For Quick Alerts
ALLOW NOTIFICATIONS  
For Daily Alerts

ಹಲಸಿನ ಹಣ್ಣಿನ ಬೀಜ ಎಸೆಯುವ ಮುನ್ನ ಎರಡು ಬಾರಿ ಆಲೋಚಿಸಿ!

By Hemanth
|

ಹಿಂದಿನ ಕಾಲದಲ್ಲಿ ಜನರು ಹೆಚ್ಚಾಗಿ ಪ್ರಕೃತಿಯಲ್ಲೇ ಸಿಗುವ ಹಣ್ಣುಗಳನ್ನೇ ತಿಂದು ಜೀವಿಸುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿರುತ್ತಿದ್ದರೂ ಮಾತ್ರವಲ್ಲದೆ ಹೆಚ್ಚು ಕಾಲ ಜೀವನ ನಡೆಸುತ್ತಿದ್ದರು ಆದರೆ ಈಗ ಪ್ರತಿಯೊಂದು ವಸ್ತುವನ್ನು ರಾಸಾಯನಿಕದಲ್ಲಿ ಅದ್ದಿರುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಯಾವ ಹಣ್ಣುಗಳು ಸುರಕ್ಷಿತವಲ್ಲ. ಹೀಗಿದ್ದರೂ ನಾವು ಹಣ್ಣುಗಳನ್ನು ತಿನ್ನಲೇಬೇಕಾಗುತ್ತದೆ. ಅದರಲ್ಲೂ ಹಲಸು ಹಣ್ಣುಗಳಲ್ಲಿ ತುಂಬಾ ರುಚಿಕರ ಹಾಗೂ ವಿವಿಧ ಸ್ವಾದವನ್ನು ಹೊಂದಿರುತ್ತದೆ. ಸಂಪದ್ಭರಿತವಾದ ಹಲಸಿನ-ಹಣ್ಣಿನಲ್ಲಿದೆ ಆರೋಗ್ಯದ ಗುಟ್ಟು

ಹಲಸಿನ ಹಣ್ಣನ್ನು ತಿಂದು ಅದರ ಬೀಜವನ್ನು ನಾವು ಬಿಸಾಡುತ್ತೇವೆ. ಆದರೆ ಈ ಬೀಜದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ ಎಂದು ತಿಳಿದಿದೆಯಾ? ಹಣ್ಣುಗಳ ಬೀಜಗಳನ್ನು ತಿನ್ನುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಸೇರುವುದು ಮತ್ತು ಅದರ ಆರೋಗ್ಯ ಲಾಭಗಳು ನಮಗೆ ಲಭ್ಯವಾಗುತ್ತದೆ. ಚುಮುಚುಮು ಚಳಿಗೆ-ಬಿಸಿ ಬಿಸಿ ಹಲಸಿನ ಬೀಜದ ರಸಂ

ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಹಲಸಿನ ಹಣ್ಣಿನಂತೆ ಅದರಲ್ಲಿನ ಬೀಜಗಳು ಪೋಷಕಾಂಶಗಳನ್ನು ಒಳಗೊಂಡಿದೆ. ಅದರಲ್ಲೂ ಬೇಯಿಸಿದ ಹಲಸಿನ ಹಣ್ಣಿನ ಬೀಜದೊಂದಿಗೆ ಸ್ವಲ್ಪ ಜೇನು ಬೆರೆಸಿ ತಿಂದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಮುಂದೆ ಓದಿ...

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

ಹಲಸಿನ ಹಣ್ಣಿನ ಬೇಯಿಸಿದ ಬೀಜಗಳು: 4-5

ಜೇನುತುಪ್ಪ: 1 ಚಮಚ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಹೇಳಿದಷ್ಟು ಪ್ರಮಾಣದಲ್ಲಿ ಸಾಮಗ್ರಿಗಳನ್ನು ಹಾಕಿಕೊಂಡು ಅದನ್ನು ಸರಿಯಾಗಿ ರುಬ್ಬಿಕೊಂಡು, ದಿನನಿತ್ಯ 1-2 ಚಮಚ ಹಾಗೆ ಸೇವಿಸಬಹುದು ಅಥವಾ ಬಿಸಿ ನೀರಿಗೆ ಹಾಕಿಕೊಂಡು ಬೆಳಿಗ್ಗೆ ಉಪಹಾರಕ್ಕೆ ಮೊದಲು ಸೇವಿಸಿ ಆರೋಗ್ಯ ಪಡಿಯಿರಿ, ಬನ್ನಿ ಇದರ ಇನ್ನಷ್ಟು ಪ್ರಯೋಜನಗಳೇನು ಎಂಬುದನ್ನು ಮುಂದಿನ ಸ್ಲೈಡ್ ಮೂಲಕ ನೋಡೋಣ....

ತೂಕ ಕಳಕೊಳ್ಳಲು ಸಹಕಾರಿ

ತೂಕ ಕಳಕೊಳ್ಳಲು ಸಹಕಾರಿ

ಹಲಸಿನ ಹಣ್ಣು ಮತ್ತು ಜೇನುತುಪ್ಪ ಪ್ರೋಟೀನ್‌ನಿಂದ ಸಮೃದ್ಧವಾಗಿರುವುದರಿಂದ, ಇದು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಿಕೊಂಡು ಸ್ನಾಯುಗಳಿಗೆ ಶಕ್ತಿ ನೀಡಿ ತೂಕ ಕಳಕೊಳ್ಳುವಂತೆ ಮಾಡುವುದು.

ವೃಷಣಗಳ ಆರೋಗ್ಯ ವೃದ್ಧಿ

ವೃಷಣಗಳ ಆರೋಗ್ಯ ವೃದ್ಧಿ

ಇದು ಪುರುಷರ ವೃಷಣದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಿ ಅದು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು. ಇದರಿಂದ ಪುರುಷರ ಫಲವತ್ತತೆ ಹೆಚ್ಚಾಗುವುದು.

ಕ್ಯಾನ್ಸರ್ ತಡೆಯುವುದು

ಕ್ಯಾನ್ಸರ್ ತಡೆಯುವುದು

ಹಲಸಿನ ಬೀಜ ಮತ್ತು ಜೇನಿನ ಮಿಶ್ರಣವು ಪೈಥೊನ್ಯೂಟ್ರಿಯಂಟ್ಸ್‌ಗಳಿಂದ ಸಮೃದ್ಧವಾಗಿದೆ. ಕೋಶಗಳು ಅಸಹಜವಾಗಿ ದ್ವಿಗುಣಗೊಳ್ಳುವುದನ್ನು ತಡೆಯುತ್ತದೆ. ಇದರಿಂದ ಕ್ಯಾನ್ಸರ್ ತಡೆಗಟ್ಟಬಹುದು.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಮನೆಯಲ್ಲಿ ಮಾಡುವಂತಹ ಈ ಮಿಶ್ರಣವು ಹೊಟ್ಟೆಯಲ್ಲಿ ಆ್ಯಸಿಡ್ ಮಟ್ಟವನ್ನು ಸ್ಥಿರಗೊಳಿಸಿ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಮತ್ತು ಮಲಬದ್ಧತೆ ಕಡಿಮೆಯಾಗುವುದು.

ರಕ್ತದ ಕೊರತೆ

ರಕ್ತದ ಕೊರತೆ

ಈ ಮಿಶ್ರವು ಆರೋಗ್ಯಕಾರಿ ಕೆಂಪುರಕ್ತದ ಕಣಗಳನ್ನು ಉತ್ಪತ್ತಿ ಮಾಡುವುದು. ಇದರಿಂದ ರಕ್ತಕೊರತೆಯಂತಹ ಸಮಸ್ಯೆಯು ನಿವಾರಣೆಯಾಗುವುದು.

ಲೈಂಗಿಕ ಜೀವನ ವೃದ್ಧಿ

ಲೈಂಗಿಕ ಜೀವನ ವೃದ್ಧಿ

ಹಲಸಿನ ಬೀಜ ಮತ್ತು ಜೇನಿನ ಮಿಶ್ರಣದಲ್ಲಿ ನೈಸರ್ಗಿಕ ಕಾಮೋತ್ತೇಜಕ ಅಂಶಗಳಿವೆ. ಇದು ಜನನಾಂಗಕ್ಕೆ ಸರಿಯಾಗಿ ರಕ್ತ ಪರಿಚಲನೆಯಾಗಲು ಸಹಕರಿಸುತ್ತದೆ ಮತ್ತು ಲೈಂಗಿಕ ಕ್ರಿಯೆ ಹೆಚ್ಚು ಆನಂದಿಸುವಂತೆ ಮೆದುಳನ್ನು ಪ್ರಚೋದಿಸುತ್ತದೆ.

ದೃಷ್ಟಿ ಸುಧಾರಣೆ

ದೃಷ್ಟಿ ಸುಧಾರಣೆ

ವಿಟಮಿನ್ ಎ ಯಿಂದ ಸಮೃದ್ಧವಾಗಿರುವ ಹಲಸಿನ ಬೀಜ ಮತ್ತು ಜೇನಿನ ಮಿಶ್ರಣವು ಕಣ್ಣಿನ ನರಗಳನ್ನು ಬಲಪಡಿಸಿ ದೃಷ್ಟಿಯನ್ನು ಸುಧಾರಿಸುವುದು.

English summary

What Happens To Your Body When You Eat Jackfruit Seeds With Honey?

Normally, most of us, after we enjoy savouring a juicy fruit, we tend to throw away its seeds, right? Be it mangoes, grapes, apples, etc, most fruits come with seeds and we do not usually consume them, as they are rather tasteless or bitter! However, did you know that even the seeds of most of the fruits and vegetables are rich in nutrients that can boost your health to a great extent? So Have a look at the amazing health benefits of the mixture of jackfruit seeds and honey, here.
X
Desktop Bottom Promotion