For Quick Alerts
ALLOW NOTIFICATIONS  
For Daily Alerts

ಜೇನು ಬೆರೆಸಿದ ಬೀಟ್‌ರೂಟ್ ಜ್ಯೂಸ್ ಕುಡಿದರೆ ಹತ್ತಾರು ಲಾಭ!

By manu
|

ಇಂದು ಅನಾರೋಗ್ಯ ಕಾಡುವುದು ನಿತ್ಯದ ಮಾತಾಗಿದೆ. ಕೆಲವೊಮ್ಮೆ ಚಿಕ್ಕ ಪುಟ್ಟ ರೋಗಗಳು ಎಷ್ಟು ಹೆಚ್ಚಾಗಿ ಬಿಡುತ್ತವೆ ಎಂದರೆ ಮುಖ್ಯವಾದ ಕೆಲಸಗಳನ್ನೂ ಮುಂದೂಡಬೇಕಾಗಿ ಬರುತ್ತದೆ. ಕೆಲಸಕ್ಕೆ ಬಾಧೆಯಾಗುವುದು ಮಾತ್ರವಲ್ಲ, ಔಷಧಿಗೆ, ವೈದ್ಯರ ಚಿಕಿತ್ಸಾ ವೆಚ್ಚಕ್ಕೆಂದು ಹಣವೂ ನೀರಿನಂತೆ ಖರ್ಚಾಗುತ್ತದೆ.

ಒಂದು ವೇಳೆ ಇದು ಸತತವಾಗಿ ಕಾಡುತ್ತಿದ್ದರೆ ಮಾತ್ರ ಇದಕ್ಕೆ ನೀವೇ ನಾವೇ ಹೊಣೆಯಾಗುತ್ತೇವೆ, ಏಕೆಂದರೆ ಚಿಕ್ಕ ಪುಟ್ಟ ರೋಗಗಳಿಗೆ ನಾವು ತೋರುವ ಅಸಡ್ಡೆ, ರೋಗ ಬರದೇ ಇರದಂತೆ ಕೈಗೊಳ್ಳಬೇಕಾದ ಕ್ರಮಗಳ ಕೊರತೆ, ನಮ್ಮ ಆರೋಗ್ಯದ ಮೇಲೆ ಅತಿಯಾದ ಭರವಸೆ ಇತ್ಯಾದಿಗಳು ಚಿಕ್ಕ ರೋಗಗಳನ್ನೂ ದೊಡ್ಡದಾಗಿಸಲು ನೆರವಾಗುತ್ತವೆ. ಬೀಟ್‌ರೂಟ್ ಜ್ಯೂಸ್, ಎಂದಾಕ್ಷಣ ಮುಖಸಿಂಡರಿಸಬೇಡಿ...

ಕೆಲವು ಚಿಕ್ಕ ಪುಟ್ಟ ತೊಂದರೆಗಳು ನಿಜವಾಗಿಯೂ ಚಿಕ್ಕದೇ ಆಗಿದ್ದು ಚಿಕಿತ್ಸೆಗೆ ಸುಲಭವಾಗಿ ಮಣಿಯುತ್ತವೆ. ಆದರೆ ಉಳಿದವು ಬಡಪೆಟ್ಟಿಗೆ ಬಗ್ಗದೇ ರೋಗಿಯನ್ನು ಹಾಸಿಗೆ ಹಿಡಿಸುವಷ್ಟು ಬಲಿಷ್ಟವಾಗಿಬಿಡುತ್ತವೆ. ಈ ಸ್ಥಿತಿಗೆ ಬಂದ ಮೇಲೆ ನರಳಾಡುವುದಕ್ಕಿಂತ ಈ ಸ್ಥಿತಿ ಬಾರದಿರುವಂತೆ ನೋಡಿಕೊಳ್ಳುವುದೇ ಜಾಣತನದ ಕ್ರಮ. ದ್ರವರೂಪಿ ಚಿನ್ನ ಜೇನಿನ, ಚಿನ್ನದಂತಹ ಗುಣಗಳು

ಇದಕ್ಕೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದೇ ಸರಿಯಾದ ದಾರಿಯಾಗಿದೆ. ಇದರಲ್ಲಿ ಪ್ರಮುಖವಾದ ಒಂದು ಸಂಯೋಜನೆ ಎಂದರೆ ಬೀಟ್ರೂಟ್ ರಸ ಮತ್ತು ಜೇನಿನ ಮಿಶ್ರಣದ ಸೇವನೆ. ಇದು ಹೇಗೆ ಸಹಕಾರಿಯಾಗಿವೆ ಎಂಬ ಮಹತ್ವದ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ, ಮುಂದೆ ಓದಿ...

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಬೀಟ್ರೂಟ್ ರಸ- 1 ಕಪ್

*ಜೇನು - 1 ದೊಡ್ಡ ಚಮಚ

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಒಂದು ಕಪ್ ಬೀಟ್ರೂಟ್ ರಸದಲ್ಲಿ ಜೇನನ್ನು ಸೇರಿಸಿ ಚೆನ್ನಾಗಿ ಕಲಕಿ ತಣ್ಣಗಿರುವಂತೆಯೇ ಕುಡಿಯಿರಿ. ಇದರ ಕುರಿತು ಇನ್ನಷ್ಟು ಮಾಹಿತಿಗಾಗಿ ಮುಂದಿನ ಫೋಟೋ ಸ್ಲೈಡ್ ಕ್ಲಿಕ್ ಮಾಡಿ....

ಅಧಿಕ ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ

ಈ ಅದ್ಭುತ ಜೀವರಸದಲ್ಲಿ ನೈಟ್ರೇಟುಗಳ ಪ್ರಮಾಣ ಹೆಚ್ಚಿರುವ ಕಾರಣದಿಂದಾಗಿ ಇದು ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತಸಂಚಾರ ಸುಗಮಗೊಳ್ಳಲು ನೆರವಾಗುತ್ತದೆ. ಸುಗಮಗೊಂಡ ರಕ್ತಸಂಚಾರದ ಕಾರಣ ಹೃದಯಕ್ಕೆ ಕಡಿಮೆ ಒತ್ತಡದಲ್ಲಿ ರಕ್ತವನ್ನು ಪೂರೈಸಲು ಸಾಧ್ಯವಾಗುತ್ತದೆ.

ಜೀವನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ

ಜೀವನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ

ಈ ಅದ್ಭುತ ಜೀವರಸದಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ದೇಹದಲ್ಲಿ ಸಂಚರಿಸುವ ಫ್ರೀ ರ್‍ಯಾಡಿಕಲ್ ಎಂಬ ವಿಷಕಾರಿ ಕಣಗಳಿಗೆ ತಡೆಯೊಡ್ಡುತ್ತದೆ. ಈ ಮೂಲಕ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಹಲವಾರು ಚಿಕ್ಕ ಪುಟ್ಟ ಖಾಯಿಲೆಗಳು ಬರದಂತೆ ತಡೆಯುತ್ತದೆ.

ಮರೆಗುಳಿತನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ

ಮರೆಗುಳಿತನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ

ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಈ ಜೀವರಸದ ಸೇವನೆಯಿಂದ ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಉತ್ತಮಗೊಳ್ಳುತ್ತದೆ. ಇದರಿಂದಾಗಿ ಮೆದುಳಿನ ಕ್ಷಮತೆ ಹೆಚ್ಚುತ್ತದೆ ಹಾಗೂ ಸ್ಮರಣಶಕ್ತಿ ಉತ್ತಮಗೊಳ್ಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮರೆಗುಳಿತನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ

ಮರೆಗುಳಿತನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ

ಅಲ್ಲದೇ ಒಂದು ಹಂತದಲ್ಲಿ ಮೆದುಳಿನ ಜೀವಕೋಶಗಳು ಹೆಚ್ಚು ಘಾಸಿಗೊಂಡು ತಾರ್ಕಿಕವಾಗಿ ಚಿಂತಿಸುವ ಶಕ್ತಿ ಕಳೆದುಕೊಳ್ಳುವ dementia ಎಂಬ ತೊಂದರೆ ಎದುರಾಗುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

ಹೃದಯಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ಹೃದಯಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ಜೇನು ಬೆರೆಸಿದ ಬೀಟ್ರೂಟ್ ರಸದ ಸೇವನೆಯಿಂದ ರಕ್ತಸಂಚಾರ ಸುಗಮಗೊಳ್ಳುವ ಮೂಲಕ ಹಾಗೂ ರಕ್ತನಾಳಗಳನ್ನು ಸಡಿಲಿಸುವ ಮೂಲಕ ಹೃದಯದ ಮೇಲೆ ಎದುರಾಗಬಹುದಾಗಿದ್ದ ಹೆಚ್ಚಿನ ಒತ್ತಡವನ್ನು ನಿವಾರಿಸಿ ಇದರಿಂದ ಉಂಟಾಗ ಬಹುದಾಗಿದ್ದ ಹೃದಯಸ್ತಂಭನ ಸಹಿತ ಇತರ ಹೃದಯಸಂಬಂಧಿ ತೊಂದರೆಗಳಿಂದ ಕಾಪಾಡುತ್ತದೆ.

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸುತ್ತದೆ

ಈ ನೈಸರ್ಗಿಕ ರಸದಲ್ಲಿ ಸಿಲಿಕಾ ಎಂಬ ಕಣಗಳ ಪ್ರಮಾಣ ಅತಿಹೆಚ್ಚಾಗಿದ್ದು ಹಾಲು ಮತ್ತು ಇತರ ಆಹಾರಗಳ ಮೂಲಕ ಸೇವಿಸಿದ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ನೆರವಾಗುತ್ತದೆ. ಇದರಿಂದ ಮೂಳೆಗಳು ಹೆಚ್ಚು ದೃಢವಾಗುತ್ತವೆ.

ಗರ್ಭಿಣಿಯರ ಆರೋಗ್ಯ ವೃದ್ಧಿಸುತ್ತದೆ

ಗರ್ಭಿಣಿಯರ ಆರೋಗ್ಯ ವೃದ್ಧಿಸುತ್ತದೆ

ಈ ನೈಸರ್ಗಿಕ ರಸದಲ್ಲಿ ಫೋಲಿಕ್ ಆಮ್ಲ ಸಹಾ ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿ ಹಾಗೂ ಗರ್ಭದಲ್ಲಿರುವ ಮಗುವಿನ ಪೋಷಣೆಗೆ ನೆರವಾಗುತ್ತದೆ. ತನ್ಮೂಲಕ ಗರ್ಭಾವಸ್ಥೆಯಲ್ಲಿ ಆರೋಗ್ಯ ಉತ್ತಮವಾಗಿರಿಸಲು ನೆರವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಈ ನೈಸರ್ಗಿಕ ಪೇಯದಲ್ಲಿ ಕ್ಯಾಲೋರಿಗಳು ಅತಿ ಕಡಿಮೆ ಇದ್ದು ಕರಗುವ ನಾರು ಮತ್ತು ಆಂಟಿ ಆಕ್ಸಿಡೆಂಟುಗಳು ಹೆಚ್ಚಾಗಿರುವ ಕಾರಣ ತೂಕ ಇಳಿಸುವ ನಿಮ್ಮ ಪ್ರಯತ್ನಗಳಿಗೆ ಹೆಚ್ಚಿನ ನೆರವು ನೀಡುತ್ತದೆ.

English summary

What Happens When You Drink Beetroot Juice With Honey?

While some disorders are simple and can be cured quickly, some others can have no known cures and can potentially be fatal.So, it is extremely important to keep your immune systems stronger to ward off diseases. Did you know that the mixture of beetroot juice and honey has over 7 health benefits? Learn how to make the health drink, here....
X
Desktop Bottom Promotion