ಮಲಗುವ ಮುನ್ನ ಇಂತಹ ಜ್ಯೂಸ್ ಕುಡಿಯಿರಿ ಲೈಂಗಿಕ ಶಕ್ತಿ ಹೆಚ್ಚುತ್ತದೆ...

Posted By: Divya pandith
Subscribe to Boldsky

ಹಾಸಿಗೆಯ ಮೇಲೆ ತಮ್ಮ ಪಾಲುದಾರರೊಂದಿಗೆ ಎಷ್ಟು ಸಮಯದವರೆಗೆ ಎಷ್ಟು ಸಮಯ ಕಳೆಯುತ್ತಾರೆ ಎನ್ನುವುದರ ಆಧಾರದ ಮೇಲೆಯೇ ಸಂಬಂಧಗಳು ಗಟ್ಟಿಯಾಗುತ್ತಾ ಹೋಗುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ. ದೇಹವು ವಯಸ್ಸಿನೊಂದಿಗೆ ಹಲವಾರು ರೀತಿಯ ಬದಲಾವಣೆಗಳಿಗೆ ಒಳಗಾಗುತ್ತದೆ ಮತ್ತು ಒಂದು ವ್ಯಕ್ತಿಯ ಲೈಂಗಿಕ ಶಕ್ತಿಯನ್ನು ಒಳಗೊಂಡಿರುತ್ತದೆ. ಪುರುಷರು ನಿಮಿರುವಿಕೆಯ ಅಪಸಾಮಾನ್ಯತೆಯಿಂದ ಬಳಲುವ ಸಾಧ್ಯತೆಗಳಿರುತ್ತದೆ.

ಒಂದು ನಿಷ್ಕ್ರಿಯ ಲೈಂಗಿಕ ಜೀವನ ಪುರುಷರ ಸ್ವಾಭಿಮಾನಕ್ಕೆ ಅಡ್ಡಿಯಾಗಬಹುದು. ಸಂಗಾತಿಗಳ ನಡುವೆ ಲೈಗಿಂಕ ಕ್ರಿಯೆಯು ಸಮರ್ಪಕವಾಗಿ ಆಗುತ್ತಿಲ್ಲ. ಸಮಸ್ಯೆಗಳಿವೆ ಎಂದಾದರೆ ವೈದ್ಯರ ಸಲಹೆ ಅಥವಾ ಮನೆ ಮದ್ದುಗಳ ಉಪಯೋಗ ಮಾಡಬೇಕು. ಚಿಂತೆ ಮಾಡಬೇಕಿಲ್ಲ, ಸಮಸ್ಯೆಗಳನ್ನು ಹೊಂದಿರುವ ಜೋಡಿಗಳು ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಪಾನೀಯಗಳ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬಹುದು.

ವಯಾಗ್ರದಂತೆ ಕೆಲಸ ಮಾಡುವ ಆಹಾರಗಳು-ಯಾವುದೇ ಅಡ್ಡಪರಿಣಾಮಗಳಿಲ್ಲ!

ಈ ಪಾನೀಯಗಳು ಖಂಡಿತವಾಗಿ ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ. ನಿಮ್ಮ ಲೈಂಗಿಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ಸಹಾಯ ಮಾಡುವ ಅತ್ಯುತ್ತಮ ಪಾನೀಯಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ ನೋಡಿ...  

ಅಲೋವೆರಾ ಜ್ಯೂಸ್

ಅಲೋವೆರಾ ಜ್ಯೂಸ್

ಕೆಲವು ಅಧ್ಯಯನಗಳ ಪ್ರಕಾರ ಲೋಳೆಸರ ಅಥವಾ ಆಲೋವೆರಾದ ತಿರುಳಿನಿಂದ ಸಂಗ್ರಹಿಸಿದ ರಸದ ಸೇವನೆಯಿಂದ ಪುರುಷರಲ್ಲಿ ಟೆಸ್ಟ್ರೋಸ್ಟೆರಾನ್ ಎಂಬ ರಸದೂತ ಹೆಚ್ಚು ಉತ್ಪಾದನೆಯಾಗುತ್ತದೆ. ಈ ರಸದೂತ ಕಾಮಶಕ್ತಿಗೆ ನೇರವಾಗಿ ಸಂಬಂಧಿಸಿದ ರಸದೂತವಾಗಿದ್ದು ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ನಿಮಿರು ದೌರ್ಬಲ್ಯವನ್ನೂ ನಿವಾರಿಸುತ್ತದೆ. ಕೇವಲ ಲೈಂಗಿಕ ಶಕ್ತಿಗೆ ಮಾತ್ರವಲ್ಲ, ಈ ಜ್ಯೂಸ್ ನ ನಿಯಮಿತ ಸೇವನೆಯಿಂದ ಒಟ್ಟಾರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಕಲ್ಲಂಗಡಿ ಜ್ಯೂಸ್

ಕಲ್ಲಂಗಡಿ ಜ್ಯೂಸ್

ಕಲ್ಲಂಗಡಿ ಹಣ್ಣಿನ ಬಹುತೇಕ ಭಾಗ ನೀರೇ ಆಗಿದ್ದರೂ ಇದಲ್ಲಿರುವ ಎಲ್-ಸಿಟ್ರುಲೈನ್ ಎಂಬ ಪೋಷಕಾಂಶ ಲೈಂಗಿಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಕಲ್ಲಂಗಡಿಯನ್ನು ಸೇವಿಸಿದ ಬಳಿಕ ಈ ಪೋಷಕಾಂಶ ನಮ್ಮ ಜೀರ್ಣಾಂಗಗಳಲ್ಲಿ ಜೀರ್ಣರಸಗಳ ಪ್ರಭಾವದ ಮೂಲಕ ಎಲ್-ಆರ್ಜಿನೈನ್ ಎಂಬ ಪೋಷಕಾಂಶವಾಗಿ ಬದಲಾಗುತ್ತದೆ. ಈ ಪೋಷಕಾಂಶ ರಕ್ತಕ್ಕೆ ಸೇರಿದ ಬಳಿಕ ಇದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪತ್ತಿಗೆ ಪ್ರಚೋದಿಸುತ್ತದೆ. ಇದು ವಿಶೇಷವಾಗಿ ಪುರುಷರ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆಯನ್ನು ಹೆಚ್ಚಿಸಿ ಉದ್ರೇಕತೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಲೈಂಗಿಕ ಸಾಮರ್ಥ್ಯವೂ ಹೆಚ್ಚುತ್ತದೆ.

ಸೇಬು ಜ್ಯೂಸ್

ಸೇಬು ಜ್ಯೂಸ್

ಕ್ವೆರ್ಸೆಟಿನ್ ಎಂದು ಕರೆಯಲಾಗುವ ಉನ್ನತ ಮಟ್ಟದ ಉತ್ಕರ್ಷಣ ನಿರೋಧಕ ಫ್ಲೇವನಾಯಿಡ್ ಕಾರಣದಿಂದಾಗಿ ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಸೇಬು ಅದ್ಭುತ ಹಣ್ಣು. ನಿತ್ಯವೂ ಸೇಬು ಜ್ಯೂಸ್ ಕುಡಿಯುವುದರಿಂದ ಹಾಸಿಗೆಯ ಮೇಲೆ ಹೆಚ್ಚು ಸಮಯ ಕಳೆಯಲು ನಿಮಗೆ ಸಹಾಯವಾಗುತ್ತದೆ.

ಶುಂಠಿ ಜ್ಯೂಸ್

ಶುಂಠಿ ಜ್ಯೂಸ್

ನಿಮ್ಮ ಜೀವನಕ್ಕೆ ಹೆಚ್ಚುವರಿ ಮಸಾಲೆ ಸೇರಿಸಿ. ಶುಂಠಿ ರಸವು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ದೇಹದ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಲೈಂಗಿಕ ದುರ್ಬಲತೆ ಮತ್ತು ಅಕಾಲಿಕ ಉದ್ವೇಗವನ್ನು ಸರಿಪಡಿಸುತ್ತದೆ. ಇದರಿಂದಾಗಿ ನಿಮ್ಮ ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ಜೇನುತುಪ್ಪ ಮತ್ತು ಹಾಲು

ಜೇನುತುಪ್ಪ ಮತ್ತು ಹಾಲು

ಜೇನುತುಪ್ಪ ನಿಮ್ಮ ನೈಸರ್ಗಿಕ ಸಿಹಿಕಾರಕವಾಗಿದ್ದು ಅದು ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಣ್ಣನ್ನು ಬೆರೆಸಿದ ಹನಿ ನಿಮ್ಮ ಜೀವಂತಿಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಬಾಳೆಹಣ್ಣಿನ ಜ್ಯೂಸ್

ಬಾಳೆಹಣ್ಣಿನ ಜ್ಯೂಸ್

ಬಾಳೆಹಣ್ಣಿನಲ್ಲಿರುವ ಬ್ರೋಮಿಲೈನ್ ಎಂಬ ಕಿಣ್ವ ಲೈಂಗಿಕ ಶಕ್ತಿಯನ್ನು ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುವ ಕ್ಷಮತೆ ಪಡೆದಿದೆ. ನಿತ್ಯವೂ ಒಂದು ಲೋಟ ಬಾಳೆಹಣ್ಣಿನ ತಿರುಳನ್ನು ಗೊಟಾಯಿಸಿ ತಯಾರಿಸಿದ ಜ್ಯೂಸ್ ಅಥವಾ ರಾಸಾಯನವನ್ನು ಸೇವಿಸುವ ಮೂಲಕ ಈ ಹಣ್ಣಿನಲ್ಲಿರುವ ಪೋಷಕಾಂಶಗಳು, ವಿಟಮಿನ್ನುಗಳು ದೇಹಕ್ಕೆ ಶಕ್ತಿ ದೊರಕುತ್ತದೆ. ಅಂತೆಯೇ ಲೈಂಗಿಕ ಶಕ್ತಿ ಹೆಚ್ಚಿಸಲೂ ನೆರವಾಗುತ್ತದೆ. ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧ ವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್

ದಾಳಿಂಬೆ ಆಂಟಿಆಕ್ಸಿಡೆಂಟ್ಗಳಲ್ಲಿ ರಕ್ತದ ಪರಿಚಲನೆ ಸುಧಾರಿಸುತ್ತದೆ ಮತ್ತು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಸಹಕಾರಿಯಾಗುತ್ತದೆ. ದಾಳಿಂಬೆ ರಸದ ಗಾಜಿನು ನಿಮ್ಮ ಲೈಂಗಿಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ. ಇನ್ನೊಂದು ಅಧ್ಯಯನದ ಪ್ರಕಾರ ದಾಳಿಂಬೆ ಹಣ್ಣುಗಳ ಕಾಳುಗಳನ್ನು ಹಿಂಡಿ ಬೀಜ ನಿವಾರಿಸಿದ ರಸವನ್ನು ನೇರವಾಗಿ ಕುಡಿಯುವ ಮೂಲಕ ನಿಮಿರು ದೌರ್ಬಲ್ಯ ಕಡಿಮೆಯಾಗುತ್ತದೆ. ಸಾಂದ್ರೀಕರಿಸಿದ ರಸದಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ರಕ್ತಪರಿಚಲನೆಯನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲ, ಈ ಹಣ್ಣಿನ ರಸದ ಸೇವನೆಯಿಂದ ಹೃದಯದ ತೊಂದರೆಗಳ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಕಾಫಿ

ಕಾಫಿ

ಕಾಫಿ ಒಂದು ಅಧ್ಯಯನದ ಪ್ರಕಾರ ಯಾರು ಒಂದು ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸುತ್ತಾರೋ ಅವರಿಗೆ ನಿಮಿರುವಿಕೆಯ ದೋಷ ಬರುವ ಸಾಧ್ಯತೆಯು ಕಾಫಿ ಸೇವಿಸದೆ ಇರುವ ಪುರುಷರಿಗೆ ಹೋಲಿಸಿದರೆ ಕಡಿಮೆ ಇರುತ್ತದೆಯಂತೆ. ಕಾಫಿಯಲ್ಲಿರುವ ಉದ್ದೀಪನಕಾರಕಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆಯಂತೆ ಹಾಗು ಆ ಮೂಲಕ ಶಿಶ್ನವನ್ನು ಸದೃಢವಾಗಿ ಇರಿಸುತ್ತವೆಯಂತೆ.

ಬೀಟ್ರೂಟ್ ಜ್ಯೂಸ್

ಬೀಟ್ರೂಟ್ ಜ್ಯೂಸ್

ಬೀಟ್ರೂಟ್ ರಸ ಒಟ್ಟಾರೆ ಆರೋಗ್ಯಕ್ಕೂ ಉತ್ತಮ ಹಾಗೂ ಲೈಂಗಿಕ ಶಕ್ತಿ ಹೆಚ್ಚಿಸಲೂ ನೆರವಾಗುತ್ತದೆ. ಈ ತರಕಾರಿಯ ಜ್ಯೂಸ್ ಅನ್ನು ನಿತ್ಯವೂ ಕುಡಿಯುವ ಮೂಲಕ ಉತ್ತಮ ಲೈಂಗಿಕ ಜೀವನವನ್ನು ಬಹುಕಾಲ ಅನುಭವಿಸಬಹುದು. ಇದಕ್ಕಾಗಿ ನಿತ್ಯವೂ ಒಂದು ಲೋಟ ಬೀಟ್ರೂಟ್ ರಸವನ್ನು ಕುಡಿಯುತ್ತಾ ಹೋಗಬೇಕಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ರಕ್ತನಾಳಗಳನ್ನು ಸಡಿಲಿಸಿ ಹೆಚ್ಚಿನ ಪ್ರಮಾಣದ ರಕ್ತಸಂಚಾರ ಸಾಗಲು, ವಿಶೇಷವಾಗಿ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆ ದೊರಕಲು ನೆರವಾಗುತ್ತದೆ. ಪರಿಣಾಮವಾಗಿ ನಿಮಿರುತನ ಹಾಗೂ ಲೈಂಗಿಕ ಸಾಮರ್ಥ್ಯವೂ ಹೆಚ್ಚುತ್ತದೆ. ವಿಶೇಷವಾಗಿ ನಡುವಯಸ್ಸು ದಾಟಿದ ದಂಪತಿಗಳಿಗೆ ಈ ಜ್ಯೂಸ್ ವರದಾನವಾಗಿದೆ.

 ಪಾಲಕ್ ಜ್ಯೂಸ್

ಪಾಲಕ್ ಜ್ಯೂಸ್

ಪಾಲಕ್ ಅತ್ಯಧಿಕ ಅರ್ಜಿನೈನ್ ವಿಷಯವನ್ನು ಹೊಂದಿರುತ್ತದೆ . ಪಾಲಕ್ ಜ್ಯೂಸ್ ಸೇವಿಸಿದಾಗ ಅದು ನಿಮ್ಮ ಲೈಂಗಿಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ಸಹಾಯ ಮಾಡುವ ನೈಟ್ರಿಕ್ ಆಕ್ಸೈಡ್ ಆಗಿ ಮಾರ್ಪಡುತ್ತದೆ.

ಆವಕಾಡೊ/ಬೆಣ್ಣೆ ಹಣ್ಣಿನ ಜ್ಯೂಸ್

ಆವಕಾಡೊ/ಬೆಣ್ಣೆ ಹಣ್ಣಿನ ಜ್ಯೂಸ್

ಬೆಣ್ಣೆ ಹಣ್ಣು ಫೋಲಿಕ್ ಆಸಿಡ್ ಮತ್ತು ವಿಟಮಿನ್ ಬಿ 6 ಗಳನ್ನು ಸಮೃದ್ಧವಾಗಿ ಹೊಂದಿದೆ. ವಿಟಮಿನ್ B6 ಹಾರ್ಮೋನುಗಳು ಮತ್ತು ಫೋಲಿಕ್ ಆಸಿಡ್ ಪಂಪ್ ಗಳಿಂದ ದೇಹದಲ್ಲಿ ಶಕ್ತಿಯನ್ನು ಸ್ಥಿರಗೊಳಿಸುತ್ತದೆ.

ಚಿಯಾ ಬೀಜ

ಚಿಯಾ ಬೀಜ

ಚಿಯಾ ಬೀಜ ಜ್ಯೂಸ್ ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳನ್ನು ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಚಿಯಾ ಬೀಜದ ನೀರನ್ನು ಕುಡಿಯುವುದು ನಿಮ್ಮನ್ನು ಸಕ್ರಿಯವಾಗಿರಿಸುತ್ತದೆ ಮತ್ತು ನಿಮಗೆ ಎಲ್ಲಾ ಶಕ್ತಿ ಮತ್ತು ತ್ರಾಣವನ್ನು ನೀಡುತ್ತದೆ.

ಡಾರ್ಕ್ ಚಾಕೊಲೇಟ್ ಶೇಕ್

ಡಾರ್ಕ್ ಚಾಕೊಲೇಟ್ ಶೇಕ್

ಡಾರ್ಕ್ ಚಾಕೊಲೇಟ್ ಥಿಯೋಬ್ರೋಮಿನ್ ವಿಷಯವು ಪ್ರಚೋದಿಸುತ್ತದೆ ಮತ್ತು ಕಾಮಪ್ರಚೋದಕ ಡ್ರೈವ್ ಅನ್ನು ಹೆಚ್ಚಿಸುತ್ತದೆ. ಲೈಂಗಿಕ ಶಕ್ತಿಯನ್ನು ಸ್ಥಿರವಾಗಿರಿಸುತ್ತದೆ. ಆದ್ದರಿಂದ ಹಾಸಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಆ ಚಾಕೊಲೇಟ್ ಶೇಕ್ ಸೇವಿಸಿ.

ಬಾದಾಮಿ ಹಾಲು

ಬಾದಾಮಿ ಹಾಲು

ಬಾದಾಮಿ ಪುರುಷರಲ್ಲಿ ಹಾರ್ಮೋನುಗಳ ಆರೋಗ್ಯಕರ ಉತ್ಪಾದನೆಗೆ ಪ್ರಮುಖವಾದ ಕೊಬ್ಬಿನ ಆಮ್ಲಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಅಲ್ಲದೆ ಬಾದಾಮಿ ಹಾಲು ಮಹಿಳೆಯರಲ್ಲಿ ಲೈಂಗಿಕ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ.

ವೆನಿಲ್ಲಾ ಹನಿ ಮಾರ್ಟಿನಿ

ವೆನಿಲ್ಲಾ ಹನಿ ಮಾರ್ಟಿನಿ

ಜೇನುತುಪ್ಪ ಒಂದು ಮಹಾನ್ ಶಕ್ತಿ ಬೂಸ್ಟರ್ ಮತ್ತು ಟೆಸ್ಟೋಸ್ಟೆರಾನ್ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ವೆನಿಲಾದೊಂದಿಗೆ ಜೇನುತುಪ್ಪ ಸೇರಿಸಿದರೆ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರಬಲವಾದ ಕಾಮೋತ್ತೇಜಕವಾಗುತ್ತದೆ. ಇದು ನಿರಂತರ ಲೈಂಗಿಕ ಕ್ರಿಯೆಗೆ ಸಹಾಯ ಮಾಡುತ್ತದೆ.

ಹಾಲು

ಹಾಲು

ನವವಿವಾಹಿತರಿಗೆ ಪ್ರಸ್ತದ ಸಮಯದಲ್ಲಿ ಏಕೆ ಹಾಲನ್ನು ಕುಡಿಸಲಾಗುತ್ತದೆ ಗೊತ್ತೇ? ಹಾಲಿನಲ್ಲಿರುವ ಪೋಷಕಾಂಶಗಳು ಕೇವಲ ಆರೋಗ್ಯವರ್ಧಕ ಮಾತ್ರವಲ್ಲ, ಲೈಂಗಿಕ ಶಕ್ತಿವರ್ಧಕವೂ ಆಗಿದೆ. ಇದು ಪುರುಷರಿಗೂ ಮಹಿಳೆಯರಿಗೂ ಸಮಾನವಾಗಿ ಉಪಯುಕ್ತವಾಗಿ ಹೆಚ್ಚಿನ ಶಕ್ತಿ ಹಾಗೂ ಸಾಮರ್ಥ್ಯವನ್ನು ನೀಡುತ್ತದೆ. ಅಲ್ಲದೇ ಇದರಲ್ಲಿರುವ ಕೆಲವು ಪೋಷಕಾಂಶಗಳು ಕ್ಷಿಪ್ರ ಸಮಯದಲ್ಲಿಯೇ ರಕ್ತವನ್ನು ಸೇರುವ ಮೂಲಕ ಅಗತ್ಯವಿರುವ ಶಕ್ತಿಯನ್ನು ಕೂಡಲೇ ಪಡೆಯಲು ಸಾಧ್ಯವಾಗುತ್ತದೆ. ಆದರೆ ನಿಮ್ಮ ದೇಹ ಹಾಲಿನಲ್ಲಿರುವ ಲ್ಯಾಕ್ಟೋಸ್ ಗೆ ಅಲರ್ಜಿಕಾರಕವಲ್ಲ ಎಂಬುದನ್ನು ಮಾತ್ರ ಖಚಿತಪಡಿಸಿಕೊಳ್ಳಿ. ಉಳಿದಂತೆ ಮಧುರ ಕ್ಷಣಗಳಿಗೆ ಕೊಂಚ ಮುನ್ನ ಸೇವಿಸುವ ಒಂದು ಲೋಟ ಹಾಲು ಅದ್ಭುತ ಪರಿಣಾಮವನ್ನು ನೀಡುತ್ತದೆ.

ಟೊಮೇಟೊ ಜ್ಯೂಸ್

ಟೊಮೇಟೊ ಜ್ಯೂಸ್

ಟೊಮೇಟೊ ಜ್ಯೂಸ್ ಸೇವಿಸುವ ಪುರುಷರಲ್ಲಿ ವೀರ್ಯದ ಗುಣಮಟ್ಟವು ಉತ್ತಮವಾಗಿರುತ್ತದೆ ಹಾಗು ಇವರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ತಿಳಿದು ಬಂದಿದೆ. ಇದಕ್ಕೆ ಟೊಮಾಟೊದಲ್ಲಿರುವ "ಲೈಕೊಪೀನ್" ಎಂಬ ಆಂಟಿಆಕ್ಸಿಡೆಂಟ್ ಕಾರಣ. ಇದು ಪುರುಷರ ಜನನಾಂಗದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಸಹ ನಿವಾರಿಸುತ್ತದೆ.

English summary

Best Drinks To Increase Your Sexual Stamina

Sexual stamina will help one know how long can they last with their partner on bed. The body undergoes various kinds of changes with age and so is the case with one's sexual stamina. Men can suffer from erectile dysfunction, whereas women can sometimes observe vaginal dryness due to which the sex life often gets affected.