For Quick Alerts
ALLOW NOTIFICATIONS  
For Daily Alerts

ಲೈಂಗಿಕ ಸಾಮರ್ಥ್ಯ ಕಡಿಮೆ ಮಾಡುವ 10 ಆಹಾರಗಳು

|

ಲೈಂಗಿಕತೆ ಎನ್ನುವುದು ಮನಸ್ಸಿಗೆ ಸಂಬಂಧಿಸಿದ್ದೇ ಆದರೂ ನಾವು ಸೇವಿಸುವ ಹಲವಾರು ಆಹಾರಗಳು ಲೈಂಗಿಕತೆಯ ಉತ್ಸಾಹದ ಮೇಲೆ ಕೆಟ್ಟ ದೃಷ್ಟಿ ಬೀರಬಹುದು! ನಾವು ಚಾಕಲೇಟ್ ಮತ್ತು ಬಾದಾಮಿ ಕಾಮೋತ್ತೇಜಕ ಹೆಚ್ಚಿಸುವ ತಿನಿಸುಗಳು ಎಂಬುದನ್ನು ತಿಳಿದಿದ್ದೇವೆ. ಆದರೆ ನಿಮ್ಮ ಮನಸ್ಥಿತಿಯ ಮೇಲೆ ವಿರುದ್ಧ ಪರಿಣಾಮ ಬೀರುವ ಕೆಲವು ಆಹಾರಗಳೂ ಕೂಡ ಇವೆ. ನಾವು ದಿನನಿತ್ಯ ಬಳಸುವ ಈ ಆಹಾರಗಳು ನೀವು ನೈಸರ್ಗಿಕವಾಗಿ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹಾಳುಮಾಡಿ, ನಿಮ್ಮ ಸಂತಾನೋತ್ಪತ್ತಿಯ ಮೇಲೂ ಹಾನಿ ಮಾಡಬಹುದು ಆದ್ದರಿಂದ ಅಂತಹ ಆಹಾರಗಳ ಬಗ್ಗೆ ಮುಖ್ಯವಾಗಿ ತಿಳಿದುಕೊಳ್ಳಬೇಕು.

ಆದ್ದರಿಂದ, ನೀವು ಮಾಡಬೇಕಾದ ಮುಂದಿನ ಕೆಲಸವೆನೆಂದರೆ. ನಿಮ್ಮ ಲೈಂಗಿಕ ಹಸಿವಿಗೆ ಮಸಾಲೆ ಬೆರೆಸುವ ಮನೋಭಾವದಲ್ಲಿದ್ದರೆ ಮೊದಲು ಇಂತಹ ಆಹಾರವನ್ನು ನಿಮ್ಮಿಂದ ದೂರವಿಡಿ!

ಕೃತಕ ಸಿಹಿ

ಕೃತಕ ಸಿಹಿ

ಕೃತಕ ಸಿಹಿ ಆಸ್ಪಾರ್ಟಿನ್, ನಿಮ್ಮ ಮನಸ್ಥಿತಿ ಮತ್ತು ಕಾಮಕ್ಕಾಗಿ ಹವಣಿಸುತ್ತಿರುವ ನಿಮ್ಮ ದೇಹದ ಹ್ಯಾಪಿ ಹಾರ್ಮೋನ್ (ಸಿರೊಟೋನಿನ್) ಗೆ ತೊಂದರೆ ಉಂಟುಮಾಡುವ ಘಟಕಾಂಶವನ್ನು ಹೊಂದಿರುತ್ತದೆ. ಕೇವಲ ಇದೊಂದೆ ಅಲ್ಲದೆ, ತಲೆನೋವು, ಕಿರಿಕಿರಿ, ಉದ್ವಿಗ್ನತೆಯ ಅಸ್ವಸ್ಥತೆಗಳು ಮತ್ತು ನಿದ್ರಾಹೀನತೆ ಮೊದಲಾದ ಇತರ ಅಡ್ಡ ಪರಿಣಾಮಗಳನ್ನು ಹೊಂದಿದೆ. ಆದ್ದರಿಂದ, ಇನ್ನು ಮುಂದೆ ನೀವು ನಿಮ್ಮ ದಿನಸಿ ಕೊಂಡುಕೊಳ್ಳುವ ಸಂದರ್ಭದಲ್ಲಿ ನಿಮ್ಮ ಆರೋಗ್ಯ ಮತ್ತು ಲೈಂಗಿಕ ಜೀವನ ಸುಖವಾಗಿ ಇರಿಸಿಕೊಳ್ಳಲು, ಜೇನುತುಪ್ಪ ಅಥವಾ ಬೆಲ್ಲದಂತಹ ಕೆಲವು ನೈಸರ್ಗಿಕ ಸಿಹಿಯನ್ನು ಕೊಂಡುಕೊಳ್ಳಿ.

ಕಾರ್ನ್/ಜೋಳದ ಚಕ್ಕೆಗಳು

ಕಾರ್ನ್/ಜೋಳದ ಚಕ್ಕೆಗಳು

ಜೋಳದ ಚಕ್ಕೆಗಳು ಕಾಮೋತ್ತೇಜಕ ವಿರೋಧಿ ಅಂಶಗಳನ್ನು ಹೊಂದಿರುವುದು ಅಚ್ಚರಿಯನ್ನುಂಟು ಮಾಡುತ್ತದೆ. ಬೆಳಗಿನ ಹೊತ್ತು ಹಾಸಿಗೆಯಲ್ಲೇ ಒಂದು ಪ್ರಣಯದ ಉಪಹಾರ ಅಥವಾ ಮಲಗುವ ಮುನ್ನ ಪ್ರಣಯ ಪಕ್ಷಿಗಳಾಗಬಯಸಿದ್ದರೆ ಕಾರ್ನ್ ನಿಂದ ದೂರ ಉಳಿಯುವುದೇ ಉತ್ತಮ.

ಚೀಸ್

ಚೀಸ್

ಭಾರಿ ಪ್ರಮಾಣದ ಕೊಬ್ಬಿನ ಹೈನುಗಾರಿಕೆಯ ಉತ್ಪನ್ನಗಳಾದ, ಚೀಸ್, ನಿಮ್ಮ ದೇಹಕ್ಕೆ ಬಹಳಷ್ಟು ಹಾನಿಯನ್ನು ಉಂಟುಮಾಡಬಲ್ಲದು. ಇಂತಹ ಉತ್ಪನ್ನಗಳ ಮಟ್ಟದಿಂದ ಈಸ್ಟ್ರೋಜೆನ್ (estrogen), ಪ್ರೊಗೆಸ್ಟಿರೋನ್ (progesterone) ಮತ್ತು ಟೆಸ್ಟೋಸ್ಟಿರೋನ್ (testosterone) ನಂತಹ ನೈಸರ್ಗಿಕ ಲಹರಿ ಉನ್ನತಿಗೇರಿಸುವ ಹಾರ್ಮೋನುಗಳ ಉತ್ಪಾದನೆಯಲ್ಲಿ ತೊಂದರೆಗಳುಂಟಾಗುತ್ತವೆ.

ಕ್ರಿಸ್ಪಿ ಡಿಲೈಟ್ಸ್ (ಗರಿಗರಿಯಾದ ಆಹಾರ)

ಕ್ರಿಸ್ಪಿ ಡಿಲೈಟ್ಸ್ (ಗರಿಗರಿಯಾದ ಆಹಾರ)

ನಿಮ್ಮ ಹಾಸಿಗೆಯ ಪಕ್ಕದಲ್ಲಿ ಇಟ್ಟ ಚಿಪ್ಸ್ ನ ಒಂದು ಪ್ಯಾಕ್ ನಿಮ್ಮ ಕಾಮ ಜೊತೆಗೆ, ನಿಮ್ಮ ದೇಹದ ಅಂಗಾಂಶಗಳ ಮತ್ತು ಕೋಶಗಳನ್ನು ನಾಶಮಾಡುವ ಸಾಮರ್ಥ್ಯ ಹೊಂದಿರುತ್ತದೆ! ಈ ಆಲೂಗೆಡ್ಡೆ ಚಿಪ್ಸ್ ಮತ್ತು ಗರಿಗರಿಯಾದ ತಿಂಡಿಗಳು ಕಮಟು ಎಣ್ಣೆಗಳಲ್ಲಿ ತಯಾರಿಸಿ ಅತಿ ಹೆಚ್ಚಿನ ತಾಪಮಾನದಲ್ಲಿ ಕಾಯಿಸಿದಾಗ. ಆದ್ದರಿಂದ, ಕೆಟ್ಟ ಕೊಬ್ಬು ಮತ್ತು ಹೆಚ್ಚಿನ ಉಷ್ಣಾಂಶ ಸಂಯೋಜನೆಯು ನಿಮ್ಮ ನಿಜವಾದ ಪ್ರೀತಿ ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಲ್ಲದು.

ಕಾಫಿ

ಕಾಫಿ

ಬೆಳಗ್ಗೆ ಒಂದು ಕಪ್ ಕಾಫಿ ಸಂತೋಷದ ಮೂಡ್ ಬರಿಸಲು ಸಹಾಯ ಮಾಡಬಹುದು. ಆದರೆ ಅತಿಯಾದರೆ ಅಮೃತವೂ ವಿಷವೆಂಬಂತೆ ಕಾಫಿಯೂ ಅತಿಯಾದರೆ ನಿಮ್ಮ ದೇಹದಲ್ಲಿ ಕಾರ್ಟಿಸೋಲ್ (cortisol) ನಂತಹ ಒತ್ತಡ ಹಾರ್ಮೋನುಗಳು ಉಂಟಾಗುತ್ತವೆ.ಅತಿಯಾದ ಕೆಫೀನ್, ಒತ್ತಡ ಮತ್ತು ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತದೆ. ನೀವು ಪ್ರೇಮ-ಪ್ರೀತಿ ಪ್ರಣಯದ ಮನೋಭಾವದಲ್ಲಿರುವ ನೀವು ಇದಕ್ಕೆ ಅಡ್ಡಿ ಮಾಡುವಂತಹ ನಿಮ್ಮ ಮತ್ತು ನಿಮ್ಮ ಸಂಗಾತಿಯ ಕಾಫಿ ಸೇವನೆಯನ್ನು ಕಡಿತಗೊಳಿಸುವುದು ಉತ್ತಮ.

ಸೋಯಾ

ಸೋಯಾ

ಇದು ಮಾಂಸಕ್ಕೆ ಬದಲಾಗಿ ಉತ್ತಮ ಆರೋಗ್ಯಕರ ಆಹಾರವಾಗಿದೆ. ಆದರೆ, ಸೋಯಾ ಪುರುಷ ಲೈಂಗಿಕ ಹಾರ್ಮೋನುಗಳ ಜೊತೆ ಪೈಪೋಟಿ ನಡೆಸುವ phytoestrogens ಹೊಂದಿದೆ. ಇದು ಸಂತಾನೋತ್ಪತ್ತಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಪುರುಷರ ಸ್ತನ ಬೆಳವಣಿಗೆ ಮತ್ತು ದೇಹದ ಕೂದಲು ಉದುರುವುದು ಮೊದಲಾದ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಆದ್ದರಿಂದ ಪುರುಷರೆ ನಿಮಗೆ ಸೋಯಾ ಇನ್ನುಮುಂದೆ ಅಪಥ್ಯವಾಗಲಿ.

ಏರೇಟೆಡ್ ಪಾನೀಯಗಳು

ಏರೇಟೆಡ್ ಪಾನೀಯಗಳು

ಸಾಮಾನ್ಯವಾಗಿ ಸೋಡಾ ಮಿಶ್ರಿತ ಮತ್ತು ಪ್ಲೇವರ್ಡ್ ಪಾನೀಯಗಳು ನಿಮ್ಮ ತೂಕ ಮತ್ತು ನಿಮ್ಮ ಮನಸ್ಥಿತಿ ಏರುಪೇರುಗಳಿಗೆ ಕಾರಣವಾಗಬಹುದು. ಇಂತಹ ಪಾನೀಯಗಳು ಸ್ಥೂಲಕಾಯತೆ, ಹಲ್ಲಿನ ಕುಳಿಗಳು, ಮಧುಮೇಹ, ಮುಂತಾದ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಬಹುದು. ಇದು ನೀವು ಈ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಇದು ನಿಮ್ಮ ಕಾಮ ಮಟ್ಟವನ್ನು ಸಾಕಷ್ಟು ಕಡಿಮೆಗೊಳಿಸುತ್ತದೆ.

ಮಿಂಟ್ /ಪುದೀನಾ

ಮಿಂಟ್ /ಪುದೀನಾ

ಇದು ಪಚನ ವ್ಯವಸ್ಥೆಗೆ ಮತ್ತು ಕೆಟ್ಟ ಉಸಿರಾಟವನ್ನು ಹೋಗಲಾಡಿಸಲು ಸಹಾಯಕಾರಿ. ಇದು ನಿಮ್ಮ ಲೈಂಗಿಕತೆ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಮಿಂಟ್ ನ ಮೆಂತಾಲ್ ಉತ್ಪನ್ನಗಳು ಲೈಂಗಿಕ ಸಾಮರ್ಥ್ಯವನ್ನು ತಣ್ಣಗಾಗಿಸುತ್ತದೆ. ಆದ್ದರಿಂದ, ಕೆಟ್ಟ ಉಸಿರಾಟವನ್ನು ತೊಡೆದುಹಾಕಲು ನಿಮ್ಮ ಹಲ್ಲುಗಳನ್ನು ಹೆಚ್ಚು ಬಾರಿ ಉಜ್ಜುವುದು ಅಥವಾ ನೈಸರ್ಗಿಕ ಗಿಡಮೂಲಿಕೆಗಳನ್ನು ಬಳಸುವುದು ಒಳ್ಳೆಯದು.

ಮದ್ಯ

ಮದ್ಯ

ನಿಮಗೆ ಕೆಲವು ಪಾನೀಯಗಳು ಕುಡಿದ ನಂತರ ಒಳ್ಳೆಯ ಅನುಭವವನ್ನು ಕೊಡಬಹುದು ಆದರೆ ಆಲ್ಕೊಹಾಲ್ ನಿಜವಾಗಿಯೂ ಮಲಗಬೇಕೆನ್ನುವ ಅಥವಾ ಕಡಿಮೆ ಸೂಕ್ಷ್ಮ ಮನೋಭಾವವನ್ನು ಉಂಟುಮಾಡುತ್ತದೆ. ನೀವು ಇಂತಹ ಕುಡಿದು ಮತ್ತಿನಲ್ಲಿರುವ ವ್ಯಕ್ತಿಯೊಂದಿಗೆ ಪ್ರಣಯ ಮಾಡಲು ಇಷ್ಟಪಡುವಿರೇ? ಮದ್ಯ, ಟೆಸ್ಟೋಸ್ಟಿರೋನ್ ಉತ್ಪಾದನೆ ಕುಂಠಿತಗೊಳಿಸುವ ಒಂದು ರಾಸಾಯನಿಕ ಅಂಶವನ್ನು ಹೊಂದಿರುತ್ತದೆ. ನೀವು ನಿಮ್ಮ ಸಂಗಾತಿ ಜೊತೆ ಸ್ನೇಹಶೀಲರಾಗಿರಲು ಬಯಸಿದಲ್ಲಿ ಮುಂದಿನ ಬಾರಿ, ಆಲ್ಕೊಹಾಲ್ ದೂರವಿಡಿ.

ಕರಿದ ಮತ್ತು ಜಂಕ್ ಆಹಾರ

ಕರಿದ ಮತ್ತು ಜಂಕ್ ಆಹಾರ

ಫ್ರೆಂಚ್ ಫ್ರೈಸ್ ಮತ್ತು ಹ್ಯಾಂಬರ್ಗರ್ ರೀತಿಯ ಕರಿದ ಆಹಾರಗಳು ಗಂಭೀರ ಪ್ರಣಯ ಹಂತಕಗಳು! ಹೈಡ್ರೋಜನೀಕರಿಸಿದ ಕೊಬ್ಬು ನಿಮ್ಮ ಟೆಸ್ಟೋಸ್ಟಿರೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಮತ್ತು ಪುರುಷರಲ್ಲಿ ಕಡಿಮೆ ಗುಣಮಟ್ಟದ ಮತ್ತು ಅಸಹಜ ವೀರ್ಯ ಉತ್ಪಾದನೆಗೆ ಕಾರಣವಾಗಬಹುದು. ನೀವು ನಿಮ್ಮ ಸಂಗಾತಿಯನ್ನು ಸೆಳೆಯಲು ಊಟಕ್ಕಾಗಿ ಹೊರಗಡೆ ಹೋದರೆ ಇಂತಹ ಫಾಸ್ಟ್ ಫುಡ್ ಗಳಿಂದ ದೂರವಿರಿ ಅರದಲ್ಲೀ ನಿಮಗೆ ನಿಮ್ಮವಳೊಂದಿಗೆ/ ನಿಮ್ಮವನೊಂದಿಗೆ ಪ್ರಣಯಕ್ಕೆ ಜಾರಲು ಮನಸ್ಸಿದ್ದರೆ ಜಂಕ್ ಫುಡ್ ಗಳು ಬೇಡವೇ ಬೇಡ!

ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಪ್ರಣಯ ರಾಜನಂತೆ ಲೈಂಗಿಕ ಸುಖದಲ್ಲಿ ಪಾಲುಗೊಳ್ಳಬಯಸಿದ್ದರೆ ಈ ಆಹಾರಗಳ ಸೇವನೆಯನ್ನು ಬಿಟ್ಟು ನಿಮ್ಮ ಪ್ರಣಯವನ್ನು ಅರ್ಥಗರ್ಭಿತವನ್ನಾಗಿಸಿ !

English summary

10 Surprising Foods that Kill Your Aphrodisiac Life

It is important for you to know about the foods that can naturally ruin your sex-drive and harm your reproductive health as well. So, take a look at some such foods that you should strike-off from your menu, when you are in the mood to spice-up your sexual appetite!
X
Desktop Bottom Promotion