ಅಡುಗೆಮನೆಯ ರಾಣಿ, ಅರಿಶಿನದ ಚಿನ್ನದಂತಹ ಗುಣಗಳು

By: Hemanth
Subscribe to Boldsky

ಅರಿಶಿನವನ್ನು ಹಿಂದಿನ ಕಾಲದಿಂದಲೂ ಭಾರತೀಯರು ಅಡುಗೆ ಹಾಗೂ ಕೆಲವೊಂದು ಔಷಧಿಗಳಲ್ಲಿ ಬಳಸುತ್ತಾ ಬಂದಿದ್ದಾರೆ. ಇದರಲ್ಲಿರುವ ಕೆಲವೊಂದು ಔಷಧಿಯ ಗುಣಗಳು ತುಂಬಾ ಪರಿಣಾಮಕಾರಿಯಾಗಿ ರೋಗಗಳನ್ನು ನಿವಾರಣೆ ಮಾಡುತ್ತದೆ ಮತ್ತು ಇನ್ನು ಕೆಲವು ಕಾಯಿಲೆಗಳು ಬರದಂತೆ ತಡೆಯುತ್ತದೆ. ಇದರಿಂದ ಅರಿಶಿನವನ್ನು ಹೆಚ್ಚಾಗಿ ಅಡುಗೆಗಳಲ್ಲಿ ಬಳಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.  ಮನಸ್ಸನ್ನು ಹಿಂಡುವ ಖಿನ್ನತೆಯ ನಿಯಂತ್ರಣಕ್ಕೆ- ಅರಿಶಿನ ಜ್ಯೂಸ್

ಬನ್ನಿ ಇಂದು ಬೋಲ್ಡ್ ಸ್ಕೈ ಈ ಲೇಖನದಲ್ಲಿ ಎರಡು ಪ್ರಮುಖ ಕಾಯಿಲೆಗಳಾದ ಯಕೃತ್ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಯನ್ನು ನಿವಾರಿಸಲು ಅರಿಶಿನವು ಹೇಗೆ ನೆರವಾಗಲಿದೆ ಎಂದು ನಿಮಗೆ ತಿಳಿಸಿಕೊಡಲಾಗುವುದು. ಅರಿಶಿನದಲ್ಲಿ ಉರಿಯೂತ ಶಮನಕಾರಿ ಹಾಗೂ ಆ್ಯಂಟಿಆ್ಸಕ್ಸಿಡೆಂಟ್ ಗುಣಗಳು ಸಮೃದ್ಧವಾಗಿದೆ. ಅಲ್ಲದೆ ಇದರಲ್ಲಿರುವ ಕುರ್ಕುಮಿನ್ ಎನ್ನುವಂತಹ ಅಂಶವು ಯಕೃತ್‌ನ ಉರಿಯೂತವನ್ನು ಕಡಿಮೆ ಮಾಡಿಕೊಂಡು ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಮಾಡುವುದು. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಕುರ್ಕುಮಿನ್‌ನ ಮತ್ತೊಂದು ಲಾಭವೆಂದರೆ ಇದು ಬೆಟಾ ಅಮ್ಲಯ್ಡ್ ಪದರಗಳು ನಿರ್ಮಾಣವಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಅಲ್ಝೆಮರ್ ಕಾಯಿಲೆಯನ್ನು ತಡೆಯಬಹುದು. ಅದರಲ್ಲಿಯೂ ಅರಿಶಿನದೊಂದಿಗೆ ತೆಂಗಿನ ಹಾಲನ್ನು ಬಳಸಿದಾಗ ಇದರಲ್ಲಿ ಇರುವಂತಹ ಮಧ್ಯಮ ಸರಪಳಿಯ ಗ್ಲಿಸರೈಡ್‌ಗಳು ಖಿನ್ನತೆ ಬರದಂತೆ ನೋಡಿಕೊಂಡು ನೆನಪಿನ ಶಕ್ತಿಯ ಕಳೆದುಕೊಳ್ಳುವುದನ್ನು ತಡೆಯುವುದು ಮತ್ತು ಯಕೃತ್ ಅನ್ನು ಶುದ್ಧೀಕರಿಸಲು ನೆರವಾಗುವುದು..... 

1#

1#

ಒಂದು ಚಮಚ ಅರಿಶಿನ ತೆಗೆದುಕೊಳ್ಳಿ.

2#

2#

ಒಂದು ಚಮಚ ತೆಂಗಿನ ಎಣ್ಣೆ

3#

3#

ಎರಡು ಕಪ್ ತೆಂಗಿನ ಹಾಲು

4#

4#

ಒಂದು ಚಿಟಿಕೆ ಕರಿಮೆಣಸಿನ ಹುಡಿ

5#

5#

ಈ ಎಲ್ಲಾ ಸಾಮಗ್ರಿಗಳನ್ನು ಒಂದು ತವಾಗೆ ಹಾಕಿ ಬಿಸಿ ಮಾಡಿ.

5#

5#

ಈ ಪಾನೀಯವನ್ನು ಬಿಸಿಯಾಗಿರುವಾಗಲೇ ಕುಡಿಯಿರಿ. ಅಥವಾ ಇದನ್ನು ಸೂಪ್ ಅಥವಾ ಪದಾರ್ಥಗಳಿಗೆ ಬಳಸಬಹುದು. ಇದನ್ನು ಪ್ರತೀದಿನ ಸೇವಿಸಿ.

 
English summary

Boiled Turmeric And Coconut Milk Cures These Diseases

Turmeric is the mother of all spices and a must-have in every Indian kitchen. Turmeric is not just a spice that gives a tinge of yellow colour to your food but it provides innumerable health benefits. So today in this article we will be explaining about how this turmeric drink helps in curing two major health problems - liver disease and brain-related health problem.
Subscribe Newsletter