For Quick Alerts
ALLOW NOTIFICATIONS  
For Daily Alerts

ಉಪ್ಪಿನಕಾಯಿ ಮಿತವಾಗಿ ಸೇವಿಸಿ, ಇಲ್ಲಾಂದ್ರೆ ಆಪತ್ತು ಖಚಿತ!!

ನಿತ್ಯವೂ ಉಪ್ಪಿನಕಾಯಿ ಸೇವಿಸುವುದರಿಂದ ಮತ್ತು ಪ್ರತಿ ಊಟದಲ್ಲಿ ಒಂದು ಚಮಚಕ್ಕಿಂತ ಹೆಚ್ಚು ತಿನ್ನುವುದು ಮಾತ್ರ ಅಪಾಯಕ್ಕೆ ಆಹ್ವಾನ ನೀಡಿದಂತೆ.ಏಕೆಂದರೆ ಇದರಲ್ಲಿ ಮುಖ್ಯವಾಗಿ ಅತಿ ಹೆಚ್ಚಿನ ಎಣ್ಣೆ ಮತ್ತು ಮಸಾಲೆಗಳಿರುತ್ತವೆ.

By Arshad
|

ಭಾರತೀಯರು ಉಪ್ಪಿನಕಾಯಿ ಪ್ರಿಯರು. ಉತ್ತರದಿಂದ ದಕ್ಷಿಣದವರೆಗೂ ಭಾರತದ ಬಹುತೇಕ ಎಲ್ಲಾ ಬಗೆಯ ಊಟಗಳಲ್ಲಿಯೂ ಕೊಂಚ ಉಪ್ಪಿನಕಾಯಿಯನ್ನು ರುಚಿಗಾಗಿ ಬಡಿಸಲಾಗುತ್ತದೆ. ಬರೆಯ ಊಟ ಮಾತ್ರವಲ್ಲ, ಇಡ್ಲಿ, ರೊಟ್ಟಿ, ಬಿರಿಯಾನಿಗಳೊಂದಿಗೂ ಸೇವಿಸಲಾಗುತ್ತದೆ. ವಾಸ್ತವವಾಗಿ ಉಪ್ಪಿನಕಾಯಿಯ ಪ್ರಮಾಣ ಮಿತವಾಗಿರಬೇಕೇ ಹೊರತು ಹೆಚ್ಚಾಗಬಾರದು. ಆಲೂ ಉಪ್ಪಿನಕಾಯಿ ರುಚಿ ನೋಡಿದ್ದೀರಾ?

ಆದರೆ ನಿತ್ಯವೂ ಸೇವಿಸುವುದು ಮತ್ತು ಪ್ರತಿ ಊಟದಲ್ಲಿ ಒಂದು ಚಮಚಕ್ಕಿಂತ ಹೆಚ್ಚು ತಿನ್ನುವುದು ಮಾತ್ರ ಅಪಾಯಕ್ಕೆ ಆಹ್ವಾನ ನೀಡಿದಂತೆ. ಏಕೆಂದರೆ ಇದರಲ್ಲಿ ಮುಖ್ಯವಾಗಿ ಅತಿ ಹೆಚ್ಚಿನ ಎಣ್ಣೆ ಮತ್ತು ಮಸಾಲೆಗಳಿರುತ್ತವೆ. ಇನ್ನೂ ಹೆಚ್ಚಾಗಿ ಇದರಲ್ಲಿ ಹೆಚ್ಚಿನ ಪ್ರಮಾಣದ ಇಂಗು ಇದೆ. ಆದ್ದರಿಂದ ಊಟಕ್ಕೆ ತಕ್ಕ ಉಪ್ಪಿನಕಾಯಷ್ಟೇ ಇರಬೇಕೇ ವಿನಃ ಹೆಚ್ಚಾಗಬಾರದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯೋಣ...

ಎಣ್ಣೆ

ಎಣ್ಣೆ

ಉಪ್ಪಿನಕಾಯಿಯನ್ನು ಹೆಚ್ಚು ಕಾಲ ಕೆಡದಂತೆ ಉಳಿಸಲು ಎಣ್ಣೆಯನ್ನು ಬಳಸಲಾಗುತ್ತದೆ. ಉಪ್ಪಿನಕಾಯಿಯಲ್ಲಿರುವ ಹೋಳುಗಳು ಈ ಎಣ್ಣೆಯನ್ನು ನಿಧಾನವಾಗಿ ಹೀರಿಕೊಂಡಿರುತ್ತವೆ. ಆದ್ದರಿಂದ ಉಪ್ಪಿನ ಕಾಯಿಯ ಪ್ರಮಾಣ ಹೆಚ್ಚಾದಷ್ಟೂ ಈ ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಕೂಡಾ ದೇಹವನ್ನು ಸೇರಿ ಹೃದಯ ಮತ್ತು ರಕ್ತನಾಳಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತವೆ.

ಹೊಟ್ಟೆಯುಬ್ಬರಿಕೆ

ಹೊಟ್ಟೆಯುಬ್ಬರಿಕೆ

ಉಪ್ಪಿನಕಾಯಿಯಲ್ಲಿರುವ ಸೋಡಿಯಂ ಲವಣ ಹೊಟ್ಟೆಯುಬ್ಬರಿಕೆಗೆ ಕಾರಣವಾಗುತ್ತದೆ. ಏಕೆಂದರೆ ಸೋಡಿಯಂ ಲವಣದ ಇರುವಿಕೆಯಿಂದ ಹೊಟ್ಟೆಯಲ್ಲಿ ನೀರು ಉಳಿದುಕೊಳ್ಳಲು ಸಾಧ್ಯವಾಗಿ ಕೆಲವು ಆಮ್ಲೀಯ ವಾಯುಗಳು ಉತ್ಪತ್ತಿಯಾಗುತ್ತವೆ.

ಉಪ್ಪು

ಉಪ್ಪು

ಉಪ್ಪಿನಕಾಯಿಯ ಹೆಸರಿನಲ್ಲಿಯೇ ಇರುವಂತೆ ಇದರಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಇದೆ. ಇದು ಅಧಿಕ ಹೃದಯದೊತ್ತಡಕ್ಕೆ ಕಾರಣವಾಗುತ್ತದೆ. ಅಲ್ಲದೇ ಹೆಚ್ಚಿನ ಉಪ್ಪು ಉರಿಯೂತ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳಲು ಕಾರಣವಾಗಿ ಕೆಲವಾರು ತೊಂದರೆಗಳನ್ನು ತಂದೊಡ್ಡುತ್ತದೆ. ಆದ್ದರಿಂದ ಹೆಚ್ಚಿನ ಉಪ್ಪಿನಕಾಯಿ ಒಳ್ಳೆಯದಲ್ಲ. ಅದರಲ್ಲೂ ಹೃದಯದ ಒತ್ತಡದ ತೊಂದರೆ ಇರುವವರಿಗೆ ಉಪ್ಪಿನಕಾಯಿಯ ರುಚಿಯನ್ನು ತ್ಯಾಗ ಮಾಡುವುದೇ ಉತ್ತಮ ಕ್ರಮವಾಗಿದೆ.

ಮೂತ್ರಪಿಂಡಗಳ ತೊಂದರೆ

ಮೂತ್ರಪಿಂಡಗಳ ತೊಂದರೆ

ಉಪ್ಪಿನಕಾಯಿಯ ಹೆಚ್ಚಿನ ಪ್ರಮಾಣದ ಸೇವನೆಯಿಂದ ದೇಹದಲ್ಲಿ ಸಂಗ್ರಹವಾಗುವ ಉಪ್ಪಿನ ಪ್ರಮಾಣವೂ ಹೆಚ್ಚುತ್ತದೆ ಹಾಗೂ ಈ ಮೂಲಕ ಮೂತ್ರಪಿಂಡಗಳ ಕೆಲಸವೂ ಹೆಚ್ಚುತ್ತದೆ. ಅಲ್ಲದೇ ಉಪ್ಪಿನಕಾಯಿಯಲ್ಲಿರುವ ಕೆಲವು ಲವಣಗಳು ಮೂತ್ರಪಿಂಡಗಳನ್ನು ಹೆಚ್ಚು ಪ್ರಚೋದಿಸುತ್ತವೆ. ನೀವು ತಿಳಿದಿರಬೇಕಾದ ಕಿಡ್ನಿ ರೋಗಗಳ 12 ಲಕ್ಷಣಗಳು

ಜೀರ್ಣಕ್ರಿಯೆ

ಜೀರ್ಣಕ್ರಿಯೆ

ಉಪ್ಪಿನಕಾಯಿ ಹೆಚ್ಚಾದರೆ ಜೀರ್ಣಕ್ರಿಯೆಯಲ್ಲಿಯೂ ಬಾಧೆಯುಂಟಾಗುತ್ತದೆ. ಇದರ ಪ್ರಮುಖ ಅಡ್ಡಪರಿಣಾಮವೆಂದರೆ ಅತಿಸಾರ ಹಾಗೂ ಆಸನ ಭಾಗದಲ್ಲಿ ಭಾರೀ ಉರಿಯಾಗುವುದು.

ಗ್ಯಾಸ್ಟ್ರಿಕ್ ಕ್ಯಾನ್ಸರ್

ಗ್ಯಾಸ್ಟ್ರಿಕ್ ಕ್ಯಾನ್ಸರ್

ಕೆಲವು ಸಂಶೋಧನೆಗಳ ಪ್ರಕಾರ ಉಪ್ಪಿನಕಾಯಿಯನ್ನು ಊಟದಂತೆ ಸೇವಿಸುವ ಜನರಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಆವರಿಸುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಗ್ಯಾಸ್ಟ್ರಿಕ್ ಅಲ್ಸರ್ ತರಬಹುದೇ ಕ್ಯಾನ್ಸರ್ ?

English summary

Are Pickles Bad For Health?

Rarely eating a pickle isn't bad. Too much of anything is bad for health and the same applies to pickles too. They contains lots of oil and spices. So, limit your consumption. Yes, over consumption of pickles can lead to certain health issues....
X
Desktop Bottom Promotion