Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರೈತರ ಕಪ್ಪು ಬಂಗಾರ, ಕರಿಮೆಣಸು ಕಾಳಿನ ಪವರ್...
ಸಾಂಬಾರ ಕ್ಷೇತ್ರದಲ್ಲಿ ರಾಜನೆನಿಸಿಕೊಂಡಿರುವ ರೈತರ ಕಪ್ಪು ಬಂಗಾರವೆಂದು ಕರೆಯಲ್ಪಡುವ ಕರಿಮೆಣಸು ಯಾವ ಅಡುಗೆ ಮನೆಯಲ್ಲಿ ಹುಡುಕಿದರೂ ಸಿಗದಿರಲು ಸಾಧ್ಯವಿಲ್ಲ. ಇಂತಹ ಕರಿಮೆಣಸು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಆರೋಗ್ಯ ಸ್ನೇಹಿಯೂ ಹೌದು. ಇದರ ಬಗ್ಗೆ ಹಲವಾರು ವರ್ಷಗಳಿಂದ ನಡೆಸುತ್ತಿರುವ ಸಂಶೋಧನೆಗಳಿಂದ ಇದು ಸಾಬೀತಾಗಿದೆ.
ಕರಿಮೆಣಸಿನಲ್ಲಿ ಅಗಾಧ ಪ್ರಮಾಣದ ಔಷಧಿಯ ಗುಣಗಳು ಇವೆ. ಇವು ದೇಹದ ಆರೋಗ್ಯವನ್ನು ಕಾಪಾಡುವುದರೊಂದಿಗೆ ಬೇಸಿಗೆ ಕಾಲದಲ್ಲೂ ನಮ್ಮನ್ನು ಉಲ್ಲಾಸಿತವಾಗಿರುವಂತೆ ಮಾಡುತ್ತದೆ. ಇದು ತಿನ್ನಲು ಖಾರ ಮಾತ್ರ ಆದರೆ ಇದರಲ್ಲಿ ಗುಣಗಳು ನಮ್ಮ ಆರೋಗ್ಯಕ್ಕೆ ಹೆಚ್ಚು ಲಾಭಕಾರಿ. ಇದರ ನೀರನ್ನು ಪ್ರತಿದಿನ ಸೇವಿಸುತ್ತಾ ಇದ್ದರೆ ಮತ್ತೆ ನಿಮಗೆ ವೈದ್ಯರನ್ನು ಕಾಣುವ ಸಂದರ್ಭವೇ ಬರದು. ಮಧುಮೇಹ ಮತ್ತು ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟುವಲ್ಲಿ ಇದು ಸಹಕಾರಿಯಾಗಿದೆ. ಹಾಗಾದರೆ ಇನ್ನೇಕೆ ತಡ, ತಕ್ಷಣ ಕರಿಮೆಣಸಿನ ನೀರು ಮಾಡಿ ಕುಡಿಯಿರಿ, ಆರೋಗ್ಯ ವೃದ್ಧಿಸಿ. 9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!
ಕರಿಮೆಣಸಿನ ನೀರನ್ನು ತಯಾರಿಸುವುದು ಹೇಗೆ?
ಒಂದು ಪಾತ್ರೆಗೆ ಎರಡು ಲೋಟ ನೀರು ಹಾಕಿ. ಈ ನೀರಿಗೆ ಎರಡು ಚಮಚ ಕರಿಮೆಣಸಿನ ಹುಡಿ ಹಾಕಿ. ತದನಂತರ ಕರಿಮೆಣಸಿನ ಹುಡಿಯನ್ನು ನೀರಿನಲ್ಲಿ ಕುದಿಸಿ ಮತ್ತು ಅದಕ್ಕೆ ಸ್ವಲ್ಪ ಉಪ್ಪು ಮತ್ತು ಎರಡು ಗುಲಾಬಿ ಎಸಲುಗಳನ್ನು ಹಾಕಿ. ಇದನ್ನು ತೆಗೆದು ಸೋಸಿಕೊಳ್ಳಿ ಮತ್ತು ಬಿಸಿಯಾಗಿರುವಾಗಲೇ ಅದನ್ನು ಕುಡಿಯಿರಿ. ಇದನ್ನು ಬಿಸಿ ಅಥವಾ ತಂಪಾಗಿರುವಾಗಲೇ ಕುಡಿಯಿರಿ...

ಶಕ್ತಿ ವೃದ್ಧಿಸುವುದು
ಬೇಸಿಗೆಯಲ್ಲಿ ಕರಿಮೆಣಸಿನ ನೀರನ್ನು ಕುಡಿಯುವುದು ತುಂಬಾ ಆರೋಗ್ಯಕಾರಿ. ನಿಮಗೆ ತುಂಬಾ ಬೆವರಿದಾಗ ಅಥವಾ ಶಕ್ತಿ ಕಳೆದುಕೊಂಡಾಗ ಕರಿಮೆಣಸಿನ ನೀರನ್ನು ಕುಡಿದರೆ ದೇಹಕ್ಕೆ ಮರಳಿ ಶಕ್ತಿ ಬರುವುದು.

ಮಲಬದ್ಧತೆ ನಿವಾರಣೆ
ಬೇಸಿಗೆಯಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯ. ಮಲಬದ್ಧತೆ ನಿವಾರಣೆಗೆ ಕರಿಮೆಣಸಿನ ನೀರನ್ನು ದಿನಕ್ಕೆ ಎರಡು ಸಲ ಕುಡಿಯಬೇಕು. ಇದು ಮಲವು ಸರಾಗವಾಗಿ ಹೋಗಲು ನೆರವಾಗುವುದು.

ನಿರ್ಜಲೀಕರಣ ನಿವಾರಣೆ
ಇತರ ಹಲವಾರು ಸಮಸ್ಯೆಗಳೊಂದಿಗೆ ನಿರ್ಜಲೀಕರಣವು ಉಂಟಾಗುವುದು. ನಿರ್ಜಲೀಕರಣವಾದಾಗ ದೇಹದ ಅಂಗಾಂಗಗಳು ನಿಧಾನವಾಗಿ ತಮ್ಮ ಶಕ್ತಿಯನ್ನು ಕಳಕೊಳ್ಳುವುದು. ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ನೀವು ಕರಿಮೆಣಸಿನ ನೀರನ್ನು ಕುಡಿದರೆ ನಿರ್ಜಲೀಕರಣವನ್ನು ತಡೆಯಬಹುದು.

ತೂಕ ಕಳೆದುಕೊಳ್ಳಲು ಸಹಕಾರಿ
ತೂಕ ಕಳೆದುಕೊಳ್ಳಬೇಕೆಂದರೆ ಕರಿಮೆಣಸಿನ ನೀರನ್ನು ಬಳಸುವುದು ತುಂಬಾ ಮುಖ್ಯ. ಇದು ತುಂಬಾ ಖಾರವಾಗಿರುವ ನೀರಾಗಿರುವ ಕಾರಣ ದೇಹವು ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಯಾಲರಿ ದಹಿಸುತ್ತದೆ.

ತಿನ್ನುವ ಬಯಕೆ ತಡೆಯುವುದು
ತಿನ್ನುವ ಬಯಕೆಯಿಂದಾಗಿ ನೀವು ಹೆಚ್ಚಿನ ತೂಕವನ್ನು ಪಡೆಯುತ್ತೀರಿ. ಕರಿಮೆಣಸಿನ ನೀರಿನಿಂದ ಇದನ್ನು ತಡೆಯಬಹುದಾಗಿದೆ. ಇದು ಹೆಚ್ಚಿನ ಖಾರವನ್ನು ಹೊಂದಿರುವ ಕಾರಣ ತಿನ್ನುವ ಬಯಕೆಯನ್ನು ಕ್ಷಣ ಮಾತ್ರದಲ್ಲಿ ತಡೆಯುವುದು.

ಮೂಳೆಗಳಿಗೆ ಒಳ್ಳೆಯದು
ಮೂಳೆಗಳ ನೋವಿನಿಂದ ನೀವು ಬಳಲುತ್ತಿದ್ದೀರಾ? ಹಾಗಾದರೆ ಕರಿಮೆಣಸಿನ ನೀರನ್ನು ಕುಡಿಯಿರಿ. ನಿಮಗೆ ವಯಸ್ಸಾಗುತ್ತಿರುವಂತೆ ಇದು ನಿಮ್ಮ ಮೂಳೆಗಳನ್ನು ರಕ್ಷಿಸುವುದು.

ಅನಾರೋಗ್ಯದಿಂದ ಮುಕ್ತಿ
ದಿನದಲ್ಲಿ ಎರಡು ಸಲ ಈ ನೀರನ್ನು ಕುಡಿದರೆ ಕ್ಯಾನ್ಸರ್ ಹಾಗೂ ಮಧುಮೇಹದಂತಹ ರೋಗಗಳಿಂದ ನಿಮ್ಮನ್ನು ಇದು ದೂರವಿಡುವುದು. ಇದು ಚಯಾಪಚಾಯ ಕ್ರಿಯೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವುದು. ದಿನಾಲೂ ಕರಿಮೆಣಸಿನ ನೀರನ್ನು ಕುಡಿದು ಇದರ ಲಾಭ ಪಡೆದುಕೊಳ್ಳಿ.



Click it and Unblock the Notifications
