For Quick Alerts
ALLOW NOTIFICATIONS  
For Daily Alerts

ದಿನನಿತ್ಯ ತುಳಸಿ ಬೆರೆಸಿದ ಹಾಲು ಕುಡಿಯಿರಿ- ಆರೋಗ್ಯ ಪಡೆಯಿರಿ

By manu
|

ನಿಮ್ಮ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ವೈದ್ಯರ ಬಳಿ ತಕ್ಷಣ ಸಾಗುವ ಬದಲು ನಿಮ್ಮ ಹಿತ್ತಲಿನಲ್ಲಿಯೇ ಔಷಧಿಗಳು ಇವೆ ಎಂಬುದನ್ನು ಕಲ್ಪಿಸಿಕೊಳ್ಳಿ. ಈ ಔಷಧಿ ಸೇವಿಸಿ ಆ ತೊಂದರೆಯಿಂದ ಮುಕ್ತರಾಗುವ ಮೂಲಕ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು, ವೈದ್ಯರಿಗೆ ಮತ್ತು ದುಬಾರಿ ಔಷಧಿಗಳಿಗೆ ನೀಡಬೇಕಾದ ಹಣವನ್ನೂ ಉಳಿಸಬಹುದು. ಆದರೆ ಈ ಕಲ್ಪನೆ ನಿಜವಾದರೆಷ್ಟು ಒಳ್ಳೆಯದು ಎಂದು ಯೋಚನೆ ಮಾಡುತ್ತಿದ್ದೀರೇನು? ನಮ್ಮಲ್ಲಿ ಹೆಚ್ಚಿನವರಿಗೆ ಈ ಹಿತ್ತಲ ಮದ್ದು ಕಾಲಕಸಕ್ಕಿಂತ ಕಡೆಯಾಗಿದೆ. ಇದೇ ಕಾರಣಕ್ಕೆ 'ಹಿತ್ತಲ ಗಿಡ ಮದ್ದಲ್ಲ' ಎಂಬ ನಾಣ್ಣುಡಿಯೂ ಬಂದಿದೆ. ಗಿಡಮೂಲಿಕೆಗಳ ರಾಣಿ 'ತುಳಸಿ'-ಆರೋಗ್ಯದ ಸಂಜೀವಿನಿ

ವಾಸ್ತವವಾಗಿ ನಮ್ಮ ಹಿತ್ತಲಲ್ಲಿ ಸಾಮಾನ್ಯವಾಗಿ ಬೆಳೆಯುವ ಗಿಡಗಳು ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸಬಲ್ಲವು. ಅದರಲ್ಲೂ ನಿಯಮಿತವಾಗಿ ಬಳಸುತ್ತಾ ಬಂದರೆ ಆರೋಗ್ಯ ಕೆಡುವ ಸಾಧ್ಯತೆಯೂ ಕಡಿಮೆಯಾಗುತ್ತದೆ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲದ ಕಾರಣ ಆಯಸ್ಸೂ ವೃದ್ಧಿಸುತ್ತದೆ. ತುಳಸಿ ಗಿಡವೂ ಮನೆಯ ಹಿತ್ತಲಲ್ಲಿ ಯಾವುದೇ ಆರೈಕೆಯಿಲ್ಲದೇ ಬೆಳೆಯುವ ಒಂದು ಚಿಕ್ಕ ಗಿಡವಾಗಿದೆ. ಆರೋಗ್ಯದ ರಕ್ಷಣೆಯನ್ನು ಪರಿಗಣಿಸಿದರೆ ಇದರಲ್ಲಿ ಹಲವು ಗುಣಗಳ ಭಂಡಾರವೇ ಇದೆ. ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ಅದರಲ್ಲೂ ತುಳಸಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಇದರ ಗುಣಗಳು ಹಲವಾರು ಪಟ್ಟು ಹೆಚ್ಚುತ್ತವೆ. ಇದಕ್ಕಾಗಿ ಹೆಚ್ಚಿನ ಶ್ರಮ ಪಡಬೇಕಾಗಿಲ್ಲ. ಸುಮಾರು ಮೂರು ಅಥವಾ ನಾಲ್ಕು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಕುದಿಯುತ್ತಿರುವ ಹಾಲಿಗೆ ಹಾಕಿ ತಣಿಯಲು ಬಿಡಿ. ಈ ಹಾಲನ್ನು ನಿತ್ಯವೂ ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ಹಲವಾರು ತೊಂದರೆಗಳಿಂದ ರಕ್ಷಣೆ ಪಡೆಯುವುದರ ಜೊತೆಗೇ ಆರೋಗ್ಯವೂ ವೃದ್ಧಿಸುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಫ್ಲೂ ಜ್ವರವನ್ನು ಕಡಿಮೆಗೊಳಿಸುತ್ತದೆ

ಫ್ಲೂ ಜ್ವರವನ್ನು ಕಡಿಮೆಗೊಳಿಸುತ್ತದೆ

ತುಳಸಿಯಲ್ಲಿರುವ ಉರಿಯೂತ ನಿವಾರಕ ಗುಣ ಮತ್ತು ಹಾಲಿನಲ್ಲಿರುವ ಗಾಯವನ್ನು ವಾಸಿಯಾಗಿಸುವ ಗುಣಗಳು ಮೇಳೈಸಿದಾಗ ಫ್ಲೂ ಜ್ವರದ ವೈರಸ್ ಗಳ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುತ್ತದೆ. ಒಂದೇ ದಿನದಲ್ಲಿ ಬಿಸಿಯಾಗಿದ್ದ ದೇಹ ಸಾಮಾನ್ಯ ತಾಪಮಾನಕ್ಕಿಳಿಯುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ತುಳಸಿಯಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳಿದ್ದು ಇವುಗಳಲ್ಲಿ ಯೂಜಿನಾಲ್ (eugenol) ಎಂಬುದು ಹೃದಯವನ್ನು ಬಲಪಡಿಸಲು ಮತ್ತು ಆರೋಗ್ಯಕರವಾಗಿರಿಸಲು ಅತ್ಯಂತ ಸೂಕ್ತವಾಗಿದೆ. ಅಲ್ಲದೇ ಹಾಲಿನಲ್ಲಿರುವ ಪೋಷಕಾಂಶಗಳು ಎಲ್ಲಾ ಅಂಗಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡುವ ಮೂಲಕ ಆರೋಗ್ಯವನ್ನು ವೃದ್ದಿಸುತ್ತದೆ.

ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಬಿಸಿಹಾಲಿನಲ್ಲಿ ಕದಡಿದ ತುಳಸಿ ಎಲೆಗಳು ನರವ್ಯವಸ್ಥೆಯನ್ನು ಉತ್ತಮಗೊಳಿಸುವ ಮತ್ತು ಒತ್ತಡಕ್ಕೆ ಕಾರಣವಾಗುವ ಹಾರ್ಮೋನುಗಳನ್ನು ನಿಯಂತ್ರಿಸುವ ಗುಣ ಹೊಂದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಇದರಿಂದ ಎಂತಹ ಪ್ರಸಂಗದಲ್ಲಿಯೂ ಮನಸ್ಸು ಉದ್ವೇಗಗೊಳ್ಳದಿರದಂತಿರಲು ಸಾಧ್ಯವಾಗುತ್ತದೆ. ತನ್ಮೂಲಕ ಒತ್ತಡ, ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳಿಗೆ ಒಳಗಾಗದಿರಲು ಸಾಧ್ಯವಾಗುತ್ತದೆ.

ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುತ್ತದೆ

ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುತ್ತದೆ

ಹಾಲು ಮತ್ತು ತುಳಸಿಯ ಗುಣಗಳು ಮೇಳೈಸಿದಾಗ ಲಭ್ಯವಾಗುವ ಗುಣದಲ್ಲಿ ಮೂತ್ರವರ್ಧಕ ಗುಣವೂ ಒಂದು. ಈ ಹಾಲನ್ನು ಕುಡಿದ ಬಳಿಕ ದೇಹದ ವಿಷಕಾರಿ ವಸ್ತುಗಳು ಮೂತ್ರದ ಮೂಲಕ ಹೊರಹೋಗುತ್ತವೆ. ಇದರಿಂದ ಮೂತ್ರಪಿಂಡದಲ್ಲಿ ಒಂದು ವೇಳೆ ಕಲ್ಲುಗಳಾಗಿದ್ದರೆ ಇದು ನಿಧಾನವಾಗಿ ಕರಗುತ್ತಾ ಕ್ರಮೇಣ ಇಲ್ಲವಾಗುತ್ತವೆ.

ಕೆಲವು ವಿಧದ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ಕೆಲವು ವಿಧದ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ತುಳಸಿ ಮತ್ತು ಹಾಲು ಎರಡರಲ್ಲಿಯೂ ಹಲವು ಆಂಟಿ ಆಕ್ಸಿಡೆಂಟುಗಳಿದ್ದು ಇವು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತವೆ. ಇದೇ ಗುಣ ದೇಹವನ್ನು ಹಲವಾರು ಕ್ಯಾನ್ಸರ್ ಕಾರಕ ಕಣಗಳಿಂದ ರಕ್ಷಿಸುತ್ತದೆ.

ಉಸಿರಾಟದ ತೊಂದರೆಗಳಿಂದ ರಕ್ಷಿಸುತ್ತದೆ

ಉಸಿರಾಟದ ತೊಂದರೆಗಳಿಂದ ರಕ್ಷಿಸುತ್ತದೆ

ತುಳಸಿ ಮತ್ತು ಹಾಲಿನ ಜೋಡಿಯ ಇನ್ನೊಂದು ಗುಣವೆಂದರೆ ಬ್ಯಾಕ್ಟೀರಿಯಾ ನಿವಾರಕಾ ಗುಣ. ಇದರಿಂದ ಬ್ಯಾಕ್ಟೀರಿಯಾಗಳ ಧಾಳಿಗೆ ಸಿಲುಕಿ ಎದುರಾಗುವ ಗಂಟಲ ಬೇನೆ, ಶೀತ, ನೆಗಡಿ, ಒಣಕೆಮ್ಮು ಮೊದಲಾದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ಇದಕ್ಕಾಗಿ ನಿತ್ಯವೂ ಸೇವಿಸುವುದು ಅಗತ್ಯವಾಗಿದೆ.

ತಲೆನೋವನ್ನು ಕಡಿಮೆ ಮಾಡುತ್ತದೆ

ತಲೆನೋವನ್ನು ಕಡಿಮೆ ಮಾಡುತ್ತದೆ

ಒಂದು ವೇಳೆ ಸತತವಾಗಿ ತಲೆನೋವು ಬರುತ್ತಿದ್ದರೆ ಒಂದು ಲೋಟ ಹಾಲಿಗೆ ತುಳಸಿ ಹಾಕಿ ಕುದಿಸಿ ಬಿಸಿಯಿದ್ದಂತೆಯೇ ಕುಡಿಯಿರಿ. ಇದರಿಂದ ತಲೆನೋವು ಸಾಕಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ. ಇದರ ಉರಿಯೂತ ನಿವಾರಕ ಗುಣ ತಲೆನೋವನ್ನು ಕಡಿಮೆಗೊಳಿಸಲು ಸಮರ್ಥವಾಗಿವೆ.

English summary

What Happens To Your Body When You Drink Tulsi With Milk?

Did you know that tulsi or the holy basil comes with numerous medicinal properties that can treat various disorders? When mixed with milk, tulsi's medicinal effect heightens and you reap the health benefits of both these powerful ingredients in one go! Just take 3-4 tulsi leaves, wash them well, add them to a pan of boiling milk. Now, empty the milk and tulsi leaves into a cup. Consume the mixture every morning on an empty stomach. To find out how the mixture of tulsi and milk can improve your health, read on!
X
Desktop Bottom Promotion