ಕಾಮಾಲೆ ರೋಗವನ್ನು ಬುಡ ಸಮೇತ ಕಿತ್ತು ಹಾಕುವ ಮನೆಮದ್ದುಗಳು

By: Hemanth
Subscribe to Boldsky

ಮಳೆಗಾಲ ಬಂತೆಂದರೆ ನೀರು ಕಲುಷಿತವಾಗುವುದರಿಂದ ಹಲವಾರು ರೀತಿಯ ರೋಗಗಳು ದೇಹವನ್ನು ಭಾದಿಸುವುದು. ಜ್ವರದಿಂದ ಹಿಡಿದು ಕಾಮಾಲೆ ರೋಗದ ತನಕ ಪ್ರತಿಯೊಂದು ತುಂಬಾ ಅಪಾಯಕಾರಿ ರೋಗಗಳು. ಅದರಲ್ಲೂ ಕಾಮಾಲೆ ರೋಗವನ್ನು ಕಡೆಗಣಿಸಿದರೆ ಪ್ರಾಣಕ್ಕೆ ಕೂಡ ಅಪಾಯ ಎದುರಾಗಬಹುದು!

ಅದರಲ್ಲೂ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿರುವಂತಹ ಯಕೃತ್(ಲಿವರ್) ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಾಗ ಕಾಮಾಲೆ ರೋಗ ಕಾಣಿಸಿಕೊಳ್ಳುತ್ತದೆ. ಕಾಮಾಲೆ ರೋಗ ಕಾಣಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಬಿಲಿರುಬಿನ್ ಮಟ್ಟವು ಏರಿಕೆಯಾಗುತ್ತದೆ. ಇದರಿಂದ ಚರ್ಮವು ಹಳದಿಯಾಗಲು ಆರಂಭವಾಗುತ್ತದೆ. ಈ ರೋಗ ಕಂಡುಬಂದ ತಕ್ಷಣ ಅದಕ್ಕೆ ಸರಿಯಾದ ಚಿಕಿತ್ಸೆ ಅಗತ್ಯವಾಗಿ ನೀಡಲೇಬೇಕು. ಇಲ್ಲವಾದಲ್ಲಿ ಯಕೃತ್ ಕೆಟ್ಟು ಹೋಗಿ ಜೀವಕ್ಕೆ ಅಪಾಯವಾಗಬಹುದು.

ಇನ್ನು ಚರ್ಮ ಹಳದಿಯಾಗುವುದು, ಕಣ್ಣುಗಳು ಬಿಳಿಯಾಗುವುದು, ನಿಶ್ಯಕ್ತಿ, ಹೊಟ್ಟೆನೋವು, ತೂಕ ಕಡಿಮೆಯಾಗುವುದು, ವಾಂತಿ ಮತ್ತು ಜ್ವರ ಕಾಮಾಲೆ ರೋಗದ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ರಕ್ತದಲ್ಲಿ ಬಿಲಿರುಬಿನ್ ಮಟ್ಟವು ಹೆಚ್ಚಾದಾಗ ಕಾಮಾಲೆ ರೋಗವು ಕಾಣಿಸಿಕೊಳ್ಳುವುದು.

ಬಿಲಿರುಬಿನ್ ಅಧಿಕವಾಗಲು ಇನ್ನು ಹಲವಾರು ಕಾರಣಗಳು ಇರಬಹುದು. ಆದರೆ ಪ್ರಮುಖವಾಗಿ ಕಾಮಾಲೆ ರೋಗದಿಂದ ಹೀಗೆ ಆಗುತ್ತದೆ. ಕಾಮಾಲೆ ರೋಗಕ್ಕೆ ಹಿಂದಿನಿಂದಲೂ ಹಳ್ಳಿ ಮದ್ದೇ ಪರಿಹಾರವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ವೈದ್ಯರ ಕಡೆ ಓಡುತ್ತಾರೆ. ಕಾಮಾಲೆ ರೋಗವನ್ನು ಕೆಲವೊಂದು ಮನೆಮದ್ದಿನಿಂದಲೇ ನಿವಾರಣೆ ಮಾಡಬಹುದು. ಅದು ಹೇಗೆಂದು ಈ ಲೇಖನದ ಮೂಲಕ ತಿಳಿಯಿರಿ.....  

ಬಾರ್ಲಿ ನೀರು

ಬಾರ್ಲಿ ನೀರು

ಬಾರ್ಲಿ ನೀರನ್ನು ದಿನನಿತ್ಯ ಕುಡಿಯುವುದಿಂದ ಜೀರ್ಣಾಂಗ ವ್ಯವಸ್ಥೆಯು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ನೆರವಾಗುವುದು. 3-4 ಲೀಟರ್ ನೀರಿಗೆ ಒಂದು ಕಪ್ ಬಾರ್ಲಿ ಹಾಕಿಕೊಂಡು ಅದನ್ನು ಮೂರು ಗಂಟೆಗಳ ಕಾಲ ಕುದಿಸಿ. ನಿಯಮಿತವಾಗಿ ಈ ನೀರು ಸೇವಿಸಿದರೆ ಕಾಮಾಲೆ ರೋಗವು ಕಡಿಮೆಯಾಗಿ ದೇಹವು ಮೊದಲಿನ ಸ್ಥಿತಿಗೆ ಬರುವುದು.

ಬಾರ್ಲಿ ನೀರು: ಇದುವೇ ಆರೋಗ್ಯ ವೃದ್ಧಿಗೆ ಪನ್ನೀರು

ಕಬ್ಬಿನ ರಸ

ಕಬ್ಬಿನ ರಸ

ಕಬ್ಬಿನ ರಸ ಕುಡಿದರೆ ಮೂತ್ರವು ಸರಿಯಾಗಿ ಹೊರಹೋಗುವುದು ಮತ್ತು ಯಕೃತ್ ನ (ಲಿವರ್) ಸರಿಯಾದ ಕಾರ್ಯನಿರ್ವಹಣೆಗೆ ನೆರವಾಗುವುದು. ಇದು ಬಿಲಿರುಬಿನ್ ಮಟ್ಟ ಮತ್ತು ಬಿಲೆ ಸ್ರವಿಸುವಿಕೆಯನ್ನು ನಿಯಂತ್ರಣದಲ್ಲಿಡುವುದು. ಕಬ್ಬಿನ ರಸವನ್ನು ದಿನದಲ್ಲಿ 2-3 ಸಲ ಸೇವಿಸಿ. ಇದಕ್ಕೆ ಸ್ವಲ್ಪ ಲಿಂಬೆರಸ ಹಾಕಿ ಕುಡಿದರೆ ಮತ್ತಷ್ಟು ಲಾಭ ಸಿಗುವುದು.

ಲಿಂಬೆ ಜ್ಯೂಸ್

ಲಿಂಬೆ ಜ್ಯೂಸ್

ಲಿಂಬೆರಸವು ಹಾನಿಗೊಳಗಾದ ಕೋಶಗಳನ್ನು ಸರಿಪಡಿಸುವುದು. ಒಂದು ಲೋಟ ಲಿಂಬೆರಸ ಕುಡಿದರೆ ಅದರಿಂದ ಕಾಮಾಲೆ ರೋಗವು ಕಡಿಮೆಯಾಗುವುದು ಮಾತ್ರವಲ್ಲದೆ ರುಚಿಕರವಾಗಿರುವ ಈ ಜ್ಯೂಸ್ ದೇಹಕ್ಕೆ ತಾಜಾತನ ನೀಡುವುದು. ದಿನದಲ್ಲಿ 2-3 ಲಿಂಬೆ ಜ್ಯೂಸ್ ಕುಡಿದರೆ ಕಾಮಾಲೆ ರೋಗದಿಂದ ಬೇಗನೆ ಚೇತರಿಸಿಕೊಳ್ಳಬಹುದು.

ಪಪ್ಪಾಯಿ ಎಲೆಯ ಪೇಸ್ಟ್ ಮತ್ತು ಜೇನುತುಪ್ಪ

ಪಪ್ಪಾಯಿ ಎಲೆಯ ಪೇಸ್ಟ್ ಮತ್ತು ಜೇನುತುಪ್ಪ

ಯಕೃತ್ ನ ಕೆಲವೊಂದು ಸಮಸ್ಯೆಗಳಿಗೆ ಪಪ್ಪಾಯಿ ತುಂಬಾ ಒಳ್ಳೆಯದು. ಅದರಲ್ಲೂ ಇದರ ಎಲೆಗಳು ತುಂಬಾ ಪರಿಣಾಮಕಾರಿ. ಪಪ್ಪಾಯಿ ಎಲೆಯ ಪೇಸ್ಟ್ ಮಾಡಿಕೊಂಡು ಅದನ್ನು ಒಂದು ಚಮಚ ಜೇನುತುಪ್ಪದ ಜತೆಗೆ ಸೇವಿಸಿದರೆ ಕಾಮಾಲೆ ರೋಗವು ನಿವಾರಣೆಯಾಗುವುದು. ಜೇನುತುಪ್ಪವು ಇದಕ್ಕೆ ಸಿಹಿ ನೀಡುವುದು ಮಾತ್ರವಲ್ಲದೆ ಯಕೃತ್ ಗೆ ಕೂಡ ಇದರಿಂದ ಹೆಚ್ಚಿನ ಲಾಭವಿದೆ.

ಶುಂಠಿ

ಶುಂಠಿ

ಹಣ್ಣುಗಳ ಜ್ಯೂಸ್‌ನ್ನು ಕಣ್ಣು ಮುಚ್ಚಿ ಕುಡಿಯಬಹುದು. ಆದರೆ ಶುಂಠಿ ಜ್ಯೂಸ್ ಕುಡಿಯುವುದು ಸುಲಭವಲ್ಲ. ಶುಂಠಿ ಜ್ಯೂಸ್ ಯಕೃತ್ ನ ಸಮಸ್ಯೆಯಿಂದ ಕಾಪಾಡಿ ಅದು ಸಾಮಾನ್ಯವಾಗಿ ಕೆಲಸ ಮಾಡಲು ನೆರವಾಗುವುದು. ಒಂದು ಚಮಚ ಜೇನುತುಪ್ಪ ಹಾಕಿ ದಿನದಲ್ಲಿ 2-3 ಸಲ ಇದರ ಸೇವನೆ ಮಾಡಿದರೆ ಕಾಮಾಲೆ ರೋಗದಿಂದ ಚೇತರಿಸಿಕೊಳ್ಳಬಹುದು.

ಲವಲವಿಕೆಯ ಆರೋಗ್ಯಕ್ಕೆ ದಿನಕ್ಕೊಂದು ಕಪ್ ಶುಂಠಿ ಜ್ಯೂಸ್!

ಶುಂಠಿ ಜ್ಯೂಸ್ ಮಾಡುವ ವಿಧಾನ

ಶುಂಠಿ ಜ್ಯೂಸ್ ಮಾಡುವ ವಿಧಾನ

ಸುಮಾರು ಒಂದು ಇಂಚಿನಷ್ಟು ದೊಡ್ಡ ಹಸಿಶುಂಠಿಯನ್ನು ತೊಳೆದು ಸಿಪ್ಪೆ ನಿವಾರಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ. ಬಳಿಕ ಕೊಂಚವೇ ನೀರು ಸೇರಿಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಗೊಟಾಯಿಸಿ. ಬಳಿಕ ಒಂದು ಲೋಟವಾಗುವಷ್ಟು ನೀರು ಸೇರಿಸಿ ಇನ್ನಷ್ಟು ಕಡೆಯಿರಿ. ಈ ಮಿಶ್ರಣವನ್ನು ತೆಳುವಾದ ಬಟ್ಟೆಯಲ್ಲಿ ಗಟ್ಟಿಯಾಗಿ ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸಕ್ಕೆ ಕೊಂಚ ಜೇನು ಮತ್ತು ಅರ್ಧ ಲಿಂಬೆಯ ರಸವನ್ನು ಸೇರಿಸಿ, ಆದರೆ ಕಡ್ಡಾಯವಿಲ್ಲ. ಇವು ಕೇವಲ ಶುಂಠಿಯ ರಸದ ಖಾರವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಈ ರಸವನ್ನು ನಿತ್ಯವೂ ಒಂದು ಲೋಟ ಕುಡಿಯಿರಿ.

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್

ವಿಟಮಿನ್ ಹಾಗೂ ಪೋಷಕಾಂಶಗಳಿಂದ ತುಂಬಿರುವಂತಹ ಕ್ಯಾರೆಟ್ ಜ್ಯೂಸ್ ಕುಡಿಯಲು ಕೂಡ ರುಚಿಕರ. ಕ್ಯಾರೆಟ್ ಜ್ಯೂಸ್ ಯಕೃತ್ ಅನ್ನು ನಿರ್ವಿಷಗೊಳಿಸುವುದು ಮಾತ್ರವಲ್ಲದರೆ ಅದಕ್ಕೆ ಪುನಶ್ಚೇತನ ನೀಡಿ ಹಲವಾರು ಸಮಸ್ಯೆಗಳನ್ನು ನಿವಾರಿಸುವುದು. ಪ್ರತೀ ದಿನ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿದರೆ ವೇಗವಾಗಿ ಚೇತರಿಸಿಕೊಳ್ಳಬಹುದು.

ಬೆಳಗಿನ ಉಪಹಾರಕ್ಕೆ ಒಂದು ಗ್ಲಾಸ್ ಕ್ಯಾರೆಟ್ ಶುಂಠಿ ಜ್ಯೂಸ್!

ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿಯಲ್ಲಿಯೂ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಪ್ರಮಾಣ ಹೇರಳವಾಗಿದ್ದು ಕಾಮಾಲೆಗೆ ಉತ್ತಮವಾದ ಆಹಾರವಾಗಿದೆ. ಇದಕ್ಕಾಗಿ ಬೀಜ ನಿವಾರಿಸಿ ಕೊಂಚ ನೀರಿನಲ್ಲಿ ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿಯುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಇದು ಯಕೃತ್‌ನ ಜೀವಕೋಶಗಳನ್ನು ಬೆಳೆಸಿ ಹಳೆಯ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ.

ಕೊತ್ತಂಬರಿ ಬೀಜದ ನೀರು

ಕೊತ್ತಂಬರಿ ಬೀಜದ ನೀರು

ಕೊತ್ತಂಬರಿ ಬೀಜವನ್ನು ನಾವು ಪ್ರತಿಯೊಂದು ಮನೆಗಳಲ್ಲೂ ಕಾಣುತ್ತೇವೆ. ಇದೇ ಕೊತ್ತಂಬರಿ ಬೀಜದ ನೀರು ಯಕೃತ್ ಅನ್ನು ಶುದ್ಧೀಕರಿಸುವುದು. ಇಷ್ಟು ಮಾತ್ರವಲ್ಲದೆ ರಕ್ತದಲ್ಲಿರುವ ವಿಷಕಾರಿ ಅಂಶ ಹಾಗೂ ಹೆಚ್ಚಿನ ಬಿಲಿರುಬಿನ್ ನ್ನು ತೆಗೆದುಹಾಕುವುದು. ಮೂರು ಕಪ್ ಶುದ್ಧೀಕರಿಸಿದ ನೀರಿನಲ್ಲಿ 2-3 ಚಮಚ ಕೊತ್ತಂಬರಿ ಬೀಜವನ್ನು ರಾತ್ರಿಯಿಡಿ ನೆನೆಯಲು ಹಾಕಿ ಅಥವಾ ಅರ್ಧ ಲೀಟರ್ ನೀರಿನಲ್ಲಿ ಕೊತ್ತಂಬರಿ ಬೀಜವನ್ನು ಕುದಿಸಿ. ಈ ನೀರನ್ನು ದಿನದಲ್ಲಿ ಮೂರು ಸಲ 15 ದಿನಗಳ ಕಾಲ ಕುಡಿದರೆ ಕಾಮಾಲೆ ರೋಗವು ನಿವಾರಣೆಯಾಗುವುದು.

English summary

Home Remedies For Jaundice

The symptoms of jaundice include yellow pigmentation of the skin, fatigue, abdominal pain, weight loss, vomiting and fever. The good news though, is that jaundice can be controlled at home with the below-mentioned remedies.
Story first published: Thursday, June 22, 2017, 7:02 [IST]
Subscribe Newsletter