For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

By Deepu
|

ಹೊಟ್ಟೆಯ ಬೊಜ್ಜನ್ನು ಬೆಳೆಸಿಕೊಳ್ಳುವುದು ತುಂಬಾ ಸುಲಭ. ಆದರೆ ಅದನ್ನು ಕರಗಿಸುವ ಶ್ರಮ ಮಾತ್ರ ಅದನ್ನು ಕರಗಿಸಿದವರಿಗೆ ಮಾತ್ರ ಗೊತ್ತು. ಬೊಜ್ಜನ್ನು ಇಳಿಸಬೇಕೆಂದರೆ ಇಷ್ಟವಾದ ಆಹಾರ ಪದಾರ್ಥಗಳನ್ನು ತಿನ್ನುವಂತಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ಹೋದರೆ ಏನಪ್ಪಾ ಇದು ಇಷ್ಟು ದೊಡ್ಡ ಹೊಟ್ಟೆ ಎಂದು ಹೇಳುವವರು ಹಲವಾರು ಮಂದಿ ಇರುತ್ತಾರೆ.

ಬರೀ ಎರಡು ವಾರಗಳಲ್ಲಿ ಎರಡು ಇಂಚಿನಷ್ಟು ಬೊಜ್ಜು ಕರಗಿಸಿ!

ಬೊಜ್ಜು ಕರಗಿಸಲು ತುಂಬಾ ಸಮಯ ಬೇಕಾಗುತ್ತದೆ. ಆದರೆ ಈ ಲೇಖನದಲ್ಲಿ ಕೊಟ್ಟಿರುವಂತಹ ಸಲಹೆಗಳನ್ನು ಪಾಲಿಸಿಕೊಂಡು ಹೋದರೆ ಆಗ ನಿಮಗೆ ಹೊಟ್ಟೆಯ ಬೊಜ್ಜು ಬೇಗನೆ ಕರಗುವುದು ಮತ್ತು ಹೆಚ್ಚು ಆಹಾರ ಪಥ್ಯ ಕೂಡ ಮಾಡಬೇಕೆಂದಿಲ್ಲ. ನಿಮ್ಮ ಬೊಜ್ಜು ಕರಗಬೇಕೆಂದರೆ ಮೊದಲು ಹೊಟ್ಟೆಯ ಬೊಜ್ಜು ಕರಗಬೇಕು. ಆಗ ಮಾತ್ರ ದೇಹದ ತೂಕವು ಕಡಿಮೆಯಾಗಿ ನೀವು ಫಿಟ್ ಆಗಿ ಕಾಣುತ್ತೀರಿ. ಅದಕ್ಕೆ ನೀವು ಹೆಚ್ಚು ಶ್ರಮ ಪಡಬೇಕಿಲ್ಲ. ಈ ಲೇಖನದಲ್ಲಿ ಕೊಟ್ಟಿರುವ ಸಲಹೆ ಅಳವಡಿಸಿಕೊಳ್ಳಿ. ಅದಕ್ಕೆ ಮೊದಲು ಈ ಲೇಖನ ಸಂಪೂರ್ಣವಾಗಿ ಓದಿ...

ಜೀರಿಗೆ

ಜೀರಿಗೆ

ಎರಡು ಚಮಚ ಜೀರಿಗೆಯನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಇದನ್ನು ಬೆಳಗ್ಗೆ ತೆಗೆದು ಕುದಿಸಿ. ಸೋಸಿಕೊಂಡ ಬಳಿಕ ಇದಕ್ಕೆ ಅರ್ಧ ಲಿಂಬೆ ಹಾಕಿಕೊಂಡು ಕುಡಿಯಿರಿ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದರೆ ತೂಕ ಬೇಗನೆ ಕಡಿಮೆಯಾಗುವುದು.

ಬಿಸಿ ನೀರು

ಬಿಸಿ ನೀರು

ನೀವು ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯಿರಿ. ಇದರಿಂದ ದೇಹದಲ್ಲಿರುವ ಕೊಬ್ಬು ವಿಘಟನೆಯಾಗುವುದು ಮತ್ತು ತೂಕ ಕಳೆದುಕೊಳ್ಳಲು ನೆರವಾಗುವುದು.

ಬಿಸಿ ನೀರು ಮತ್ತು ಲಿಂಬೆ

ಬಿಸಿ ನೀರು ಮತ್ತು ಲಿಂಬೆ

ಹೊಟ್ಟೆಯ ಬೊಜ್ಜು ಕರಗಿಸಬೇಕೆಂದು ನಿರ್ಧಾರ ಮಾಡಿಕೊಂಡಿರುವವರು ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರಿಗೆ ಲಿಂಬೆ ರಸ ಹಾಕಿಕೊಂಡು ಕುಡಿಯಬೇಕು.

ಬಳಕೆಯ ವಿಧಾನ

*ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ.

*ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.

*ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಠ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ.

*ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ಜೇನುತುಪ್ಪ

ಜೇನುತುಪ್ಪ

ತೂಕ ಕಳೆದುಕೊಳ್ಳಲು ನೀವು ಸೇವಿಸುವಂತಹ ಪ್ರತಿಯೊಂದು ಆಹಾರಕ್ಕೆ ಜೇನುತುಪ್ಪ ಬೆರೆಸಿಕೊಂಡರೆ ಅದರಿಂದ ತೂಕ ಕಳೆದುಕೊಳ್ಳುವ ಪ್ರಕ್ರಿಯೆಗೆ ವೇಗ ಸಿಗುವುದು.

ಅಗತ್ಯವಿರುವ ಸಾಮಾಗ್ರಿಗಳು ಜೇನು

ಎರಡು ಚಿಕ್ಕ ಚಮಚ ಉಗುರುಬೆಚ್ಚನೆಯ ನೀರು- ಒಂದು ಲೋಟ.

ವಿಧಾನ

ಬೆಳಿಗ್ಗೆದ್ದ ಬಳಿಕ ದಿನದ ಪ್ರಥಮ ಆಹಾರವಾಗಿ ಇವೆರಡನ್ನೂ ಬೆರೆಸಿ ನಿಧಾನವಾಗಿ ಕುಡಿಯಿರಿ. ನಂತರದ ಕನಿಷ್ಠ ನಲವತ್ತೈದು ನಿಮಿಷ ಏನನ್ನೂ

ಸೇವಿಸದಿರಿ.

ಟೊಮೆಟೋ

ಟೊಮೆಟೋ

ಹೊಟ್ಟೆಯಲ್ಲಿ ತುಂಬಿಕೊಂಡಿರುವಂತಹ ಕೊಬ್ಬನ್ನು ತೆಗೆದುಹಾಕಲು ಟೊಮೆಟೋ ಜ್ಯೂಸ್ ತುಂಬಾ ಪರಿಣಾಮಕಾರಿ. ಕೇವಲ 9.5 ಔನ್ಸ್ ನಷ್ಟು ಟೊಮೆಟೋ ಜ್ಯೂಸ್ ನಿಂದ ಮಹಿಳೆಯು ತನ್ನ ಹೊಟ್ಟೆಯ ಭಾಗದ ಶೇ.50ರಷ್ಟು ಕೊಬ್ಬನ್ನು ಕರಗಿಸಬಹುದು.

ಶುಂಠಿ

ಶುಂಠಿ

ಸೇರಿಸಿದ ಟೀ ಕುಡಿಯಿರಿ ಹಸಿಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಸರಿ, ಆದರೆ ಇದು ದೇಹದ ಬಿಸಿಯನ್ನೂ ಹೆಚ್ಚಿಸುತ್ತದೆಂದು (thermogenic) ನಿಮಗೆ ಗೊತ್ತಿತ್ತೇ? ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಸೊಂಟದ ಸುತ್ತ ಈಗಾಗಲೇ ಸಂಗ್ರಹವಾಗಿರುವ ಕೊಬ್ಬು ಎಷ್ಟೋ ವರ್ಷಗಳ ಹಿಂದಿನಿಂದ ಸಂಗ್ರಹವಾಗುತ್ತಾ ಬಂದಿರಬಹುದಾಗಿದ್ದು ಶುಂಠಿಯ ನಿಯಮಿತ ಸೇವನೆಯಿಂದ ನಿಧಾನವಾಗಿ

ಕರಗತೊಡಗುತ್ತದೆ. ಜೊತೆಗೇ ಶುಂಠಿಯ ಸೇವನೆಯಿಂದ ದೇಹದಲ್ಲಿ ಒತ್ತಡದ ಕಾರಣ ಉತ್ಪತ್ತಿಯಾಗುವ ಕಾರ್ಟಿಸೋಲ್ (cortisol) ಎಂಬ ಹಾರ್ಮೋನು ಉತ್ಪತ್ತಿಯನ್ನು ತಡೆಯಬಹುದು. ಇದರಿಂದ ರಕ್ತದಲ್ಲಿ ಹೆಚ್ಚಬಹುದಾಗಿದ್ದ ಸಕ್ಕರೆಯ ಪ್ರಮಾಣವನ್ನು ಮಿತಿಗೊಳಿಸಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ.

ಬಳಕೆಯ ವಿಧಾನ

*ಒಂದು ಲೋಟಕ್ಕಿಂತ ಕೊಂಚ ಹೆಚ್ಚು ನೀರನ್ನು ಕುದಿಸಿ.

*ಈ ನೀರಿನಲ್ಲಿ ಒಂದು ಇಂಚು ಹಸಿಶುಂಠಿಯನ್ನು ಜಜ್ಜಿ ಸುಮಾರು ಹತ್ತು ನಿಮಿಷಗಳವೆರೆಗೆ ಚಿಕ್ಕ ಉರಿಯಲ್ಲಿ ಕುದಿಸಿ.

*ಈಗ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಒಂದು ಚಮಚ ಈಗತಾನೇ ಹಿಂಡಿದ

*ಲಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ.

*ಈ ಚಹಾ ಅನ್ನು ಸೋಸಿ ಬಿಸಿಬಿಸಿ ಇರುವಂತೆಯೇ ಸೇವಿಸಿ. ಒಂದು ದಿನಕ್ಕೆ ಕನಿಷ್ಠ ಎರಡು ಕಪ್ ಈ ಟೀ ಸೇವಿಸಿ ಕೊಬ್ಬಿನಿಂದ ಮುಕ್ತಿಪಡೆಯಿರಿ.

ಏಲಕ್ಕಿ

ಏಲಕ್ಕಿ

ಏಲಕ್ಕಿಯಲ್ಲಿರುವಂತಹ ಔಷಧೀಯ ಗುಣದಿಂದ ದೇಹದಲ್ಲಿರುವ ಕೊಬ್ಬು ಕರಗಿ ಅದು ಕೊಬ್ಬಿನ ಚಯಪಚಾಯ ಕ್ರಿಯೆ ಹೆಚ್ಚು ಮಾಡುವ ಸಾಮರ್ಥ್ಯ ಹೊಂದಿರುವುದು.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿಯಲ್ಲಿರುವ ಕೆಲವೊಂದು ಗುಣಗಳು ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಎಂದು ಹಲವಾರು ಸಂಶೋಧನೆಗಳು ಹೇಳಿವೆ. ಒಂದು ಕಪ್ ಬಿಸಿ ನೀರಿನೊಂದಿಗೆ ಜೇನುತುಪ್ಪ ಹಾಕಿ ಅದಕ್ಕೆ ದಾಲ್ಚಿನಿ ಹುಡಿ ಬೆರೆಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಪುದೀನಾ

ಪುದೀನಾ

ಹೊಟ್ಟೆಯು ಡೊಳ್ಳು ಹೊಟ್ಟೆಯಾಗಲು ಕಾರಣವೆಂದರೆ ಹೊಟ್ಟೆಯ ಸುತ್ತಲು ಇರುವಂತಹ ಕೊಬ್ಬು. ಇದಕ್ಕೆ ಪುದೀನಾವನ್ನು ದಿನನಿತ್ಯದ ಅಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

 ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಇರುವಂತಹ ಅಸಿಟಿಕ್ ಅಮ್ಲವು ತೂಕ ಕಳೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು ಮತ್ತು ಕೊಬ್ಬು ಜಮೆಯಾಗುವುದನ್ನು ತಡೆಯುವುದು.

ಪಾರ್ಸ್ಲಿ ಜ್ಯೂಸ್

ಪಾರ್ಸ್ಲಿ ಜ್ಯೂಸ್

ಪಾರ್ಸ್ಲಿಯಲ್ಲಿ ಹಲವಾರು ರೀತಿಯ ವಿಟಮಿನ್, ಖನಿಜಾಂಶ ಮತ್ತು ಇತರ ಪೋಷಕಾಂಶಗಳು ಇವೆ. ಇದರಲ್ಲಿ ಕ್ಯಾಲರಿ ಕಡಿಮೆಯಿದ್ದು, ನಾರಿನಾಂಶವು ಅಧಿಕವಾಗಿದೆ. ಇದು ಚಯಾಪಚಯ ಕ್ರಿಯೆ ಹೆಚ್ಚಿಸುವುದು ಮತ್ತು ಹೊಟ್ಟೆಯ ಬೊಜ್ಜು ಕರಗಿಸಲು ತುಂಬಾ ಪರಿಣಾಮಕಾರಿ.

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳು

ದೇಹದಲ್ಲಿ ಇರುವಂತಹ ಕೊಬ್ಬನ್ನು ತೆಗೆದುಹಾಕಲು ಕರಿಬೇವಿನ ಎಲೆಗಳು ತುಂಬಾ ಸಹಕಾರಿ. ಟ್ರೈಗ್ಲಿಸರೈಟ್ ಮತ್ತು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿಕೊಂಡು ಬೊಜ್ಜನ್ನು ಸಂಪೂರ್ಣವಾಗಿ ತೆಗೆದುಹಾಕಲು ನೆರವಾಗುವುದು.

ಫ್ಲೆಕ್ಸ್ ಬೀಜಗಳು

ಫ್ಲೆಕ್ಸ್ ಬೀಜಗಳು

ಫ್ಲೆಕ್ಸ್ ಬೀಜಗಳಲ್ಲಿ ನಾರಿನಾಂಶವು ಅಧಿಕವಾಗಿದೆ ಮತ್ತು ಇದು ಹಸಿವು ಕಡಿಮೆ ಮಾಡುವುದು. ಇದರಲ್ಲಿ ಲಿಗ್ನನ್ಸ್ ಮೂಲಗಳು ಸಮೃದ್ಧವಾಗಿದೆ. ಇದು ತುಂಬಾ ಪ್ರಭಾವಿ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಚಯಾಪಚಯ ಕ್ರಿಯೆ ಹೆಚ್ಚು ಮಾಡುವುದು.

ಬಾದಾಮಿ

ಬಾದಾಮಿ

ನಾರಿನಾಂಶವು ಹೆಚ್ಚಾಗಿರುವ ಆಹಾರ ಸೇವನೆ ಮಾಡಿದರೆ ಅದರಿಂದ ಕೊಬ್ಬು ಕರಗಿಸಲು ಮತ್ತು ತೂಕ ಕಳೆದುಕೊಳ್ಳಲು ನೆರವಾಗುವುದು. ಬಾದಾಮಿಯಲ್ಲಿ ಒಂದು ದಿನಕ್ಕೆ ಬೇಕಾಗಿರುವ ಶೇ.14ರಷ್ಟು ನಾರಿನಾಂಶವಿದೆ.

 ಕಲ್ಲಂಗಡಿ

ಕಲ್ಲಂಗಡಿ

ಪ್ರತಿನಿತ್ಯ ಎರಡು ಲೋಟ ಕಲ್ಲಂಗಡಿ ಜ್ಯೂಸ್ ಕುಡಿದರೆ ಅದರಿಂದ ಕೆಲವೇ ವಾರಗಳಲ್ಲಿ ತೂಕ ಕಳೆದುಕೊಳ್ಳಬಹುದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ.

 ಬೀನ್ಸ್

ಬೀನ್ಸ್

ಬೀನ್ಸ್ ನಲ್ಲಿ ಹೀರಿಕೊಳ್ಳುವಂತಹ ನಾರಿನಾಂಶವು ಹೆಚ್ಚಿನ ಮಟ್ಟದಲ್ಲಿದೆ ಮತ್ತು ಇಂತಹ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆ ಮಾಡಬಹುದು.

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿಯು ಚಯಾಪಚಯ ಕ್ರಿಯೆ ಹೆಚ್ಚು ಮಾಡಿ ಕ್ಯಾಲರಿ ದಹಿಸುವುದು. ಒಂದು ದೊಡ್ಡ ಸೌತೆಕಾಯಿಯಲ್ಲಿ ಕೇವಲ 45 ರಷ್ಟು ಕ್ಯಾಲರಿ ಇದೆ. ಇದು ತೂಕ ಕಳೆದುಕೊಳ್ಳಲು ಪರಿಣಾಮಕಾರಿ.

ಮೆಂತೆ ನೀರು

ಮೆಂತೆ ನೀರು

ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.

ಹಚ್ಚ ಹಸಿರು ಜ್ಯೂಸ್!

ಹಚ್ಚ ಹಸಿರು ಜ್ಯೂಸ್!

ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.

ಲೋಳೆಸರ ಮತ್ತು ಜೇನು

ಲೋಳೆಸರ ಮತ್ತು ಜೇನು

ಹೊಟ್ಟೆಯ ಕೊಬ್ಬನ್ನು ಶೀಘ್ರವಾಗಿ ಕರಗಿಸಲು ಲೋಳೆಸರವೂ ಉತ್ತಮ ಆಯ್ಕೆಯಾಗಿದೆ. ಇದರ ರಸ ಸಣ್ಣ ಕರುಳನ್ನು ಸ್ವಚ್ಛಗೊಳಿಸ್ತುತದೆ ಹಾಗೂ ಹೊಟ್ಟೆಯುಬ್ಬರಿಕೆಯನ್ನು ತಡೆಯುತ್ತದೆ. ಒಂದು ದೊಡ್ಡ ಲೋಟ ನೀರಿನಲ್ಲಿ ತಲಾ ಎರಡು ದೊಡ್ಡ ಚಮಚ ಲೋಳೆಸರದ ರಸ ಮತ್ತು ಜೇನನ್ನು ಬೆರೆಸಿ ಈ ಪೇಯವನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿ. ಸುಮಾರು ಮುಕ್ಕಾಲು ಗಂಟೆಯ ಬಳಿಕ ಅಲ್ಪ ಉಪಾಹಾರ ಸೇವಿಸಿ. ಹೊಟ್ಟೆಯ ಕೊಬ್ಬು ಕರಗಿಸುವ ಪೇಯ ಸೇಬಿನ ಸಿರ್ಕಾ ಒಂದು ದೊಡ್ಡ ಲೋಟ ನೀರಿಗೆ ಎರಡು ದೊಡ್ಡಚಮಚ ಸೇಬಿನ ಶಿರ್ಕಾ (pple cider vinegar) ಬೆರೆಸಿ

ಇದಕ್ಕೆ ಒಂದು ಮಧ್ಯಮಗಾತ್ರದ ಲಿಂಬೆಯರಸ, ಕೊಂಚ ದಾಲ್ಚಿನ್ನಿಪುಡಿ ಮತ್ತು ಕೊಂಚ ಜೇನನ್ನು ಬೆರೆಸಿ ಕಲಕಿ. ಈ ಪೇಯವನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿ. ಸುಮಾರು ಮುಕ್ಕಾಲು ಘಂಟೆಯ ಬಳಿಕ ಅಲ್ಪ ಉಪಾಹಾರ ಸೇವಿಸಿ.

ಸೇಬು

ಸೇಬು

ಪ್ರತಿನಿತ್ಯ ಸೇಬು ಸೇವನೆ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕರಗಿಸಬಹುದು. ಇದರಲ್ಲಿ ವಿಟಮಿನ್ ಸಿ ಅಧಿಕ ಮಟ್ಟದಲ್ಲಿದೆ.

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಇದೆ. ಇದು ಚಯಾಪಚಯ ಕ್ರಿಯೆ ಹೆಚ್ಚು ಮಾಡುವುದು ಮತ್ತು ಇದರಿಂದ ಕ್ಯಾಲರಿ ದಹಿಸಬಹುದು

English summary

Home Remedies To Lose Tummy Fat Without Dieting

Reducing belly fat is the only way to end this once and for all. You need to expend more energy than what you take in. When you do this, your body will draw on its own stored fat deposits and uses this energy rather than food. You need to try out these best home remedies for tummy fat. Read further to know!
X
Desktop Bottom Promotion