ನಾನ್‌‌ವೆಜ್ ಪ್ರಿಯರಿಗೆ ಸಿಹಿ ಸುದ್ದಿ-ಚಿಕನ್ ತಿಂದರೆ ಆರೋಗ್ಯಕ್ಕೆ ಒಳ್ಳೆಯದು

Posted By: Arshad
Subscribe to Boldsky

ಮಾಂಸಾಹಾರಗಳಲ್ಲಿಯೇ ಅತಿ ಹೆಚ್ಚಾಗಿ ಸೇವಿಸಲ್ಪಡುವ ಹಾಗೂ ವಿಶ್ವದ ಅತ್ಯಂತ ಅಚ್ಚುಮೆಚ್ಚಿನ ಮಾಂಸವೆಂದರೆ ಕೋಳಿ ಮಾಂಸ. ಇದು ಅಗ್ಗವೂ ಹೌದು ಪೌಷ್ಟಿಕವೂ ಹೌದು. ಈ ಮಾಂಸದ ಸೇವನೆಯಿಂದ ದೇಹ ದಾರ್ಢ್ಯತೆ ಮಾತ್ರವಲ್ಲ, ತ್ವಚೆಯ ಆರೋಗ್ಯ ಹಾಗೂ ಕಾಂತಿಯೂ ಹೆಚ್ಚುತ್ತದೆ.

ಕೋಳಿಮಾಂಸದಲ್ಲಿ ಹಲವಾರು ಪೋಷಕಾಂಶಗಳಿದ್ದು ಇದನ್ನೊಂದು ಅದ್ಭುತ ಆಹಾರವಾಗಿಸಿವೆ. ಮಾಂಸಾಹಾರ ಸೇವಿಸಿಯೂ ತೂಕ ಕಳೆದುಕೊಳ್ಳುವವರಿಗೆ ಕೋಳಿ ಮಾಂಸ ಇತರ ಮಾಂಸಗಳಿಗಿಂತ ಉತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ದೇಹದ ಜೀವಕೋಶಗಳ ಬೆಳವಣಿಗೆಗೆ ಇದರಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ತನ್ಮೂಲಕ ವಿವಿಧ ಭಾಗಗಳ ಅಂಗಾಂಶಗಳು ಹೆಚ್ಚು ದೃಢ ಹಾಗೂ ಆರೋಗ್ಯಕರವಾಗುತ್ತವೆ. ಬನ್ನಿ, ಈ ರುಚಿಕರ ಹಾಗೂ ಆರೋಗ್ಯಕರ ಮಾಂಸ ಸೇವನೆಯ ಹತ್ತು ಪ್ರಮುಖ ಪ್ರಯೋಜನಗಳ ಬಗ್ಗೆ ಅರಿಯೋಣ...  

ಅತಿ ಹೆಚ್ಚು ಪ್ರೋಟೀನ್

ಅತಿ ಹೆಚ್ಚು ಪ್ರೋಟೀನ್

ನಮ್ಮ ದೇಹದ ಸ್ನಾಯುಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗಿರುವುದು ಪ್ರೋಟೀನ್. ನಿಸರ್ಗದ ಹಲವಾರು ಆಹಾರಗಳಲ್ಲಿ ಪ್ರೋಟೀನ್ ಇದೆಯಾದರೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಸಿದ್ಧ ರೂಪದಲ್ಲಿ ಸಿಗುವ ಪ್ರೋಟೀನ್ ಕೋಳಿ ಮಾಂಸದಲ್ಲಿ ಮಾತ್ರವೇ ಲಭ್ಯ. ಈ ಮಾಂಸದಲ್ಲಿ ಕೊಬ್ಬು ಕಡಿಮೆ ಇದೆ ಹಾಗೂ ಹೊಟ್ಟೆ ತುಂಬಾ ಪ್ರಮಾಣದಲ್ಲಿ ತಿಂದಾಗಲೂ ಅತಿ ಹೆಚ್ಚೇನೂ ಕೊಬ್ಬು ಸಂಗ್ರಹವಾಗುವುದಿಲ್ಲ. ಒಂದು ವೇಳೆ ನೀವು ಮಾಂಸಾಹಾರಪ್ರಿಯರಾಗಿದ್ದು ತೂಕ ಕಳೆದುಕೊಳ್ಳುವ ಪ್ರಯತ್ನದಲ್ಲಿದ್ದರೆ ನೀವು ಇತರ ಮಾಂಸಾಹಾರಗಳನ್ನು ತ್ಯಜಿಸಿ ಕೋಳಿ ಮಾಂಸವನ್ನು ಆಯ್ದುಕೊಳ್ಳಬಹುದು. ಇದರಿಂದ ಜಿಹ್ವಾಚಾಪಲ್ಯವನ್ನು ತೊರೆಯದೇ ನಿಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಬಹುದು.

ನೈಸರ್ಗಿಕ ಖಿನ್ನತೆ ನಿವಾರಕ

ನೈಸರ್ಗಿಕ ಖಿನ್ನತೆ ನಿವಾರಕ

ಹೌದು! ಟರ್ಕಿ ಕೋಳಿಯ ಮಾಂಸದಂತೆಯೇ ಸಾಮಾನ್ಯ ಕೋಳಿಯ ಮಾಂಸದಲ್ಲಿಯೂ ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆಮ್ಲ ಹೆಚ್ಚಿನ ಪ್ರಮಾಣದಲ್ಲಿದೆ. ಇದೇ ಕಾರಣಕ್ಕೆ ಒಂದು ದೊಡ್ಡ ಬೋಗುಣಿಯಷ್ಟು ಕೋಳಿ ಮಾಂಸದ ಸೂಪ್ ಸೇವನೆಯ ಬಳಿಕ ಮನಸ್ಸು ಪ್ರಫುಲ್ಲವಾಗುತ್ತದೆ. ಒಂದು ವೇಳೆ ನೀವು ಖಿನ್ನತೆ ಹಾಗೂ ಏಕಾಂತದಿಂದ ಬಳಲುತ್ತಿದ್ದರೆ ತಕ್ಷಣವೇ ಕೋಳಿಮಾಂಸ, ಅದರಲ್ಲೂ ವಿಶೇಷವಾಗಿ ರೆಕ್ಕೆಗಳ ಮಾಂಸದ ಖಾದ್ಯವನ್ನು ಸೇವಿಸಿ. ಇದರಿಂದ ದೇಹದಲ್ಲಿ ಸೆರೋಟೋನಿನ್ ಪ್ರಮಾಣ ಹೆಚ್ಚುತ್ತದೆ ಹಾಗೂ ಮೆದುಳಿಗೆ ಮುದನೀಡುವ ಸೂಚನೆಗಳು ಲಭಿಸಿ ಒತ್ತಡದಿಂದ ಬಿಡುಗಡೆ ಪಡೆಯುತ್ತದೆ.

ಮೂಳೆಗಳ ಸವೆತದಿಂದ ರಕ್ಷಿಸುತ್ತದೆ

ಮೂಳೆಗಳ ಸವೆತದಿಂದ ರಕ್ಷಿಸುತ್ತದೆ

ನಡುವಯಸ್ಸು ದಾಟಿದ ಬಳಿಕ ನಮ್ಮ ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳುವ ಕ್ಷಮತೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬರುತ್ತವೆ. ಇದೇ ಕಾರಣಕ್ಕೆ ಹಿರಿಯರಲ್ಲಿ ಸಂಧಿವಾತ, ಗಂಟುನೋವು, ಗಂಟುಗಳ ಸವೆತ ಮೊದಲಾದ ಮೂಳೆ ಸಂಬಂಧಿತ ಕಾಯಿಲೆಗಳು ಹೆಚ್ಚು. ಆದರೆ ಈ ತೊಂದರೆಗೆ ಈಗ ಸುಲಭ ಪರಿಹಾರವಿದೆ. ದಿನದಲ್ಲಿ ಒಂದೆರಡು ಚಿಕನ್ ಸೂಪ್ ಕುಡಿಯುವ ಮೂಲಕ ಈ ತೊಂದರೆಗಳನ್ನು ಸಾಕಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದು. ಕೋಳಿಮಾಂಸದಲ್ಲಿರುವ ಪ್ರೋಟೀನುಗಳು ಮೂಳೆಗಳ ಸವೆತವನ್ನು ತಡೆಯುವ ಜೊತೆಗೇ ಆಹಾರದಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲೂ ನೆರವಾಗುತ್ತವೆ.

ಹೃದಯಕ್ಕೂ ಒಳ್ಳೆಯದು

ಹೃದಯಕ್ಕೂ ಒಳ್ಳೆಯದು

ಹೃದಯದ ಕ್ಷಮತೆಗೆ ಅಡ್ಡಿಯಾಗುವ ಹೋಮೋಸಿಸ್ಟೀನ್ (homocysteine) ಎಂಬ ಅಮೈನೋ ಆಮ್ಲದ ಪ್ರಭಾವವನ್ನು ಕಡಿಮೆಗೊಳಿಸುವ ಮೂಲಕ ಕೋಳಿಮಾಂಸ ಕೆಲವಾರು ಬಗೆಯ ಹೃದಯ ಸಂಬಂಧಿತ ಕಾಯಿಲೆಗಳಿಂದ ರಕ್ಷಿಸುತ್ತದೆ. ಒಂದು ವೇಳೆ ಈ ಅಮೈನೋ ಆಮ್ಲದ ಪ್ರಮಾಣ ದೇಹದಲ್ಲಿ ಹೆಚ್ಚಾದರೆ ಇದು ಪ್ರಾಣಾಪಾಯವನ್ನೂ ಒಡ್ಡಬಲ್ಲುದು.

ಗಂಧಕದ ಪ್ರಮಾಣ ಅಧಿಕ...

ಗಂಧಕದ ಪ್ರಮಾಣ ಅಧಿಕ...

ನಮ್ಮ ಹಲ್ಲು ಹಾಗೂ ಮೂಳೆಗಳಿಗೆ ಕ್ಯಾಲ್ಸಿಯಂನಂತೆಯೇ ಗಂಧಕ ಸಹಾ ಅಗತ್ಯ. ವಿಶೇಷವಾಗಿ ಒಸಡು ಮತ್ತು ಹಲ್ಲುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲ, ಗಂಧಕ ನಮ್ಮ ಮೂತ್ರಪಿಂಡಗಳು, ಯಕೃತ್ ಹಾಗೂ ಕೇಂದ್ರೀಯ ನರವ್ಯವಸ್ಥೆಗೂ ಅಗತ್ಯವಾಗಿರುವ ಖನಿಜವಾಗಿದ್ದು ಕೋಳಿ ಮಾಂಸದ ಸೇವನೆಯಿಂದ ಲಭಿಸುವ ಗಂಧಕ ನಮ್ಮ ಈ ಪ್ರಮುಖ ಅಂಗಗಳನ್ನು ಆರೋಗ್ಯಕರವಾಗಿರಿಸುತ್ತದೆ.

ಉತ್ತಮ ಪ್ರಮಾಣದ ಸೆಲೆನಿಯಂ ಇದೆ

ಉತ್ತಮ ಪ್ರಮಾಣದ ಸೆಲೆನಿಯಂ ಇದೆ

ಕೋಳಿಮಾಂಸದಲ್ಲಿ ಉತ್ತಮ ಪ್ರಮಾಣದ ಸೆಲೆನಿಯಂ ಸಹಾ ಇದೆ. ಸೆಲೆನಿಯಂ ಅಂದರೇನು ಎಂದು ಅಚ್ಚರಿಯಾಯಿತೇ? ನಮ್ಮ ದೇಹದ ಜೀವರಾಸಾಯನಿಕ ಕ್ರಿಯೆಗಳು ಸುಲಲಿತವಾಗಿ ನಡೆಯಲು ಈ ಖನಿಜದ ಅವಶ್ಯಕತೆ ಇದೆ. ಅಷ್ಟೇ ಅಲ್ಲ, ಥೈರಾಯ್ಡ್ ಗ್ರಂಥಿಗಳ ಕ್ಷಮತೆಯನ್ನೂ ಹೆಚ್ಚಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಸೆಲೆನಿಯಂ ಪ್ರಮಾಣ ದೇಹದಲ್ಲಿ ಸೂಕ್ತವಾಗಿದ್ದರೆ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ ಹಾಗೂ ಹಲವಾರು ರೋಗಗಳಿಂದ ರಕ್ಷಣೆಯನ್ನೂ ಪಡೆಯುತ್ತದೆ. ಆದ್ದರಿಂದ ಮುಂದಿನ ಬಾರಿ ಕೋಳಿ ಮಾಂಸದ ಸೇವನೆಯಿಂದ ತೂಕ ಹೆಚ್ಚುತ್ತದೆ ಎಂಬ ಭಯ ಬೇಡ, ಬದಲಿಗೆ ಆರೋಗ್ಯಕರ ಎಂದು ನೆನಪಿನಲ್ಲಿರಲಿ.

ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ

ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ

ಇದರಲ್ಲಿರುವ ವಿಟಮಿನ್ ಬಿ6 ದೇಹದ ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳಲು ನೆರವಾಗುತ್ತದೆ. ಅಂದರೆ ನಮ್ಮ ಆಹಾರ ಸುಲಭವಾಗಿ ಪಚನಗೊಳ್ಳುತ್ತದೆ ಹಾಗೂ ದೇಹದಲ್ಲಿ ಕೊಬ್ಬು ಸಂಗ್ರಹವಾಗದೇ ಇರದಂತೆ ನೋಡಿಕೊಳ್ಳುತ್ತದೆ. ತನ್ಮೂಲಕ ತೂಕ ಇಳಿಸುವ ಪ್ರಯತ್ನಗಳು ಹೆಚ್ಚು ಫಲಕಾರಿಯಾಗುತ್ತವೆ. ಅಲ್ಲದೇ ನಮ್ಮ ದೇಹದ ರಕ್ತನಾಳಗಳನ್ನೂ ಬಲಪಡಿಸಿ ರಕ್ತಸಂಚಾರ ಉತ್ತಮಗೊಳ್ಳಲು ಹಾಗೂ ಇದರ ಹೆಚ್ಚಿನ ಪ್ರಮಾಣದ ಪ್ರೋಟೀನ್ ದೇಹದಲ್ಲಿ ಶಕ್ತಿ ಹೆಚ್ಚು ಹೆಚ್ಚಾಗಿ ಉತ್ಪತ್ತಿಯಾಗಲು ನೆರವಾಗುತ್ತದೆ.

ನಿಯಾಸಿನ್ ಸಮೃದ್ಧತೆ

ನಿಯಾಸಿನ್ ಸಮೃದ್ಧತೆ

ನಮ್ಮ ದೇಹವನ್ನು ಆವರಿಸುವ ಹಲವಾರು ಕ್ಯಾನ್ಸರ್ ಉಂಟುಮಾಡುವ ಕಣಗಳ ವಿರುದ್ಧ ಹೋರಾಡಲು ನಿಯಾಸಿನ್ ಅಗತ್ಯವಾಗಿದೆ. ಕೋಳಿಮಾಂಸದಲ್ಲಿ ಹೆಚ್ಚಿನ ಪ್ರಮಾಣದ ನಿಯಾಸಿನ್ ಇದ್ದು ವಿಶೇಷವಾಗಿ ತಪ್ಪಾದ ಅನುವಂಶಿಕ ಗುಣದಿಂದ ಹಾಗೂ ಕ್ಯಾನ್ಸರ್ ಮೂಲಕ ಎದುರಾಗಿದ್ದ ಘಾಸಿಯಿಂದ ದೇಹವನ್ನು ರಕ್ಷಿಸುತ್ತದೆ.

ಕಣ್ಣುಗಳ ಆರೋಗ್ಯವನ್ನೂ ವೃದ್ಧಿಸುತ್ತದೆ

ಕಣ್ಣುಗಳ ಆರೋಗ್ಯವನ್ನೂ ವೃದ್ಧಿಸುತ್ತದೆ

ಕಣ್ಣಿನ ಆರೋಗ್ಯಕ್ಕೆ ಇತರ ಆಹಾರಗಳಂತೆಯೇ ಕೋಳಿಮಾಂಸವೂ ನೆರವಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿರುವ ರೆಟಿನಾಲ್, ಆಲ್ಫಾ ಹಾಗೂ ಬೀಟಾ ಕೆರೋಟಿನ್ ಮತ್ತು ಲೈಕೋಪೀನ್ ಎಲ್ಲವೂ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಎ ನಿಂದ ಪಡೆಯಬಹುದು. ನಿಯಮಿತ ಕೋಳಿ ಮಾಂಸದ ಸೇವನೆಯಿಂದ ಕಣ್ಣಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಅಂಗಾಂಶಗಳ ಬೆಳವಣಿಗೆಗೆ ನೆರವಾಗುತ್ತದೆ

ಅಂಗಾಂಶಗಳ ಬೆಳವಣಿಗೆಗೆ ನೆರವಾಗುತ್ತದೆ

ನಮ್ಮಲ್ಲಿ ಹಲವರಿಗೆ ತುಟಿಗಳು ಒಡೆಯುವುದು, ಒಡೆಯುವ ಚರ್ಮ ಮೊದಲಾದವುಗಳು ಸತತವಾಗಿ ಕಾಡುತ್ತಿದ್ದು ಇದಕ್ಕಾಗಿ ಎಷ್ಟೋ ಬಗೆಯ ಔಷಧಿಗಳನ್ನು ಹಚ್ಚಿದರೂ ಶಾಶ್ವತ ಪರಿಹಾರ ದೊರಕಿರುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ರೈಬೋಫ್ಲೋವಿನ್ ಎಂಬ ಪೋಷಕಾಂಶದ ಕೊರತೆ. ಕೋಳಿಮಾಂಸದಲ್ಲಿ, ವಿಶೇಷವಾಗಿ ಕೋಳಿಯ ಯಕೃತ್‌ನಲ್ಲಿ ಈ ಪೋಷಕಾಂಶ ವಿಫುಲವಾಗಿದ್ದು ಪರಿಣಾಮವಾಗಿ ಘಾಸಿಗೊಂಡಿದ್ದ ಅಂಗಾಂಶಗಳು ಶೀಘ್ರವಾಗಿ ಪುನಃಶ್ಚೇತನಗೊಳ್ಳುತ್ತದೆ ಹಾಗೂ ಕಲೆರಹಿತ ಹಾಗೂ ಕೋಮಲ ತ್ವಚೆ ಪಡೆಯಲು ನೆರವಾಗುತ್ತದೆ. ಕೋಳಿ ಮಾಂಸದ ಪ್ರಯೋಜನಗಳು ಇನ್ನೂ ಹಲವಾರಿದ್ದು ಇವು ಕೆಲವು ಪ್ರಮುಖವಾದವು ಮಾತ್ರವಾಗಿದೆ.

ಮುನ್ನೆಚ್ಚರಿಕೆ ಕ್ರಮ: ಬ್ರಾಯ್ಲರ್‌ಗಿಂತ ನಾಟಿ ಕೋಳಿಯೇ ಉತ್ತಮ

ಮುನ್ನೆಚ್ಚರಿಕೆ ಕ್ರಮ: ಬ್ರಾಯ್ಲರ್‌ಗಿಂತ ನಾಟಿ ಕೋಳಿಯೇ ಉತ್ತಮ

ಬ್ರಾಯ್ಲರ್ ಕೊಳ್ಳುವುದಾದರೆ ಕೊಂಚ ದುಬಾರಿಯಾದರೂ ತೊಂದರೆಯಿಲ್ಲ, ಉತ್ತಮ ಗುಣಮಟ್ಟದ ಕೋಳಿಯನ್ನೇ ಕೊಳ್ಳಿ. ಕೊಂಡ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿಯೇ ತನ್ನಿ ಹಾಗೂ ಪ್ರತಿ ಬಾರಿ ತಾಜಾ ಕೋಳಿಯ ಮಾಂಸವನ್ನೇ ಬಯಸಿ. ಸಾಧ್ಯವಾದಷ್ಟು ಕಡಿಮೆ ತೂಕದ ಕೋಳಿಗಳನ್ನು ಕೊಳ್ಳುವುದು ಇನ್ನೂ ಉತ್ತಮ.

ಮುನ್ನೆಚ್ಚರಿಕೆ ಕ್ರಮ: ಬ್ರಾಯ್ಲರ್‌ಗಿಂತ ನಾಟಿ ಕೋಳಿಯೇ ಉತ್ತಮ

ಮುನ್ನೆಚ್ಚರಿಕೆ ಕ್ರಮ: ಬ್ರಾಯ್ಲರ್‌ಗಿಂತ ನಾಟಿ ಕೋಳಿಯೇ ಉತ್ತಮ

ಕೋಳಿಗಳಿಗೆ ಬೇಗನೇ ತೂಕ ಬರಲು ತಿನ್ನಿಸುವ ಹಾರ್ಮೋನುಗಳು, ಆಂಟಿಬಯೋಟಿಕ್ ಮತ್ತಿತರ ಔಷಧಿಗಳಿಂದ ಇದರ ದೇಹದಲ್ಲಿ ಆರ್ಸೆನಿಕ್ ಒಂದು ಉಪ ಉತ್ಪನ್ನವಾಗಿ ಬಿಡುಗಡೆಯಾಗುತ್ತದೆ. ವಿಚಿತ್ರವೆಂದರೆ ಈ ವಿಷ ಕೋಳಿಯ ದೇಹದಲ್ಲಿದ್ದರೂ ಕೋಳಿ ಈ ವಿಷಕ್ಕೆ ಸಾಯುವುದಿಲ್ಲ. ಬದಲಿಗೆ ಇದರ ಮಾಂಸವನ್ನು ಸೇವಿಸಿದವರಿಗೆ ಪ್ರಾಣಾಪಾಯ ಉಂಟುಮಾಡುತ್ತದೆ.

ಮಾಂಸದ ಕೋಳಿಗಳನ್ನು ಚಪ್ಪರಿಸುವ ಮುನ್ನ, ಇರಲಿ ಎಚ್ಚರ!

English summary

10 Amazing Health Benefits Of Eating Chicken

Chicken has a lot of nutrients, which make it a super-healthy food and it so versatile that it can be used to gain as well as lose weight. Chicken helps in the growth and development of the body cells and tissues, making it stronger. Here are 10 amazing health benefits of eating chicken. To all the chicken lovers out there, go ahead and read this piece of useful information!