For Quick Alerts
ALLOW NOTIFICATIONS  
For Daily Alerts

ದ್ರವರೂಪಿ ಚಿನ್ನ ಜೇನಿನ, ಚಿನ್ನದಂತಹ ಗುಣಗಳು

By Manu
|

ಎಂದೂ ಕೆಡದ ಆಹಾರ ಎಂದು ಧರ್ಮಗ್ರಂಥಗಳಲ್ಲಿಯೂ ಉಲ್ಲೇಖಿಸಲ್ಪಟ್ಟ ಜೇನು ಸಹಸ್ರಾರು ವರ್ಷಗಳಿಂದ ಮಾನವರ ಪಾಲಿಗೆ 'ದ್ರವರೂಪಿ ಚಿನ್ನ'ವೇ ಆಗಿದೆ. ಜೇನು ಕೇವಲ ಸಿಹಿಯಾಗಿರುವುದು ಮಾತ್ರವಲ್ಲ, ಇದರ ಔಷಧೀಯ ಗುಣಗಳು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತಿದ್ದು ಸಾವಿರಾರು ವರ್ಷಗಳಿಂದ ಆಯುರ್ವೇದದಲ್ಲಿಯೂ ಬಳಸಲ್ಪಡುತ್ತಾ ಬಂದಿದೆ. ಶೀತ ಶಮನಕ್ಕೆ, ಒಂದು ಚಮಚದಷ್ಟು ಜೇನು ಸಾಕು
ಅದರಲ್ಲೂ ಮಳೆಗಾಲದ ಸಮಯದಲ್ಲಿ ಮಳೆಯೊಂದಿಗೇ ಜೊತೆಜೊತೆಯಾಗಿ ಧಾವಿಸುವ ವೈರಸ್ಸು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲೂ ಜೇನು ಸಮರ್ಥವಾಗಿದ್ದು ಪ್ರತಿ ಮನೆಯಲ್ಲಿಯೂ ಖಂಡಿತವಾಗಿ ಇರಲೇಬೇಕಾದ ಔಷಧಿಯಾಗಿದೆ. ಏಕೆಂದರೆ ಪ್ರತಿ ಮಳೆಗಾಲದಲ್ಲಿಯೂ ಹೊಸ ಹೊಸ ವೈರಸ್ಸುಗಳು ಗಾಳಿಯಲ್ಲಿ ಆವರಿಸಿ ಇದಕ್ಕೂ ಮೊದಲು ಈ ವೈರಸ್ಸಿಗೆ ರೋಗ ನಿರೋಧಕ ಶಕ್ತಿಯನ್ನು ಮೂಡಿಸಿಕೊಳ್ಳದಿರುವವರನ್ನೆಲ್ಲಾ ಆವರಿಸಿ ಶೀತ, ಕೆಮ್ಮು, ನೆಗಡಿಗಳ ಮೂಲಕ ಸೋಂಕು ಹರಡುತ್ತಾ ಹೋಗುತ್ತವೆ. ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!
ಜೇನಿನಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರ ನಿರೋಧಕ, ಸೂಕ್ಷ್ಮಾಣು ನಿರೋಧಕ ಮತ್ತು ಪ್ರತಿಜೀವಕ ಗುಣಗಳು ವೈರಸ್ಸುಗಳ ಧಾಳಿಯಿಂದ ದೇಹ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ನೆರವಾಗುತ್ತದೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಇದರ ಅಗತ್ಯತೆ ಇತರ ಸಮಯಕ್ಕಿಂತಲೂ ಬಹಳ ಹೆಚ್ಚಾಗಿದೆ. ಈ ಅದ್ಭುತ ಆಹಾರವನ್ನು ಈ ಮಳೆಗಾಲದ ಸಮಯದಲ್ಲಿ ಹೇಗೆ ಮತ್ತು ಯಾವ ತೊಂದರೆಗಳಿಗಾಗಿ ಬಳಸಬಹುದು ಎಂಬ ಅಮೂಲ್ಯ ಮಾಹಿತಿಯನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು, ಇಲ್ಲಿ ನಿಮಗಾಗಿ ಹಂಚಿಕೊಂಡಿದ್ದೇವೆ ಮುಂದೆ ಓದಿ...

ಶೀತ ಮತ್ತು ಕೆಮ್ಮಿಗೆ ರಾಮಬಾಣ

ಶೀತ ಮತ್ತು ಕೆಮ್ಮಿಗೆ ರಾಮಬಾಣ

ಮಾನ್ಸೂನ್‌ನ ಆಗಮನದೊಂದಿಗೇ ಹೆಚ್ಚಿನ ಜನರನ್ನು ಕಾಡುವ ತೊಂದರೆ ಎಂದರೆ ಶೀತ, ನೆಗಡಿ, ಕೆಮ್ಮು. ಈ ಸಮಯದಲ್ಲಿ ಜೇನನ್ನು ಸೇವಿಸುವ ಮೂಲಕ ಈ ತೊಂದರೆಗಳಿಂದ ಶೀಘ್ರವಾಗಿ ಹೊರಬರಲು ಜೇನು ನೆರವಾಗುತ್ತದೆ. ನಮ್ಮ ದೇಹದಲ್ಲಿ ಧಾಳಿ ಇಟ್ಟ ವೈರಸ್ಸುಗಳನ್ನು ಹೊರಹಾಕಲೆಂದೇ ನಮ್ಮ ಜೀವನಿರೋಧಕ ಶಕ್ತಿ ಗಂಟಲು ಮತ್ತು ಮೂಗಿನಿಂದ ಹೆಚ್ಚಿನ ನೀರನ್ನು ಸ್ರವಿಸುತ್ತದೆ. ಇದೇ ಶೀತ. ಬಲವಂತವಾಗಿ ಕಫದ ಮೂಲಕ ಹೊರಹಾಕಲು ಯತ್ನಿಸುತ್ತದೆ. ಇದೇ ಕೆಮ್ಮು. ದೇಹದ ತಾಪಮಾನವನ್ನು ಹೆಚ್ಚಿಸಿ ವೈರಸ್ಸಿಗೆ ಬಿಸಿ ತಾಗಿಸುತ್ತದೆ. ಇದೇ ಜ್ವರ

ಶೀತ ಮತ್ತು ಕೆಮ್ಮಿಗೆ ರಾಮಬಾಣ

ಶೀತ ಮತ್ತು ಕೆಮ್ಮಿಗೆ ರಾಮಬಾಣ

ಹಾಗಾಗಿ ಉತ್ತಮ ಪರಿಣಾಮಕ್ಕಾಗಿ ಒಂದು ದೊಡ್ಡಚಮಚ ಜೇನು, ಒಂದು ದೊಡ್ಡಚಮಚ ಲಿಂಬೆರಸ ವನ್ನು ಒಂದು ಕಪ್ ಉಗುರುಬೆಚ್ಚನೆಯ ನೀರಿನಲ್ಲಿ ಕದಡಿ ನಿಧಾನವಾಗಿ ಕುಡಿಯುತ್ತಿರುವ ಮೂಲಕ ವೈರಸ್ ಸೋಂಕನ್ನು ಎದುರಿಸಬಹುದು.

ಅಜೀರ್ಣದ ತೊಂದರೆಗೆ

ಅಜೀರ್ಣದ ತೊಂದರೆಗೆ

ಜಠರ ಮತ್ತು ಕರುಳುಗಳಲ್ಲಿ ಸಾಕಷ್ಟು ಪ್ರಮಾಣದ ಜಠರರಸ ಉತ್ಪತ್ತಿಯಾಗದೇ ಅಜೀರ್ಣದ ತೊಂದರೆ ಅನುಭವಿಸುವವರು ಊಟಕ್ಕೂ ಮೊದಲು ಕೊಂಚ ಜೇನು ಸೇವಿಸುವುದರಿಂದ ಉತ್ತಮ ಪರಿಹಾರ ದೊರಕುತ್ತದೆ.

ಆರೋಗ್ಯ ವೃದ್ಧಿಗೆ

ಆರೋಗ್ಯ ವೃದ್ಧಿಗೆ

ಕೊಂಚ ನೀರು ಮತ್ತು ಲಿಂಬೆರಸದಲ್ಲಿ ಚಿಕ್ಕ ಪ್ರಮಾಣದ (ಸುಮಾರು ಅರ್ಧ ಚಿಕ್ಕ ಚಮಚ) ಜೇನನ್ನು ನಿತ್ಯವೂ ಊಟದ ಜೊತೆಯಲ್ಲಿ ನೀರಿನ ಬದಲಿಗೆ ಸೇವಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಕೆಲವರು ಊಟದೊಂದಿಗೆ ವೈನ್ ಸೇವಿಸುತ್ತಾರೆ. ಆರೋಗ್ಯಕ್ಕೆ ಮಾರಕವಾದ ಈ ಅಭ್ಯಾಸವನ್ನು ತೊಡೆಯಲು ಜೇನು, ಲಿಂಬೆರಸ ಸೇರಿಸಿದ ಪೇಯ ನೆರವಿಗೆ ಬರುತ್ತದೆ.

ತುಟಿಯ ಅಂದಕ್ಕೆ

ತುಟಿಯ ಅಂದಕ್ಕೆ

ಇದು ಉತ್ತಮ ಸ್ಕಿನ್ ಮಾಶ್ಚರೈಸರ್ ಆಗಿ ಕೆಲಸ ಮಾಡಿ ತ್ವಚೆಯನ್ನು ಕಾಪಾಡಿ ಬಣ್ಣ ತಿಳಿಯಾಗಲು ಕಾರಣವಾಗುತ್ತದೆ. ಅಲ್ಲದೆ ಜೇನನ್ನು ತುಟಿಗೆ ಹಚ್ಚುವುದರಿಂದ ಒಡೆದ, ಸುಕ್ಕುಗಟ್ಟಿದ ತುಟಿಗಳು ನಯವಾಗಿ ಮತ್ತು ಮೃದುವಾಗಿರುತ್ತವೆ.

ಜೇನು ಬೆರೆಸಿದ ಬಿಸಿನೀರು ಕುಡಿಯಿರಿ

ಜೇನು ಬೆರೆಸಿದ ಬಿಸಿನೀರು ಕುಡಿಯಿರಿ

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಜೇನು ಮತ್ತು ಎರಡು ದೊಡ್ಡಚಮಚ ಲಿಂಬೆ ರಸ ಸೇರಿಸಿ. ಈ ಪೇಯವನ್ನು ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಸೇವಿಸಿ. ಇದು ಸಹಾ ತೂಕ ಇಳಿಸುವ ಕ್ರಿಯೆಯನ್ನು ಶೀಘ್ರಗೊಳಿಸುತ್ತದೆ

ಹೊಟ್ಟೆಯ ಸೋಂಕಿನಿಂದ ರಕ್ಷಿಸುತ್ತದೆ

ಹೊಟ್ಟೆಯ ಸೋಂಕಿನಿಂದ ರಕ್ಷಿಸುತ್ತದೆ

ಹೊಟ್ಟೆಯ ಸೋಂಕಿನಿಂದ ರಕ್ಷಿಸುತ್ತದೆ ಮಾನ್ಸೂನ್ ಸಮಯದಲ್ಲಿ ಹೊಟ್ಟೆ ಹಾಳಾಗುವುದು (food poison) ಮತ್ತು ಹೊಟ್ಟೆಯಲ್ಲಿ ಸೋಂಕು ಉಂಟಾಗುವುದು ಸಾಮಾನ್ಯ. ನಮ್ಮ ಹೊಟ್ಟೆಯಲ್ಲಿರುವ ಆಮ್ಲಗಳು ಎಷ್ಟು ಪ್ರಬಲವೆಂದರೆ ಚಿಕ್ಕಪುಟ್ಟ ಲೋಹವನ್ನೂ ಕರಗಿಸಿಕೊಳ್ಳಬಹುದು. ಆದರೆ ಕೆಲವು ವೈರಸ್ಸುಗಳು ಈ ಆಮ್ಲವನ್ನೂ ಎದುರಿಸುವ ಸಾಮರ್ಥ್ಯ ಪಡೆದಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೊಟ್ಟೆಯ ಸೋಂಕಿನಿಂದ ರಕ್ಷಿಸುತ್ತದೆ

ಹೊಟ್ಟೆಯ ಸೋಂಕಿನಿಂದ ರಕ್ಷಿಸುತ್ತದೆ

ವಿಶೇಷವಾಗಿ ಸಿದ್ಧ ಆಹಾರಗಳ ಮೂಲಕ ಹೊಟ್ಟೆ ಪ್ರವೇಶಿಸುವ ಈ ವೈರಸ್ಸುಗಳ ಹೊರಕವಚ ಅತಿ ದೃಢವಾಗಿದ್ದು ಮತ್ತು ಸೂಜಿಯಂತೆ ಚೂಪಾಗಿರುವ ಕೂದಲುಗಳು ಇದ್ದು ಹೊಟ್ಟೆಯ ಒಳಭಾಗದಲ್ಲಿ ಚುಚ್ಚಿಕೊಂಡು ಬಿಡುತ್ತವೆ. ಸಾಲ್ಮೋನೆಲ್ಲಾ ಮತ್ತು ನೋರೋವೈರಸ್ (norovirus) ಇದಕ್ಕೆ ಉದಾಹರಣೆಯಾಗಿವೆ.

ಹೊಟ್ಟೆಯ ಸೋಂಕಿನಿಂದ ರಕ್ಷಿಸುತ್ತದೆ

ಹೊಟ್ಟೆಯ ಸೋಂಕಿನಿಂದ ರಕ್ಷಿಸುತ್ತದೆ

ಈ ವೈರಸ್ಸುಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಅಂತೆಯೇ ಅಸಾಧ್ಯವೂ ಅಲ್ಲ. ಜೇನಿನಲ್ಲಿ ನಮ್ಮ ಜೀರ್ಣಕ್ರಿಯೆಗೆ ಸಹಕರಿಸುವ ಬ್ಯಾಕ್ಟೀರಿಯಾಗಳಿವೆ. ವಾಸ್ತವವಾಗಿ ಈ ಬ್ಯಾಕ್ಟೀರಿಯಾಗಳಿರುವ ಕಾರಣದಿಂದಲೇ ಇದು ಎಂದೂ ಕೊಳೆಯುವುದೇ ಇಲ್ಲ. ಈ ಬ್ಯಾಕ್ಟೀರಿಯಾಗಳು ಹೊಟ್ಟೆಯಲ್ಲಿರುವ ಈ ವೈರಸ್ಸುಗಳನ್ನು ಸಡಿಲಿಸಿ ದೇಹದಿಂದ ವಿಸರ್ಜಿಸುವಂತೆ ಮಾಡುತ್ತವೆ. ಬರೆಯ ವೈರಸ್ ಮಾತ್ರವಲ್ಲ,

ಶಿಲೀಂಧ್ರಗಳು ವಿಸರ್ಜಿಸುವ ವಿಷ (mycotoxin) ಹಾಗೂ ಆಹಾರದ ಮೂಲಕ ಒಳಬಂದ ಇತರ ಬ್ಯಾಕ್ಟೀರಿಯಾಗಳ ಮೂಲಕ ಆವರಿಸಿದ್ದ ಸೋಂಕು (food-borne pathogens) ಸಹಾ ನಿವಾರಿಸಲು ಜೇನು ಸಮರ್ಥವಾಗಿದೆ. ಇದಕ್ಕಾಗಿ ಪ್ರತಿದಿನ ಒಂದು ಚಿಕ್ಕಚಮಚ ಜೇನು ಸೇವಿಸಿದರೆ ಸಾಕು.

ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಜೇನಿನಲ್ಲಿ ಸಮೃದ್ಧವಾಗಿರುವ ಆಂಟಿ ಆಕ್ಸಿಡೆಂಟುಗಳು ದೇಹದ ಜೀವ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಇದಕ್ಕಾಗಿ ಪ್ರತಿದಿನ ಒಂದು ಚಿಕ್ಕ ಚಮಚ ಜೇನನ್ನು ಒಂದು ಚಿಕ್ಕ ಚಮಚ ಹಸಿಶುಂಠಿಯ ರಸ ಮತ್ತು ಒಂದು ಚಿಕ್ಕ ಚಮಚ ಲಿಂಬೆರಸದೊಂದಿಗೆ ಬೆರೆಸಿ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ನಿಯಮಿತವಾಗಿ ಸೇವಿಸುತ್ತಾ ಬಂದರೆ ಸಾಕು. ಇದರಿಂದ ಬಲಗೊಳ್ಳುವ ರೋಗನಿರೋಧಕ ವ್ಯವಸ್ಥೆ ಯಾವುದೇ ಹೊಸ ವೈರಸ್ಸು ಮಾನ್ಸೂನ್ ಸಮಯದಲ್ಲಿ ನಿಮ್ಮ ಊರಿಗೆ ಆಗಮಿಸಿದರೂ ಇದನ್ನು ಎದುರಿಸಲು ದೇಹ ಸನ್ನದ್ದಗೊಳ್ಳಲು ಸಾಧ್ಯವಾಗುತ್ತದೆ

English summary

Super Health Benefits of Honey During Monsoon

Honey, often referred to as the 'liquid gold' has been known to mankind since the ancient times. Due to the numerous health benefits that come along with honey, it was also considered as one of the chief ingredients in Ayurvedic medication. Of late, it is also being recommended in certain modern medications too. More so during the monsoon season, honey is considered as a must-have ingredient. Due to the transition in weather and the rains, most people are susceptible for viral infections, especially those whose immunity levels are low.
X
Desktop Bottom Promotion