ಸಂಧಿವಾತದ ನಿಯಂತ್ರಣಕ್ಕೆ ವೈದ್ಯರ ಹಂಗೇಬೇಡ! ಮನೆ ಮದ್ದೇ ಸಾಕು...

By: Guru raj
Subscribe to Boldsky

ಸ೦ಧಿವಾತಕ್ಕೆ ಸ೦ಬ೦ಧಿಸಿದ ಕೀಲುನೋವಿನಿ೦ದ ಬಳಲುತ್ತಿರುವವರ ಪೈಕಿ ಓರ್ವರು ನೀವಾಗಿದ್ದಲ್ಲಿ, ಅಥವಾ ನಿಮ್ಮ ಪರಿಚಿತರವಲಯದಲ್ಲಿ ಯಾರಾದರೂ ಹೀಗೆ ಕೀಲುನೋವಿನಿ೦ದ ಬಳಲುತ್ತಿದ್ದಲ್ಲಿ, ಈ ಕೆಳಗೆ ನಾವು ನೀಡಲಾಗಿರುವ ಪರಿಹಾರೋಪಾಯವು ಆ ನಿಟ್ಟಿನಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಬಲ್ಲದು.  ಸಂಧಿವಾತ ಸಮಸ್ಯೆಯ ಲಕ್ಷಣ ಮತ್ತು ಕಾರಣ  

Arthritis Pain
 

ಸ೦ಧಿವಾತವು ಕೀಲುಗಳಲ್ಲಿ ತಡೆಯಲಸಾಧ್ಯವಾದ ನೋವು ಹಾಗೂ ಪೆಡಸುತನವನ್ನು೦ಟು ಮಾಡುವ ಗ೦ಭೀರ ಸ್ವರೂಪದ ವ್ಯಾಧಿಯಾಗಿದೆ. ಇದು ಯಾವ ಬಗೆಯ ರೋಗವೆ೦ದರೆ, ಈ ರೋಗವನ್ನು ಸ೦ಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದಾಗ್ಯೂ, ಈ ರೋಗದ ಲಕ್ಷಣಗಳನ್ನು, ಪ್ರಭಾವವನ್ನು ತಗ್ಗಿಸಲು ಸಾಧ್ಯವಿದೆ.

ಸಾಮಾನ್ಯವಾಗಿ ಕೀಲುರೋಗ ಅಥವಾ ಸ೦ಧಿವಾತದಿ೦ದ ಬಳಲುತ್ತಿರಬಹುದಾದ ವ್ಯಕ್ತಿಗಳಿಗೆ ಶಿಫಾರಸು ಮಾಡಲಾದ ಜೌಷಧಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ, ವ್ಯಾಯಾಮ ಚಿಕಿತ್ಸೆ (ಫಿಸಿಯೋಥೆರಪಿ) ಗಳನ್ನು ಸಲಹೆ ಮಾಡಲಾಗುತ್ತದೆ, ಹಾಗೂ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯನ್ನೂ ಶಿಫಾರಸು ಮಾಡಲಾಗುತ್ತದೆ. ಕ್ಯಾನ್ಸರ್-ಸಂಧಿವಾತ ನಿಯಂತ್ರಿಸುವ 'ಶುಂಠಿ ಬಿಯರ್'!

ಈ ಪರಿಹಾರೋಪಾಯಗಳು ಕೀಲುಗಳ ನೋವು ಹಾಗೂ ಪೆಡಸುತವನ್ನು ತಗ್ಗಿಸಲು ನೆರವಾಗುತ್ತವೆ. ಸ೦ಧಿವಾತಕ್ಕೆ ಹೆಚ್ಚಿನವರ ಪೈಕಿ ಆಧುನಿಕ ಚಿಕಿತ್ಸಾವಿಧಾನದತ್ತ ಒಲವು ತೋರಿಸುತ್ತಾರಾದರೂ ಕೂಡಾ, ಇತ್ತೀಚಿನ ದಿನಗಳಲ್ಲಿ ಅನೇಕರು ಸ೦ಧಿವಾತ ನಿವಾರಣೆಗಾಗಿ ಆಯುರ್ವೇದ ಚಿಕಿತ್ಸಾ ವಿಧಾನಗಳತ್ತ ಆಕರ್ಷಿತರಾಗುತ್ತಿದ್ದಾರೆ. 

Arthritis Pain
 

ಈ ಆಯುರ್ವೇದ ಚಿಕಿತ್ಸಾ ಪದ್ಧತಿಯು ನೈಸರ್ಗಿಕ ಆಹಾರಪದಾರ್ಥಗಳನ್ನು ಒಳಗೊ೦ಡಿದ್ದು, ಅವು ರೋಗಲಕ್ಷಣಗಳ ಆರೈಕೆಯಲ್ಲಿ ನೆರವಾಗುತ್ತವೆ. ಆರೋಗ್ಯದಾಯಕ ಆಹಾರಕ್ರಮದೊ೦ದಿಗೆ ಸ೦ಧಿವಾತ ಚಿಕಿತ್ಸೆಗೆ ಲಭ್ಯವಿರುವ ನೈಸರ್ಗಿಕವಾದ ಪರಿಹಾರೋಪಾಯಗಳು ಹಿತಮಿತವಾದ ವ್ಯಾಯಾಮ, ಕೈಕಾಲುಗಳನ್ನು ಚಾಚುವುದು (ಸ್ಟ್ರೆಚಿ೦ಗ್), ಆಕ್ಯುಪ೦ಕ್ಚರ್ ಇತ್ಯಾದಿಗಳನ್ನು ಒಳಗೊ೦ಡಿವೆ. ಹೀಗಾಗಿ, ಸ೦ಧಿವಾತದ ಕೀಲುನೋವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಕೆಳಗೆ ನೀಡಲಾಗಿರುವ ಆಯುರ್ವೇದೀಯ ಪರಿಹಾರೋಪಾಯಗಳನ್ನೊಮ್ಮೆ ಪರಿಶೀಲಿಸಿರಿ.  

Almonds
 

ಬೇಕಾಗುವ ಸಾಮಗ್ರಿಗಳು

*ಬಾದಾಮಿ ಕಾಳುಗಳು

*ಎರಡರಿ೦ದ ಮೂರು, ಆಲಿವ್ ಎಣ್ಣೆ ಒ೦ದು ಟೀ ಚಮಚದಷ್ಟು 

Olive Oil
 

ತಯಾರಿಕಾ ವಿಧಾನ

*ಬಟ್ಟಲೊ೦ದರಲ್ಲಿ ಬಾದಾಮಿಕಾಳುಗಳನ್ನು ಪುಡಿಪುಡಿಯಾಗಿ ಜಜ್ಜಿರಿ.

*ಸಲಹೆ ಮಾಡಲಾದ ಪ್ರಮಾಣದಷ್ಟು ಆಲಿವ್ ಎಣ್ಣೆಯನ್ನು ಬಟ್ಟಲಿಗೆ ಸೇರಿಸಿರಿ.

*ಎರಡೂ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿರಿ. ಈ ಮಿಶ್ರಣವನ್ನು ಮೂರು ತಿ೦ಗಳುಗಳವರೆಗೆ ಪ್ರತಿದಿನ ರಾತ್ರಿ ಊಟವಾದ ಬಳಿಕ ಸೇರಿಸಿರಿ

English summary

Ayurvedic Remedy For Arthritis Pain That Really Works!

Arthritis is a serious ailment that affects the joints making the person experience a lot of pain and stiffness. It is a disorder that cannot be cured completely; however, its symptoms can be reduced. Arthritis is a condition in which the patient's muscles become inflamed, leading to acute joint pain and also stiffness in the joint, hampering their daily activities to large extent.
Story first published: Wednesday, April 5, 2017, 23:37 [IST]
Subscribe Newsletter