For Quick Alerts
ALLOW NOTIFICATIONS  
For Daily Alerts

ತುಳಸಿ ಎಲೆಗಳನ್ನು ಬಾಯಿಗೆ ಹಾಕಿ ಜಗಿಯಿರಿ, ಆರೋಗ್ಯ ಪಡೆಯಿರಿ

By Lekhaka
|

ಆಯುರ್ವೇದವನ್ನು ಭಾರತೀಯರು ಸಾವಿರಾರು ವರ್ಷಗಳಿಂದಲೂ ಅನುಸರಿಸಿಕೊಂಡು ಬರುತ್ತಾ ಇದ್ದಾರೆ. ಯಾವುದೇ ವೈದ್ಯಕೀಯ ಸೇವೆಗಳು ಲಭ್ಯವಿಲ್ಲದೆ ಇರುವಂತಹ ಸಮಯದಲ್ಲೂ ಆಯುರ್ವೇದವೂ ತುಂಬಾ ಪರಿಣಾಮಕಾರಿ ಔಷಧಿಯಾಗಿರುತ್ತಿತ್ತು. ಅದರಲ್ಲೂ ನಮ್ಮ ಸುತ್ತಮುತ್ತಲು ಇರುವಂತಹ ಗಿಡಮೂಲಿಕೆಗಳನ್ನೇ ಆಯುರ್ವೇದದ ಔಷಧಿಗಳಲ್ಲಿ ಬಳಸಿಕೊಳ್ಳಲಾಗುತ್ತಾ ಇತ್ತು.

ಇಂತಹ ಗಿಡಮೂಲಿಕೆಯಲ್ಲಿ ತುಳಸಿ ಗಿಡ ಕೂಡ ಒಂದಾಗಿದೆ. ತುಳಸಿಯಲ್ಲಿ ಶ್ರೀಮನ್ ನಾರಾಯಣನ ಪತ್ನಿ ಲಕ್ಷ್ಮೀದೇವಿ ನೆಲೆಸಿದ್ದಾಳೆ ಎನ್ನುವ ನಂಬಿಕೆ ಭಾರತೀಯರದ್ದಾಗಿದೆ. ತುಳಸಿಯಲ್ಲಿ ಕೆಲವೊಂದು ಅದ್ಭುತವಾಗಿರುವ ಔಷಧೀಯ ಗುಣಗಳು ಇವೆ. ತುಳಸಿ ಎಲೆಗಳನ್ನು ಹಾಗೆ ತೆಗೆದು ತೊಳೆದು ಬಾಯಿಗೆ ಹಾಕಿ ಜಗಿದರೆ ಅದರ ಆರೋಗ್ಯ ಲಾಭಗಳು ನಿಮಗೆ ಸಿಗುವುದು. ಒಂದು ಹಿಡಿ ತುಳಸಿ ಎಲೆಗಳನ್ನು ತೆಗೆದುಕೊಂಡು ಎರಡು ಲೀಟರ್ ನೀರಿಗೆ ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಅದರ ನೀರು ಕುಡಿಯಿರಿ.

ಒಣ ಕೆಮ್ಮಿಗೆ 'ತುಳಸಿ ಚಹಾ' ಒಂದೆರಡು ದಿನಗಳಲ್ಲಿಯೇ ಕೆಮ್ಮು ನಿಯಂತ್ರಣಕ್ಕೆ!

ತುಳಸಿ ಎಲೆಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ನಿಯಮಿತವಾಗಿ ತುಳಸಿ ಎಲೆಗಳನ್ನು ತಿಂದರೆ ಅದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ ವಿರುದ್ಧ ಹೋರಾಡುವ ಶಕ್ತಿ ದೇಹಕ್ಕೆ ಸಿಗುವುದು. ಇದರಿಂದ ಶೀತ, ಕಫ ಮತ್ತು ಇತರ ಸೋಂಕು ತಡೆಯಬಹುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಿ ಕೋಶಗಳಿಗೆ ಹಾನಿಯಾಗದಂತೆ ತಡೆಯುವುದು. ತುಳಸಿಯು ಹಲವಾರು ಕಾಯಿಲೆಗಳು ಬರದಂತೆ ತಡೆಯುವುದು. ತುಳಸಿಯಿಂದ ಸಿಗುವಂತಹ ಆರೋಗ್ಯ ಲಾಭಗಳನ್ನು ಓದುತ್ತಾ ತಿಳಿಯಿರಿ.....

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ಆ್ಯಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂಧಿರುವ ತುಳಸಿ ಎಲೆಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಒಂದು ಹಿಡಿ ತುಳಸಿ ಎಲೆಗಳನ್ನು ಎರಡು ಲೀಟರ್ ನೀರಿಗೆ ಹಾಕಿ ನೆನೆಸಿಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಈ ನೀರು ಕುಡಿಯಿರಿ.

ಶೀತ ಮತ್ತು ಗಂಟಲು ನೋವಿಗೆ

ಶೀತ ಮತ್ತು ಗಂಟಲು ನೋವಿಗೆ

ಸೂಕ್ಷ್ಮಾಣುಜೀವಿ ವಿರೋಧಿ ಗುಣಗಳನ್ನು ಹೊಂದಿರುವಂತಹ ತುಳಸಿಯು ಸಾಮಾನ್ಯ ಶೀತ ನಿವಾರಣೆ ಮಾಡುವುದು. ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ನೀರಿಗೆ ಹಾಕಿ ಕುದಿಸಿ. ಈ ನೀರನ್ನು ಕುಡಿಯಿರಿ ಮತ್ತು ಬಾಯಿ ಮುಕ್ಕಳಿಸಿಕೊಳ್ಳಿ.

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ತುಳಸಿ ಎಲೆಗಳು ಹೃದಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ತುಳಸಿ ಎಲೆಗಳು ರಕ್ತ ಸಂಚಾರವನ್ನು ಸರಾಗವಾಗಿಸುವುದು. ಇದರಿಂದ ಹೃದಯಕ್ಕೆ ಯಾವುದೇ ಸಮಸ್ಯೆಯಾಗದು. ಕೆಲವು ತುಳಸಿ ಎಲೆಗಳನ್ನು ತೆಗೆದುಕೊಂಡು ಜಗಿಯಿರಿ ಅಥವಾ ತುಳಸಿ ನೀರನ್ನು ಬೆಳಗ್ಗೆ ಕುಡಿಯಿರಿ.

ಯಕೃತ್ ಗೆ ಒಳ್ಳೆಯದು

ಯಕೃತ್ ಗೆ ಒಳ್ಳೆಯದು

ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ತುಳಸಿಯು ಯಕೃತ್ ನ್ನು ನಿರ್ವಿಷಗೊಳಿಸುವುದು ಮತ್ತು ಕೊಬ್ಬು ಸಂಗ್ರಹವಾಗಿರುವುದನ್ನು ಕಡಿಮೆ ಮಾಡುವುದು. ಇಲ್ಲವಾದಲ್ಲಿ ಇದು ಯಕೃತ್ ನ ಮೇಲೆ ದೊಡ್ಡ ಪರಿಣಾಮ ಬೀರಬಹುದು. ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಕಿಣ್ವಗಳನ್ನು ನಿರ್ವಿಷಗೊಳಿಸುವುದು ಮತ್ತು ಯಕೃತ್ ನ್ನು ರಕ್ಷಿಸುವುದು.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಜಗಿದರೆ ಅಥವಾ ಅದರ ನೀರು ಕುಡಿದರೆ ಜೀರ್ಣಕ್ರಿಯೆಯು ತುಂಬಾ ಪರಿಣಾಮಕಾರಿಯಾಗಿ ಆಗುವುದು. ಇದು ದೇಹದಲ್ಲಿ ಪಿಎಚ್ ಮಟ್ಟವನ್ನು ಮರುಸ್ಥಾಪಿಸಲು ಮತ್ತು ಆಮ್ಲೀಯ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುವುದು.

ಮಧುಮೇಹದ ಅಪಾಯ ಕಡಿಮೆ

ಮಧುಮೇಹದ ಅಪಾಯ ಕಡಿಮೆ

ಮಧುಮೇಹ ಬರದಂತೆ ತಡೆಯುವಲ್ಲಿ ತುಳಸಿಯು ಪ್ರಮುಖ ಗಿಡಮೂಲಿಕೆಯಾಗಿದೆ. ತುಳಸಿ ಎಲೆಗಳಿಂದ ಹೊರತೆಗೆಯುವಂತಹ ಸಾರಭೂತ ತೈಲದಲ್ಲಿ ಯುಜೀನೋಲ್, ಮೀಥೈಲ್ ಯುಜಿನಾಳ್ ಮತ್ತು ಕ್ಯಾರಿಯೋಫಿಲೆನ್‌ಗಳು ಇವೆ. ಇದು ಮೇಧೋಜೀರಕ ಗ್ರಂಥಿಯ ಬೀಟಾ ಕೋಶಗಳ ಕಾರ್ಯಕ್ಕೆ ನೆರವಾಗುವುದು. ಇದು ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸಲು ನೆರವಾಗುವುದು ಮತ್ತು ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು.

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು

ತುಳಸಿ ಎಲೆಗಳನ್ನು ತಿನ್ನುವುದರಿಂದ ಅಥವಾ ಅದನ್ನು ನೆನೆಸಿಟ್ಟ ನೀರು ನಿಯಮಿತವಾಗಿ ಕುಡಿಯುವುದರಿಂದ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡಬಹುದು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳು ಇವೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು. ತುಳಸಿಯು ಸ್ತನ ಮತ್ತು ಬಾಯಿ ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು.

ಒತ್ತಡ ನಿವಾರಣೆ

ಒತ್ತಡ ನಿವಾರಣೆ

ತುಳಸಿಯಲ್ಲಿ ಅಡಾಪ್ಪೋಜೆನ್ ಎನ್ನುವ ಅಂಶವಿದೆ. ಇದು ಒತ್ತಡ ವಿರೋಧಿ ಗುಣಗಳನ್ನು ಹೊಂದಿದೆ. ಈ ಕಾರಣದಿಂದ ತುಳಸಿಯು ನರಮಂಡಲಕ್ಕೆ ತುಂಬಾ ಆರಾಮವನ್ನು ಒದಗಿಸುವುದು. ರಕ್ತ ಸಂಚಾರವನ್ನು ನಿಯಂತ್ರಣದಲ್ಲಿಟ್ಟುಕೊಂಡು ದೇಹಕ್ಕೆ ಫ್ರೀ ರ್ಯಾಡಿಕಲ್ ಪರಿಣಾಮ ಬೀರದಂತೆ ತಡೆಯುವುದು. ಎರಡು ದಿನಕ್ಕೊಮ್ಮೆ 5-6 ತುಳಸಿ ಎಲೆಗಳನ್ನು ಜಗಿದರೆ ಒಳ್ಳೆಯದು.

ಕಿಡ್ನಿ ಕಲ್ಲು ನಿವಾರಣೆಗೆ

ಕಿಡ್ನಿ ಕಲ್ಲು ನಿವಾರಣೆಗೆ

ದೇಹದಲ್ಲಿ ಕ್ಯಾಲ್ಸಿಯಂ ಒಕ್ಸಲೇಟ್ ಮತ್ತು ಯೂರಿಕ್ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ತುಳಸಿಯು ತುಂಬಾ ಪರಿಣಾಮಕಾರಿ. ಇಷ್ಟು ಮಾತ್ರವಲ್ಲದೆ ತುಳಸಿ ಎಲೆಗಳನ್ನು ಜಗಿದರೆ ಅಥವಾ ತುಳಸಿ ನೆನೆಸಿಟ್ಟ ನೀರು ಕುಡಿದರೆ ಕಿಡ್ನಿ ಕಲ್ಲಿನಿಂದ ಉಂಟಾಗುವ ನೋವು ಕಡಿಮೆ ಮಾಡಬಹುದು.

ಉಸಿರಿನ ದುರ್ಗಂಧ ತಡೆಯಲು

ಉಸಿರಿನ ದುರ್ಗಂಧ ತಡೆಯಲು

ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಮೃದ್ಧವಾಗಿದೆ. ಕೆಲವು ತುಳಸಿ ಎಲೆಗಳನ್ನು ಜಗಿದರೆ ಆಗ ಉಸಿರಿನ ದುರ್ಗಂಧವು ಕಡಿಮೆಯಾಗುವುದು. ತುಳಸಿ ಎಲೆಗಳನ್ನು ಒಣಗಿಸಿ ಹುಡಿ ಮಾಡಿ ಅದಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಸೇರಿಸಿ ಒಸಡಿನ ಮೇಲೆ ನಿಧಾನವಾಗಿ ಹಚ್ಚಬೇಕು. ಇದರಿಂದ ಉಸಿರಿನ ದುರ್ಗಂಧ ಕಡಿಮೆಯಾಗುವುದು.

English summary

Health Benefits Of Consuming Tulsi Leaves Early In The Morning

Regarded as one of the holy plants since ancient times, tulsi is considered sacred and is worshipped by majority of people across the Indian subcontinent. This isn't all, tulsi is also known for its innumerable health benefits. The best way to have tulsi leaves is to take a few of them, wash them thoroughly and then chew them. Yet another way of consuming tulsi leaves is to take a bunch of tulsi leaves, soak them overnight in about 2 litres of water. Drink a glass of this water early in the morning on an empty stomach.
X
Desktop Bottom Promotion