For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜು ಕರಗಿಸಲು ಸರಳ ಟಿಪ್ಸ್-ಒಂದೇ ತಿಂಗಳಲ್ಲಿ ಫಲಿತಾಂಶ!

By Manu
|

ಇತ್ತೀಚಿನ ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ ಶೇಖಡಾ ಐವತ್ತಕ್ಕಿಂತಲೂ ಹೆಚ್ಚು ಜನರು ಸ್ಥೂಲಕಾಯರಾಗಿದ್ದು ತಮ್ಮ ಹೊಟ್ಟೆಯ ಸುತ್ತಳತೆಯನ್ನು ಕಡಿಮೆಗೊಳಿಸಲು ಇಚ್ಛಿಸುತ್ತಾರೆ. ಹೊಟ್ಟೆಯ ಸುತ್ತಳತೆ ಹೆಚ್ಚಿರುವುದು ಉಳ್ಳವರ ಲಕ್ಷಣ ಎಂದು ಹಿಂದೆ ಭಾವಿಸಲಾಗುತ್ತಿತ್ತು.

ಆದರೆ ಇದು ವಾಸ್ತವವಾಗಿ ಅನಗತ್ಯ ಕೊಬ್ಬಿನ ಸಂಗ್ರಹವಾಗಿದ್ದು ಹಲವು ಕಾಯಿಲೆಗಳಿಗೆ ನೀಡುವ ಆಹ್ವಾನವಾಗಿದೆ. ದೇಹದ ಆಕಾರವನ್ನು ಕೆಡಿಸುವುದು ಮಾತ್ರವಲ್ಲ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು ಮತ್ತು ಮರೆಗುಳಿತನಕ್ಕೂ ಕಾರಣವಾಗಬಹುದು. ಹಾಗಂತ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ, ಸರಿಯಾದ ಆಹಾರ ಕ್ರಮಗಳನ್ನು ಅನುಸರಿವುದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.'

ಮಲಗುವ ಮುನ್ನ ಈ ಪಾನೀಯ ಸೇವಿಸಿ-ಸುಲಭವಾಗಿ ಕೊಬ್ಬು ಕರಗುತ್ತೆ!

ಹೌದು ಕೆಲವೊಂದು ಆಹಾರಗಳಿಗೆ ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬಿನ ಅವಶ್ಯಕತೆ ಇರುವುದರಿಂದ ದೇಹ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿ ನಿಧಾನವಾಗಿ ಈ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಹೊಟ್ಟೆಯ ಹಾಗೂ ಸೊಂಟದ ಸುತ್ತಲ ಕೊಬ್ಬು ಸಹಾ ಕಡಿಮೆಯಾಗತೊಡಗುತ್ತದೆ. ಈ ನಿಟ್ಟಿನಲ್ಲಿ ನೆರವಾಗುವ ಆಹಾರಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ...

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆ ರಸವನ್ನು ಕುಡಿಯಿರಿ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆ ರಸವನ್ನು ಕುಡಿಯಿರಿ

ಕೊಬ್ಬು ಸಂಗ್ರಹವಾಗಲು ನಮ್ಮ ಯಕೃತ್ (liver) ಆಯಾಸಗೊಂಡಾಗ ಪೂರ್ಣಪ್ರಮಾಣದಲ್ಲಿ ಕೊಬ್ಬನ್ನು ಜೀರ್ಣಿಸಿಕೊಳ್ಳಲು ಅಸಮರ್ಥವಾಗಿ ಹೆಚ್ಚಿನ ಕೊಬ್ಬು ಸಂಗ್ರಹವಾಗುತ್ತಾ ಹೋಗುತ್ತದೆ. ಲಿಂಬೆರಸದ ಸೇವನೆಯಿಂದ ದೇಹದಲ್ಲಿ ಹಲವು ಎಂಜೈಮ್ ಅಥವಾ ಕಿಣ್ವಗಳ ಪ್ರಮಾಣವನ್ನು ಹೆಚ್ಚಿಸಿ ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೊಬ್ಬು ಜೀರ್ಣಗೊಂಡು ಸಂಗ್ರಹವಾಗಬಹುದಾಗಿದ್ದ ಕೊಬ್ಬನ್ನು ತಡೆದಂತಾಗುತ್ತದೆ.

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.

ಶುಂಠಿ ಟೀ ಕುಡಿಯಿರಿ

ಶುಂಠಿ ಟೀ ಕುಡಿಯಿರಿ

ಶುಂಠಿ ಟೀ ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಸೊಂಟದ ಸುತ್ತ ಈಗಾಗಲೇ ಸಂಗ್ರಹವಾಗಿರುವ ಕೊಬ್ಬು ಎಷ್ಟೋ ವರ್ಷಗಳ ಹಿಂದಿನಿಂದ ಸಂಗ್ರಹವಾಗುತ್ತಾ ಬಂದಿರಬಹುದಾಗಿದ್ದು ಶುಂಠಿಯ ನಿಯಮಿತ ಸೇವನೆಯಿಂದ ನಿಧಾನವಾಗಿ ಕರಗತೊಡಗುತ್ತದೆ.

ಬಳಕೆಯ ವಿಧಾನ

*ಒಂದು ಲೋಟಕ್ಕಿಂತ ಕೊಂಚ ಹೆಚ್ಚು ನೀರನ್ನು ಕುದಿಸಿ.

*ಈ ನೀರಿನಲ್ಲಿ ಒಂದು ಇಂಚು ಹಸಿಶುಂಠಿಯನ್ನು ಜಜ್ಜಿ ಸುಮಾರು ಹತ್ತು ನಿಮಿಷಗಳವೆರೆಗೆ ಚಿಕ್ಕ ಉರಿಯಲ್ಲಿ ಕುದಿಸಿ.

*ಈಗ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಒಂದು ಚಮಚ ಈಗತಾನೇ ಹಿಂಡಿದ ಲಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ.

ಇನ್ನು ಈ ಟೀ ಅನ್ನು ಸೋಸಿ ಬಿಸಿಬಿಸಿ ಇರುವಂತೆಯೇ ಸೇವಿಸಿ. ಒಂದು ದಿನಕ್ಕೆ ಕನಿಷ್ಟ ಎರಡು ಕಪ್ ಈ ಟೀ ಸೇವಿಸಿ ಕೊಬ್ಬಿನಿಂದ ಮುಕ್ತಿಪಡೆಯಿರಿ.

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ನಿಮ್ಮ ಆಹಾರದ ಮೂಲಕ ಸೇವಿಸುವುದರಿಂದ ಜೀರ್ಣಾಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ವಿಶೇಷವಾಗಿ ಕರುಳಿನ ಹುಣ್ಣು, ಅಜೀರ್ಣತೆ, ಹೊಟ್ಟೆಯ ಉರಿ ಮೊದಲಾದವುಗಳನ್ನು ತಡೆಯುವ ಬೆಳ್ಳುಳ್ಳಿ ಅಧಿಕ ಮತ್ತು ಕಡಿಮೆ ರಕ್ತದೊತ್ತಡವನ್ನು ತಹಬಂದಿಗೆ ತರುವ ಗುಣವಿದೆ. ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ (HDL-High density Lipoprotein) ಹೆಚ್ಚುತ್ತದೆ ಹಾಗೂ ನರಗಳ ಗೋಡೆಗಳ ದಪ್ಪವನ್ನು ಕಡಿಮೆಗೊಳಿಸುವ atherosclerosis, ಹೃದಯ ಸ್ತಂಭನಕ್ಕೆ ಕಾರಣವಾಗುವ ಟ್ರೈಗ್ಲಿಸರೈಡ್ ಎಂಬ ಕಣಗಳನ್ನು ನಿಯಂತ್ರಿಸಲೂ ನೆರವಾಗುತ್ತದೆ.

ಹಸಿರು ಟೀ ಸೇವಿಸಿ

ಹಸಿರು ಟೀ ಸೇವಿಸಿ

ಅಮೇರಿಕಾದ ಖ್ಯಾತ ವೈದ್ಯಸಾಹಿತ್ಯ ಪ್ರಕಾಶನ ಪ್ರಕಟಿಸುವ The American Journal of Clinical Nutrition ಪ್ರಕಾರ ದಿನಕ್ಕೆ ನಾಲ್ಕು ಕಪ್ ಹಸಿರು ಟೀ ಸೇವಿಸುವ ಮೂಲಕ ಎಂಟು ವಾರದಲ್ಲಿ ಸುಮಾರು ಆರು ಪೌಂಡ್ (ಸುಮಾರು ಎರಡೂ ಮುಕ್ಕಾಲು ಕೇಜಿ) ಕಡಿಮೆಯಾಗಿರುವುದು ಕಂಡುಬಂದಿದೆ. ಆರೋಗ್ಯಕ್ಕೆ ಹಲವು ವಿಧದಲ್ಲಿ ಉಪಯುಕ್ತವಾದ ಹಸಿರು ಟೀ ಕೊಬ್ಬು ಕರಗಿಸಲೂ ನೆರವಾಗುತ್ತದೆ.

ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಖಂಡಿತ ಮೋಸವಿಲ್ಲ..!

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ನಿಮ್ಮ ನಿತ್ಯದ ಪೇಯಗಳಾದ ಟೀ, ಕಾಫಿ ಅಥವಾ ಹಾಲಿನ ಮೇಲೆ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿ ಕಲಕಿ ಕುಡಿಯಿರಿ.

* ನಿಮ್ಮ ನಿತ್ಯದ ಉಪಾಹಾರಗಳಾದ ಉಪ್ಪಿಟ್ಟು, ಬ್ರೆಡ್ ಟೋಸ್ಟ್ ಮೊದಲಾದವುಗಳ ಮೇಲೆ ಕೊಂಚವಾಗಿ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಿರಿ

* ನಿತ್ಯದ ಸಲಾಡ್ (ಅಥವಾ ಪಲ್ಯ)ಗಳ ಮೇಲೆ ಚಿಮುಕಿಸಿ ಸೇವಿಸಿ. ಕೆಲವೇ ದಿನಗಳಲ್ಲಿ ಕೊಬ್ಬು ಕರಗತೊಡಗಿರುವುದು ಗಮನಕ್ಕೆ ಬರುತ್ತದೆ.

ಬೀನ್ಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ

ಬೀನ್ಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ

ಅಪಾನವಾಯುವಿಗೆ ಆಹ್ವಾನ ಎಂಬ ಒಂದೇ ಅವಗುಣವನ್ನು ಬಿಟ್ಟರೆ ಬೀನ್ಸ್ ತೂಕವಿಳಿಸಲು ಉತ್ತಮವಾದ ಆಹಾರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬಿನ ಅವಶ್ಯಕತೆ ಇರುವುದರಿಂದ ದೇಹ ಅನಿವಾರ್ಯವಾಗಿ ಕೊಬ್ಬನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಅಲ್ಲದೇ ಬೀನ್ಸ್ ಕರಗಲು ಹೆಚ್ಚು ಹೊತ್ತು ಬೇಕಾಗುವುದರಿಂದ ಪದೇ ಪದೇ ತಿನ್ನುವುದರಿಂದ ತಪ್ಪಿಸಿಕೊಂಡು ಪರೋಕ್ಷವಾಗಿ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಉಗುರುಬೆಚ್ಚಗಿನ ನೀರು

ಉಗುರುಬೆಚ್ಚಗಿನ ನೀರು

ಉಗುರುಬೆಚ್ಚಗಿನ ನೀರು ದೇಹದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸಬಲ್ಲದು. ನೀವು ಮಾಡಬೇಕಾದದು ಇಷ್ಟೇ ಊಟದ ಅರ್ಧ ಗಂಟೆ ಹಾಗೂ ಊಟದ ನಂತರ ಬಿಸಿ ನೀರನ್ನು ಕುಡಿಯಿರಿ. ಊಟದಾನಂತರ ತಕ್ಷಣವೇ ಎಂದೂ ನೀರು ಕುಡಿಯಬೇಡಿ.

ಸಿಹಿಗೆಣಸುಗಳನ್ನು ಸೇವಿಸಿ

ಸಿಹಿಗೆಣಸುಗಳನ್ನು ಸೇವಿಸಿ

ಸಾಧಾರಣವಾಗಿ ಕೆಂಪು ಅಥವಾ ಬಿಳಿ ಬಣ್ಣದಲ್ಲಿ ಲಭ್ಯವಾಗುವ ಸಿಹಿಗೆಣಸಿನಲ್ಲಿ ಉತ್ತಮ ಪ್ರಮಾಣದಲ್ಲಿ ಪೊಟಾಶಿಯಂ ಹಾಗೂ ಕರಗುವ ನಾರು ಇದೆ.ಗೆಣಸಿಗೆ ನಸುಗೆಂಪು ಬಣ್ಣ ನೀಡುವ carotenoid ಎಂಬ ಪೋಷಕಾಂಶ ದೇಹದಲ್ಲಿ ವಿಟಮಿನ್ ಎ ಪಡೆಯಲು ಸಹಕರಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರನ್ನು ಅರಗಿಸಿಕೊಳ್ಳಲು ಕರುಳುಗಳಿಗೆ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆಯ ಅವಶ್ಯಕತೆ ಇರುವುದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಶೀಘ್ರ ಕರಗುತ್ತದೆ.

ಊಟದ ಬಳಿಕ ಬಾಳೆಹಣ್ಣು ತಿನ್ನಿ

ಊಟದ ಬಳಿಕ ಬಾಳೆಹಣ್ಣು ತಿನ್ನಿ

ಬಾಳೆಹಣ್ಣು ಊಟದ ಬಳಿಕ ಬಾಳೆಹಣ್ಣು ತಿನ್ನುವುದರಿಂದ ಅದರಲ್ಲಿರುವ ವಿವಿಧ ಕಿಣ್ವಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಅಲ್ಲದೇ ಹೆಚ್ಚಿನ ಪೊಟ್ಯಾಶಿಯಂ ಮತ್ತು ಇತರ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ತನ್ಮೂಲಕ ಸೊಂಟದ ಸುತ್ತಳತೆಯನ್ನುಕಿರಿದಾಗಿಸುತ್ತದೆ.

ಸಾಲ್ಮನ್ ಮೀನು

ಸಾಲ್ಮನ್ ಮೀನು

ಮೀನು ಸಾಲ್ಮನ್ ನಂತಹ ಕೆಲವೊಂದು ಮೀನುಗಳು ಕೊಬ್ಬನ್ನು ಹೊಂದಿವೆ. ಆದರೆ ಇದರಲ್ಲಿ ಆಸ್ತಕ್ಸ್ಯಾಂಥಿನ್ ಮತ್ತು ಒಮೆಗಾ3 ಕೊಬ್ಬಿನಾಮ್ಲವಿದೆ. ಇದು ಹೊಟ್ಟೆಯ ಕೊಬ್ಬನ್ನು ಕರಗಿಸುವುದು.

ತರಕಾರಿ ಜ್ಯೂಸ್ ಕುಡಿಯಿರಿ

ತರಕಾರಿ ಜ್ಯೂಸ್ ಕುಡಿಯಿರಿ

ವಿವಿಧ ತರಕಾರಿ ಮತ್ತು ಎಲೆಗಳನ್ನು ಕುದಿಸಿದ ನೀರು ಕುಡಿಯಿರಿ ಸೊಂಟದ ಸುತ್ತಳತೆ ಕಡಿಮೆಗೊಳಿಸಲು ವಿವಿಧ ತರಕಾರಿ ಮತ್ತು ಸೊಪ್ಪುಗಳು ತಮ್ಮದೇ ರೀತಿಯ ನೆರವು ನೀಡುತ್ತವೆ. ಇವೆಲ್ಲವನ್ನೂ ಕ್ರೋಢೀಕರಿಸಿದ ವಿಧಾನ ಶೀಘ್ರವೇ ಪರಿಣಾಮ ಬೀರಲು ತೊಡಗುತ್ತದೆ. ಶುಂಠಿ, ಪುದಿನಾ ಎಲೆಗಳು ಮತ್ತು ಸೌತೆಕಾಯಿಗಳಂತಹ ನಿತ್ಯಬಳಕೆಯ ಸಾಮಾಗ್ರಿಗಳು ಸಹಾ ಕೊಬ್ಬು ಕರಗಿಸಬಲ್ಲವು. ಇವುಗಳ ಜೊತೆಗೆ ಲಿಂಬೆರಸ ಸೇರಿದರೆ ಕೊಬ್ಬು ಕರಗಿಸಲು ಒಂದು ಅದ್ಭುತವಾದ ಮತ್ತು ಸುಲಭವಾದ ವಿಧಾನ ದೊರಕುತ್ತದೆ.

English summary

Foods That Burn Belly Fat Fast & Naturally

The excessive fat on your belly makes you feel bothered and embarrassed. Therefore, you should control what you consume every day. , you must consume foods that have ability to burn the belly fat. So In this article, will show you the list of best foods that burn belly fat fast and naturally. The following writing collected information from reliable sources. Keep reading this article to understand more..
X
Desktop Bottom Promotion