For Quick Alerts
ALLOW NOTIFICATIONS  
For Daily Alerts

ಹೊಟ್ಟೆ ಬೊಜ್ಜನ್ನು ಕರಗಿಸುತ್ತೆ ಈ ಸರಳ ಆಯುರ್ವೇದ ಮನೆ ಮದ್ದುಗಳು

By Lekhaka
|

ತುಂಬಾ ವೇಗವಾಗಿ ಸಾಗುವಂತಹ ಇಂದಿನ ಆಧುನಿಕ ಜಗತ್ತಿನಲ್ಲಿ ಜನರು ಅನಾರೋಗ್ಯಕರ ಆಹಾರ ಕ್ರಮ, ಜೀವನಶೈಲಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಹಲವಾರು ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಾ ಇದ್ದಾರೆ. ಅನಾರೋಗ್ಯಕರ ಜೀವನಶೈಲಿಯು ನಮ್ಮ ಚಯಾಪಚಾಯ ಕ್ರಿಯೆಯ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ದೇಹದಲ್ಲಿ ಬೊಜ್ಜು ಬೆಳೆಯುವುದು. ಹೊಟ್ಟೆ ಹಾಗೂ ಸೊಂಟದ ಸುತ್ತಲೂ ಕೊಬ್ಬು ಬೆಳೆಯುವುದು ಅನಾರೋಗ್ಯಕರ ಆಹಾರ ಮತ್ತು ಜೀವನಕ್ರಮದಿಂದಾಗಿ. ಹೆಚ್ಚಾಗಿ ಮಹಿಳೆಯರಲ್ಲಿ ಹೊಟ್ಟೆ ಹಾಗೂ ಸೊಂಟದ ಸುತ್ತಲು ಕೊಬ್ಬು ಆವರಿಸಿಕೊಂಡಿರುವುದು.

ನಿಮ್ಮ ಹೊಟ್ಟೆಯ ಕೊಬ್ಬನ್ನು 10 ದಿನಗಳಲ್ಲೇ ಕರಗಿಸಿಕೊಳ್ಳಿ!

ಇದನ್ನು ಕರಗಿಸಲು ಹೆಚ್ಚಿನ ಮಹಿಳೆಯರು ತುಂಬಾ ಕಷ್ಟಪಡುವಂತಹ ಪರಿಸ್ಥಿತಿಯಿದೆ. ಸೊಂಟದ ಸುತ್ತಲಿನ ಕೊಬ್ಬು ಕರಗಿಸಲು ಹಲವಾರು ವಿಧಾನಗಳು ಇವೆ. ಆದರೆ ಇದಕ್ಕೆ ಮನಸ್ಸು ಹಾಗೂ ಬದ್ಧತೆ ಅತೀ ಅಗತ್ಯ. ಇಷ್ಟು ಮಾತ್ರವಲ್ಲದೆ ಆಹಾರ ಕ್ರಮ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಎಷ್ಟೇ ವ್ಯಾಯಾಮ ಮಾಡಿದರು ನಿಮ್ಮ ಕೊಬ್ಬು ಕಡಿಮೆಯಾಗುತ್ತಿಲ್ಲವೆಂದಾದರೆ ನೀವು ಸೇವಿಸುತ್ತಿರುವ ಆಹಾರವೇ ಇದಕ್ಕೆ ಕಾರಣವಾಗಿದೆ. ಆಯುರ್ವೇದ ಮೂಲಕ ಕೊಬ್ಬನ್ನು ಕರಗಿಸುವಂತಹ ಕೆಲವೊಂದು ಗಿಡಮೂಲಿಕೆ ಔಷಧಿ ಹಾಗೂ ಮದ್ದುಗಳಿವೆ. ಆರೋಗ್ಯಕರ ಆಹಾರದೊಂದಿಗೆ ಈ ಮದ್ದನ್ನು ಸೇವಿಸಿದರೆ ಕೊಬ್ಬು ಕಡಿಮೆಯಾಗುವುದು.

ಬೊಜ್ಜು ಕರಗಿಸಲು ಟಿಪ್ಸ್-ಕಡಿಮೆ ವೆಚ್ಚ ಅಧಿಕ ಲಾಭ!

ಕೊಬ್ಬು ಕರಗಿಸಲು ಇರುವ ಆಯುರ್ವೇದ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ. ಸೋಂಪು ಕಾಳುಗಳು ಎರಡು ಚಮಚ ಸೋಂಪು ಕಾಳುಗಳನ್ನು ಒಂದು ಜಾರ್ ನೀರಿನಲ್ಲಿ ಹಾಕಿ ನೆನೆಸಿಡಿ. ರಾತ್ರಿಯಿಡಿ ಇದು ಹಾಗೆ ಇರಲಿ. ಮರುದಿನ ಬೆಳಗ್ಗೆ ಎದ್ದು ಈ ನೀರನ್ನು ಸೇವಿಸಿ. ಕೊಬ್ಬು ಕರಗಿಸಲು ಇದನ್ನು ದಿನನಿತ್ಯ ಸೇವಿಸಿ....

 ಮೆಂತೆ

ಮೆಂತೆ

ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.

ತ್ರಿಫಲ

ತ್ರಿಫಲ

ಹೊಟ್ಟೆಯ ಕೊಬ್ಬನ್ನು ಕರಗಿಸುವ ಆಯುರ್ವೇದ ಔಷಧಿಯೇ ತ್ರಿಫಲ. ತ್ರಿಫಲವು ಮೂರು ಗಿಡಮೂಲಿಕೆಗಳ ಮಿಶ್ರಣವಾಗಿದೆ. ಇದು ದೇಹವನ್ನು ಒಳಗಿನಿಂದ ಶುದ್ಧೀಕರಿಸಿ, ಪುನರುಜ್ಜೀವನಗೊಳಿಸುವುದು. ಹೊಟ್ಟೆಯನ್ನು ಇದು ಉಲ್ಲಾಸಿತಗೊಳಿಸುವುದು. ಒಂದು ಚಮಚ ತ್ರಿಫಲ ಮತ್ತು ಬಿಸಿ ನೀರಿನಿಂದ ಚಹಾ ತಯಾರಿಸಿ. ಇದು ತೂಕ ಕಳೆದುಕೊಳ್ಳಲು ನಿಮಗೆ ನೆರವಾಗುವುದು.

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳು

ದಕ್ಷಿಣ ಭಾರತೀಯ ಅಡುಗೆಗಳಲ್ಲಿ ಹೆಚ್ಚಾಗಿ ಕರಿಬೇವಿನ ಎಲೆಗಳನ್ನು ಬಳಸಲಾಗುತ್ತದೆ. ಇದು ಅಡುಗೆಯ ರುಚಿ ಹೆಚ್ಚಿಸುವಂತಹ ಎಲೆಯಾಗಿದೆ. ಆದರೆ ಇದು ತೂಕ ಕಳೆದುಕೊಳ್ಳಲು ಸಹಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಹೊಟ್ಟೆಯ ಸುತ್ತಲು ಇರುವ ಕೊಬ್ಬು ಕರಗಿಸಲು ನೀವು ಬೆಳಿಗ್ಗೆ ಎದ್ದು ಕರಿಬೇವಿನ ಕೆಲವು ಎಲೆಗಳನ್ನು ಜಗಿಯಬೇಕು.

ಅರ್ಧ ಲಿಂಬೆಯ ರಸ

ಅರ್ಧ ಲಿಂಬೆಯ ರಸ

*ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ.

*ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ

ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.

*ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಟ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ.

*ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ಬೆಳ್ಳುಳ್ಳಿ+ಲಿಂಬೆ ರಸ

ಬೆಳ್ಳುಳ್ಳಿ+ಲಿಂಬೆ ರಸ

*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.

*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

English summary

Ayurvedic Remedies To Reduce Belly Fat

Ayurveda, one of the oldest known medical systems, prescribes the use of natural herbs and remedies that are easily available around us to solve the problem of the pesky belly fat. Ayurveda prescribes healthy eating and use of herbs to solve the problem of belly fat. So, let's have a look at the Ayurvedic ways of losing weight around the belly.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more