಂಶವನ್ನು ಒಳಗೊಂಡಿದೆ. ಇದನ್ನು ಸೇವಿಸುವುದರಿಂದ ಶ್ವಾಸಕೋಶದೊಳಗಿರುವ ಲೋಳೆ ಅಂಶವನ್ನು ಕರಗಿಸುತ್ತದೆ. ನಿಂಬೆ ರಸ, ನೀರು, ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಸೇರಿಸಿ ಕುದಿಸಬೇಕು. ಇದನ್ನು ಪ್ರತಿದಿನ 3-4 ಬಾರಿ ಕುಡಿದರೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಪರಿಹಾರವಾಗುವವು.

ಶುಂಠಿ ಬಳಸಿ

ಶುಂಠಿ ಬಳಸಿ

ಶುಂಠಿ ರೋಗನಿರೋಧಕ ಅಂಶವನ್ನು ಒಳಗೊಂಡಿದ್ದು, ಉರಿಯೂತವನ್ನು ಶಮನಗೊಳಿಸುತ್ತದೆ. ಶ್ವಾಸಕೋಶದಲ್ಲಿ ಲೋಳೆ ಶ್ರವಿಸುವಿಕೆಯನ್ನು ತಡೆಗಟ್ಟುತ್ತದೆ. ಪ್ರತಿದಿನ ಜೇನು ತುಪ್ಪ ಬೆರೆಸಿದ ಶುಂಠಿ ಚಹಾವನ್ನು ಮೂರು ಬಾರಿ ಸೇವಿಸಿ.

ಸೇಬು ಸೈಡರ್ ವಿನೆಗರ್ ಬಳಸಿ

ಸೇಬು ಸೈಡರ್ ವಿನೆಗರ್ ಬಳಸಿ

ಒಂದು ಕಪ್ ನೀರು, ACV 2 ಚಮಚ, 1 ಚಮಚ ಜೇನು ತುಪ್ಪವನ್ನು ಬೆರೆಸಿ ಪ್ರತಿದಿನ ಎರಡು ಬಾರಿ ಸೇವಿಸಬೇಕು. ಇದರಿಂದ ಶ್ವಾಸಕೋಶದ ದಟ್ಟಣೆಯು ಕಡಿಮೆಯಾಗುತ್ತದೆ. ಇದೊಂದು ಉತ್ತಮ ನೈಸರ್ಗಿಕ ಔಷಧಿ ಎನ್ನಬಹುದು.

ನಿಂಬೆ ಬಳಸಿ

ನಿಂಬೆ ಬಳಸಿ

ನಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್ ಲೋಳೆಯ ದಪ್ಪವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಸಿ ಹೊಂದಿರುವುದರಿಂದ ಇದೊಂದು ಉತ್ತಮ ರೋಗನಿರೋಧಕ ಔಷಧ ಎನ್ನಬಹುದು. ಸ್ವಲ್ಪ ಜೇನುತುಪ್ಪಕ್ಕೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಒಂದು ಮಿಶ್ರಣ ತಯಾರಿಸಬೇಕು. ಇದನ್ನು ದಿನದಲ್ಲಿ 2 ರಿಂದ 3 ಬಾರಿ ಸೇವಿಸಬೇಕು.

ಬೆಳ್ಳುಳ್ಳಿ ಬಳಸಿ

ಬೆಳ್ಳುಳ್ಳಿ ಬಳಸಿ

ಇದರಲ್ಲಿ ಉತ್ತಮ ಮಟ್ಟದಲ್ಲಿ ವಿಟಮಿನ್ ಎ,ಬಿ,ಸಿ ಹಾಗೂ ಕ್ಯಾಲ್ಸಿಯಂ, ಕಬ್ಬಿಣ, ತಾಮ್ರಗಳಂತಹ ಪೋಷಕಾಂಶಗಳಿವೆ. ಪ್ರತಿದಿನ 2-3 ಎಸಳು ಬೆಳ್ಳುಳ್ಳಿಯನ್ನು ಒಂದು ಕಪ್ ಹಾಲಿನಲ್ಲಿ ಬೆರೆಸಿ ಕುದಿಸಬೇಕು. ನಂತರ ಇದನ್ನು ಪ್ರತಿದಿನ ಎರಡು ಬಾರಿ ಕುಡಿದರೆ ಶ್ವಾಸಕೋಶದ ದಟ್ಟಣೆ ಕಡಿಮೆಯಾಗುತ್ತದೆ.

ಜೇನು ತುಪ್ಪ

ಜೇನು ತುಪ್ಪ

ಸೋಂಕು, ಬ್ಯಾಕ್ಟೀರಿಯಾ ಮತ್ತು ಆಂಟಿವೈರಲ್ ವಿರುದ್ಧ ಹೋರಾಡುವ ಉತ್ತಮ ಔಷಧ ಇದು. ನಿತ್ಯವೂ ಇದರ ಸೇವನೆ ಮಾಡಿದರೆ ಲೋಳೆಯ ಪ್ರಮಾಣ ಕಡಿಮೆಯಾಗುತ್ತದೆ.

ಲೈಕೋರೈಸ್ ಬೇರು

ಲೈಕೋರೈಸ್ ಬೇರು

ಕುದಿಯುವ ನೀರಿನಲ್ಲಿ ಒಂದು ಕಪ್ ಲೈಕೋರೈಸ್ ಬೇರನ್ನು ಹಾಕಿ ಹತ್ತು ನಿಮಿಷಗಳ ಕಾಲ ಕುದಿಸಬೇಕು. ಆರಿದ ನಂತರ ಈ ದ್ರಾವಣಕ್ಕೆ ಜೇನುತುಪ್ಪವನ್ನು ಬೆರೆಸಿ 2-3 ಬಾರಿ ಸೇವಿಸಬೇಕು. ಹೀಗೆ ಮಾಡುವುದರಿಂದ ಶ್ವಾಸಕೋಶದ ಸಮಸ್ಯೆಗಳು ನಿವಾರಣೆ ಹೊಂದುವವು.

ಥೈಮ್ ಬಳಸಿ

ಥೈಮ್ ಬಳಸಿ

ಥೈಮ್ ನೈಸರ್ಗಿಕ ಗಿಡಮೂಲಿಕೆಯಾಗಿದ್ದು, ಶ್ವಾಸಕೋಶವು ಬಲವಾಗಿರಲು ಸಹಾಯ ಮಾಡುತ್ತದೆ. ಒಂದು ಕಪ್ ಬಿಸಿ ನೀರಿಗೆ 1/8 ಚಮಚದ ಥೈಮ್ ಸೇರಿಸಿ ಚಹಾವನ್ನು ತಯಾರಿಸಬೇಕು. ಈ ಚಹಾಕ್ಕೆ ಜೇನು ತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಆರಾಮದಾಯಕ ಅನುಭವ ಉಂಟಾಗುವುದು.

ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು 9 ಸಲಹೆಗಳು

English summary

Home Remedies For Lung Congestion That You Need To Know

A lot of people out there do not know how to use home remedies for the treatment of lung congestion. They are not aware of the natural ingredients in their kitchen that can work effectively in treating this condition.In this article, we have mentioned the top home remedies that can be used to treat lung congestion effectively. Lung congestion is a common infection in the respiratory system.
Story first published: Saturday, July 8, 2017, 7:01 [IST]
Subscribe Newsletter