Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಎರಡು-ಮೂರು ವಾರಗಳಲ್ಲಿಯೇ ಬೊಜ್ಜು ಕರಗಿಸುವ 'ಅದ್ಭುತ ಜ್ಯೂಸ್'
ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಯಾಗಿ ಹೊಟ್ಟೆ ಮುಂದಕ್ಕೆ ಬಂದರೆ ಆಗ ಆ ವ್ಯಕ್ತಿಯನ್ನು ನೋಡಲು ತುಂಬಾ ಅಸಹ್ಯವಾಗುವುದು. ಇಂತಹ ಹೊಟ್ಟೆ ಇರುವವರು ಬೊಜ್ಜು ಕರಗಿಸಬೇಕೆಂದು ತುಂಬಾ ಪ್ರಯತ್ನ ಮಾಡುವರು. ಆದರೆ ಅವರಿಗೆ ಇದು ಸಾಧ್ಯವಾಗುವುದೇ ಇಲ್ಲ. ಹೊಟ್ಟೆಯ ಬೊಜ್ಜು ಕರಗಿಸಲು ಸ್ವಲ್ಪ ಜಾಣ್ಮೆಯಿಂದ ಕೆಲಸ ಮಾಡಬೇಕು.
ಜಿಮ್‌ಗೆ ಹೋಗಿ ಮಾತ್ರೆ ತೆಗೆದುಕೊಳ್ಳುವುದರಿಂದ ಸಮಸ್ಯೆ ನಿವಾರಣೆ ಆಗದು. ಇದರೊಂದಿಗೆ ಸಂಸ್ಕರಿತ ಆಹಾರ, ಎಣ್ಣೆಯುಕ್ತ ಆಹಾರ, ಸಕ್ಕರೆಯುಕ್ತ ಆಹಾರ, ತಂಪುಪಾನೀಯ ಇತ್ಯಾದಿಗಳನ್ನು ತ್ಯಜಿಸಬೇಕು. ನೈಸರ್ಗಿಕ ವಿಧಾನವನ್ನು ಅನುಸರಿಸಿಕೊಂಡು ಹೊಟ್ಟೆಯ ಬೊಜ್ಜು ಕರಗಿಸುವುದು ತುಂಬಾ ಸರಳ....
ನೀರು ಮತ್ತು ಲಿಂಬೆ
ಬೆಚ್ಚಗಿನ ನೀರಿಗೆ ಲಿಂಬೆ ರಸವನ್ನು ಹಿಂಡಿಕೊಂಡು ಪ್ರಾತಃ ಕಾಲದಲ್ಲಿ ನಿತ್ಯವೂ ಸೇವಿಸಿದರೆ ನಿಮ್ಮ ಕೊಬ್ಬು ಕರಗಿ ಸುಂದರ ಆಕಾರ ನಿಮ್ಮದಾಗುತ್ತದೆ. ಹೊಟ್ಟೆಯ ಕೊಬ್ಬು ವಾರದೊಳಗೆ ಖಂಡಿತ ಕರಗುತ್ತದೆ. ಆದರೆ ಲಿಂಬೆ ಬೆರೆಸಿದ ಬೆಚ್ಚಗಿನ ನೀರಿನ ಸೇವನೆಯನ್ನು ನಿತ್ಯವೂ ನೀವು ಮಾಡಬೇಕು ಆದರೆ ಮಾತ್ರ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.
ಈ ಪಾನೀಯದ ಲಾಭಗಳು
ಹೊಟ್ಟೆಯ ಬೊಜ್ಜನ್ನು ಕರಗಿಸಲು ಕೆಲವು ನೈಸರ್ಗಿಕ ಜ್ಯೂಸ್‌ಗಳು ತುಂಬಾ ಪರಿಣಾಮಕಾರಿ. ಇದು ದೇಹದಲ್ಲಿರುವ ವಿಷಕಾರಿ ಅಂಶ ಹೊರಹಾಕಿ, ಉರಿಯೂತ ಕಡಿಮೆ ಮಾಡಿ ಚಯಾಪಚಾಯ ಕ್ರಿಯೆ ಹೆಚ್ಚಿನ ಹೊಟ್ಟೆಯ ಬೊಜ್ಜು ಕರಗಿಸುವುದು. ಹೊಟ್ಟೆಯ ಬೊಜ್ಜು ಕರಗಬೇಕೆಂದರೆ ನೀವು ರಾತ್ರಿ ಮಲಗುವ ಮೊದಲು ಒಂದು ಕೆಲಸ ಮಾಡಬೇಕು. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಬೊಜ್ಜು ಕರಗುವುದು. ಈ ನೈಸರ್ಗಿಕ ಜ್ಯೂಸ್ ನೀವು ನಿದ್ರಿಸುವಾಗ ಬೊಜ್ಜು ಕರಗಿಸುವ ಕೆಲಸ ಮಾಡುವುದು. ಕೆಲವರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಹೆಚ್ಚಳ ಮತ್ತು ಹಾರ್ಮೋನು ಸಮಸ್ಯೆಯಿಂದ ಕೊಬ್ಬು ಕಾಣಿಸಬಹುದು. ಈ ನೈಸರ್ಗಿಕ ಜ್ಯೂಸ್ ಈ ಕಾಯಿಲೆಗಳಿಗೂ ಪರಿಣಾಮಕಾರಿ. ಇದರಿಂದ ಕೆಲವೇ ದಿನಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿ.
ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ
ಒಂದು ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ ಮತ್ತು ಒಂದು ಹಿಡಿ ಪಾಲಕ ಸೊಪ್ಪು ತೆಗೆದುಕೊಳ್ಳಿ. ಇದನ್ನು ರುಬ್ಬಿಕೊಂಡು ದಪ್ಪಗಿನ ಜ್ಯೂಸ್ ಮಾಡಿಕೊಳ್ಳಿ. ಈ ಜ್ಯೂಸ್ aನ್ನು ಮಲಗುವ ಮೊದಲು ಒಂದು ವಾರ ಕಾಲ ಕುಡಿಯಬೇಕು. ಇದನ್ನು ಕೆಲವು ದಿನ ಹೆಚ್ಚು ಕಾಲ ಸೇವನೆ ಮಾಡಬಹುದು. ಇದರಿಂದ ಹೊಟ್ಟೆಯಲ್ಲಿರುವ ಮತ್ತಷ್ಟು ಕೊಬ್ಬು ಕರಗುವುದು.
ಪಾನೀಯದ ಲಾಭಗಳು
ಇದು ಚಯಾಪಚಾಯ ಕ್ರಿಯೆ ಹೆಚ್ಚಿಸಿ, ಹಸಿವನ್ನು ಕಡಿಮೆ ಮಾಡಿ ಸಂಪೂರ್ಣ ದೇಹದಲ್ಲಿ ಕೊಬ್ಬಿನ ಕೋಶಗಳನ್ನು ವಿಘಟಿಸುವುದು. ಈ ಪಾನೀಯದಲ್ಲಿ ಇರುವ ಸಿಟ್ರಿಕ್ ಅಂಶವು ಹೊಟ್ಟೆಯಲ್ಲಿನ ಕೊಬ್ಬನ್ನು ಕರಗಿಸಲು ಪ್ರಮುಖ ಪಾತ್ರ ನಿರ್ವಹಿಸುವುದು. ಇದು ಯಕೃತ್ ಅನ್ನು ಶುದ್ಧೀಕರಿಸಿ ಜೀರ್ಣಕ್ರಿಯೆಗೆ ನೆರವಾಗುವುದು. ಕೊಬ್ಬು ಕಡಿಮೆ ಮಾಡಲು ದೇಹಕ್ಕೆ ಬೇಕಾಗುವ ನಾರಿನಾಂಶವು ಪಿಯರ್ನಲ್ಲಿ ಇರುವುದು. ಇದು ಆಗಾಗ ಹಸಿವಾಗುವುದನ್ನು ತಪ್ಪಿಸುವುದು. ಪಾಲಕವು ಉರಿಯೂತ ಮತ್ತು ರಕ್ತದ ಅಸಿಡಿಟಿ ಕಡಿಮೆ ಮಾಡುವುದು.
ಮೆಂತೆ ನೀರು
ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.
ಲೋಳೆಸರ ಮತ್ತು ಜೇನಿನ ಪಾನೀಯ
ಹೊಟ್ಟೆಯ ಕೊಬ್ಬು ಕರಗಿಸಲು ಲೋಳೆಸರವೂ ಉತ್ತಮವಾಗಿದೆ. ಒಂದು ವೇಳೆ ಹೊಟ್ಟೆಯಲ್ಲಿ ಆಮ್ಲೀಯತೆ, ಅಜೀರ್ಣ, ಹೊಟ್ಟೆ ಉಬ್ಬರಿಕೆ ಮೊದಲಾದ ತೊಂದರೆಗಳಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಎರಡು ದೊಡ್ಡಚಮಚ ಲೋಳೆಸರದ ರಸ ಮತ್ತು ಒಂದು ದೊಡ್ಡಚಮಚ ಜೇನು ಸೇರಿಸಿ ಮಿಶ್ರಣ ಮಾಡಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಕೊಂಚವೇ ಬಿಸಿ ಮಾಡಿಕೊಂಡು ಪ್ರಥಮ ಆಹಾರವಾಗಿ ಸೇವಿಸಿ. ಒಂದು ಘಂಟೆಯ ಬಳಿಕವೇ ಉಪಾಹಾರ ಸೇವಿಸಿ.
ಬೆಳ್ಳುಳ್ಳಿ+ಲಿಂಬೆ ರಸ
*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ
*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.
*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.
*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.
ಹಚ್ಚ ಹಸಿರು ಜ್ಯೂಸ್!
ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.