Latest Updates
-
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್!
ಉತ್ತಮ ನಿದ್ರೆಗಾಗಿ ಸೇವಿಸಬಹುದಾದ ಆಹಾರಗಳ ಪಟ್ಟಿ
ದಿನನಿತ್ಯದ ಚಟುವಟಿಕೆಯಲ್ಲಿ ನಿದ್ರೆಯೂ ಒಂದು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ಆಹಾರ ಮುಖ್ಯವಾದಂತೆ ಉತ್ತಮ ನಿದ್ರೆಗೂ ನಾವು ಸೇವಿಸುವ ಆಹಾರ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಈ ವಿಚಾರದ ಕುರಿತು ಅನೇಕ ಸಂಶೋಧನೆ ಹಾಗೂ ಅಧ್ಯಯನವನ್ನು ನಡೆಸಲಾಗಿದೆ. ಅದರ ಅನ್ವಯದಲ್ಲಿ ಕೆಲವು ಆಹಾರವು ಉತ್ತಮ ನಿದ್ರೆಗೆ ಪ್ರಚೋದನೆ ನೀಡುತ್ತವೆ. ಕೆಲವು ಆಹಾರವು ನಿದ್ರೆಗೆ ಭಂಗವನ್ನುಂಟುಮಾಡುತ್ತವೆ ಎಂದು ಹೇಳಲಾಗಿದೆ.
ನಿದ್ರೆಗೆ ಪ್ರೋತ್ಸಾಹ ನೀಡುವ ಆಹಾರಗಳನ್ನು ಸೇವಿಸುವುದರಿಂದ ಯಾವುದೇ ತೊಂದರೆಗೆ ಒಳಗಾಗದೇ ಸುಲಭವಾಗಿ ನಿದ್ರೆಗೆ ಜಾರಬಹುದು. ಕೆಲವರು ನಿದ್ರಾ ಹೀನತೆಯಿಂದ ಪಾರಾಗಲು ಔಷಧಗಳನ್ನು ಸೇವಿಸುತ್ತಾರೆ. ಔಷಧಿಯಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನೈಸರ್ಗಿಕವಾಗಿ ದೊರೆಯುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ಉತ್ತಮ ನಿದ್ರೆಯನ್ನು ಹೊಂದಬಹುದು. ಮಲಗುವ ಮುನ್ನ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಿದ್ರೆಯು ತಾನಾಗಿಯೇ ಒಲಿದು ಬರುತ್ತದೆ. ಹಾಗಾದರೆ ಆ ಆಹಾರ ಪದಾರ್ಥಗಳು ಯಾವವು? ಎನ್ನುವ ಸಂಕ್ಷಿಪ್ತ ವಿವರಣೆಯನ್ನು ಬೋಲ್ಡ್ ಸ್ಕೈ ನಿಮಗೆ ಪರಿಚಯಿಸುತ್ತಿದೆ...

ಧಾನ್ಯಗಳು
ನಿದ್ರೆಗೆ ಮುಂಚೆ ಧಾನ್ಯಗಳಿಂದ ಕೂಡಿರುವ ಆಹಾರವನ್ನು ಸೇವಿಸಬೇಕು. ಕೆನೆತೆಗೆದ ಹಾಲಿನೊಂದಿಗೆ ಧಾನ್ಯಗಳ ಮಿಶ್ರಣದ ಆಹಾರವನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್ಗಳು ಉತ್ತಮ ಮೂಲವಾಗಿದೆ. ಈ ಪೋಷಕಾಂಶವು ಹೊಟ್ಟೆಗೆ ಯಾವುದೇ ತೊಂದರೆ ನೀಡದರೆ ಉತ್ತಮ ನಿದ್ರೆಗೆ ಜಾರುವಂತೆ ಮಾಡುತ್ತದೆ. ಜೊತೆಗೆ ಹಸಿವೆಯಿಂದ ನಿದ್ರೆಗೆ ಭಂಗವಾಗುವುದನ್ನು ತಡೆಯುತ್ತದೆ.

ಬಾದಾಮಿ
ಬಾದಾಮಿಗಳು ಗುಣಮಟ್ಟದ ನಿದ್ರೆ ಪಡೆಯಲು ಸರಿಯಾದ ಪೋಷಕಾಂಶಗಳನ್ನು ಹೊಂದಿರುತ್ತವೆ. ಟ್ರಿಪ್ಟೊಫಾನ್ ಮತ್ತು ಮೆಗ್ನೀಸಿಯಮ್ ಗಳಿಂದ ಭರಿತವಾಗಿರುತ್ತದೆ.ಇದು ಅಗತ್ಯವಾದ ವಿಶ್ರಾಂತಿಗಾಗಿ ನರ ಮತ್ತು ಸ್ನಾಯುವಿನ ಕಾರ್ಯವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಾವು ನಿದ್ದೆ ಮಾಡುವಾಗ ಹೃದಯವು ಸ್ಥಿರ ಮತ್ತು ಮೃದುವಾದ ಲಯದಲ್ಲಿ ಕೆಲಸ ಮಾಡಲು ಉತ್ತಮವಾಗಿರುತ್ತದೆ.

ಬಸಳೆ
ಬಸಳೆ ಅತ್ಯುತ್ತಮ ನಿದ್ರೆ ಪ್ರೇರಿತವಾಗಿದೆ. ಪೋಲೆಟ್, ಮೆಗ್ನೀಸಿಯಮ್ ಮತ್ತು B6 ಮತ್ತು C ನಂತಹ ವಿಟಮಿನ್ ಗಳಂತಹ ಪೌಷ್ಟಿಕಾಂಶಗಳ ಹೊರತಾಗಿ, ಅವುಗಳು ಶಾಂತಿಯುತ ನಿದ್ರೆಗಾಗಿ ಹೆಚ್ಚಿನ ಪ್ರಮಾಣದ ಕೊಡುಗೆ ನೀಡುವ ಗ್ಲುಟಮೈನ್ ಎಂಬ ಅಮೈನೊ ಆಮ್ಲದ ಸಹಾಯ ಮಾಡುವುದು.

ನವಧಾನ್ಯಗಳು
ನವಧಾನ್ಯಗಳ ಆಹಾರ ಪದಾರ್ಥಗಳು ಉತ್ತಮ ನಿದ್ರೆಯನ್ನು ಪ್ರಚೋದಿಸುತ್ತದೆ. ಸಿರೋಟೋನಿನ್ ನಂತಹ ವಿಶ್ರಾಂತಿ ವಿಶ್ರಾಂತಿಹಾರ್ಮೋನ್ಗಳನ್ನು ಉತ್ತೇಜಿಸುತ್ತವೆ. ಗಣನೀಯವಾಗಿ ಇವುಗಳನ್ನು ಸೇವಿಸುವುದರಿಂದ ಗುಣಮಟ್ಟದ ನಿದ್ರೆಯನ್ನು ಪಡೆಯ ಬಹುದು. ನವಧಾನ್ಯಗಳಲ್ಲಿ ಮ್ಯಾಗ್ನೀಸಿಯಂ ಸಮೃದ್ಧವಾಗಿ ಇರುವುದರಿಂದ ಆರೋಗ್ಯದ ಸುಧಾರಣೆಗೆ ಹಾಗೂ ಉತ್ತಮ ನಿದ್ರೆಗೆ ಸಹಾಯವಾಗುವುದು.

ಬಾಳೆಹಣ್ಣು
ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಗಳಂತಹ ನಿದ್ರೆ-ಪ್ರಚೋದಿಸುವ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದು ಟೈಪ್ಟೋಫಾನ್ನಿಂದ ಕೂಡಿರುವ ಉತ್ತಮ ಆಹಾರವಾಗಿದೆ. ಅವು ಸಿರೊಟೋನಿನ್ ಮತ್ತು ಮೆಲಟೋನಿನ್ ನಂತಹ ನಿದ್ರೆ ಹಾರ್ಮೋನುಗಳನ್ನು ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಮಲಗುವ ಮುನ್ನ ನೀವು ಬಾಳೆ ಹಣ್ಣನ್ನು ಸೇವಿಸಿದರೆ ಉತ್ತಮ ನಿದ್ರೆಯನ್ನು ಪಡೆಯಬಹುದು.

ಜೇನುತುಪ್ಪ
ಜೇನುತುಪ್ಪವು ಮೆಲಟೋನಿನ್ ಬಿಡುಗಡೆ ಮಾಡಲು ಪ್ರಚೋದಿಸುವುದರ ಮೂಲಕ ಮೆದುಳಿಗೆ ಎಚ್ಚರಿಕೆಯನ್ನು ನೀಡುತ್ತದೆ. ಜೇನುತುಪ್ಪವು ಓರೆಕ್ಸಿನ್ ಬಿಡುಗಡೆ ಮಾಡುವ ಮೂಲಕ ದೇಹವನ್ನು ಸಡಿಲ ಗೊಳಿಸುತ್ತದೆ. ಆದ್ದರಿಂದ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಸೇವಿಸಿದರೆ ಉತ್ತಮ ನಿದ್ರೆಯನ್ನು ಪಡೆಯಬಹುದು.

ಓಟ್ಸ್
ಉಪಹಾರಕ್ಕೆ ಪ್ರಸಿದ್ಧಿ ಪಡೆದ ತಿಂಡಿಗಳಲ್ಲಿ ಓಟ್ಸ್ ಸಹ ಒಂದು. ರಾತ್ರಿ ವೇಳೆ ಇದನ್ನು ಲಘುವಾಗಿ ಸೇವಿಸುವುದರಿಂದ ಸಂಕೀರ್ಣವಾದ ಕಾರ್ಬೋಹೈಡ್ರೇಟ್ಗಳನ್ನು ಪಡೆಯಬಹುದು. ಇವು ಜೀರ್ಣವಾಗಲು ಧೀರ್ಘ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ರಾತ್ರಿ ನಿದ್ರೆಯ ನಡುವೆ ಹಸಿವನ್ನು ತಡೆಯುತ್ತದೆ. ಇದರಲ್ಲಿ ಸೆರೋಟೋನಿನ್ ಮತ್ತು ಮೆಲಟೋನಿನ್ ಅನ್ನು ಉತ್ತೇಜಿಸುತ್ತದೆ. ಇವು ಉತ್ತಮ ನಿದ್ರೆಗೆ ಉತ್ತಮ ಪ್ರಚೋದನೆಯನ್ನು ನೀಡುತ್ತವೆ.

ಸಿಹಿ ಗೆಣಸು
ಸಿಹಿ ಗೆಣಸು ಅತ್ಯುತ್ತಮ ನಿದ್ರೆ ಪಡೆಯಲು ಮೊದಲ ಆಯ್ಕೆಯಾಗಿ ಪರಿಗಣಿಸಬಹುದು. ಇದು ನಿದ್ರೆ-ಉತ್ತೇಜಿಸುವ ಸಂಕೀರ್ಣ ಕಾರ್ಬೋಹೈಡ್ರೇಟ್ ಗಳನ್ನು ಮತ್ತು ಪೊಟ್ಯಾಸಿಯಮ್ ಗಳನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಇದು ಸ್ನಾಯುಗಳ ವಿಶ್ರಾಂತಿಗೆ ಉತ್ತೇಜಿಸಿ, ಸೊಂಪಾದ ನಿದ್ರೆಗೆ ಅವಕಾಶ ಕಲ್ಪಿಸಿಕೊಡುತ್ತದೆ.

ಒಂದು ಗ್ಲಾಸ್ ಬೆಚ್ಚಗಿನ ಹಾಲು
ಮಕ್ಕಳಿರುವಾಗ ಮಲಗುವ ಮುನ್ನ ಒಂದು ಗ್ಲಾಸ್ ಹಾಲನ್ನು ಕುಡಿದು ಮಲಗುತ್ತಿದ್ದೆವು ಎನ್ನುವುದು ಆಗಾಗ ನಿಮಗೆ ನೆನಪಾಗಬಹುದು. ಹೌದು, ಮಲಗುವ ಮುನ್ನ ಒಂದು ಗ್ಲಾಸ್ ಹಾಲನ್ನು ಸೇವಿಸಿದರೆ ಉತ್ತಮ ನಿದ್ರೆಯನ್ನು ಪಡೆಯಬಹುದು. ಹಾಲಿನಲ್ಲಿ ಸಮೃದ್ಧವಾದ ಕ್ಯಾಲ್ಸಿಯಂ ಇರುತ್ತದೆ. ಇದು ನಿದ್ರೆಗೆ ಸಹಾಯ ಮಾಡುವ ಮೆಲಟೋನಿನ್ಅನ್ನು ಉತ್ತೇಜಿಸುತ್ತದೆ. ನೈಸರ್ಗಿಕವಾಗಿ ಮೆಲಟೋನಿನ್ ಶ್ರವಿಕೆ ಉಂಟಾಗುವುದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದಾಗಿದೆ.

ಡಾರ್ಕ್ ಚಾಕೋಲೇಟ್ಸ್
ಡಾರ್ಕ್ ಚಾಕೋಲೇಟ್ಸ್ ಸಿರೋಟಿನ್‌ಗಳನ್ನು ಒಳಗೊಂಡಿರುತ್ತದೆ.ಇದು ಮನಸ್ಸು ಮತ್ತು ದೇಹವನ್ನು ಉತ್ತಮ ರೀತಿಯಲ್ಲಿ ವಿಶ್ರಾಂತಿಗೆ ಒಳಗಾಗುವಂತೆ ಮಾಡುತ್ತದೆ.ನಿದ್ರಾಹೀನತೆಯಿಂದ ದೂರವಾಗಲು ಔಷಧವನ್ನು ಸೇವಿಸುವ ಬದಲು ರಾತ್ರಿ ಮಲಗುವ ಮುನ್ನ ಒಂದು ಡಾರ್ಕ್ ಚಾಕಲೇಟ್ ತಿಂದರೆ ಸಾಕು. ನಿಮಗೆ ಕಣ್ತುಂಬ ನಿದ್ರೆ ಬರುತ್ತದೆ.



Click it and Unblock the Notifications
