For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ವಿಪರೀತ ಮದ್ಯಪಾನ ಮರಣಕ್ಕೆ ಸಮೀಪ!

"ಅತಿ ಹೆಚ್ಚು ಮದ್ಯಪಾನ ಮಾಡುವುದು ಕಾಲಜನ್ ಶೇಖರಣೆಯನ್ನು ಮಾಡಲಿದ್ದು, ಅಪಧಮನಿಯ ಭದ್ರಗೊಳಿಸಿದ ಪ್ರಮಾಣವನ್ನು ಉಲ್ಬಣಗೊಳಿಸಲಿದೆ. ಎಂಬುದಾಗಿ ಲಂಡನ್‌ನ ಯೂನಿವರ್ಸಿಟಿ ಕಾಲೇಜಿನ ಸೋಂಕುಶಾಸ್ತ್ರದ ಸಂಶೋಧಕರು ತಿಳಿಸಿದ್ದಾರೆ"

By Jaya Subramanya
|

ಮದ್ಯಪಾನವೆಂಬುದು ಆರೋಗ್ಯಕ್ಕೆ ಮಾರಕಾಗಿರುವ ಪೇಯವಾಗಿದೆ. ಒಮ್ಮೆ ಈ ಚಟಕ್ಕೆ ಜೋತು ಬಿದ್ದರೆಂದರೆ ಅದರಿಂದ ಹೊರಬರುವುದು ತುಂಬಾ ಕಷ್ಟದ ಮಾತಾಗಿದೆ. ಅದಾಗ್ಯೂ ಯಾವುದೂ ಕೂಡ ಮಿತಿ ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತೆಯೇ ಕುಡಿತವನ್ನು ಮಿತಿಗಿಂತ ಅಧಿಕವಾಗಿ ಅಭ್ಯಾಸ ಮಾಡಿಕೊಂಡರೆ ನೀವು ಯಮಲೋಕದ ಬಾಗಿಲು ತಟ್ಟಿದಂತೆಯೇ ಸರಿ ಎಂಬುದು ಇತ್ತೀಚಿನ ವೈದ್ಯಕೀಯ ಲೋಕ ಬಿಚ್ಚಿಟ್ಟ ಸತ್ಯವಾಗಿದೆ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

heavy drinking

ಹೆಚ್ಚು ಮದ್ಯಪಾನ ಮಾಡುವ ವ್ಯಕ್ತಿ ಅಪಧಮನಿ ಬಿಗಿಯಾಗುವಿಕೆ, ಅಪಧಮನಿಗಳು ಅಕಾಲಿಕವಾಗಿ ವಯಸ್ಸಾಗುವುದು, ಕೊಬ್ಬಿನ ಅಂಶಗಳನ್ನು ಉತ್ತೇಜಿಸುವುದು ಮೊದಲಾದ ಅಪಾಯಗಳಿಗೆ ತುತ್ತಾಗಲಿದ್ದಾರೆ. ಪ್ಲೇಟ್‌ಲೆಟ್ ಜಿಗುಟತನಂದತಹ ಅಪಾಯಕವನ್ನು ಕುಡಿತದ ದಾಸರಾದವರಿಗೆ ತಂದೊಡ್ಡಲಿದ್ದು ರಕ್ತದ ಹರಿವಿನ ಘರ್ಷಣೆಯಿಂದ ಅಪಧಮನಿಯ ಬಿಗಿಗೆ ಕಾರಣವಾಗಲಿದೆ. ಇದರಿಂದ ಅಪಧಮನಿಗಳು ಬೇಗನೇ ವಯಸ್ಸಾಗುವಿಕೆಗೆ ಒಳಗಾಗಲಿವೆ.

"ಅತಿ ಹೆಚ್ಚು ಮದ್ಯಪಾನ ಮಾಡುವುದು ಕಾಲಜನ್ ಶೇಖರಣೆಯನ್ನು ಮಾಡಲಿದ್ದು, ಅಪಧಮನಿಯ ಭದ್ರಗೊಳಿಸಿದ ಪ್ರಮಾಣವನ್ನು ಉಲ್ಬಣಗೊಳಿಸಲಿದೆ. ಎಂಬುದಾಗಿ ಲಂಡನ್‌ನ ಯೂನಿವರ್ಸಿಟಿ ಕಾಲೇಜಿನ ಸೋಂಕುಶಾಸ್ತ್ರದ ಸಂಶೋಧಕರು ತಿಳಿಸಿದ್ದಾರೆ".

ಸೀಮಿತವಾಗಿ ಕುಡಿಯುವವರಿಗಿಂತ ಅತಿ ಹೆಚ್ಚು ಅಂತೆಯೇ ಕುಡಿತವನ್ನು ಚಟವನ್ನಾಗಿಸಿಕೊಂಡವರು ಇಂತಹ ಅಪಾಯಕ್ಕೆ ಹೆಚ್ಚು ಒಳಗಾಗಲಿದ್ದಾರೆ ಎಂಬುದಾಗಿ ಸಂಶೋಧನಕಾರರು ತಿಳಿಸಿದ್ದಾರೆ. ಅದಾಗ್ಯೂ ಮಹಿಳೆಯರಲ್ಲಿ ಈ ಅಂಶ ಕಂಡುಬಂದಿಲ್ಲ. ಮದ್ಯಪಾನ ಬಿಟ್ಟ ಬಳಿಕ, ಆರೋಗ್ಯ ಹೇಗಿರುತ್ತೆ ನೋಡಿ....

ಈ ಅಧ್ಯಯನವನ್ನು ಅಮೇರಿಕಾದ ಪತ್ರಿಕೆ ಅಮೇರಿಕನ್ ಹಾರ್ಟ್ ಅಸೋಸಿಯೇಶನ್‌ನಲ್ಲಿ ಪ್ರಕಟಿಸಿದ್ದು, ಮದ್ಯಪಾನ ಸೇವಿಸುವ ಅಭ್ಯಾಸವುಳ್ಳ 3,869 ಜನರನ್ನು ಇದಕ್ಕಾಗಿ ತೆಗೆದುಕೊಂಡಿದ್ದರು. ಇದರಲ್ಲಿ 73 ರಷ್ಟು ಪುರುಷರು 30 ರಿಂದ 50 ವಯಸ್ಸಿನವರಾಗಿದ್ದರು.

ಕಾರ್ಟೊಡ್ - ಫೆಮೊರಲ್ ಪಲ್ಸ್ ವೇವ್ ಅರ್ಟರಿ ವೆಲೊಸಿಟಿ (ಪಿಡ್ಬ್ಲ್ಯೂವಿ) ಅಳತೆಗಳೊಂದಿಗೆ ಮದ್ಯಪಾನವನ್ನು ಅಳತೆ ಮಾಡಿದ್ದು, ಮುಖ್ಯ ಅಪಧಮನಿಗಳಲ್ಲಿ ನಾಡಿ ತರಂಗಗಳು ತೊಡೆ ಮತ್ತು ಕುತ್ತಿಗೆಯಲ್ಲಿ ಕಂಡುಬರುತ್ತದೆ. ಹೆಚ್ಚಿನ ವೇಗಕ್ಕೆ ತಕ್ಕಂತೆ ಅಪಧಮನಿ ಕಠೋರವಾಗಿರುತ್ತದೆ.

25 ವರ್ಷಗಳಾದ್ಯಂತ ಮದ್ಯಪಾನ ಸೇವನೆಯನ್ನು ಮಾಸಿಕವಾಗಿ ಅಳತೆ ಮಾಡಲಾಯಿತು ಅಂತೆಯೇ ಸಂಶೋಧಕರು ದೀರ್ಘ ಕಾಲ ಮದ್ಯ ಸೇವನೆಯಿಂದ ನಾಡಿ ತರಂಗದದೊಂದಿಗೆ ಸಹಯೋಗ ಪಡೆದಿರುವ ವೇಗ ಮತ್ತು ಅದರ ಪ್ರಕ್ರಿಯೆಯು ನಾಲ್ಕರಿಂದ ಐದು ವರ್ಷ ಮಧ್ಯಂತರದಲ್ಲಿ ಎಷ್ಟಿದೆ ಎಂಬುದನ್ನು ಕಂಡುಕೊಂಡರು. ಗಟ್ಟಿ ಮನಸ್ಸು ಮಾಡಿ, ಆದಷ್ಟು ಬೇಗ ಮದ್ಯಪಾನ ಬಿಟ್ಟುಬಿಡಿ!

ವಿಪರೀತ ಮದ್ಯಪಾನ ಸೇವನೆಯು ಆಲ್ಕೋಹಾಲ್ ಸೇವನೆಯನ್ನು ದುಪ್ಪಟ್ಟುಗೊಳಿಸಲಿದ್ದು, ಹೃದಯ ಸಂಬಂಧಿ ರೋಗಗಳನ್ನು ಮಿತಿಮೀರಿಸಲಿದೆ. ಅಂತೆಯೇ ಇದರೊಂದಿಗೆ ಹೆಚ್ಚು ರಕ್ತದೊತ್ತಡ, ಬೊಜ್ಜು, ಪಾರ್ಶ್ವವಾಯು, ವಿವಿಧ ಬಗೆಯ ಕ್ಯಾನ್ಸರ್, ಆತ್ಮಹತ್ಯೆ ಅಪಘಾತಗಳಿಗೆ ವ್ಯಕ್ತಿ ಒಳಗಾಗಲಿದ್ದಾರೆ ಎಂಬುದಾಗಿ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

English summary

Heavy Drinking Can Cause These Major Health Problems In Men

Men with heavy alcohol intake over the years may be at higher risk of developing arterial stiffness, premature ageing of arteries, increasing their risk for heart disease, says a study.
X
Desktop Bottom Promotion