ಆರೋಗ್ಯ ಟಿಪ್ಸ್: ಕ್ಯಾನ್ಸರ್ ರೋಗ ನಿಯಂತ್ರಿಸಲು 'ಹರ್ಬಲ್ ಸೂಪ್'

By: Suhani B
Subscribe to Boldsky

ಪ್ರಪಂಚದಲ್ಲಿರುವ ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ಇದನ್ನು ಹೊರತು ಪಡಿಸಿದವರು ಯಾರೂ ಇಲ್ಲ. ತಮ್ಮ ಆರೋಗ್ಯದ ಬಗ್ಗೆ ಎಲ್ಲರಿಗೂ ಸಂತಸದ ಕಾಳಜಿ ಇದ್ದೇ ಇರುತ್ತದೆ. ಅನಾರೋಗ್ಯ ಕಾಡಿತೆಂದರೆ ಎಲ್ಲರಿಗೂ ಗಾಬರಿ ಹುಟ್ಟಿಸುವಂತದ್ದೇ ಮತ್ತು ಕೆಲವರನ್ನಂತೂ ನಿರುತ್ಸಾಹಗೊಳಿಸುತ್ತದೆ ಅದರಲ್ಲಂತೂ ಮಾರಕ ಕಾಯಿಲೆಯಾದ ಕ್ಯಾನ್ಸರ್ ಬಂದರಂತು ಕೇಳುವುದೇ ಬೇಡ ಬೆನ್ನಿನ ಜಂಘಾಬಲವನ್ನೇ ಉಡುಗಿಸುತ್ತದೆ.

tomato

ನಮಗೆಲ್ಲಾ ತಿಳಿದಂತೆ ಕಾಯಿಲೆ ಪ್ರತಿಯೊಂದು ಜೀವಿಗೂ ಸರ್ವೇಸಾಮಾನ್ಯ. ಅದರಲ್ಲಿಯೂ ಜೀವ ಹಾನಿಕಾರಕವಾದ ಕ್ಯಾನ್ಸರ್, ಸ್ಟ್ರೋಕ್ ,ಏಡ್ಸ್ ಇತ್ಯಾದಿ ಇಂತಹ ಜೀವ ಹಾನಿಕಾರಕ ಕಾಯಿಲೆಗಳು ನಮ್ಮನ್ನು ತಲ್ಲಣಗೊಳ್ಳಿಸುತ್ತವೆ. ಆದರೆ ಸಾಮಾನ್ಯವಾಗಿ ಸಣ್ಣ ಪುಟ್ಟ ಕಾಯಿಲೆಗಳಾದ ಕೆಮ್ಮು, ಜ್ಜರ, ಮೈಕೈ ನೋವು ಇತ್ಯಾದಿಗಳಿಂದ ನಮ್ಮ ಸಮಯ, ಹಣ ಮತ್ತು ಶರೀರದಲ್ಲಿ ಶಕ್ತಿ ಕುಂಠಿತವಾಗುತ್ತದೆ ಇಂತಹ ಮಾರಕ ಕಾಯಿಲೆಗಳಾದ ಕ್ಯಾನ್ಸರ್ ಇತ್ಯಾದಿಗಳನ್ನು ತಡೆಗಟ್ಟಲು, ಮತ್ತು ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡಲ್ಲಿ ಕಾಯಿಲೆಗಳಿಂದ ದೂರವುಳಿಯಬಹುದು.

tomato soup

ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಒಳಗಾದವರ ಜೀವನ ಮತ್ತು ಅವರ ಮನೋಸ್ಥಿತಿ, ದುರವಸ್ಥೆ, ನೋವು ಹೇಗಿರುತ್ತದೆ ಎಂದು ಅವರೊಂದಿಗೆ ಬೆರತಾಗಲೇ ತಿಳಿಯುವುದು. ನಮಗೆ ತಿಳಿದಿರುವಂತೆಯೇ ಕ್ಯಾನ್ಸರ್ ಭೀಕರವಾದ ಕಾಯಿಲೆ ನಮ್ಮ ಶರೀರದಲ್ಲಿ ಕ್ಯೆ ಸೇರಿಕೊಂಡು ಟ್ಯೂಮರ್ (ಗಡ್ಡೆ ಕಣಗಳು) ಪರಿವರ್ತನೆಗೊಳ್ಳುತ್ತವೆ.

ಈ ಟ್ಯೂಮರ್ ಗಳು ನಮ್ಮ ಶರೀರದಲ್ಲಿ ಜೀವಕೋಶಗಳನ್ನು ನಾಶ ಮಾಡಿ ಸಾವಿನದವಡೆಗೆ ತಳ್ಳುತ್ತದೆ. ಕ್ಯಾನ್ಸರ್ ಶರೀರದ ಯಾವುದೇ ಭಾಗಕ್ಕೆ ಬರಬಹುದು. ಕ್ಯಾನ್ಸರ್ ವಯಸ್ಸಿನ ಇತಿ ಮಿತಿಯಿಲ್ಲದೆ ಸ್ತ್ರೀ ಮತ್ತು ಪುರುಷರು ಈ ಕಾಯಿಲೆಗೆ ತುತ್ತಾಗುತ್ತಾರೆ. ಸಾಮಾನ್ಯವಾಗಿ ಕ್ಯಾನ್ಸರ್ ಗಳಲ್ಲಿ ಸ್ತನ ಕ್ಯಾನ್ಸರ್, ಮಿದುಳು ಕ್ಯಾನ್ಸರ್, ಬ್ಲಡ್ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್ ರಕ್ತದ ಕ್ಯಾನ್ಸರ್ ಇತ್ಯಾದಿ ಶರೀರದ ಭಾಗಗಳಿಗೆ ಭಾದಿಸಬಹುದು. ಇತ್ತೀಚಿನ ದಿನಗಳಲ್ಲಿ ಹಲವಾರು ವಿಧದ ಕ್ಯಾನ್ಸರ್ ಗಳು ಗುಣ ಪಡಿಸುವಂತದ್ದು. ಆದರೆ ಕೆಲವೊಂದು ಕ್ಯಾನ್ಸರ್ ಸ್ಪಲ್ಪ ಮಟ್ಟಿಗೆ ಶಮನಗೊಳಿಸುತ್ತದೆ. 

turmeric

ವೈದ್ಯಕೀಯದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಲು ಕಿಮೋಥೆರಪಿ ಶಸ್ತ್ರ ಚಿಕಿತ್ಸೆ ಮತ್ತು ಔಷಧಿಗಳಿಂದ ಕ್ಯಾನ್ಸರ್ ಗುಣಪಡಿಸಲು ಪ್ರಯತ್ನಿಸುತ್ತಾರೆ. ಇದರ ಜೊತೆಯಲ್ಲಿ ನಾವೂ ಕೂಡ ಕೆಲವು ಗಿಡಮೂಲಿಕೆಗಳ ಬಳಕೆ ತರಕಾರಿ ಸೊಪ್ಪು ಇತ್ಯಾದಿಯಿಂದ ಕ್ಯಾನ್ಸರ್ ವಿರುದ್ಧ ಹೋರಾಡಬಹುದು... ಅಷ್ಟೇ ಅಲ್ಲದೆ ಮನೆಯಲ್ಲೇ ತಯಾರಿಸಬಹುದಾದ ಕೆಲವೊಂದು ಹರ್ಬಲ್ ಸೂಪ್ ಗಳು ನಮ್ಮ ನಿತ್ಯ ಆಹಾರದಲ್ಲಿ ಈ ರೀತಿಯ ಪದಾರ್ಥಗಳನ್ನು ಸೇವನೆ ಮಾಡಿದ್ದಲ್ಲಿ ಕ್ಯಾನ್ಸರ್ ನಿಂದ ದೂರವುಳಿಯಬಹುದು.

*ತಾಜಾ ಟೊಮೆಟೋ ಪಲ್ಪ್ - 1 ಕಪ್

*ಅರಿಶಿನ - 1 ದೊಡ್ಡ ಚಮಚದಷ್ಟು

*ಕಾಳುಮೆಣಸಿನ ಹುಡಿ - 1 ಟೀ ಚಮಚ

*ಇದರ ನಿರಂತರ ಸೇವನೆಯಿಂದ ಕ್ಯಾನ್ಸರ್ ಇದ್ದವರೂ ಈ ರೀತಿ ವಿಧಾನವನ್ನು ಅನುಸರಿಸಿದಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಶೀಘ್ರವಾಗಿ ಗುಣಮುಖರಾಗಲು ಸಹಾಯ ಮಾಡುತ್ತದೆ.

ಜಾಗ್ರತೆಯಿಂದ ಇತರರೂ ಇತಿಮಿತಿಯಿಂದ ಸೇವನೆ ಮಾಡಬಹುದು ಆದರೆ ಕ್ಯಾನ್ಸರ್ ರೋಗಿಗಳು ವೈದ್ಯರು ನೀಡುವಂತಹ ಔಷಧಿಗಳೊಂದಿಗೆ ಇದನ್ನು ಸೇವನೆ ಮಾಡಬಹುದು.

ಟೊಮೆಟೊ

ಇದರಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಸತ್ವಗಳು ಇರುವುದರಿಂದ ಹಾನಿಕಾರಕ ಕ್ಯಾನ್ಸರ್ ಕೋಶಗಳನ್ನು ನಾಶ ಪಡಿಸಿ ಶರೀರದ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಅರಿಶಿನ

ಅರಿಶಿನ ಅನಾದಿಕಾಲದಿಂದಲೂ ಇರುವ ಸಂಬಾರ ಪದಾರ್ಥ ಇದರಲ್ಲಿರುವ ವಿಶೇಷ ಗುಣಗಳೆಂದರೆ ರೋಗಾಣುಗಳನ್ನು  ಹರಡಲು ಬಿಡದೆ ಕ್ಯಾನ್ಸರ್ ಕೋಶಗಳ ಮೇಲೆ ನಿಧಾನವಾಗಿ ಕೆಲಸ ಮಾಡುತ್ತದೆ.

Black pepper

ಕಾಳುಮೆಣಸು

ಕಾಳುಮೆಣಸು ಕಬ್ಬಿಣ, ವಿಟಮಿನ್ ಕೆ ಮತ್ತು ಪೋಟ್ಯಾಸಿಯಂ ಸತ್ವಗಳು ಅಸಹಜವಾಗಿ ಬೆಳೆಯುವ ಕಣಗಳ ವಿರುದ್ಧ ಹೋರಾಡುತ್ತದೆ.

ಮಾಡುವ ವಿಧಾನ

ಮೇಲೆ ತಿಳಿಸಿರುವಂತಹ ಪದಾರ್ಥಗಳ ಹಾಗೂ ಸಮಪ್ರಮಾಣ ನೀರನ್ನು ತೆಗೆದುಕೊಂಡು ಮಿಶ್ರಣ ಮಾಡಿ. ಮಿಶ್ರಣ ಸರಿಯಾಗುವಂತೆ ತಿರುವಿರಿ, ನಂತರ ಕುದಿಸಿ 

ಬೇಕಾದ ಪಾತ್ರೆಯಲ್ಲಿ ಹಾಕಿರಿ

ಪ್ರತಿದಿನ ಬೆಳಗ್ಗೆ ಇದನ್ನು ಆಹಾರದ ನಂತರ ಸೇವಿಸಿ ಆರೋಗ್ಯವನ್ನು ಪಡೆಯಿರಿ.

English summary

Herbal soup to fight cancer

A lot of medications, surgery, chemotherapy, etc., are given to help fight cancer, along with them, certain herbal remedies can also be used. Have a look at this homemade, herbal soup that can help fight cancer.
Story first published: Friday, July 21, 2017, 23:40 [IST]
Subscribe Newsletter