For Quick Alerts
ALLOW NOTIFICATIONS  
For Daily Alerts

ಧೂಮಪಾನದಿಂದ ದೂರವಿರಿ ಇಲ್ಲವಾದರೆ, ಈ ಪರಿಯ ಸಮಸ್ಯೆ ಕಾಡಬಹುದು!

By Divya
|

ಧೂಮಪಾನದಿಂದ ಆರೋಗ್ಯದ ಮೇಲೆ ಅನೇಕ ಕೆಟ್ಟ ಪರಿಣಾಮಗಳು ಬೀರುತ್ತವೆ ಎಂದು ಹಲವಾರು ಅಧ್ಯಯನಗಳು ಸಾಬೀತು ಪಡಿಸಿವೆ. ಧೂಮಪಾನವು ಹೃದಯಾಘಾತ, ಶ್ವಾಸಕೋಶದ ತೊಂದರೆ ಮತ್ತು ಕ್ಯಾನ್ಸರ್‍ನಂತಹ ಕಾಯಿಲೆಗಳ ಹುಟ್ಟಿಸುತ್ತದೆ. ಗರ್ಭಿಣಿಯರು ಧೂಮಪಾನ ಮಾಡುವುದರಿಂದ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ನಿಗದಿತ ಸಮಯಕ್ಕೆ ಮೊದಲೇ ಜನಿಸುವ ಸಾಧ್ಯತೆ ಇರುತ್ತದೆ.

ದೊಡ್ಡ ದೊಡ್ಡ ಕಾಯಿಲೆಯನ್ನೇ ಆಹ್ವಾನಿಸುವ ಧೂಮಪಾನದಿಂದ ಬಾಯಿಗೆ ಸಂಬಂಧಿಸಿದಂತೆ ಹಲ್ಲುಗಳು, ಒಸಡು ಹಾಗೂ ಬಾಯಿಯ ಅಂಗಾಂಶಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಧೂಮಪಾನಿಗಳಿಗೆ ತಮ್ಮ ಆರೋಗ್ಯದ ಮೇಲೆ ಯಾವೆಲ್ಲಾ ದುಷ್ಪರಿಣಾಮ ಬೀರಬಲ್ಲದು ಎನ್ನುವ ಬಗ್ಗೆ ಅರಿವಿರುವುದಿಲ್ಲ. ಈ ಕೆಟ್ಟ ಅಭ್ಯಾಸ ಹೆಚ್ಚಾದಂತೆ ದಿನದಿಂದ ದಿನಕ್ಕೆ ರೋಗ ನಿರೋಧಕ ಶಕ್ತಿಯು ಕುಂಟಿತಗೊಳ್ಳುತ್ತದೆ.

'ಧೂಮಪಾನಿಯ ಕೆಮ್ಮನ್ನು' ಸರಳವಾಗಿ ನಿಯಂತ್ರಿಸುವ ಟ್ರಿಕ್ಸ್!

ಒಮ್ಮೆ ಧೂಮಪಾನಕ್ಕೆ ಬಲಿಯಾದವರು ಚಟದಿಂದ ಹೊರಬರಲು ಬಹಳ ಕಷ್ಟ. ಆದರೆ ವ್ಯಸನದಿಂದ ದೂರ ಇರಲೇಬೇಕು ಎನ್ನುವ ದೃಢ ಸಂಕಲ್ಪವಿದ್ದರೆ ಧೂಮಪಾನದಿಂದ ದೂರವಿರಬಹುದು. ಧೂಮಪಾನದಿಂದ ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತದೆ? ಹಾಗೂ ಅದರ ನಿವಾರಣೆ ಹೇಗೆ ಎನ್ನುವ ಸಂಕ್ಷಿಪ್ತ ವಿವರಣೆ ಇಲ್ಲಿದೆ.....

ಹಲ್ಲಿನ ಮೇಲೆ ಕಲೆಗಳು

ಹಲ್ಲಿನ ಮೇಲೆ ಕಲೆಗಳು

ಧೂಮಪಾನ ಮಾಡುವುದರಿಂದ ಹಲ್ಲಿನ ಮೇಲೆ ಒಂದು ಬಗೆಯ ಕಪ್ಪು ಕಲೆಗಳಾಗುವುದನ್ನು ಕಾಣಬಹುದು. ನಿಯಮಿತವಾಗಿ ಹಲ್ಲುಗಳ ಸ್ಕೇಲಿಂಗ್(ಸ್ವಚ್ಛ)ಮಾಡುವುದರಿಂದ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ವಾಸನೆಯುಕ್ತ ಉಸಿರು

ವಾಸನೆಯುಕ್ತ ಉಸಿರು

ಧೂಮಪಾನ ಮಾಡುವವರ ಬಾಯಲ್ಲಿ ನಿಕೋಟಿನ್ ಮತ್ತು ಟಾರ್ ಅಂಶವು ಬಾಯಲ್ಲಿ ಕುಳಿತಿರುತ್ತವೆ. ಇದರಿಂದ ರುಚಿ ಮತ್ತು ವಾಸನೆಯನ್ನು ಗುರುತಿಸಲು ಸಾಧ್ಯವಾಗದು. ಇವರ ಬಾಯಿ ಶುಷ್ಕವಾಗಿರದೇ ಇರುವ ಕಾರಣ ಸದಾ ವಾಸನೆಯುಕ್ತ ಉಸಿರಿನಿಂದ ಕೂಡಿರುತ್ತದೆ.

ದಂತ ಕ್ಷಯ

ದಂತ ಕ್ಷಯ

ಧೂಮಪಾನ ಮಾಡುವುದರಿಂದ ಬಾಯಲ್ಲಿ ಲೋಳೆ ಪ್ರಮಾಣವು ಹೆಚ್ಚುತ್ತದೆ. ಗಡುಸಾದ ಈ ಲೋಳೆಯನ್ನು ತೆಗೆದುಹಾಕಲು ಸ್ವಲ್ಪ ಕಷ್ಟ ಎಂದೇ ಹೇಳಬಹುದು. ಇವು ಬಾಯಲ್ಲಿ ಹಾಗೇ ಉಳಿದುಕೊಳ್ಳುವುದರಿಂದ ಹಲ್ಲುಗಳ ಕೊಳೆತಕ್ಕೆ ಕಾರಣವಾಗುತ್ತದೆ.

ದಂತದ ರೋಗಗಳು

ದಂತದ ರೋಗಗಳು

ಧೂಮಪಾನವು ದಂತ/ಒಸಡುಗಳ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ಪೆರಿಯೋಡೆಂಟಲ್ ಎನ್ನುವ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇದು ಸೋಂಕುರೀತಿಯ ರೋಗ. ಒಮ್ಮೆ ಇದಕ್ಕೆ ತುತ್ತಾದರೆ ಒಸಡುಗಳಿಂದ ರಕ್ತಸ್ರಾವ ಉಂಟಾಗುವುದು. ಅಲ್ಲದೆ ಹಲ್ಲುಜ್ಜುವಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಈ ರೋಗದ ಪ್ರಾರಂಭದ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ ಹಲ್ಲುಗಳು ಸಡಿಲಗೊಳ್ಳುವುದು.

ನೀವು ಊಹಿಸಿರದ ಧೂಮಪಾನದ 6 ಪರಿಣಾಮಗಳು

ಹಲ್ಲು ಉದುರುವುದು

ಹಲ್ಲು ಉದುರುವುದು

ಪೆರಿಯೋಡೆಂಟಲ್ ಕಾಯಿಲೆಯಿಂದ ಹಲ್ಲುಗಳ ಬೇರುಗಳು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಇದರ ತೀವ್ರಗತಿ ಉಂಟಾದ ಮೇಲೆ ಹಲ್ಲುಗಳು ಉದುರುತ್ತವೆ.

ದಂತ ಜೋಡಣೆಯ ವೈಫಲ್ಯ

ದಂತ ಜೋಡಣೆಯ ವೈಫಲ್ಯ

ಧೂಮಪಾನಿಗಳ ಹಲ್ಲು ಉದುರುವುದರಿಂದ ದಂತ ಜೋಡಣೆ ಮಾಡಲಾಗುವುದು. ಇವರ ಬಾಯಲ್ಲಿ ದಂತವು ಕಳಪೆ ಸ್ಥಿತಿಗೆ ತಿರುಗಿರುತ್ತದೆ. ಆ ಸಂದರ್ಭದಲ್ಲಿ ಮಾಡಲಾಗುವ ದಂತ ಜೋಡಣೆಯೂ ವೈಫಲ್ಯವನ್ನುಂಟುಮಾಡುತ್ತದೆ. ದಂತ ಶಸ್ತ್ರಚಿಕಿತ್ಸೆ ಮತ್ತು ಮೂಳೆಯ ಕಸಿಗಳಾವುದೂ ಫಲಕಾರಿ ಚಿಕಿತ್ಸೆಯಾಗದು.

ಬಾಯಿಯ ಕ್ಯಾನ್ಸರ್

ಬಾಯಿಯ ಕ್ಯಾನ್ಸರ್

ಸಿಗರೇಟ್, ಸಿಗಾರ್ಗ, ಕೊಳವೆ, ತಂಬಾಕು ಜಗೆಯುವುದು ಸೇರಿದಂತೆ ಯಾವುದೇ ವಿಧಾನದಲ್ಲಿ ತಂಬಾಕು ಸೇವನೆ ಮಾಡಿದರೂ ಕ್ಯಾನ್ಸರ್ ಎನ್ನುವ ಮಾರಿ ಹಿಡಿದುಕೊಳ್ಳುವುದು. ಕ್ಯಾನ್ಸರ್ ರೋಗಿಗಳಲ್ಲಿ ಸುಮಾರು ಶೇ.90 ರಷ್ಟು ಜನರು ಧೂಮಪಾನ ವ್ಯಸನಿಗಳು ಎನ್ನುವುದು ದುಃಖದ ಸಂಗತಿ.

ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಕ್ಯಾನ್ಸರ್ ರೋಗದ ಗುಣಲಕ್ಷಣಗಳು

ಕ್ಯಾನ್ಸರ್ ರೋಗದ ಗುಣಲಕ್ಷಣಗಳು

ಭಾರತೀಯ ಕ್ಯಾನ್ಸರ್ ಸೊಸೈಟಿಯು ಬಾಯಿಯ ಕ್ಯಾನ್ಸರ್‌ಗೆ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದೆ.

* ಬಾಯಲ್ಲಿ ಅಥವಾ ನಾಲಿಗೆಯ ಮೇಲೆ ಹೋಗದೆ ಇರುವ ಹುಣ್ಣು ಅಥವಾ ಗಾಯ.

* ಕೆನ್ನೆಯ ಮತ್ತು ಒಸಡುಗಳ ಮೇಲೆ ಊತ ಕಾಣಿಸಿಕೊಳ್ಳುವುದು(ಇವು ನೋವು ಅಥವಾ ನೋವು ರಹಿತವಾಗಿರಬಹುದು)

* ಸಂಪೂರ್ಣವಾಗಿ ಬಾಯಿ ತೆರೆಯುವಾಗ ಊತ ಮತ್ತು ಕುತ್ತಿಗೆಯಲ್ಲಿ ಊತ ಕಾಣಿಸಿಕೊಳ್ಳುತ್ತದೆ.

* ಗಂಟಲು ನಿರಂತರವಾಗಿ ನೋಯುತ್ತಿರುತ್ತದೆ.

* ಎಂಜಲು ನುಂಗಲು ಮತ್ತು ನಾಲಿಗೆ ಹೊರಳಾಡಿಸಲು ತೊಂದರೆಯಾಗುವುದು. ಜೊತೆಗೆ ದವಡೆಯಲ್ಲೂ ನೋವು ಕಾಣಿಸಿಕೊಳ್ಳುವುದು.

English summary

Do You Smoke? Here Is How It Can Affect Your Oral Health

Many studies have proven the ill-effects of smoking on your overall health. Smoking increases the chances of having a heart attack or stroke and is also a leading cause of lung and oral cancer...and Clinical Studies suggest that smokers have a higher than average risk of periodontal disease and poor oral health status.
Story first published: Sunday, May 28, 2017, 14:10 [IST]
X
Desktop Bottom Promotion