For Quick Alerts
ALLOW NOTIFICATIONS  
For Daily Alerts

ಲೈಂಗಿಕ ಆರೋಗ್ಯಕ್ಕೆ ಸುರಕ್ಷಿತ ಕ್ರಮಗಳು

By Lekhaka
|

ಮಹಿಳೆಯರು ತಮ್ಮ ಆರೋಗ್ಯದಂತೆಯೇ ಲೈಂಗಿಕ ಆರೋಗ್ಯದ ಕಡೆ ಕೂಡ ಗಮನಹರಿಸಬೇಕು. ಲೈಂಗಿಕ ಸಂಪರ್ಕವನ್ನು ಮಹಿಳೆಯರು ಸುರಕ್ಷಿತವಾಗಿಡುವುದು ಅತೀ ಅಗತ್ಯವಾಗಿದೆ ಮತ್ತು ಲೈಂಗಿಕ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಹಿಂಜರಿಬಾರದು. ಮಾನಸಿಕ ಹಾಗೂ ದೈಹಿಕವಾಗಿಯೂ ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ತಯಾರಾಗಿರಬೇಕು. ಲೈಂಗಿಕ ಆರೋಗ್ಯ ಕಾಪಾಡಿಕೊಳ್ಳಲು ಹಲವಾರು ರೀತಿಯ ವಿಧಾನಗಳು ಕೂಡ ಇವೆ.

ದಿನನಿತ್ಯ 'ಲೈಂಗಿಕ ಕ್ರಿಯೆ' ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

ಹಲವಾರು ರೀತಿಯ ಲೈಂಗಿಕ ರೋಗಗಳು ಹರಡದಂತೆ ಮೊದಲು ಗಮನಹರಿಸಬೇಕು ಮತ್ತು ಗರ್ಭಿಣಿಯಾಗದಂತೆ ಎಚ್ಚರಿಕೆ ಅಗತ್ಯ. ಋತುಚಕ್ರದ ಬಗ್ಗೆ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಆರೋಗ್ಯಕರ ಲೈಂಗಿಕ ಜೀವನ ನಡೆಸಬಹುದು. ಆರೋಗ್ಯಕರ ಲೈಂಗಿಕ ಜೀವನ ನಡೆಸುವುದು ಹೇಗೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳಿ....

ಗರ್ಭನಿರೋಧಕದ ಬಗ್ಗೆ ಅಧ್ಯಯನ ಮಾಡಿ

ಗರ್ಭನಿರೋಧಕದ ಬಗ್ಗೆ ಅಧ್ಯಯನ ಮಾಡಿ

ನೀವು ಲೈಂಗಿಕವಾಗಿ ತುಂಬಾ ಸಕ್ರಿಯವಾಗಿದ್ದರೆ ಸರಿಯಾದ ಹಾಗೂ ಅತ್ಯುತ್ತಮವಾದ ಗರ್ಭನಿರೋಧಕ ಕ್ರಮ ಅನುಸರಿಸುವುದು ಅತೀ ಅಗತ್ಯ. ಇಂದಿನ ದಿನಗಳಲ್ಲಿ ಹಲವಾರು ರೀತಿಯ ಗರ್ಭನಿರೋಧಕ ವಿಧಾನಗಳಿವೆ. ಇದರಲ್ಲಿ ಕೆಲವು ತಾತ್ಕಾಲಿಕ ಮತ್ತು ಇನ್ನು ಕೆಲವು ಶಾಶ್ವತ. ನಿಮ್ಮ ಅಗತ್ಯತೆಗೆ ತಕ್ಕಂತೆ ನೀವು ಬೇಕಾದ ವಿಧಾನ ಆಯ್ಕೆ ಮಾಡಿಕೊಳ್ಳಬಹುದು. ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಸರಿಯಾದ ಗರ್ಭನಿರೋಧಕ ಕ್ರಮ ಅಳವಡಿಸಿ.

ಪ್ರತಿ ಸಲ ರಕ್ಷಣೆ ಬಳಸಿ

ಪ್ರತಿ ಸಲ ರಕ್ಷಣೆ ಬಳಸಿ

ಇದು ಕೇಳಲು ತುಂಬಾ ವಿಚಿತ್ರವಾಗಿರುವುದು. ಯಾಕೆಂದರೆ ಪ್ರತಿಯೊಬ್ಬರಿಗೂ ನೈಸರ್ಗಿಕ ವಿಧಾನ ಬೇಕಾಗಿರುವುದು. ಆದರೆ ಪ್ರತೀ ಸಲ ಲೈಂಗಿಕ ಕ್ರಿಯೆ ವೇಳೆ ಸುರಕ್ಷಿತ ವಿಧಾನ ಅನುಸರಿಸಿಕೊಂಡರೆ ತುಂಬಾ ಒಳ್ಳೆಯದು. ಇದು ಗರ್ಭಧಾರಣೆ ತಡೆಯುವುದು ಮಾತ್ರವಲ್ಲದೆ ಹಲವಾರು ರೀತಿಯ ಲೈಂಗಿಕ ರೋಗಗಳಿಂದಲೂ ತಡೆಯುವುದು. ನಿಮ್ಮ ಸಂಗಾತಿಗೆ ಕಾಂಡೋಮ್ ಬಳಸುವುದು ಇಷ್ಟವಿಲ್ಲದೆ ಇದ್ದರೆ ನೀವು ಬಳಸಿ.

ಸಂವಹನ ಒಳ್ಳೆಯ ವಿಧಾನ

ಸಂವಹನ ಒಳ್ಳೆಯ ವಿಧಾನ

ಒಂದು ವೇಳೆ ನೀವು ಹಿಂದೆ ಯಾವುದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರೆ ಇದರ ಬಗ್ಗೆ ಸಂಗಾತಿ ಜತೆಗೆ ಮುಕ್ತವಾಗಿ ಮಾತನಾಡಿ ಮತ್ತು ಸುರಕ್ಷಿತ ಲೈಂಗಿಕ ಕ್ರಿಯೆ ವಿಧಾನವನ್ನು ಬಳಸಲು ತಿಳಿಸಿ. ಈ ಮೂಲಕ ನಿಮ್ಮ ಸಂಗಾತಿ ಹೆಚ್ಚಿನ ಜಾಗೃತೆ ವಹಿಸಿಕೊಂಡು ಯಾವುದೇ ತಪ್ಪು ಆಗದಂತೆ ನೋಡಿಕೊಳ್ಳಬಹುದು. ಆಗಾಗ ಲೈಂಗಿಕ ರೋಗಗಳ ಪರೀಕ್ಷೆ ಮಾಡಿಕೊಳ್ಳುವಂತೆ ನಿಮ್ಮ ಸಂಗಾತಿಗೆ ತಿಳಿಸಿ.

ಸಂಗಾತಿಗಳ ಸಂಖ್ಯೆಗೆ ಮಿತಿಯಿರಲಿ

ಸಂಗಾತಿಗಳ ಸಂಖ್ಯೆಗೆ ಮಿತಿಯಿರಲಿ

ಲೈಂಗಿಕ ಆರೋಗ್ಯವನ್ನು ಸುರಕ್ಷಿತವಾಗಿಡಬಹುದಾದ ಅತ್ಯುತ್ತಮ ವಿಧಾಣವೆಂದರೆ ಲೈಂಗಿಕ ಕ್ರಿಯೆಯ ಸಂಖ್ಯೆಯನ್ನು ಕಡಿಮೆಗೊಳಿಸಿ. ಹೆಚ್ಚೆಚ್ಚು ಸಂಗಾತಿಗಳನ್ನು ಬದಲಾಯಿಸಿದಷ್ಟು ನಿಮಗೆ ಲೈಂಗಿಕ ರೋಗಗಳು ತಗಲುವ ಸಾಧ್ಯತೆ ಹೆಚ್ಚಾಗಿರುವುದು. ಪ್ರತಿಯೊಬ್ಬನಲ್ಲೂ ತನ್ನದೇ ಆಗಿರುವಂತಹ ಲೈಂಗಿಕ ಕ್ರಿಯೆ ಇತಿಹಾಸವಿರುವುದು. ನೀವು ಏಕ ಸಂಗಾತಿಯನ್ನು ಇಷ್ಟಪಡದೇ ಇದ್ದರೆ ಸುರಕ್ಷಿತ ಲೈಂಗಿಕ ಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳಿ.

ಏಕ ಸಂಗಾತಿಯಾಗಿರಿ

ಏಕ ಸಂಗಾತಿಯಾಗಿರಿ

ಇದು ಕೆಲವರಿಗೆ ತುಂಬಾ ಕಷ್ಟವಾಗಬಹುದು. ಆದರೆ ಆರೋಗ್ಯಕರ ಲೈಂಗಿಕ ಜೀವನ ಕಾಪಾಡಬೇಕೆಂದರೆ ನೀವು ಏಕಸಂಗಾತಿ ಕ್ರಮ ಪಾಲಿಸಬೇಕು. ಇದು ದೀರ್ಘ ಕಾಲ ಸಂಬಂಧಕ್ಕೂ ಒಳ್ಳೆಯದು. ನಿಮ್ಮಿಬ್ಬರ ಮೇಲೆ ನಂಬಿಕೆ ಇರುವ ತನಕ ಯಾವುದೇ ರೀತಿಯ ಕಾಯಿಲೆಗಳು ಕಾಡುವ ಸಾಧ್ಯತೆ ತುಂಬಾ ಕಡಿಮೆ.

ನೀವು ಬಳಸುವ ಉತ್ಪನ್ನಗಳ ಬಗ್ಗೆ ಎಚ್ಚರಿಕೆಯಿಂದ ಇರಿ

ನೀವು ಬಳಸುವ ಉತ್ಪನ್ನಗಳ ಬಗ್ಗೆ ಎಚ್ಚರಿಕೆಯಿಂದ ಇರಿ

ಹೆಚ್ಚಿನ ಮಹಿಳೆಯರು ತಮ್ಮ ಜನನಾಂಗದ ಆರೋಗ್ಯಕ್ಕಾಗಿ ಕೆಲವೊಂದು ವಾಶ್ ಗಳನ್ನು ಬಳಸುವರು. ಆದರೆ ನೀವು ಒಳ್ಳೆಯ ಗುಣಮಟ್ಟದ ವಾಶ್ ಬಳಸಿಕೊಳ್ಳಬೇಕು ಎನ್ನುವುದು ತುಂಬಾ ಅಗತ್ಯ. ಕೆಲವೊಂದು ವಾಶ್ ಗಳಿಂದಾಗಿ ನೈಸರ್ಗಿಕ ಪಿಎಚ್ ಮಟ್ಟವು ಕಡಿಮೆಯಾಗಿ ಅಲ್ಲಿ ಉರಿ ಮತ್ತು ತುರಿಕೆ ಕಾಣಿಸಿಕೊಳ್ಳುವುದು. ಕೆಲವೊಂದು ಲೈಂಗಿಕ ರೋಗಗಳನ್ನು ತಡೆಗಟ್ಟುವಂತಹ ಉಪಯುಕ್ತ ಬ್ಯಾಕ್ಟೀರಿಯಾಗಳನ್ನು ಇದು ತೊಳೆದುಹಾಕುವುದು.

ಲ್ಯೂಬ್ರಿಕೆಂಟ್ ಬಳಸಿ

ಲ್ಯೂಬ್ರಿಕೆಂಟ್ ಬಳಸಿ

ಲೈಂಗಿಕ ಕ್ರಿಯೆ ವೇಳೆ ಲ್ಯೂಬ್ರಿಕೆಂಟ್ ಬಳಸಿಕೊಂಡರೆ ಆಗ ಕಾಂಡೋಮ್ ಹರಿದುಹೋಗುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಲೈಂಗಿಕ ಕ್ರಿಯೆ ವೇಳೆ ಯೋನಿಯ ಕೆಲವೊಂದು ಭಾಗಗಳು ತುಂಬಾ ಒಣಗಿರುವುದು ಮತ್ತು ಇದರಿಂದ ಕಾಂಡೊಮ್ ಹರಿದು ಹೋಗುವ ಸಂಭವವಿದೆ. ಇದರಿಂದ ಗರ್ಭಧಾರಣೆ ಅಥವಾ ಸೋಂಕು ಉಂಟಾಗಬಹುದು. ಇದರಿಂದ ಲ್ಯೂಬ್ರಿಕೆಂಟ್ ಬಳಸಿಕೊಂಡರೆ ಒಳ್ಳೆಯದು.

ಸೆಕ್ಸ್ ಆಟಿಕೆಗಳನ್ನು ಸ್ವಚ್ಛವಾಗಿಡಿ

ಸೆಕ್ಸ್ ಆಟಿಕೆಗಳನ್ನು ಸ್ವಚ್ಛವಾಗಿಡಿ

ಲೈಂಗಿಕ ತೃಪ್ತಿ ಪಡೆಯುವ ಸಲುವಾಗಿ ಕೆಲವೊಂದು ಸೆಕ್ಸ್ ಆಟಿಕೆಗಳು ಮತ್ತು ಇತರ ಸಾಮಗ್ರಿಗಳನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸೆಕ್ಸ್ ಆಟಿಕೆಗಳನ್ನು ಸರಿಯಾಗಿಟ್ಟುಕೊಳ್ಳಬೇಕು. ಇದನ್ನು ದೇಹದ ತುಂಬಾ ಸೂಕ್ಷ್ಮ ಹಾಗೂ ಸಂವಹನವಿರುವ ಜಾಗಕ್ಕೆ ಬಳಸಲಾಗುತ್ತದೆ. ಸೆಕ್ಸ್ ಆಟಿಕೆಗಳನ್ನು ತೊಳೆದುಕೊಂಡು ಒಣಗಿಸಿಡಿ. ಸೆಕ್ಸ್ ಆಟಿಕೆಗಳಿಗೂ ಕಾಂಡೋಮ್ ಹಾಕಬಹುದು. ಬೇರೆಯವರಿಗೆ ಇದನ್ನು ನೀಡಬೇಡಿ.

ಲೈಂಗಿಕ ಕ್ರಿಯೆಯಿಂದ ದೂರವಿರುವುದು

ಲೈಂಗಿಕ ಕ್ರಿಯೆಯಿಂದ ದೂರವಿರುವುದು

ತಮ್ಮ ಸಂಗಾತಿ ಮೇಲೆ ಸಂಪೂರ್ಣವಾಗಿ ನಂಬಿಕೆ ಇಲ್ಲದೆ ಇರುವಂತಹ ಕೆಲವರು ಮತ್ತು ಮಾನಸಿಕ ಹಾಗೂ ದೈಹಿಕವಾಗಿ ತಯಾರಾಗದೆ ಇರವವರು ಲೈಂಗಿಕೆ ಕ್ರಿಯೆಯಿಂದ ದೂರ ಉಳಿದುಬಿಡುವರು. ನಿಮಗೆ ಇಷ್ಟವಿಲ್ಲದೆ ಇದ್ದರೆ ಲೈಂಗಿಕ ಕ್ರಿಯೆಯಿಂದ ದೂರ ಉಳಿಯುವುದು ತಪ್ಪಲ್ಲ. ನಿಮ್ಮ ಸಂಗಾತಿ ಜತೆಗೆ ಮಾತನಾಡಿ ಮತ್ತು ನೀವು ಯಾವ ರೀತಿ ಭಾವಿಸುತ್ತೀರಿ ಎಂದು ತಿಳಿಹೇಳಿ. ಈ ಮೂಲಕ ನೀವು ಸಂಗಾತಿಗೆ ನಿಮ್ಮ ಸಮಸ್ಯೆ ಅರ್ಥ ಮಾಡಿಸಬಹುದು.

ಪರೀಕ್ಷೆ ಮಾಡಿಸಿಕೊಳ್ಳಿ

ಪರೀಕ್ಷೆ ಮಾಡಿಸಿಕೊಳ್ಳಿ

ಕೆಲವೊಂದು ಲೈಂಗಿಕ ರೋಗಗಳು ಅದರ ಲಕ್ಷಣಗಳನ್ನು ತೋರಿಸಲು ತಿಂಗಳಿಂದ ವರ್ಷ ತೆಗೆದುಕೊಳ್ಳುವ ಕಾರಣದಿಂದಾಗಿ ನೀವು ಆಗಾಗ ಪರೀಕ್ಷೆ ಮಾಡಿಸಿಕೊಂಡರೆ ತುಂಬಾ ಒಳ್ಳೆಯದು. ನಿಮಗೆ ಸೋಂಕು ಹರಡಿದ್ದರೆ ಆದನ್ನು ಇತರರಿಗೆ ಹರಡದಂತೆ ತಡೆಯಬಹುದು.ಮೇಲಿನ ಎಲ್ಲಾ ಸಲಹೆಗಳು ಈಗ ಇರುವ ಅಥವಾ ಮುಂದೆ ಬರುವಂತಹ ಸಂಗಾತಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವಾಗ ತುಂಬಾ ಉಪಯುಕ್ತ. ಆದರೆ ಅಂತಿಮವಾಗಿ ನಿಮ್ಮ ದೇಹ ಏನು ಹೇಳುತ್ತದೆ ಎನ್ನುವುದನ್ನು ವಿಶ್ಲೇಷಣೆ ಮಾಡಿಕೊಳ್ಳುವುದು ಅಗತ್ಯ. ಲೈಂಗಿಕ ಆರೋಗ್ಯ ಕಾಪಾಡಿಕೊಳ್ಳಲು ನೀವು ತುಂಬಾ ಕ್ರಿಯಾತ್ಮಕ ಹಾಗೂ ಹೆಚ್ಚು ಪ್ರಾಮುಖ್ಯತೆ ನೀಡಿ.

English summary

10 Safe Sex Practices For Women

As a woman, it is very essential to practice safe sex and not be scared of taking authority of your sexual health and safety. Being prepared mentally and physically, being ready and being safe are the key elements to a healthy sex life. You should always aim at preventing the transfer of various Sexually Transmitted Diseases (STIs) and getting pregnant. It is also important to keep a check on your menstrual cycles and sexual health to ensure a healthy sex life.Here are 10 ways in which you can maintain a healthy sex life:
X
Desktop Bottom Promotion