ಅಮ್ಮಂದಿರ ದಿನ ವಿಶೇಷ: ನೆನಪಿರಲಿ 'ಸ್ತನ ಕ್ಯಾನ್ಸರ್'-ಬಹಳ ಡೇಂಜರ್!

By: Hemanth
Subscribe to Boldsky

ವಿದೇಶಗಳಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತಿದ್ದ ಮದರ್ಸ್ ಡೇ(ಅಮ್ಮಂದಿರ ದಿನ) ಕಾಲ ಬದಲಾದಂತೆ ಭಾರತದಲ್ಲೂ ಆಚರಿಸಲ್ಪಡುತ್ತಿದೆ. ಈ ವರ್ಷದ ತಾಯಂದಿರ ದಿನದಂದು ನಿಮ್ಮ ತಾಯಿಯ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.   ದುಃಸ್ವಪ್ನವಾಗಿ ಕಾಡುವ ಸ್ತನ ಕ್ಯಾನ್ಸರ್‌ನ ಲಕ್ಷಣಗಳು

ತಾಯಂದಿರ ದಿನದಂದು ನೀವು ತಾಯಿಗೆ ನೀಡುವ ದೊಡ್ಡ ಉಡುಗೊರೆ ಎಂದರೆ ಸ್ತನದ ಕ್ಯಾನ್ಸರ್‌ನ ತಪಾಸಣೆ ಮಾಡಿಸಿಕೊಳ್ಳುವುದು. ವಯಸ್ಸಾಗುತ್ತಾ ಹೋದಂತೆ ಮಹಿಳೆಯರಲ್ಲಿ ಕಾಣಿಸಿಕೊಳ್ಳುವಂತಹ ಮಾರಣಾಂತಿಕ ಕಾಯಿಲೆಯೆಂದರೆ ಅದು ಸ್ತನದ ಕ್ಯಾನ್ಸರ್ ಇದನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಆಯಸ್ಸನ್ನು ಹೆಚ್ಚಿಸಿಕೊಳ್ಳಬಹುದು.   ಮದ್ಯಪಾನದಿಂದ ಸ್ತನ ಕ್ಯಾನ್ಸರ್ ಬರುವುದು ನಿಶ್ಚಿತ...

ಸ್ತನದ ಕ್ಯಾನ್ಸರ್ ಬಂದರೆ ಅದಕ್ಕೆ ನೀಡುವಂತಹ ಚಿಕಿತ್ಸೆ ದೇಹವನ್ನು ಹಿಂಡಿ ಹಿಪ್ಪೆ ಮಾಡಿ ಹಾಕುತ್ತದೆ. ಇದಕ್ಕಾಗಿಯೇ ಸ್ತನದ ಕ್ಯಾನ್ಸರ್ ಬರದಂತೆ ತಡೆಯುವುದು ಅತೀ ಅಗತ್ಯವಾಗಿದೆ. ತಾಯಂದಿರ ದಿನದಂದು ನಿಮ್ಮ ತಾಯಿಯನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಸ್ತನದ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳಿ. ಇದು ನೀವು ಆಕೆಗೆ ನೀಡುವ ದೊಡ್ಡ ಉಡುಗೊರೆಯಾಗಿದೆ. ಸ್ತನದ ಕ್ಯಾನ್ಸರ್ ತಡೆಯಲು ಯಾವ ರೀತಿಯ ಮಾರ್ಗವನ್ನು ಅನುಸರಿಸಬೇಕು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....   

ಆಹಾರ ಅಭ್ಯಾಸ

ಆಹಾರ ಅಭ್ಯಾಸ

ನೀವು ಏನು ತಿನ್ನುತ್ತೀರಿ ಮತ್ತು ನಿಮಗೆ ಏನು ಇಷ್ಟ ಎನ್ನುವ ಬಗ್ಗೆ ತಾಯಿಗೆ ಹೆಚ್ಚು ತಿಳಿದಿರುತ್ತದೆ. ಆದರೆ ಆಕೆಯ ಆಹಾರ ಕ್ರಮದ ಬಗ್ಗೆ ನಿರ್ಲಕ್ಷ್ಯವಿರುತ್ತದೆ. ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವಂತಹ ಆಹಾರವನ್ನು ಸೇವಿಸುವ ಬಗ್ಗೆ ನಿಮ್ಮ ತಾಯಿಗೆ ತಿಳಿಸಿ.

ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ

ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ

ಸ್ವಯಂ ಆಗಿ ಕೆಲವೊಂದು ಪರೀಕ್ಷೆಗಳನ್ನು ಮಾಡಿಕೊಳ್ಳಬಹುದಾದರೂ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡರೆ ತುಂಬಾ ಒಳ್ಳೆಯದು. ವರ್ಷದಲ್ಲಿ ಒಂದು ಸಲ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡು ಆಕೆಗೆ ಕ್ಯಾನ್ಸರ್ ಭಾದಿಸಿಲ್ಲವೆಂದು ನೀವು ದೃಢಪಡಿಸಿಕೊಳ್ಳಿ. ಇದರಿಂದ ಮುಂದೆ ಸ್ತನದ ಕ್ಯಾನ್ಸರ್ ಬಂದರೂ ಅದರ ಬಗ್ಗೆ ಹೆಚ್ಚು ಭೀತಿಯಾಗಲ್ಲ.

ಸ್ವಯಂ ಪರೀಕ್ಷೆ ಶಿಕ್ಷಣ

ಸ್ವಯಂ ಪರೀಕ್ಷೆ ಶಿಕ್ಷಣ

ಸ್ತನದ ಕ್ಯಾನ್ಸರ್ ನ್ನು ಸಂಪೂರ್ಣವಾಗಿ ನಿವಾರಿಸಬಹುದಾಗಿದೆ. ಆದರೆ ಆರಂಭದಲ್ಲೇ ಇದನ್ನು ಪತ್ತೆ ಹಚ್ಚುವುದು ಅತೀ ಅಗತ್ಯವಾಗಿದೆ. ಸ್ತನದ ಕ್ಯಾನ್ಸರ್ ನ ಲಕ್ಷಣಗಳು ಏನು ಎಂದು ವೈದ್ಯರಲ್ಲಿ ತಿಳಿದುಕೊಂಡು ಆಗಾಗ ಸ್ವಯಂ ಪರೀಕ್ಷೆ ಮಾಡಿಕೊಳ್ಳಬಹುದು. ಇದರಿಂದ ಸ್ತನದ ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಬಹುದು.

ವ್ಯಾಯಾಮ

ವ್ಯಾಯಾಮ

ಅಮ್ಮ ಯಾವಾಗಲೂ ನಿಮ್ಮನ್ನು ವ್ಯಾಯಾಮ ಮಾಡಲು ಬೆಳಿಗ್ಗೆ ಬೇಗ ಏಳಿಸುತ್ತಾ ಇರಬಹುದು. ನಿಮ್ಮೊಂದಿಗೆ ವ್ಯಾಯಾಮ ಮಾಡಲು ಆಕೆಯನ್ನು ಕೂಡ ಕರೆಯಿರಿ. ತೂಕ ಕಳೆದುಕೊಳ್ಳಲು ವ್ಯಾಯಾಮ ಅತೀ ಮುಖ್ಯವಾಗಿದೆ. ಅತಿಯಾದ ಬೊಜ್ಜು ಸ್ತನದ ಕ್ಯಾನ್ಸರ್ ಗೆ ದಾರಿಯಾಗುತ್ತದೆ. ಮುಟ್ಟು ನಿಂತ ಬಳಿಕ ಒಸ್ಟ್ರೋಜನ್ ಉತ್ಪತ್ತಿ ನಿಲ್ಲುತ್ತದೆ ಮತ್ತು ಕೊಬ್ಬಿನ ಕೋಶಗಳು ತಮ್ಮ ಕೆಲಸ ಮಾಡಲು ಆರಂಭಿಸುತ್ತದೆ. ಇದರಿಂದ ಫಿಟ್ ಆಗುವುದು ಅತೀ ಅಗತ್ಯ.

ಕುಟುಂಬದ ಇತಿಹಾಸ ನೋಡಿ

ಕುಟುಂಬದ ಇತಿಹಾಸ ನೋಡಿ

ಕುಟುಂಬದ ಇತಿಹಾಸವನ್ನು ಅವಲೋಕಿಸಿಕೊಳ್ಳಿ. ಯಾರಿಗಾದರೂ ಸ್ತನದ ಕ್ಯಾನ್ಸರ್ ಇದೆಯಾ ಎಂದು ಖಚಿತಪಡಿಸಿಕೊಳ್ಳಿ. ವಂಶಪಾರಂಪರ್ಯವಾಗಿ ಸ್ತನದ ಕ್ಯಾನ್ಸರ್ ನ ಅಪಾಯ ಹೆಚ್ಚು. ಆದರೆ ಭೀತಿ ಪಡಬೇಕಾಗಿಲ್ಲ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಂಡು ಆರೋಗ್ಯಕರ ಜೀವನ ಶೈಲಿ ನಿಮ್ಮದಾಗಿಸಿಕೊಳ್ಳಿ.

ಹಾರ್ಮೋನು ಥೆರಪಿ ಮಿತಿಯಲ್ಲಿರಲಿ

ಹಾರ್ಮೋನು ಥೆರಪಿ ಮಿತಿಯಲ್ಲಿರಲಿ

ಮುಟ್ಟು ನಿಂತ ಬಳಿಕ ಕೆಲವು ಮಹಿಳೆಯರು ಹಾರ್ಮೋನು ಥೆರಪಿ ತೆಗೆದುಕೊಳ್ಳುತ್ತಾರೆ. ಆದರೆ ಇದರ ಬಗ್ಗೆ ಎಚ್ಚರಿಕೆಯಿರಲಿ. ಹಾರ್ಮೋನು ಥೆರಪಿ ತೆಗೆದುಕೊಳ್ಳುವ ಮೊದಲು ವೈದ್ಯರಿಂದ ಸರಿಯಾದ ಸಲಹೆ ಪಡೆದುಕೊಳ್ಳಿ. ಅತಿಯಾಗಿ ಹಾರ್ಮೋನು ಥೆರಪಿಯಿಂದ ಸ್ತನದ ಕ್ಯಾನ್ಸರ್ ಸಾಧ್ಯತೆ ಹೆಚ್ಚಾಗಬಹುದು.

English summary

Help Your Mother To Prevent Breast Cancer With These Steps

Mother's Day is here around the corner! Thinking of doing something useful and compassionate on this Mother's Day?If yes, go ahead! Talk to your mother about preventing breast cancer or enroll her for a breast cancer awareness campaign. Sounds weird? Absolutely no! If you want your mother to be with you for a long time, you have to take an initiative to educate her on this.
Subscribe Newsletter