For Quick Alerts
ALLOW NOTIFICATIONS  
For Daily Alerts

  ಉಪ್ಪು+ಕರಿಮೆಣಸಿನ ಪುಡಿ+ಲಿಂಬೆ=ಉತ್ತಮ ಆರೋಗ್ಯ!

  By Manu
  |

  ಇಂದು ಆಸ್ಪತ್ರೆಗಳೆಂದರೆ ಕಾಯಿಲೆ ಕಡಿಮೆ ಮಾಡಿ ಜೇಬೂ ಖಾಲಿಮಾಡುವ ಅಪ್ಪಟ ವ್ಯಾವಹಾರಿಕ ತಾಣಗಳಾಗಿವೆ. ಚಿಕ್ಕ ಪುಟ್ಟ ತೊಂದರೆಗಳಿಗೂ ಇಂತಹ ಆಸ್ಪತ್ರೆಗಳಿಗೆ ಧಾವಿಸಿದರೆ ಅಗತ್ಯವಿಲ್ಲದಿದ್ದರೂ ಹತ್ತು ಹಲವು ತಪಾಸಣೆಗಳ ಮೂಲಕ ಕಾಯಿಲೆಯ ಮೂಲವನ್ನು ಪತ್ತೆಹಚ್ಚಿ ದುಬಾರಿ ಔಷಧಿಗಳ ಮೂಲಕ ಚಿಕಿತ್ಸೆ ನೀಡುತ್ತಾರೆ. ಆದರೆ ಈ ಚಿಕ್ಕಪುಟ್ಟ ತೊಂದರೆಗಳು ನಮ್ಮ ಹಿರಿಯರಿಗೂ ಕಾಡುತ್ತಿರಲಿಲ್ಲವೇ?      ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

  ಆಗ ಇಂತಹ ಆಧುನಿಕ ಆಸ್ಪತ್ರೆಗಳಿಲ್ಲದಿದ್ದಾಗ ಅವರೇನು ಈ ಕಾಯಿಲೆಗಳಿಂದ ಸತ್ತೇ ಹೋಗಿದ್ದರೇ? ಇಲ್ಲವಲ್ಲ, ಅವರು ನಿಸರ್ಗದ ಮೊರೆ ಹೋಗುತ್ತಿದ್ದರು. ನಿಸರ್ಗದಲ್ಲಿ ಸಿಗುತ್ತಿದ್ದ ಕೆಲವು ಸಾಮಾಗ್ರಿಗಳನ್ನೇ ಉಪಯೋಗಿಸಿ ಈ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಈ ವಿಧಾನಗಳು ಇಂದಿಗೂ ಫಲಪ್ರದವಾಗಿದ್ದು ಹೆಚ್ಚಿನವರು ನಂಬದೇ ಇದ್ದರೂ ವಾಸ್ತವವಾಗಿ ನಮ್ಮ ಅಡುಗೆ ಮನೆಯಲ್ಲಿರುವ ಸುಲಭ ಸಾಮಾಗ್ರಿಗಳು ದುಬಾರಿ ಔಷಧಿಗಳಿಗಿಂತಲೂ ಉತ್ತಮವಾಗಿ ದೈಹಿಕ ತೊಂದರೆಗಳನ್ನು ನಿವಾರಿಸುತ್ತವೆ.  ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

  ಹಿತ್ತಲ ಗಿಡ ಮದ್ದಲ್ಲ ಎಂದೇ ನಂಬಿರುವ ನಾವೆಲ್ಲಾ ನಿಸರ್ಗವನ್ನು ಕಡೆಗಣಿಸಿದುದರ ಪರಿಣಾಮವಾಗಿ ಇಂದಿನ ಆಧುನಿಕ ವೈದ್ಯಪದ್ದತಿ ಮತ್ತು ಕೃತಕ ಔಷಧಿಗಳಿಗೆ ಹೆಚ್ಚಿನ ಒಲವು ತೋರುತ್ತಿದ್ದೇವೆ. ಅಗತ್ಯವಿಲ್ಲದಿದ್ದರೂ ಹಲವು ಔಷಧಿಗಳನ್ನು ಸೇವಿಸಿ ಅಡ್ಡಪರಿಣಾಮಗಳಿಗೆ ತುತ್ತಾಗುತ್ತಿದ್ದೇವೆ. ಆದರೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ನೈಸರ್ಗಿಕ ಚಿಕಿತ್ಸೆ ಪಡೆಯುವುದು ಉತ್ತಮವೂ ಹೌದು ಮತ್ತು ಸುಲಭ ಹಾಗೂ ಅಗ್ಗವೂ ಹೌದು.                    ಕರಿಮೆಣಸಿನ ಪುಡಿ ಬೆರೆಸಿದ ಬಿಸಿನೀರು- ಆಯಸ್ಸು ನೂರು!

  ಉದಾಹರಣೆಗೆ ಆಂಟಿ ಬಯಾಟಿಕ್‌ಗಳನ್ನು ಸತತವಾಗಿ ಸೇವಿಸಿದರೆ ಇದರಿಂದ ನಮ್ಮ ರೋಗ ನಿರೋಧಕ ವ್ಯವಸ್ಥೆಯೇ ಕುಸಿಯತೊಡಗುತ್ತದೆ ಎಂದು ಸಂಶೋಧನೆಗಳಿಂದ ಈಗ ಸಾಬೀತಾಗಿದೆ. ಆದ್ದರಿಂದ ಇವುಗಳ ಬದಲಿಗೆ ನಿಸರ್ಗ ನೀಡಿದ ಅದ್ಭುತ ಆಂಟಿ ಬಯೋಟಿಕ್ ಬಳಸುವುದೇ ಉತ್ತಮ. ಇದಕ್ಕಾಗಿ ಬೇಕಾಗಿರುವುದು ಎಂದರೆ ಒಂದು ಚಿಕ್ಕಚಮಚ ಉಪ್ಪು, ಅರ್ಧ ಚಿಕ್ಕ ಚಮಚ ಕಾಳುಮೆಣಸಿನ ಪುಡಿ ಮತ್ತು ಕೆಲವು ಹನಿ ಲಿಂಬೆರಸ ಅಷ್ಟೇ. ಇದರಿಂದ ಕನಿಷ್ಠ ಏಳು ಬಗೆಯ ಕಾಯಿಲೆಗಳನ್ನು ದೂರವಿರಿಸಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

  ಕಟ್ಟಿಕೊಂಡ ಮೂಗನ್ನು ತೆರೆಯುತ್ತದೆ

  ಕಟ್ಟಿಕೊಂಡ ಮೂಗನ್ನು ತೆರೆಯುತ್ತದೆ

  ಈ ಅದ್ಭುತ ಸಂಯೋಜನೆಯನ್ನು ಕೊಂಚ ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿದರೆ ಶರೀರದಲ್ಲಿ ಕೊಂಚ ತಾಪಮಾನ ಹೆಚ್ಚುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಚುರುಕುಗೊಳಿಸಿ ಮೂಗಿನ ನಾಳಗಳಲ್ಲಿ ಆಗಿದ್ದ ಸೋಂಕು ಕಡಿಮೆಯಾಗಲು ನೆರವಾಗುತ್ತದೆ. ಪರಿಣಾಮವಾಗಿ ಕಟ್ಟಿಕೊಂಡಿದ್ದ ಮೂಗು ತೆರೆಯುತ್ತದೆ.

  ಗಂಟಲ ಬೇನೆ ಕಡಿಮೆಗೊಳಿಸುತ್ತದೆ

  ಗಂಟಲ ಬೇನೆ ಕಡಿಮೆಗೊಳಿಸುತ್ತದೆ

  ಈ ಮಿಶ್ರಣದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳು ನಮ್ಮ ಗಂಟಲು ಮತ್ತು ಮೂಗಿನ ಒಳಭಾಗದಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ತೊಲಗಿಸಲು ಸಮರ್ಥವಾಗಿವೆ. ಇದರಿಂದ ಉಂಟಾಗಿದ್ದ ಸೋಂಕು ನಿಧಾವಾಗಿ ಕಡಿಮೆಯಾಗಿ ಗಂಟಲ ಬೇನೆಯೂ ಕಡಿಮೆಯಾಗುತ್ತದೆ.

  ಪಿತ್ತಗಲ್ಲು ಆಗಿದ್ದರೆ ಕರಗಿಸುತ್ತದೆ

  ಪಿತ್ತಗಲ್ಲು ಆಗಿದ್ದರೆ ಕರಗಿಸುತ್ತದೆ

  ಉಪ್ಪು, ಕಾಳುಮೆಣಸಿನ ಪುಡಿ ಮತ್ತು ಕೊಂಚ ಲಿಂಬೆರಸವನ್ನು ಕೆಲವು ಹನಿ ಆಲಿವ್ ಎಣ್ಣೆಯಲ್ಲಿ ಮಿಶ್ರಣ ಮಾಡಿ ಸೇವಿಸಿದರೆ ಪಿತ್ತಕೋಶದಲ್ಲಿ ಆಗಿರುವ ಕಲ್ಲುಗಳನ್ನು ಕರಗಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಿಯಮಿತವಾಗಿ ಕೆಲವು ತಿಂಗಳಾದರೂ ಈ ಮಿಶ್ರಣವನ್ನು ಸೇವಿಸುತ್ತಾ ಬರಬೇಕು.

  ತೂಕ ಕಳೆದುಕೊಳ್ಳಲು ನೆರವಾಗುತ್ತದೆ

  ತೂಕ ಕಳೆದುಕೊಳ್ಳಲು ನೆರವಾಗುತ್ತದೆ

  ಪ್ರತಿದಿನ ಬೆಳಿಗ್ಗೆ ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಈ ಮೂರೂ ಸಾಮಾಗ್ರಿಗಳನ್ನು ಬೆರೆಸಿ ಕುಡಿಯುವ ಮೂಲಕ ದೇಹದ ಜೀವರಾಸಾಯನಿಕ ಕ್ರಿಯೆಗಳಿಗೆ ಹೆಚ್ಚು ಕ್ರಿಯಾಶೀಲತೆ ದೊರಕುತ್ತದೆ. ಇದಕ್ಕಾಗಿ ಹೆಚ್ಚು ಕೊಬ್ಬು ಬಳಕೆಯಾಗುವ ಕಾರಣ ತೂಕ ಕಳೆದುಕೊಳ್ಳುವ ಪ್ರಯತ್ನಗಳಿಗೆ ಉತ್ತಮ ಫಲ ಸಿಗುತ್ತದೆ.

  ಹಲ್ಲುನೋವು ಕಡಿಮೆಗೊಳಿಸುತ್ತದೆ

  ಹಲ್ಲುನೋವು ಕಡಿಮೆಗೊಳಿಸುತ್ತದೆ

  ಈ ಮೂರೂ ಸಾಮಾಗ್ರಿಗಳನ್ನು ಕೊಂಚ ಬಿಸಿನೀರಿನೊಂದಿಗೆ ಬೆರೆಸಿ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ ಉಗಿದಾಗ ಹಲ್ಲುನೋವು ಕಡಿಮೆಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಹಲ್ಲುನೋವು ಕಡಿಮೆಗೊಳಿಸುತ್ತದೆ

  ಹಲ್ಲುನೋವು ಕಡಿಮೆಗೊಳಿಸುತ್ತದೆ

  ಈ ದ್ರವದಲ್ಲಿರುವ ಉರಿಯೂತ ನಿವಾರಕ ಗುಣ ಒಸಡುಗಳ ಸಂಧಿಯಲ್ಲಿ ಅಡಗಿ ಆಹಾರವನ್ನು ಕೊಳೆಸಿ ಸೋಂಕು ಉಂಟುಮಾಡಿದ್ದ ಕ್ರಿಮಿಗಳನ್ನೆಲ್ಲಾ ನಿವರಿಸಲು ಬಳಕೆಯಾಗುತ್ತದೆ. ಈ ಸೋಂಕಿನಿಂದ ಉಂಟಾಗಿದ್ದ ಹಲ್ಲುನೋವು ತಕ್ಷಣ ಕಡಿಮೆಯಾಗುತ್ತದೆ.

  ಫ್ಲೂ ಜ್ವರ ಕಡಿಮೆಯಾಗುತ್ತದೆ

  ಫ್ಲೂ ಜ್ವರ ಕಡಿಮೆಯಾಗುತ್ತದೆ

  ಉಪ್ಪು, ಕಾಳುಮೆಣಸಿನ ಪುಡಿ, ಲಿಂಬೆ ಮತ್ತು ಕೊಂಚ ಜೇನು ಸೇರಿಸಿ ಒಂದು ಚಮಚ ದಿನಕ್ಕೆರಡು ಬಾರಿ ಸೇವಿಸಿದರೆ ಫ್ಲೂ ಜ್ವರ ಬೇಗನೇ ಕಡಿಮೆಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಫ್ಲೂ ಜ್ವರ ಕಡಿಮೆಯಾಗುತ್ತದೆ

  ಫ್ಲೂ ಜ್ವರ ಕಡಿಮೆಯಾಗುತ್ತದೆ

  ಈ ದ್ರವದಲ್ಲಿರುವ ವೈರಸ್ ನಿವಾರಕ ಗುಣ ಹಲವು ವೈರಸ್ಸುಗಳನ್ನು ಕೊಲ್ಲುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಈ ವೈರಸ್ಸುಗಳನ್ನು ಎದುರಿಸಲಿಕ್ಕಾಗಿ ಏರಿಸಿದ್ದ ಫ್ಲೂ ಜ್ವರ ಕಡಿಮೆಯಾಗಲು ಸಾಧ್ಯವಾಗುತ್ತದೆ.

  ವಾಕರಿಕೆ ಕಡಿಮೆಯಾಗುತ್ತದೆ

  ವಾಕರಿಕೆ ಕಡಿಮೆಯಾಗುತ್ತದೆ

  ವಾಕರಿಕೆಗೆ ಅಜೀರ್ಣ ಅಥವಾ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗುವುದೇ ಪ್ರಮುಖ ಕಾರಣವಾಗಿದೆ. ಉಪ್ಪು ಮತ್ತು ಕಾಳುಮೆಣಸಿನ ಮಿಶ್ರಣ ಕೊಂಚ ಕ್ಷಾರೀಯವಾಗಿರುವ ಕಾರಣ ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ಕಡಿಮೆ ಮಾಡಲು ಸಮರ್ಥವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ವಾಕರಿಕೆ ಕಡಿಮೆಯಾಗುತ್ತದೆ

  ವಾಕರಿಕೆ ಕಡಿಮೆಯಾಗುತ್ತದೆ

  ಅಲ್ಲದೇ ಲಿಂಬೆಯ ಹುಳಿಯಾದ ವಾಸನೆ ಶ್ವಾಸನಾಳ ಮತ್ತು ಅನ್ನನಾಳಗಳ ಒಳಗೆ ವಾಕರಿಕೆಗೆ ಪ್ರಚೋದಿಸುತ್ತಿದ್ದ ಕಣಗಳನ್ನು ಶಾಂತಗೊಳಿಸಿ ವಾಕರಿಕೆಯಿಂದ ಪಾರಾಗುವಂತೆ ಮಾಡುತ್ತದೆ.

   

  English summary

  What Salt, Pepper And Lemon Mixture Can Do To Your Body

  Do you ever feel that going to fancy hospitals even for minor conditions is burning a hole in your pocket? Do you also feel that modern medicine is the only solution to all the ailments that affect humans? If yes, then here is some good news! You do not have to spend on expensive treatments for certain ailments, as there is always a natural alternative.
  Story first published: Friday, June 3, 2016, 17:45 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more